AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಳಗಾವಿ: ಬುಧವಾರದಿಂದ ಮೂರು ದಿನಗಳ ಕಾಲ ಕಾಂಗ್ರೆಸ್ ನಿರಂತರ ಪ್ರತಿಭಟನೆ; ಸದನಕ್ಕೆ ಟ್ರ್ಯಾಕ್ಟರ್​ನಲ್ಲಿ ಆಗಮಿಸುವ ಸಾಧ್ಯತೆ

Karnataka Congress: ಡಿಸೆಂಬರ್ 17ರಂದು ಕಾಂಗ್ರೆಸ್ ಪಕ್ಷದ ಶಾಸಕರಿಂದ ಪಾದಯಾತ್ರೆ ನಡೆಯಲಿದೆ. ಕಾಂಗ್ರೆಸ್ ಕಚೇರಿಯಿಂದ ಸುವರ್ಣಸೌಧಕ್ಕೆ ಪಾದಯಾತ್ರೆ ನಡೆಯಲಿದೆ. ನೆರೆ ಪರಿಹಾರ, ಸರ್ಕಾರದ ವೈಫಲ್ಯ ಖಂಡಿಸಿ ಪಾದಯಾತ್ರೆ ನಡೆಸಲಿದ್ದಾರೆ.

ಬೆಳಗಾವಿ: ಬುಧವಾರದಿಂದ ಮೂರು ದಿನಗಳ ಕಾಲ ಕಾಂಗ್ರೆಸ್ ನಿರಂತರ ಪ್ರತಿಭಟನೆ; ಸದನಕ್ಕೆ ಟ್ರ್ಯಾಕ್ಟರ್​ನಲ್ಲಿ ಆಗಮಿಸುವ ಸಾಧ್ಯತೆ
ಕಾಂಗ್ರೆಸ್ (ಪ್ರಾತಿನಿಧಿಕ ಚಿತ್ರ)
TV9 Web
| Updated By: ganapathi bhat|

Updated on: Dec 14, 2021 | 11:19 PM

Share

ಬೆಳಗಾವಿ: ಬುಧವಾರದಿಂದ (ಡಿಸೆಂಬರ್ 15) ಬೆಳಗಾವಿಯಲ್ಲಿ ಕಾಂಗ್ರೆಸ್ ನಿರಂತರ ಪ್ರತಿಭಟನೆ ನಡೆಸಲಿದೆ. ನಿರಂತರವಾಗಿ ಮೂರು ದಿನಗಳ ಕಾಲ ಕಾಂಗ್ರೆಸ್​​ ಪ್ರತಿಭಟನೆ ನಡೆಸಲಿದೆ. ಬುಧವಾರ ಸದನಕ್ಕೆ ಲಾರಿ ಅಥವಾ ಟ್ರ್ಯಾಕ್ಟರ್ ರಾಲಿಯಲ್ಲಿ ಕಾಂಗ್ರೆಸ್ ಶಾಸಕರು ಆಗಮಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ನಾಳೆ ಸರ್ಕಾರದ ವಿರುದ್ಧ ಪ್ರತಿಭಟನಾ ಮೆರವಣಿಗೆ ಸಾಧ್ಯತೆ ಇದೆ. ಶೇಕಡಾ 40 ಕಮಿಷನ್ ಆರೋಪ ಕುರಿತು ಪ್ರತಿಭಟನಾ ಮೆರವಣಿಗೆ ನಡೆಯಲಿದೆ. ಬೆಳಗಾವಿ ಕಾಂಗ್ರೆಸ್ ಕಚೇರಿಯಿಂದ ಪ್ರತಿಭಟನಾ ಮೆರವಣಿಗೆ ನಡೆಯಲಿದ್ದು ಸರ್ಕಾರದ ತಾರತಮ್ಯ, ಜನ ವಿರೋಧಿ ನೀತಿ ಖಂಡಿಸಿ ಟ್ರ್ಯಾಕ್ಟರ್ ರಾಲಿ ನಡೆಯಲಿದೆ ಎಂದು ಹೇಳಲಾಗಿದೆ.

ಬಳಿಕ, ಡಿಸೆಂಬರ್ 17ರಂದು ಕಾಂಗ್ರೆಸ್ ಪಕ್ಷದ ಶಾಸಕರಿಂದ ಪಾದಯಾತ್ರೆ ನಡೆಯಲಿದೆ. ಕಾಂಗ್ರೆಸ್ ಕಚೇರಿಯಿಂದ ಸುವರ್ಣಸೌಧಕ್ಕೆ ಪಾದಯಾತ್ರೆ ನಡೆಯಲಿದೆ. ನೆರೆ ಪರಿಹಾರ, ಸರ್ಕಾರದ ವೈಫಲ್ಯ ಖಂಡಿಸಿ ಪಾದಯಾತ್ರೆ ನಡೆಸಲಿದ್ದಾರೆ.

ಬುಧವಾರ (ಡಿಸೆಂಬರ್ 15) ಬೆಳಗ್ಗೆ 8.30ಕ್ಕೆ ಕಾಂಗ್ರೆಸ್​ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ಬೆಳಗಾವಿ ಸುವರ್ಣಸೌಧದ ಸೆಂಟ್ರಲ್ ಹಾಲ್​ನಲ್ಲಿ ಸಭೆ ನಡೆಯಲಿದೆ. ಸಿಎಲ್​​ಪಿ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ನಡೆಯಲಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಶೇಕಡಾ 40 ಕಮಿಷನ್, ಮತಾಂತಾರ ನಿಷೇಧ ಕಾಯ್ದೆ ಹಾಗೂ ಬಿಟ್ ಕಾಯಿನ್, ನೆರೆ ಪರಿಹಾರ ಅನುದಾನ ತಾರತಮ್ಯ, ಸದನದಲ್ಲಿ ಕೈಗೆತ್ತಿಕೊಳ್ಳಬೇಕಾದ ವಿಷಯಗಳ ಬಗ್ಗೆ ಚರ್ಚೆ ನಡೆಸಲಾಗುವ ಬಗ್ಗೆ ಮಾಹಿತಿ ತಿಳಿದುಬಂದಿದೆ.

ಬಸವರಾಜ ಬೊಮ್ಮಾಯಿ, ಬಿಎಸ್ ಯಡಿಯೂರಪ್ಪ ಮಾತುಕತೆ ಹಾಗೇ ಇತ್ತ ಬುಧವಾರ ಸಂಜೆ 7 ಗಂಟೆಗೆ ಬಿಜೆಪಿ ಶಾಸಕಾಂಗ ಸಭೆ ಕೂಡ ನಡೆಯಲಿದೆ. ಬೆಳಗಾವಿಯ ಖಾಸಗಿ ಹೋಟೆಲ್‌ನಲ್ಲಿ ಸಭೆ ನಡೆಯಲಿದೆ. ಇಂದು (ಡಿಸೆಂಬರ್ 14) ವಿಧಾನ ಪರಿಷತ್ ಚುನಾವಣಾ ಫಲಿತಾಂಶ ಬೆನ್ನಲ್ಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರನ್ನು ಭೇಟಿ ಆಗಿದ್ದಾರೆ. ಉತ್ತರ ಪ್ರದೇಶ ಪ್ರವಾಸದಿಂದ ವಾಪಸಾಗಿ ನೇರವಾಗಿ ಭೇಟಿ ಮಾಡಿದ್ದಾರೆ. ಬೆಳಗಾವಿಯ ಕೆಎಲ್‌ಇ ಗೆಸ್ಟ್‌ಹೌಸ್‌ಗೆ ತೆರಳಿ ಬಿಎಸ್‌ವೈ ಭೇಟಿ ಮಾಡಲಾಗಿದೆ.

ಬೆಳಗಾವಿ ಪರಿಷತ್ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯ ಸೋಲು. ಆಂತರಿಕವಾಗಿ ಬಿಜೆಪಿಗೆ ಹಿನ್ನಡೆ ಮಾಡಿದವರ ಬಗ್ಗೆ ಮಾತುಕತೆ ನಡೆಸಲಾಗಿದೆ ಎಂದು ಹೇಳಲಾಗಿದೆ. ನಾಳೆ ಪಕ್ಷದ ಶಾಸಕಾಂಗ ಸಭೆಯಲ್ಲಿ ಈ ಕುರಿತು ಚರ್ಚಿಸೋಣ ಎಂದು ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ ಎಂದು ಹೇಳಲಾಗಿದೆ. ಕಾದು ನೋಡಿ ಕೆಲ ತೀರ್ಮಾನ ಮಾಡೋಣವೆಂದೂ ಸಲಹೆ ನೀಡಿರುವ ಬಗ್ಗೆಯೂ ತಿಳಿಸಲಾಗಿದೆ.

ಇದನ್ನೂ ಓದಿ: ಬೆಳಗಾವಿಯಲ್ಲಿ ಬಿಜೆಪಿ ಸೋಲಿಗೆ ಡಿಕೆ ಶಿವಕುಮಾರ್, ಮಹಾಂತೇಶ್ ಕವಟಗಿಮಠ ಕಾರಣ: ಲಖನ್ ಜಾರಕಿಹೊಳಿ ಆರೋಪ

ಇದನ್ನೂ ಓದಿ: ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಬಿಜೆಪಿಗೆ 3 ಮತಗಳ ರೋಚಕ ಗೆಲುವು, ಜಿದ್ದಾಜಿದ್ದಿ ರಣಕಣದಲ್ಲಿ ಗೆದ್ದು ಸೋತ ಕಾಂಗ್ರೆಸ್ ಅಭ್ಯರ್ಥಿ