AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಳಗಾವಿ: ಸಂಭ್ರಮದಿಂದ ಜರುಗಿದ ದುರ್ಗಾಮಾತಾ ದೌಡ್, ಏನಿದರ ವಿಶೇಷತೆ? ಇಲ್ಲಿದೆ ಮಾಹಿತಿ

ನಾಡಿನೆಲ್ಲಡೆ ದಸರಾ ಹಬ್ಬದ ಸಂಭ್ರಮ ಮನೆ ಮಾಡಿದೆ. ಅನೇಕ ಕಡೆಗಳಲ್ಲಿ ನವರಾತ್ರಿ ಹಬ್ಬವನ್ನು ವಿಭಿನ್ನವಾಗಿ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ. ಈ ನಡುವೆ ಬೆಳಗಾವಿಯಲ್ಲಿ ನಡೆಯುವ ದುರ್ಗಾಮಾತಾ ದೌಡ್ ಸಾಕಷ್ಟು ವಿಶೇಷತೆಯನ್ನು ಹೊಂದಿದೆ. ಏನಿದು ದುರ್ಗಾಮಾತಾ ದೌಡ್​? ಇದರ ವಿಶೇಷತೆ ಏನು? ಇಲ್ಲಿದೆ ಓದಿ.

Sahadev Mane
| Edited By: |

Updated on:Oct 12, 2024 | 9:02 AM

Share

ಬೆಳಗಾವಿ, ಅಕ್ಟೋಬರ್​ 12: ಬೆಳಗಾವಿಯಲ್ಲಿ (Belagavi) ಕಳೆದ 26 ವರ್ಷಗಳಿಂದ ದುರ್ಗಾಮಾತಾ ದೌಡ್ (Durga Mata daud)​ ಆಚರಿಸಿಕೊಂಡು ಬರಲಾಗುತ್ತಿದೆ. ದರ್ಗಾಮಾತಾ ದೌಡ್​ನಲ್ಲಿ ಭಾಗವಹಿಸುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ.

ಬೆಳಗಾವಿ ನಗರದಲ್ಲಿ ಒಂಬತ್ತು ದಿನಗಳ ಕಾಲ ನಗರದ ವಿವಿಧ ಬಡಾವಣೆಗಳಲ್ಲಿ ದುರ್ಗಾಮಾತಾ ದೌಡ್ ಆಯೋಜನೆ ಮಾಡಲಾಗುತ್ತದೆ. ಕಳೆದ 26 ವರ್ಷಗಳಿಂದ ನಡೆಯುತ್ತಿರುವ ದೌಡ್​ನಲ್ಲಿ ಭಾಗವಹಿಸುವ ಜನರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ಭಾಷೆ, ಜಾತಿಯನ್ನು ಹೊರತುಪಡಿಸಿ ಇಲ್ಲಿ ಸಾವಿರಾರು ಜನ ದುರ್ಗಾಮಾತಾ ದೌಡ್​ನಲ್ಲಿ ಭಾಗವಹಿಸುತ್ತಾರೆ. ಬೆಳಗ್ಗೆ 5 ರಿಂದ 7 ಗಂಟೆಯವರೆಗೆ ನಡೆಯುವ ಈ ದೌಡ್​ ನೋಡಲು ಜನ ಸಾಗರವೇ ಸೇರಿರುತ್ತದೆ.

ದುರ್ಗಾಮಾತಾ ದೌಡ್​ನಲ್ಲಿ ಭಾಗವಹಿಸುವವರು ಶ್ವೇತ ವಸ್ತ್ರಧಾರಿಗಳಾಗಿ, ತಲೆಗೆ ಕೇಸರಿ ಪಟಗ, ಸೊಂಟಕ್ಕೆ ಕೇಸರಿ ಶಾಲು ಕಟ್ಟುಕೊಂಡು, ಬರಿಗಾಲಿನಲ್ಲಿ ಬರಬೇಕು. ಅಗ್ರ ಸಾಲಿನಲ್ಲಿ ಇರುವ ಓರ್ವ ತ್ರಿಶೂಲವನ್ನು ಹಿಡಿದು ಮುಂದೆ ಸಾಗುತ್ತಾನೆ. ಅವನ ಹಿಂದೆ ಸಾಲಿನಲ್ಲಿ ಕೈಯಲ್ಲಿ ಖಡ್ಗ ಮತ್ತು ಭಗವಾ ಧ್ವಜ ಹಿಡಿದುಕೊಂಡು ಓಡುತ್ತಾರೆ. ದುರ್ಗಾಮಾತಾ ದೌಡ್ ಸಂಚರಿಸುವ ರಸ್ತೆಗಳನ್ನು ರಂಗೋಲಿ ಮತ್ತು ಹೂವಿನಿಂದ ಅಲಂಕಾರ ಮಾಡಲಾಗಿರುತ್ತದೆ. ನಗರದ ಪ್ರಮುಖ ಬೀದಿಗಳಲ್ಲಿ ಒಂಬತ್ತು ದಿನಗಳ ಕಾಲ ಈ ಸಂಭ್ರಮ ಮನೆ ಮಾಡಿರುತ್ತದೆ.

ಇದನ್ನೂ ಓದಿ: ಮೈಸೂರು ಜಂಬೂ ಸವಾರಿಗೆ ಕೊಪ್ಪಳದಲ್ಲಿ ಶತಮಾನದ ಹಿಂದೆ ನಡೆದ ಅಂಬಾರಿ ಮೆರವಣಿಗೆ ಪ್ರೇರಣೆ

ಒಂದೊಂದು ದಿನ ಇಂತಿಷ್ಟು ಪ್ರದೇಶ ಎಂದು ನಿಗದಿಪಡಿಸಿರುವ ಆಯಾ ಮಾರ್ಗಗಳಲ್ಲಿ ಎಲ್ಲರೂ ಭಕ್ತಿಯಿಂದ ಓಡುತ್ತಾರೆ. ಈ ವೇಳೆ ಭಾರತ್ ಮಾತಾ ಕೀ ಜೈ, ಜೈ ಶ್ರೀರಾಮ್ ಜೈ ಭವಾನಿ-ಜೈ ಶಿವಾಜಿ, ಜೈ ಚನ್ನಮ್ಮ-ಜೈ ರಾಯಣ್ಣ ಘೋಷಣೆ ಕೂಗುತ್ತಾ ಉತ್ಸಾಹದಿಂದ ಸಹಸ್ರಾರು ಜನರು ಓಡುವುದನ್ನು ನೋಡುವುದೇ ವಿಶೇಷ.

ದುರ್ಗಾಮಾತಾ ದೌಡ್​ ಹಿನ್ನೆಲೆ

ಮಹಾರಾಷ್ಟ್ರದ ಸಾಂಗಲಿಯಲ್ಲಿ ಶಿವ ಪ್ರತಿಷ್ಠಾನ ಹಿಂದುಸ್ತಾನದ ಸಂಸ್ಥಾಪಕ ಸಂಭಾಜೀರಾವ ಭೀಡೆ ಧರ್ಮ ಜಾಗೃತಿ ಮೂಡಿಸುವ ಉದ್ದೇಶದಿಂದ 1985ರಂದು ದುರ್ಗಾಮಾತಾ ದೌಡ್ ಆರಂಭಿಸಿದರು. ಇದಾದ 13 ವರ್ಷಗಳ ಬಳಿಕ ಬೆಳಗಾವಿಯಲ್ಲೂ ದೌಡ್ ಶುರುವಾಯಿತು. ಅಂದಿನಿಂದ ಇಂದಿನವರೆಗೂ ನಿರಂತರವಾಗಿ 26 ವರ್ಷಗಳಿಂದ ಆಯೋಜಿಸುತ್ತಾ ಬರಲಾಗಿದೆ. ಆರಂಭದಲ್ಲಿ ಕೆಲವೇ ಕೆಲವು ಜನ ಶುರು ಮಾಡಿದ ದುರ್ಗಾಮಾತಾ ದೌಡ್​ ಈಗ ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸುತ್ತಾರೆ.

ದುರ್ಗಾಮಾತಾ ದೌಡ್

ಒಟ್ಟಾರೆಯಾಗಿ ಬೆಳಗಾವಿಯಲ್ಲಿ ದುರ್ಗಮಾತಾ ದೌಡ್ ಹೆಸರಿನಲ್ಲಿ ದೊಡ್ಡ ಸಮೂಹ ಒಂದೇಡೆ ಸೇರಿ ಹಬ್ಬವನ್ನು ಆಚರಣೆ ಮಾಡುತ್ತಿದೆ. ದುರ್ಗಾಮಾತಾ ದೌಡ್​ನಲ್ಲಿ ಪಾಲ್ಗೊಳ್ಳಲು ಶ್ವೇತ ವರ್ಣ ಕಡ್ಡಾಯವಾಗಿತ್ತದೆ. ಬೆಳಗಾವಿಯಲ್ಲಿ ನಡೆಯುವ ಗಣೇಶ ಉತ್ಸವ, ರಾಜ್ಯೋತ್ಸವ ಹಾಗೂ ದುರ್ಗಾಮಾತಾ ದೌಡ್​ನಲ್ಲಿ ಸಾವಿರಾರು ಜನ ಪಾಲ್ಗೊಲ್ಳುವುದು ವಿಶೇಷವಾಗಿದೆ. ದೌಡ್ ಉದ್ದಕ್ಕೂ ಪೊಲೀಸ್ ಬಂದೋಬಸ್ತ್ ಸಹ ನಿಯೋಜನೆ ಮಾಡಲಾಗಿರುತ್ತದೆ. ಶ್ರದ್ಧಾ, ಭಕ್ತಿಯಿಂದ ನವರಾತ್ರಿಯ ಒಂಬತ್ತು ದಿನಗಳ ಕಾಲ ಆಚರಣೆ ಮಾಡಲಾಗುತ್ತದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 9:02 am, Sat, 12 October 24

2 ವರ್ಷ ಹೋಟೆಲ್ ರೂಮ್ ಕೊಟ್ಟಿದ್ದಕ್ಕೆ 3 ಅಡಿಯಷ್ಟು ಕಸ ತುಂಬಿ ಹೋದ ಅತಿಥಿ
2 ವರ್ಷ ಹೋಟೆಲ್ ರೂಮ್ ಕೊಟ್ಟಿದ್ದಕ್ಕೆ 3 ಅಡಿಯಷ್ಟು ಕಸ ತುಂಬಿ ಹೋದ ಅತಿಥಿ
ಫ್ಯಾಮಿಲಿ ವೀಕ್: ರಾಶಿಕಾ ತಾಯಿ ಮಾತಿಗೆ ಸ್ಟನ್ ಆದ ಗಿಲ್ಲಿ
ಫ್ಯಾಮಿಲಿ ವೀಕ್: ರಾಶಿಕಾ ತಾಯಿ ಮಾತಿಗೆ ಸ್ಟನ್ ಆದ ಗಿಲ್ಲಿ
ಉಸಿರಾಟ ಸಮಸ್ಯೆ ಎಂದು ಆಸ್ಪತ್ರೆಗೆ ಬಂದ ರೋಗಿಯ ಮೇಲೆ ವೈದ್ಯನಿಂದ ಹಲ್ಲೆ
ಉಸಿರಾಟ ಸಮಸ್ಯೆ ಎಂದು ಆಸ್ಪತ್ರೆಗೆ ಬಂದ ರೋಗಿಯ ಮೇಲೆ ವೈದ್ಯನಿಂದ ಹಲ್ಲೆ
ರಸ್ತೆ ಅಡ್ಡಗಟ್ಟಿ ಬರ್ತ್‌ಡೇ ಆಚರಣೆ, ಪುಂಡರ ಹಾವಳಿ ವಿಡಿಯೋ ವೈರಲ್
ರಸ್ತೆ ಅಡ್ಡಗಟ್ಟಿ ಬರ್ತ್‌ಡೇ ಆಚರಣೆ, ಪುಂಡರ ಹಾವಳಿ ವಿಡಿಯೋ ವೈರಲ್
ರಜತ್ ಅವರ ಸಂಭಾವನೆ ಎಷ್ಟು? ಓಪನ್ ಆಗಿ ಮಾತನಾಡಿದ ಬುಜ್ಜಿ
ರಜತ್ ಅವರ ಸಂಭಾವನೆ ಎಷ್ಟು? ಓಪನ್ ಆಗಿ ಮಾತನಾಡಿದ ಬುಜ್ಜಿ
ರೈಲಿನ ಶೌಚಾಲಯದ ಪಕ್ಕ ಕುಳಿತು ಪ್ರಯಾಣಿಸಿದ ಕ್ರೀಡಾ ಪಟುಗಳು
ರೈಲಿನ ಶೌಚಾಲಯದ ಪಕ್ಕ ಕುಳಿತು ಪ್ರಯಾಣಿಸಿದ ಕ್ರೀಡಾ ಪಟುಗಳು
ಬೆಂಗಳೂರಲ್ಲಿ ನ್ಯೂ ಇಯರ್ ಸೆಲೆಬ್ರೇಟ್ ಮಾಡ್ತೀರಾ? ಈ ವಿಚಾರಗಳನ್ನು ತಿಳಿದಿರಿ
ಬೆಂಗಳೂರಲ್ಲಿ ನ್ಯೂ ಇಯರ್ ಸೆಲೆಬ್ರೇಟ್ ಮಾಡ್ತೀರಾ? ಈ ವಿಚಾರಗಳನ್ನು ತಿಳಿದಿರಿ
ತಿರುಮಲ ವೆಂಕಟೇಶ್ವರನ ದರ್ಶನಕ್ಕೂ ಮುನ್ನ ಭೂವರಾಹ ಸ್ವಾಮಿ ದರ್ಶನ ಕಡ್ಡಾಯ
ತಿರುಮಲ ವೆಂಕಟೇಶ್ವರನ ದರ್ಶನಕ್ಕೂ ಮುನ್ನ ಭೂವರಾಹ ಸ್ವಾಮಿ ದರ್ಶನ ಕಡ್ಡಾಯ
ಇಂದು ಈ ರಾಶಿಯವರ ವ್ಯವಹಾರಗಳಲ್ಲಿ ಯಶಸ್ಸು ಲಭಿಸಲಿದೆ
ಇಂದು ಈ ರಾಶಿಯವರ ವ್ಯವಹಾರಗಳಲ್ಲಿ ಯಶಸ್ಸು ಲಭಿಸಲಿದೆ
ರೀಲ್ಸ್ ತಂದ ಆಪತ್ತು: ಇನ್ಸ್ಟಾಗ್ರಾಮ್​​​ ಬಳಸುವವರು ಈ ವಿಡಿಯೋನ ಒಮ್ಮೆ ನೋಡಿ
ರೀಲ್ಸ್ ತಂದ ಆಪತ್ತು: ಇನ್ಸ್ಟಾಗ್ರಾಮ್​​​ ಬಳಸುವವರು ಈ ವಿಡಿಯೋನ ಒಮ್ಮೆ ನೋಡಿ