Belagavi News: ಗಂಡ ಬೇರೆ ಮನೆ ಮಾಡಲಿಲ್ಲ ಅಂತ ಅತ್ತೆಯನ್ನೇ ಹೊಡೆದು ಕೊಂದ ಸೊಸೆ: ಸಾವಿಗೆ ಅವಳೇ ಕಾರಣವೆಂದು ಆರೋಪಿಸಿದ ಕುಟುಂಬಸ್ಥರು

ಗಂಡ ಬೇರೆ‌ ಮನೆ ಮಾಡಲಿಲ್ಲವೆಂದು ತವರು ಮನೆಯವರನ್ನ ಕರೆಯಿಸಿ ಅತ್ತೆ, ಗಂಡನ ಮೇಲೆ ಹಲ್ಲೆ ಮಾಡಿದ್ದು, ತೀವ್ರವಾಗಿ ಹಲ್ಲೆಗೊಳಗಾಗಿದ್ದ ಮಹಾಬೂಬಿ ಯಾಕೂಶಿ(53) ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಬೈಲಹೊಂಗಲ ಪಟ್ಟಣದಲ್ಲಿ ನಡೆದಿದೆ.

Belagavi News: ಗಂಡ ಬೇರೆ ಮನೆ ಮಾಡಲಿಲ್ಲ ಅಂತ ಅತ್ತೆಯನ್ನೇ ಹೊಡೆದು ಕೊಂದ ಸೊಸೆ: ಸಾವಿಗೆ ಅವಳೇ ಕಾರಣವೆಂದು ಆರೋಪಿಸಿದ ಕುಟುಂಬಸ್ಥರು
ಸೊಸೆ ಮೇಹರೂಣಿ, ಗಂಡ ಸುಬಾನ್ ಯಾಕೂಶಿ
Follow us
ಕಿರಣ್ ಹನುಮಂತ್​ ಮಾದಾರ್
| Updated By: ಗಂಗಾಧರ​ ಬ. ಸಾಬೋಜಿ

Updated on:Jun 13, 2023 | 4:30 PM

ಬೆಳಗಾವಿ: ಗಂಡ ಬೇರೆ‌ ಮನೆ ಮಾಡಲಿಲ್ಲವೆಂದು ತವರು ಮನೆಯವರನ್ನ ಕರೆಯಿಸಿ ಅತ್ತೆ, ಗಂಡನ ಮೇಲೆ ಹಲ್ಲೆ ಮಾಡಿದ್ದು, ತೀವ್ರವಾಗಿ ಹಲ್ಲೆಗೊಳಗಾಗಿದ್ದ ಮಹಾಬೂಬಿ ಯಾಕೂಶಿ(53) ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಬೈಲಹೊಂಗಲ (Bailhongal) ಪಟ್ಟಣದಲ್ಲಿ ನಡೆದಿದೆ. ಮೇ.22ರಂದು ಸೊಸೆ ಮೇಹರೂಣಿ ಯಾಕೂಶಿ ಮತ್ತು ಇಬ್ಬರು ಸಹೋದರರ ಜತೆ ಸೇರಿ ಹಲ್ಲೆ ಮಾಡಲಾಗಿತ್ತು. ಈ ವೇಳೆ ರಾಡ್‌ನಿಂದ ಗಂಡ ಸುಬಾನ್ ಮತ್ತು ಅತ್ತೆ ಮಹಾಬೂಬಿ ಮೇಲೆ ಹಲ್ಲೆ ನಡೆಸಿದ್ದರು. ಇದರಿಂದ ತೀವ್ರವಾಗಿ ಗಾಯಗೊಂಡಿದ್ದ ಮಹಾಬೂಬಿ ಇಂದು(ಜೂ.13) ಸಾವನ್ನಪ್ಪಿದ್ದಾಳೆ. ಈ ಸಾವಿಗೆ ಸೊಸೆ ಮೇಹರೂಣಿ ಮತ್ತು ಇಬ್ಬರು ತಮ್ಮಂದಿರೇ ಕಾರಣ ಅಂತಾ ಪತಿ ಕುಟುಂಬಸ್ಥರು ಆರೋಪ ಮಾಡುತ್ತಿದ್ದಾರೆ.

ಮೂರು ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ಮೇಹರೂಣಿ ಮತ್ತು ಸುಬಾನ್

ಇನ್ನು ಇವರಿಬ್ಬರು ಮೂರು ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಮದುವೆಯಾಗಿ ಒಂದು ವರ್ಷ ಚೆನ್ನಾಗಿಯೇ ಇದ್ದ ಸಂಸಾರದಲ್ಲಿ ಬಿರುಗಾಳಿ ಬೀಸಲಾರಂಭಿಸಿತ್ತು. ಹೌದು ಒಂದು ವರ್ಷದ ಬಳಿಕ ಪತ್ನಿ ಮೇಹರೂಣಿ ಬೇರೆ ಮನೆ ಮಾಡುವಂತೆ ಗಂಡನಿಗೆ ಕಿರುಕುಳ ನೀಡಲು ಆರಂಭಿಸಿದ್ದಳು. ಇದನ್ನ ಒಪ್ಪದ ಸುಬಾನ್ ಹಾಗೂ ಅತ್ತೆ ಜೊತೆ ನಿರಂತರ ಜಗಳವಾಡುತ್ತಿದ್ದಳು. ಇದೇ ಜಗಳ ತಾರಕಕ್ಕೇರಿ ಮೇ. 22ರಂದು ಮೇಹರೂಣಿ ಮತ್ತು ಅವಳ ಸಹೋದರರಾದ ಶೋಯೆಬ್‌, ಸಮನ್ ತಿಗಡಿಯನ್ನ ಕರೆಯಿಸಿ ಇಬ್ಬರ ಮೇಲೂ ಹಲ್ಲೆ ಮಾಡಿಸಿದ್ದಳು. ಇದರಿಂದ ತೀವ್ರ ಗಾಯಗೊಂಡ ಅತ್ತೆ ಸಾವನ್ನಪ್ಪಿದ್ದಾಳೆ. ಇದೀಗ ಮೂರು ಜನರ ವಿರುದ್ಧ ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸೊಸೆ ಮತ್ತು ಸಹೋದರರನ್ನ ಬಂಧಿಸುವಂತೆ ಪತಿ ಮತ್ತು ಕುಟುಂಬಸ್ಥರ ಮನವಿ ಮಾಡಿದ್ದಾರೆ.

ಇದನ್ನೂ ಓದಿ:ಆಟೋ ಬಾಡಿಗೆ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ, ಉದ್ಯೋಗ ಅರಸಿ ಬೆಂಗಳೂರಿಗೆ ಬಂದಿದ್ದವ ದುರಂತ ಸಾವು

ಕೆಆರ್‌ಎಸ್ ಹಿನ್ನೀರಿನಲ್ಲಿ ಈಜಲು ಹೋಗಿದ್ದ ಇಬ್ಬರು ವಿದ್ಯಾರ್ಥಿಗಳು ನೀರುಪಾಲು

ಮೈಸೂರು: ತಾಲೂಕಿನ ಮೀನಾಕ್ಷಿಪುರದ ಕೆಆರ್‌ಎಸ್(KRS) ಹಿನ್ನೀರು ಪ್ರದೇಶದಲ್ಲಿ ಈಜಲು ಹೋಗಿದ್ದ ಹಾಸನದ ಚಿರಂತ್(22), ಬೀದ‌ರ್ ಮೂಲದ ಸುನೀಲ್(22) ಸಾವನ್ನಪ್ಪಿದ್ದಾರೆ. ಇವರಿಬ್ಬರು ಮೈಸೂರಿನಲ್ಲಿ ಇಂಜಿನಿಯರಿಂಗ್​ ಓದುತ್ತಿದ್ದರು. ಇನ್ನು ಇವರಿಬ್ಬರೂ ಅರ್ಧಗಂಟೆ ನೀರಿನಲ್ಲಿ ಈಜಾಡಿದ್ದಾರೆ. ಬಳಿಕ ನೀರಿನ ಸೆಳೆತಕ್ಕೆ ಸಿಲುಕಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದು, ಇಲವಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನಷ್ಟುಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:54 am, Tue, 13 June 23