ಕ್ಯಾಬೇಜ್ ಬೆಳೆದು ಕಷ್ಟಕ್ಕೆ ತುತ್ತಾದ ಅನ್ನದಾತ, ಯೋಗ್ಯ ದರಕ್ಕೆ ಮಣ್ಣಿನಮಕ್ಕಳ ಆಗ್ರಹ
ಬೆಳಗಾವಿ: ಅವ್ರು ಪ್ರವಾಹಕ್ಕೆ ಸೆಡ್ಡು ಹೊಡೆದು ಬದುಕು ಕಟ್ಟಿಕೊಂಡ ರೈತರು. ಏನೂ ಇಲ್ಲದಿರೋ ಕಡೆ ಚಿನ್ನದಂತಹ ಬೆಳೆ ಬೆಳೆದ ಕಷ್ಟಜೀವಿಗಳು. ಆದ್ರೀಗ ಮಾರುಕಟ್ಟೆಯಲ್ಲಿ ರೈತರು ಬೆಳೆದ ಬೆಳೆಯನ್ನ ಕೇಳೋರೇ ಇಲ್ಲದಂತಾಗಿದೆ. ಈಗ ತಾವೇ ಬೆಳೆದ ಬೆಳೆಯನ್ನ ತಮ್ಮ ಕೈಯಿಂದ್ಲೇ ನಾಶ ಮಾಡ್ತಿದ್ದಾರೆ. ತಾಜಾ ತಾಜಾ ಕ್ಯಾಬೇಜ್. ನೋಡ್ತಿದ್ರೆ ಇದ್ರಲ್ಲಿ ಗೋಬಿ ಮಂಚೂರಿ ಮಾಡೋಣ್ವಾ..? ಕ್ಯಾಬೇಜ್ ಪಕೋಡಾ ಮಾಡೋಣ್ವಾ..? ಚಪಾತಿ ಜೊತೆ ಸ್ಪೈಸಿ ಆಗಿರೋ ಪಲ್ಯ ಮಾಡೋಣ್ವಾ ಅಂತಾ ಹೆಂಗಸರೆಲ್ಲಾ ಯೋಚ್ನೆ ಮಾಡ್ತಾರೆ. ಆದ್ರೆ ಈ ರೈತನ ಬದುಕು […]
ಬೆಳಗಾವಿ: ಅವ್ರು ಪ್ರವಾಹಕ್ಕೆ ಸೆಡ್ಡು ಹೊಡೆದು ಬದುಕು ಕಟ್ಟಿಕೊಂಡ ರೈತರು. ಏನೂ ಇಲ್ಲದಿರೋ ಕಡೆ ಚಿನ್ನದಂತಹ ಬೆಳೆ ಬೆಳೆದ ಕಷ್ಟಜೀವಿಗಳು. ಆದ್ರೀಗ ಮಾರುಕಟ್ಟೆಯಲ್ಲಿ ರೈತರು ಬೆಳೆದ ಬೆಳೆಯನ್ನ ಕೇಳೋರೇ ಇಲ್ಲದಂತಾಗಿದೆ. ಈಗ ತಾವೇ ಬೆಳೆದ ಬೆಳೆಯನ್ನ ತಮ್ಮ ಕೈಯಿಂದ್ಲೇ ನಾಶ ಮಾಡ್ತಿದ್ದಾರೆ.
ತಾಜಾ ತಾಜಾ ಕ್ಯಾಬೇಜ್. ನೋಡ್ತಿದ್ರೆ ಇದ್ರಲ್ಲಿ ಗೋಬಿ ಮಂಚೂರಿ ಮಾಡೋಣ್ವಾ..? ಕ್ಯಾಬೇಜ್ ಪಕೋಡಾ ಮಾಡೋಣ್ವಾ..? ಚಪಾತಿ ಜೊತೆ ಸ್ಪೈಸಿ ಆಗಿರೋ ಪಲ್ಯ ಮಾಡೋಣ್ವಾ ಅಂತಾ ಹೆಂಗಸರೆಲ್ಲಾ ಯೋಚ್ನೆ ಮಾಡ್ತಾರೆ. ಆದ್ರೆ ಈ ರೈತನ ಬದುಕು ಮಾತ್ರ ಕ್ಯಾಬೇಜ್ ಥರ ಹಸಿರಾಗಲೇ ಇಲ್ಲ. ಚಿಂದಿ ಚಿತ್ರಾನ್ನ ಆಗಿ ಪೂರ ಬರ್ಬಾದ್ ಆಗೋಗಿದೆ. ಏನ್ ಮಾಡ್ಬೇಕು ಗೊತ್ತಾಗದೆ ಕಣ್ಣೀರಿಡೋ ಪರಿಸ್ಥಿತಿ ಬಂದಾಗಿದೆ.
ಕ್ಯಾಬೇಜ್ ಬೆಳೆಯನ್ನ ಕೇಳೋರೇ ಇಲ್ಲ! ಕಳೆದ 7 ತಿಂಗಳ ಹಿಂದೆ ಉಂಟಾದ ಪ್ರವಾಹ ಬೆಳಗಾವಿ ಜಿಲ್ಲೆ ಕಡೋಲಿ ರೈತರನ್ನ ಹಿಂಡಿ ಹಿಪ್ಪೆ ಮಾಡಿತ್ತು. ಮನೆ, ಮಠ, ಜಮೀನು ಏನಾದ್ರೂ ಆಗ್ಲಿ ಜೀವ ಉಳಿದ್ರೆ ಸಾಕಪ್ಪಾ ಅನ್ಕೊಂಡಿದ್ರು. ಪ್ರವಾಹದ ಅಬ್ಬರಕ್ಕೆ ಜಮೀನಿನಲ್ಲಿ ಬೆಳೆದಿದ್ದ ಬೆಳೆ ಎಲ್ಲಾ ಹೇಳ ಹೆಸರಿಲ್ಲದಂತೆ ಕೊಚ್ಚಿ ಹೋಗಿತ್ತು.
ನಂತ್ರ ಕಷ್ಟಪಟ್ಟು ಅನ್ನದಾತರು ಪುನಃ ಬದುಕು ಕಟ್ಟಿಕೊಂಡ್ರು. ಇದೀಗ ಸಾಲಸೂಲ ಮಾಡಿ 2 ಸಾವಿರ ಹೆಕ್ಟೇರ್ಗೂ ಹೆಚ್ಚು ಪ್ರದೇಶದಲ್ಲಿ ಕ್ಯಾಬೇಜ್ ಬೆಳೆದಿದ್ದಾರೆ. ಆದ್ರೆ ಕ್ಯಾಬೇಜ್ಗೆ ಮಾರುಕಟ್ಟೆಯಲ್ಲಿ ರೇಟೇ ಇಲ್ಲ. ಕ್ವಿಂಟಾಲ್ ಕ್ಯಾಬೇಜ್ ದರ ಕೇವಲ 50 ರೂಪಾಯಿ ಇದೆ. ಇದ್ರಿಂದ ಹಾಕಿರೋ ಬಂಡವಾಳ ಕೂಡ ಮೈಮೇಲೆ ಬೀಳ್ತಿದೆ. ಹೀಗಾಗಿ ಚಿದಾನಂದ ಅನ್ನೋ ರೈತ ಟ್ರ್ಯಾಕ್ಟರ್ ಹರಿಸಿ ಬೆಳೆದಿರೋ ಕ್ಯಾಬೇಜ್ ಬೆಳೆಯನ್ನ ನಾಶ ಮಾಡಿದ್ದಾನೆ.
ಕ್ಯಾಬೇಜ್ ರೇಟ್ ಇಲ್ಲದಿದ್ದಕ್ಕೆ ರೊಚ್ಚಿಗೆದ್ದ ರೈತರು, ಡಿಸಿ ಕಚೇರಿ ಮುಂದೆ ಕ್ಯಾಬೇಜ್ ಸುರಿದು ಪ್ರತಿಭಟನೆ ನಡೆಸಿದ್ರು. ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಧರಣಿ ನಡೆಸಿದ ರೈತರು ಕ್ಯಾಬೇಜ್ ಸೇರಿದಂತೆ ತರಕಾರಿಗಳಿಗೆ ಯೋಗ್ಯ ಬೆಲೆ ನಿಗದಿ ಮಾಡುವಂತೆ ಒತ್ತಾಯಿಸಿದ್ರು. ಬೆಳಗಾವಿ ಡಿಸಿ ಎಸ್.ಬಿ ಬೊಮ್ಮನಹಳ್ಳಿ ಮೂಲಕ ಸಿಎಂಗೆ ಮನವಿ ಸಲ್ಲಿಸಿದ್ರು.
ಒಟ್ನಲ್ಲಿ ಪ್ರವಾಹದ ಹೊಡೆತಕ್ಕೆ ನಲುಗಿದ್ದ ರೈತರಿಗೆ ತಮ್ಮ ಬೆಳೆಗೆ ಬೆಲೆ ಇಲ್ಲದಿರೋದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಸಗಟು ಮಾರುಕಟ್ಟೆಯಲ್ಲಿ ನೋಡಿದ್ರೆ ಪ್ರತಿ ಕೆ.ಜಿ ಕ್ಯಾಬೇಜ್ ದರ 50 ಪೈಸೆ ಇದೆ, ಆದ್ರೆ ಚಿಲ್ಲರೆ ಮಾರುಕಟ್ಟೆಯಲ್ಲಿ 15ರಿಂದ 20 ರೂಪಾಯಿಗೆ ಮಾರಾಟವಾಗ್ತಿದೆ. ಹೀಗಾಗಿ ಸರ್ಕಾರ ಮಧ್ಯಪ್ರವೇಶಿಸಿ ಕ್ಯಾಬೇಜ್ಗೆ ಸೂಕ್ತ ದರ ನಿಗದಿಪಡಿಸಿ, ಅನ್ನದಾತರ ಸಂಕಷ್ಟ ಪರಿಹರಿಸಬೇಕಿದೆ.
Published On - 10:40 am, Tue, 3 March 20