ಶಾಲೆ ಆವರಣದಲ್ಲಿದ್ದ ಸರಸ್ವತಿ ಮೂರ್ತಿ ಧ್ವಂಸಗೊಳಿಸಿದ ಕಿಡಿಗೇಡಿಗಳು; ಆಡಳಿತ ಮಂಡಳಿಯಿಂದ ದೂರು ದಾಖಲು

ಘಟನೆ ಬಗ್ಗೆ ಶಾಲಾ ಆಡಳಿತ ಮಂಡಳಿ ಪೊಲೀಸರಿಗೆ ದೂರು ನೀಡಿದೆ. ಸದ್ಯ ಸ್ಥಳಕ್ಕೆ ಚಿಕ್ಕೋಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಿನ್ನೆ ಸಂಜೆ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಶಾಲೆ ಆವರಣದಲ್ಲಿದ್ದ ಸರಸ್ವತಿ ಮೂರ್ತಿ ಧ್ವಂಸಗೊಳಿಸಿದ ಕಿಡಿಗೇಡಿಗಳು; ಆಡಳಿತ ಮಂಡಳಿಯಿಂದ ದೂರು ದಾಖಲು
ಸರಸ್ವತಿ ಮೂರ್ತಿ ಧ್ವಂಸ
Follow us
| Updated By: preethi shettigar

Updated on:Mar 25, 2022 | 6:22 PM

ಬೆಳಗಾವಿ: ಶಾಲೆ ಆವರಣದಲ್ಲಿದ್ದ ಸರಸ್ವತಿ ಮೂರ್ತಿಯನ್ನು(Idol) ಕಿಡಿಗೇಡಿಗಳು ಭಗ್ನಗೊಳಿಸಿದ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಚಿಂಚಣಿ ಗ್ರಾಮದಲ್ಲಿ ನಡೆದಿದೆ. ಸರಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆಯಲ್ಲಿ‌(School) ನಿನ್ನೆ ಸಂಜೆ ಸರಸ್ವತಿ ಮೂರ್ತಿಯನ್ನು ಕಿಡಿಗೇಡಿಗಳು ಧ್ವಂಸಗೊಳಿಸಿದ್ದಾರೆ. ಘಟನೆ ಬಗ್ಗೆ ಶಾಲಾ ಆಡಳಿತ ಮಂಡಳಿ ಪೊಲೀಸರಿಗೆ(Police) ದೂರು ನೀಡಿದೆ. ಸದ್ಯ ಸ್ಥಳಕ್ಕೆ ಚಿಕ್ಕೋಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಿನ್ನೆ ಸಂಜೆ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಶಿವಮೊಗ್ಗ: ಇತ್ತೀಚೆಗೆ ಜಿಲ್ಲೆಯ ಶಾಲೆವೊಂದರಲ್ಲಿ ಕೂಡ ಇಂತಹದ್ದೇ ಘಟನೆ ನಡೆದಿತ್ತು

ಕಲೆ ಮತ್ತು ಸಾಂಸ್ಕೃತಿಕ ಜಿಲ್ಲೆ ಶಿವಮೊಗ್ಗದಲ್ಲಿ ಪ್ರಜ್ಞಾವಂತ ಮಂದಿ ತಲೆತಗ್ಗಿಸುವಂತಹ ದಾರುಣ ಘಟನೆ ನಡೆದಿತ್ತು. ಕನ್ನಡ ಶಾಲೆಯ ಮೇಲೆ ಪುಡಿ ರೌಡಿಗಳು ಅಟ್ಟಹಾಸಗೈದಿದ್ದು ಶಾಲಾ ಕೈದೋಟದಲ್ಲಿ ಸ್ವಾಮಿ ವಿವೇಕಾನಂದ, ಮಹಾತ್ಮ ಗಾಂಧೀಜಿ ಮತ್ತು ಸರಸ್ವತಿ ದೇವಿಯ ವಿಗ್ರಹಗಳನ್ನು ಧ್ವಂಸ ಮಾಡಿದ್ದರು. ತೀರ್ಥಹಳ್ಳಿ  ತಾಲೂಕಿನ ಹಾರೊಗೊಳಿಗೆ ಪ್ರಾಥಮಿಕ ಶಾಲೆಯ ಆವರಣಕ್ಕೆ ನುಗ್ಗಿದ ದುಷ್ಕರ್ಮಿಗಳು, ಶಾಲಾ ಹಿಂಭಾಗದಲ್ಲಿರುವ ಕೈತೋಟವನ್ನು ನಾಶಪಡಿಸಿದ್ದಾರೆ.

ಈ ಶಾಲೆಯು ಬಡ ವಿದ್ಯಾರ್ಥಿ-ವಿದ್ಯಾರ್ಥಿನಿಯರ ಜ್ಞಾನ ದಾಹವನ್ನು ನೀಗಿಸುತ್ತಿರುವ ಈ ಶಾಲೆಯಾಗಿದೆ. ಆಲೆಯ ಹಳೆಯ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ತಮ್ಮ ಕೈಲಾದ ಮಟ್ಟಿಗೆ ಶಾಲೆಯ ಅಭಿವೃದ್ಧಿಗೆ ಶ್ರಮಿಸಿ, ಕೈತೋಟ, ಸರಸ್ವತಿ ದೇವಿ, ಮಹಾತ್ಮ ಗಾಂಧೀಜಿ ಮತ್ತು ವಿವೇಕಾನಂದರ ವಿಗ್ರಹಗಳನ್ನು ಸ್ಥಾಪಿಸಿ ಮಕ್ಕಳಿಗೆ ದೇಶಾಭಿಮಾನ ಮೂಡುವಲ್ಲಿ ಅವಿರತವಾಗಿ ಶ್ರಮವಹಿಸುತ್ತಿದ್ದರು. ಶಾಲಾ ಉಪಾಧ್ಯಾಯರುಗಳು ಮಕ್ಕಳಿಗೆ ಕೈತೋಟದ ಅರಿವನ್ನು ಮೂಡಿಸಿದ್ದರು.

ಆದರೆ ಕೆಲ ಕಿಡಿಗೇಡಿಗಳು ದುಷ್ಕೃತ್ಯದ ಫಲವಾಗಿ ಹಾರೊಗೊಳಿಗೆ ಶಾಲಾ ಆವರಣದಲ್ಲಿ ಈಗ ಆತಂಕದ ಛಾಯೆ ಮೂಡಿದೆ. ಇಂತಹ ದುಷ್ಕೃತ್ಯಕ್ಕೆ ಹಾರೊಗೊಳಿಗೆ ಮತ್ತು ಅದರ ಸುತ್ತಮುತ್ತ ಇರುವ ಹಳ್ಳಿಗಳಲ್ಲಿ ಅಕ್ರಮ ಮದ್ಯ ಮಾರಾಟವೆ ಕಾರಣವೆಂದು ಹೇಳಲಾಗುತ್ತಿದೆ. ರಾತ್ರಿ ಹೊತ್ತು ಕುಡಿದು ಗಲಾಟೆ ಮಾಡುವುದು ಹಳ್ಳಿಯಲ್ಲಿ ನಿರಂತರವಾಗಿ ನಡೆಯುತ್ತಿದೆ ಎಂದು ಗ್ರಾಮಸ್ಥರು ದೂರಿದ್ದಾರೆ. ಇಂತಹ ದುಷ್ಕೃತ್ಯವನ್ನು ಎಸಗಿದ ದುಷ್ಕರ್ಮಿಗಳ ವಿರುದ್ಧ ಹಾರೊಗೊಳಿಗೆ ಗ್ರಾಮ ಪಂಚಾಯಿತಿ ಮತ್ತು ಶಾಲಾ ಮಂಡಳಿ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.

ಇದನ್ನೂ ಓದಿ: ಢಾಕಾದಲ್ಲಿ ಇಸ್ಕಾನ್ ದೇವಾಲಯ ಧ್ವಂಸಗೊಳಿಸಿದ ದುಷ್ಕರ್ಮಿಗಳ ಗುಂಪು; ಮೂವರು ಭಕ್ತರಿಗೆ ಗಾಯ

ಮುಸ್ಲಿಮರಿಗೆ ಯಾವುದೇ ವಸ್ತು ಮಾರಾಟ ಮಾಡುವುದಿಲ್ಲ ಎಂದು ಹಿಂದೂ ವ್ಯಾಪಾರಿಗಳ ಅಂಗಡಿ ವಿರುದ್ಧ ತಪ್ಪು ಸಂದೇಶ; ದೂರು ದಾಖಲು

Published On - 6:14 pm, Fri, 25 March 22

ಕಿರುಕುಳ ನೀಡಲು ಬಂದ ಪುಂಡರ ಕಾಲರ್ ಹಿಡಿದು ಒದ್ದ ಯುವತಿ
ಕಿರುಕುಳ ನೀಡಲು ಬಂದ ಪುಂಡರ ಕಾಲರ್ ಹಿಡಿದು ಒದ್ದ ಯುವತಿ
ಏಕೈಕ ಟೆಸ್ಟ್ ಪಂದ್ಯಕ್ಕಾಗಿ ಭಾರತಕ್ಕೆ ಬಂದಿಳಿದ ನ್ಯೂಜಿಲೆಂಡ್ ತಂಡ
ಏಕೈಕ ಟೆಸ್ಟ್ ಪಂದ್ಯಕ್ಕಾಗಿ ಭಾರತಕ್ಕೆ ಬಂದಿಳಿದ ನ್ಯೂಜಿಲೆಂಡ್ ತಂಡ
ಪತ್ನಿ ಕೊಟ್ಟ ಬ್ಯಾಗ್ ಹಿಡಿದು ಸೈಲೆಂಟ್ ಆಗಿ ಸೆಲ್​ಗೆ ಹೋದ ದರ್ಶನ್
ಪತ್ನಿ ಕೊಟ್ಟ ಬ್ಯಾಗ್ ಹಿಡಿದು ಸೈಲೆಂಟ್ ಆಗಿ ಸೆಲ್​ಗೆ ಹೋದ ದರ್ಶನ್
ಗಿಲ್ ಹಿಡಿದ ಈ ಅದ್ಭುತ ಕ್ಯಾಚ್​ಗೆ ಎಷ್ಟು ಅಂಕ ಕೊಡ್ತೀರಾ? ಕಾಮೆಂಟ್ ಮಾಡಿ
ಗಿಲ್ ಹಿಡಿದ ಈ ಅದ್ಭುತ ಕ್ಯಾಚ್​ಗೆ ಎಷ್ಟು ಅಂಕ ಕೊಡ್ತೀರಾ? ಕಾಮೆಂಟ್ ಮಾಡಿ
ಶೂಟಿಂಗ್ ಸಮಯದಲ್ಲಿ ತಮಗಾದ ಕಹಿ ಅನುಭವದ ಬಗ್ಗೆ ರಾಧಿಕಾ ಕುಮಾರಸ್ವಾಮಿ ಮಾತು
ಶೂಟಿಂಗ್ ಸಮಯದಲ್ಲಿ ತಮಗಾದ ಕಹಿ ಅನುಭವದ ಬಗ್ಗೆ ರಾಧಿಕಾ ಕುಮಾರಸ್ವಾಮಿ ಮಾತು
ಇಳಕಲ್​​ನಲ್ಲಿ ದಾಖಲೆಯ ಅಡ್ಡಪಲ್ಲಕ್ಕಿ ಮಹೋತ್ಸವ: ನಿರಂತರ 33 ಗಂಟೆ ಮೆರವಣಿಗೆ
ಇಳಕಲ್​​ನಲ್ಲಿ ದಾಖಲೆಯ ಅಡ್ಡಪಲ್ಲಕ್ಕಿ ಮಹೋತ್ಸವ: ನಿರಂತರ 33 ಗಂಟೆ ಮೆರವಣಿಗೆ
ಚಿತ್ರದುರ್ಗ: ಪೆಟ್ರೋಲ್ ಸುರಿದು ತಹಶೀಲ್ದಾರ್ ಜೀಪ್​ಗೆ ಬೆಂಕಿಯಿಟ್ಟ ಯುವಕ
ಚಿತ್ರದುರ್ಗ: ಪೆಟ್ರೋಲ್ ಸುರಿದು ತಹಶೀಲ್ದಾರ್ ಜೀಪ್​ಗೆ ಬೆಂಕಿಯಿಟ್ಟ ಯುವಕ
ಚಕ್ಕನೆ ಜಿಗಿದು ಅತ್ಯದ್ಭುತ ಡೈವಿಂಗ್ ಕ್ಯಾಚ್ ಹಿಡಿದ ಧ್ರುವ್ ಜುರೇಲ್
ಚಕ್ಕನೆ ಜಿಗಿದು ಅತ್ಯದ್ಭುತ ಡೈವಿಂಗ್ ಕ್ಯಾಚ್ ಹಿಡಿದ ಧ್ರುವ್ ಜುರೇಲ್
ನೆಲಮಂಗಲ: ಆನ್​ಲೈನ್​ನಲ್ಲೇ ಲಂಚ, ಉಪ ಲೋಕಾಯಕ್ತ ದಾಳಿ ವೇಳೆ ಬಯಲಾಯ್ತು ಅಕ್ರಮ
ನೆಲಮಂಗಲ: ಆನ್​ಲೈನ್​ನಲ್ಲೇ ಲಂಚ, ಉಪ ಲೋಕಾಯಕ್ತ ದಾಳಿ ವೇಳೆ ಬಯಲಾಯ್ತು ಅಕ್ರಮ
ದರ್ಶನ್ ಅನ್ನು ಮದುವೆ ಆಗಲು ರೆಡಿ: ಬಳ್ಳಾರಿ ಜೈಲಿನ ಬಳಿ ಮಹಿಳೆ ಹೈಡ್ರಾಮಾ
ದರ್ಶನ್ ಅನ್ನು ಮದುವೆ ಆಗಲು ರೆಡಿ: ಬಳ್ಳಾರಿ ಜೈಲಿನ ಬಳಿ ಮಹಿಳೆ ಹೈಡ್ರಾಮಾ