ಬೆಳಗಾವಿ: ಅಂಬೇಡ್ಕರ್​ ಭಾವಚಿತ್ರಕ್ಕೆ ಅಪಮಾನ, ಎರಡು ಗುಂಪುಗಳ ನಡುವೆ ಗಲಾಟೆ

ಏ.14 ಡಾ. ಬಿಆರ್​ ಅಂಬೇಡ್ಕರ್​ ಅವರ ಜನ್ಮದಿನ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಶಮನೇವಾಡಿ ಗ್ರಾಮದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ವೇದಿಕೆ ಮೇಲೆ ಇದ್ದ ಅಂಬೇಡ್ಕರ್​ ಅವರ ಭಾವಚಿತ್ರವನ್ನು ಕಿಡಿಗೇಡಿಗಳು ಕೆಳಗೆ ಬೀಳಿಸಿದ್ದು, ಇದರಿಂದ ಎರಡು ಗುಂಪುಗಳ ಮಧ್ಯೆ ಗಲಾಟೆ ನಡೆದಿದೆ.

ಬೆಳಗಾವಿ: ಅಂಬೇಡ್ಕರ್​ ಭಾವಚಿತ್ರಕ್ಕೆ ಅಪಮಾನ, ಎರಡು ಗುಂಪುಗಳ ನಡುವೆ ಗಲಾಟೆ
ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ, ಹಲ್ಲೆಗೊಳಗಾದ ಮಹಿಳೆ
Follow us
Sahadev Mane
| Updated By: ವಿವೇಕ ಬಿರಾದಾರ

Updated on:Apr 15, 2024 | 8:40 AM

ಬೆಳಗಾವಿ, ಏಪ್ರಿಲ್​ 15: ಚಿಕ್ಕೋಡಿ (Chikkodi) ತಾಲೂಕಿನ ಶಮನೇವಾಡಿ ಗ್ರಾಮದಲ್ಲಿ ಡಾ. ಬಿಆರ್​ ಅಂಬೇಡ್ಕರ್ (BR Ambedkar)​ ಭಾವಚಿತ್ರಕ್ಕೆ ಅಪಮಾನ ಮಾಡಲಾಗಿದ್ದು, ಎರಡು ಗುಂಪುಗಳ ನಡುವೆ ಗಲಾಟೆ ನಡೆದಿದೆ. ರವಿವಾರ (ಏ.14) ರಂದು ಬಿಆರ್​ ಅಂಬೇಡ್ಕರ್ ಜಯಂತಿ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ವೇದಿಕೆ ಮೇಲೆ ಅಂಬೇಡ್ಕರ್​ ಅವರ ಭಾವಚಿತ್ರವಿಟ್ಟು ಗೌರವಿಸಲಾಗಿತ್ತು. ಬಳಿಕ ಮೆರವಣೆಗೆ ನಡೆಯುವ ಸಂದರ್ಭದಲ್ಲಿ, ವೇದಿಕೆ ಮೇಲಿದ್ದ ಅಂಬೇಡ್ಕರ್​ ಅವರ ಭಾವಚಿತ್ರವನ್ನು ಕಿಡಿಗೇಡಿಗಳ ಗುಂಪು ಕೆಳಗೆ ಬೀಳಿಸಿ ಅಪಮಾನ ಮಾಡಿದೆ.

ಇದನ್ನು ಕಂಡ ಕಾರ್ಯಕ್ರಮ ಆಯೋಜಕರು ಮತ್ತು ಮೆರವಣಿಗೆಯಲ್ಲಿ ಭಾಗಿಯಾದ ಜನ ಕಿಡಿಗೇಡಿಗಳ ಗುಂಪನ್ನು ಪ್ರಶ್ನಿಸಿದ್ದಾರೆ. ಆಗ ಎರಡು ಗುಂಪುಗಳ ಮಧ್ಯೆ ಗಲಾಟೆ ನಡೆದಿದೆ. ಕಿಡಿಗೇಡಿಗಳ ಗುಂಪು ಮೆರವಣಿಗೆಯಲ್ಲಿ ಮತ್ತು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಯುವಕರು, ಮಕ್ಕಳು ಮತ್ತು ಮಹಿಳೆಯರ ಮೇಲೆ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ.

ಇದನ್ನೂ ಓದಿ: ಅಂಬೇಡ್ಕರ್ ಜಯಂತಿ ನಿಮಿತ್ತ ಹೊಸಪೇಟೆ ಉತ್ತರಾಧಿ ಮಠಕ್ಕೆ ಪ್ರವೇಶ ಮಾಡಿದ ದಲಿತರು

ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಅಪಮಾನ ಮಾಡಿದನ್ನು ಖಂಡಿಸಿ ಸದಲಗಾ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಲಾಗಿತ್ತು. ಕೂಡಲೇ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗಿದೆ. ಸದಲಗಾ ಪೊಲೀಸ್ ಠಾಣೆ ಒಳಗೆ ಮತ್ತು ಠಾಣೆ ಮುಂದೆ ಮಹಿಳೆಯರು ಧರಣಿ ನಡೆಸಿದರು. ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ ಮಾಡಿದವರನ್ನು ಬಂಧಿಸುವಂತೆ ಪಟ್ಟು ಹಿಡಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 7:54 am, Mon, 15 April 24