ಹೆಂಡತಿ ಮೇಲೆ ಅನುಮಾನ; ಕುಡಿದ ಮತ್ತಿನಲ್ಲಿ ಸೀರೆಯಿಂದ ಕುತ್ತಿಗೆ ಬಿಗಿದು ಪತ್ನಿ ಹತ್ಯೆ, ಸೂಸೈಡ್ ನಾಟಕವಾಡಿ ಜೈಲು ಸೇರಿದ ಪತಿ

ಬೆಳಗಾವಿ ಜಿಲ್ಲೆ ರಾಯಭಾಗ ತಾಲೂಕಿನ ನಿಡಗುಂದಿ ಗ್ರಾಮದ ನಿವಾಸಿ ಪ್ರದೀಪ್, 15 ವರ್ಷದ ಹಿಂದೆ ಆಶಾ ಎಂಬುವವಳನ್ನು ಮದುವೆಯಾಗಿ ಸುಂದರ ಸಂಸಾರ ನಡೆಸಿದ್ದ. ಇವರ ದಾಂಪತ್ಯಕ್ಕೆ ಸಾಕ್ಷಿ ಎಂಬಂತೆ ಇಬ್ರು ಮಕ್ಕಳು ಇದ್ದಾರೆ.

ಹೆಂಡತಿ ಮೇಲೆ ಅನುಮಾನ; ಕುಡಿದ ಮತ್ತಿನಲ್ಲಿ ಸೀರೆಯಿಂದ ಕುತ್ತಿಗೆ ಬಿಗಿದು ಪತ್ನಿ ಹತ್ಯೆ, ಸೂಸೈಡ್ ನಾಟಕವಾಡಿ ಜೈಲು ಸೇರಿದ ಪತಿ
ಹೆಂಡತಿ ಮೇಲೆ ಅನುಮಾನ; ಕುಡಿದ ಮತ್ತಿನಲ್ಲಿ ಸೀರೆಯಿಂದ ಕುತ್ತಿಗೆ ಬಿಗಿದು ಪತ್ನಿ ಹತ್ಯೆ, ಸೂಸೈಡ್ ನಾಟಕವಾಡಿ ಜೈಲು ಸೇರಿದ ಪತಿ
Follow us
TV9 Web
| Updated By: ಆಯೇಷಾ ಬಾನು

Updated on: Feb 27, 2022 | 9:03 AM

ಚಿಕ್ಕೋಡಿ: ಕಂಠ ಪೂರ್ತಿ ಕುಡಿದು ಬಂದ ಗಂಡನಿಂದಲೇ ಪತ್ನಿಯ ಕೊಲೆ(Murder) ಆಗಿರುವ ಘಟನೆ ಬೆಳಗಾವಿ ಜಿಲ್ಲೆ ರಾಯಭಾಗ ತಾಲೂಕಿನ ನಿಡಗುಂದಿಯಲ್ಲಿ ನಡೆದಿದೆ. ಆತ ಎಂದಿನಂತೆ ಕಂಠ ಪೂರ್ತಿ ಎಣ್ಣೆ ಕುಡಿದು ಮನೆಗೆ ಬಂದಿದ್ದ ಕುಡಿದು ಬಂದು ತಾನಾಯ್ತು ತನ್ನ ನಶೆ ಗುಂಗಾಯ್ತು ಅಂತ ಸುಮ್ಮನೆ ಮಲಗಿದ್ರೆ ಆ ಸಂಸಾರದಲ್ಲಿ ಬೆಳಗ್ಗೆ ಎಲ್ಲವೂ ಸರಿಯಾಗಿಯೇ ಇರ್ತಿತ್ತು. ಆದ್ರೆ ನಶೆಮಾಡಿದ ತಪ್ಪಿಗೆ ಒಂದು ಜೀವವೇ ಬಲಿಯಾಗಿದೆ. ಪ್ರತಾಪ್ ಅಲಿಯಾಸ್ ಪ್ರದೀಪ್ ಕಾಂಬಳೆ ಹೆಂಡತಿಯನ್ನು ಕೊಂದ ಆರೋಪಿ.

ಬೆಳಗಾವಿ ಜಿಲ್ಲೆ ರಾಯಭಾಗ ತಾಲೂಕಿನ ನಿಡಗುಂದಿ ಗ್ರಾಮದ ನಿವಾಸಿ ಪ್ರದೀಪ್, 15 ವರ್ಷದ ಹಿಂದೆ ಆಶಾ ಎಂಬುವವಳನ್ನು ಮದುವೆಯಾಗಿ ಸುಂದರ ಸಂಸಾರ ನಡೆಸಿದ್ದ. ಇವರ ದಾಂಪತ್ಯಕ್ಕೆ ಸಾಕ್ಷಿ ಎಂಬಂತೆ ಇಬ್ರು ಮಕ್ಕಳು ಇದ್ದಾರೆ. ಒಬ್ರೆ ದುಡಿದ್ರೆ ಜೀವನ ಮಾಡೋಕಾಗಲ್ಲ ಅಂತ ಗಂಡ ಹೆಂಡತಿ ಇಬ್ಬರೂ ಕೆಲಸಕ್ಕೆ ಹೋಗ್ತಿದ್ರಂತೆ. ಆದ್ರೆ ಕುಡಿತಕ್ಕೆ ದಾಸನಾಗಿದ್ದ ಪ್ರದೀಪ್ ಇತ್ತೀಚೆಗೆ ಹೆಂಡತಿ ಮೇಲೆ ಯಾವಾಗ್ಲೂ ಅನುಮಾನ ಪಡ್ತಿದ್ನಂತೆ. ಇದೇ ತಿಂಗಳ 24ರಂದು ಇದೇ ವಿಚಾರಕ್ಕೆ ಇಬ್ಬರ ನಡುವೆ ಜಗಳ ಶುರುವಾಗಿದೆ. ನಶೆಯಲ್ಲಿದ್ದ ಪ್ರದೀಪ್ ಸೀರೆಯಿಂದ ಆಶಾ ಕುತ್ತಿಗೆಗೆ ಬಿಗಿದು ಉಸಿರುಗಟ್ಟಿಸಿ ಕೊಂದಿದ್ದಾನೆ

ರಾತ್ರಿ ಪತ್ನಿಯನ್ನು ಕೊಂದಿದ್ದ ಪ್ರದೀಪ್ಗೆ ಬೆಳಗ್ಗೆ ನಶೆ ಇಳಿದಿದೆ. ಬೆಳಗ್ಗೆ 4 ಗಂಟೆಗೆ ಸ್ನಾನ ಮಾಡಿ ಹೋಗಿದ್ದವನು ಮತ್ತೆ ಬೆಳಗ್ಗೆ 7 ಗಂಟೆಗೆ ವಾಪಸ್ ಬಂದು ಹೆಂಡತಿ ಸೂಸೈಡ್ ಮಾಡ್ಕೊಂಡಿದ್ದಾಳೆ ಅಂತ ಊರಿಗೆಲ್ಲ ಹಬ್ಬಿಸೋ ಪ್ರಯತ್ನ ಪಟ್ಟಿದ್ದಾನೆ. ಆದ್ರೆ ಪ್ರದೀಪನ ಮುಖದ ಮೇಲಿನ ಗಾಯ ನೋಡಿದ ಆಶಾ ತವರು ಮನೆಯವರು ಅನುಮಾನಗೊಂಡು ಪೊಲೀಸರಿಗೆ ನಡೆದ ವಿಷಯವನ್ನು ತಿಳಿಸಿದ್ದಾರೆ. ಅಲ್ಲಿಗೆ ಬಂದ ರಾಯಭಾಗ ಪೊಲೀಸರು ವಿಚಾರಣೆ ಮಾಡಿದಾಗ ಬಾಯಿಬಿಟ್ಟಿರಲಿಲ್ಲ ಯಾವಾಗ ಪೊಲೀಸ್ ಭಾಷೆಯಲ್ಲಿ ವಿಚಾರಣೆ ಮಾಡಿದ್ರೋ ಆಗ ನಡೆದ ಎಲ್ಲವನ್ನೂ ಪ್ರದೀಪ್ ಬಾಯಿ ಬಿಟ್ಟಿದ್ದಾನೆ. ಇನ್ನು ಮದುವೆಯಾದಾಗಿನಿಂದಲೂ ಜೊತೆಗಿದ್ದ ಆಶಾ ಗಂಡನ ಹಿಂಸೆಗೆ ಬೇಸತ್ತು ಐದು ವರ್ಷದಿಂದ ದೂರವಾಗಿದ್ಳಂತೆ. ಒಂದು ವರ್ಷದ ಹಿಂದೆ ಪ್ರದೀಪನೇ ಹುಡುಕಿ ಕರೆದುಕೊಂಡು ಬಂದಿದ್ನಂತೆ. ಒಟ್ಟಿನಲ್ಲಿ ಅನುಮಾನ ಹಾಗೂ ಕುಡಿತದ ಚಟದಿಂದ ಒಂದು ಸಂಸಾರವೇ ಹಾಳಾಗಿದೆ. ತಾಯಿ ಸಾವನ್ನಪ್ಪಿದ್ರೆ, ತಂದೆ ಜೈಲು ಸೇರಿದ್ದಾನೆ. ಮಾಡದ ತಪ್ಪಿಗೆ ಮಕ್ಕಳು ಅನಾಥರಾಗಿದ್ದಾರೆ.

ವರದಿ: ವಿನಾಯಕ್ ಗುರವ್, ಟಿವಿ9 ಚಿಕ್ಕೋಡಿ

ಇದನ್ನೂ ಓದಿ: ಬೆಂಗಳೂರಿನ ಬ್ಯಾಟರಾಯನಪುರ ಜಂಕ್ಷನ್‌ನಲ್ಲಿ ಭೀಕರ ಅಪಘಾತ; ಕಾರು ಬೈಕ್ ಮಧ್ಯೆ ಡಿಕ್ಕಿ, ಇಬ್ಬರು ಸವಾರರು ದುರ್ಮರಣ

ಬದಲಾಯ್ತು ಕಂಗನಾ ಮನಸ್ಸು, ಹುಸಿ ಆಯ್ತು ನಿರೀಕ್ಷೆ; ಆಲಿಯಾ ಸಿನಿಮಾಗೆ ಕಿರಿಕ್​ ಕ್ವೀನ್​ ಮೆಚ್ಚುಗೆ​

ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?