Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಹಾ ಮೀಸಲು ಪುಂಡಾಟಕ್ಕೆ ಗಡಿ ಭಾಗದ ಕನ್ನಡಿಗರ ಪರದಾಟ: 2ನೇ ದಿನವೂ ಬಸ್ ಸಂಚಾರ ಸ್ಥಗಿತ, ಪ್ರಯಾಣಿಕರಿಂದ ಒನ್ ಟು ಡಬಲ್ ವಸೂಲಿ

ಇಂದು ಕನ್ನಡ ರಾಜ್ಯೋತ್ಸವ ಹಾಗೂ ಮಹಾರಾಷ್ಟ್ರದಲ್ಲಿ ಮರಾಠಾ ಸಮುದಾಯ ಮೀಸಲಾತಿ ಹೋರಾಟ ಹಿನ್ನೆಲೆ ಎರಡನೇ ದಿನವೂ ಬಸ್​ಗಳ ಸಂಚಾರ ಸ್ಥಗಿತಗೊಳಿಸಿದ್ದರಿಂದ ಪ್ರಯಾಣಿಕರು ತೀವ್ರ ಪರದಾಡುವಂತಾಯಿತು. ಅದರಲ್ಲೂ ಮಹಾರಾಷ್ಟ್ರದ ಕೊಲ್ಹಾಪುರ ಮಹಾಲಕ್ಷ್ಮೀ ದೇವಿ ದರ್ಶನಕ್ಕೆ ಕರ್ನಾಟಕದಿಂದ ನಿತ್ಯ ಸಾವಿರಾರು ಭಕ್ತರು ತೆರಳುತ್ತಾರೆ. ಬಸ್​ಗಳ ಸಂಚಾರ ಸ್ಥಗಿತ ಹಿನ್ನೆಲೆ ನಿಪ್ಪಾಣಿಯಲ್ಲೇ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಇದನ್ನೇ ಬಂಡವಾಳ ಮಾಡಿಕೊಂಡ ಖಾಸಗಿ ವಾಹನ ಚಾಲಕರು ಪ್ರಯಾಣಿಕರಿಂದ ದುಪ್ಪಟ್ಟು ಹಣ ವಸೂಲಿ ಮಾಡುತ್ತಿದ್ದಾರೆ.

ಮಹಾ ಮೀಸಲು ಪುಂಡಾಟಕ್ಕೆ ಗಡಿ ಭಾಗದ ಕನ್ನಡಿಗರ ಪರದಾಟ: 2ನೇ ದಿನವೂ ಬಸ್ ಸಂಚಾರ ಸ್ಥಗಿತ, ಪ್ರಯಾಣಿಕರಿಂದ ಒನ್ ಟು ಡಬಲ್ ವಸೂಲಿ
ಮಹಾ ಮೀಸಲು ಪುಂಡಾಟಕ್ಕೆ 2ನೇ ದಿನವೂ ಬಸ್ ಸಂಚಾರ ಸ್ಥಗಿತ, ಪ್ರಯಾಣಿಕರಿಂದ ಒನ್ ಟು ಡಬಲ್ ವಸೂಲಿ
Follow us
ಮಹಾಂತೇಶ ಕುರಬೇಟ, ಟಿವಿ9 ಚಿಕ್ಕೋಡಿ
| Updated By: ಸಾಧು ಶ್ರೀನಾಥ್​

Updated on: Nov 01, 2023 | 12:38 PM

ಚಿಕ್ಕೋಡಿ, ನವೆಂಬರ್​ 1: ಮಹಾರಾಷ್ಟ್ರದಲ್ಲಿ ಮರಾಠಾ ಸಮುದಾಯದ ಮೀಸಲಾತಿ ಹೋರಾಟದ (Maratha Community Reservation Struggle in Maharashtra) ಕಿಚ್ಚು ದಿನೇದಿನೇ ಹೊತ್ತಿ ಉರಿಯುತ್ತಿದೆ. ಮೀಸಲಾತಿ ಹೋರಾಟದ ಹೆಸರಲ್ಲಿ ಮಹಾರಾಷ್ಟ್ರದ ಕೆಲ ಪುಂಡರು ಕರ್ನಾಟಕದ ಬಸ್​ಗಳನ್ನೇ ಟಾರ್ಗೆಟ್ ಮಾಡುತ್ತಿದ್ದು ಕರ್ನಾಟಕ ಮಹಾರಾಷ್ಟ್ರ ಮಧ್ಯೆ ಬಸ್ ಸಂಚಾರ ಎರಡನೇ ದಿನವೂ ಬಂದ್ ಆಗಿತ್ತು. ಇದನ್ನೇ ಬಂಡವಾಳ ಮಾಡಿಕೊಂಡ ಖಾಸಗಿ ವಾಹನಗಳ ಚಾಲಕರು ಪ್ರಯಾಣಿಕರಿಂದ (Border Kannadigas in Belagavi) ಒನ್​ ಟು ಡಬಲ್ ಹಣ ವಸೂಲಿ ಮಾಡುತ್ತಿದ್ದಾರೆ. ಈ ಮಧ್ಯೆ ಶಿವಸೇನೆ ಪುಂಡರು ಗಡಿಯಲ್ಲಿ ಕಿರಿಕ್ ಮಾಡಿದ್ದು ಈ ಕುರಿತು ಡಿಟೇಲ್ ರಿಪೋರ್ಟ್ ಇಲ್ಲಿದೆ ನೋಡಿ.

ಹೌದು ಮಹಾರಾಷ್ಟ್ರದಲ್ಲಿ ಮರಾಠಾ ಮೀಸಲಾತಿ ಹೋರಾಟ ದಿನೇದಿನೇ ತೀವ್ರಗೊಳ್ಳುತ್ತಿದೆ. ಅದರಲ್ಲೂ ಮಹಾರಾಷ್ಟ್ರದಲ್ಲಿ ಮರಾಠಾ ಮೀಸಲಾತಿ ಹೋರಾಟದ ನೆಪದಲ್ಲಿ ಕರ್ನಾಟಕದ ಬಸ್​ಗಳನ್ನೇ ಟಾರ್ಗೆಟ್ ಮಾಡಿ ಕೆಲ ಪುಂಡರು ಬಸ್​ಗಳ ಮೇಲೆ ಕಲ್ಲು ತೂರಾಟ ನಡೆಸುವುದು, ಬೆಂಕಿ ಹಚ್ಚುವ ಕೃತ್ಯಕ್ಕೆ ಮುಂದಾಗಿದ್ರು. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಕರ್ನಾಟಕ ಮಹಾರಾಷ್ಟ್ರ ಮಧ್ಯೆ ಬಸ್​ಗಳ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಎರಡನೇ ದಿನವೂ ಉಭಯ ರಾಜ್ಯಗಳ ಮಧ್ಯೆ ಬಸ್​ಗಳ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಈ ಮಧ್ಯೆ ಇಂದು ಕರ್ನಾಟಕ ರಾಜ್ಯೋತ್ಸವ ಹಿನ್ನೆಲೆ ಬೆಳಗಾವಿಯಲ್ಲಿ ನಾಡದ್ರೋಹಿ ಎಂಇಎಸ್​ ಆಚರಿಸುತ್ತಿದ್ದ ಕರಾಳ ದಿನಾಚರಣೆಯಲ್ಲಿ ಭಾಗಿಯಾಗಲು ಶಿವಸೇನೆ ಪುಂಡರು ಬೆಳಗಾವಿಗೆ ಆಗಮಿಸುತ್ತಿದ್ರು.

ಶಿವಸೇನೆ ಉದ್ಧವ್ ಠಾಕ್ರೆ ಬಣದ ಕೊಲ್ಹಾಪುರ ಜಿಲ್ಲಾಧ್ಯಕ್ಷ ವಿಜಯ್ ದೇವಣೆ ನೇತೃತ್ವದಲ್ಲಿ ಸುಮಾರು 50 ಕಾರ್ಯಕರ್ತರು ನಿಪ್ಪಾಣಿ ತಾಲೂಕಿನ ಕೊಗನೊಳ್ಳಿ ಟೋಲ್​ಗೇಟ್ ಮುಖಾಂತರ ಬೆಳಗಾವಿ ಪ್ರವೇಶಕ್ಕೆ ಮುಂದಾಗಿದ್ದರು. ಮಹಾರಾಷ್ಟ್ರದ ಗಡಿಯಲ್ಲೇ ಶಿವಸೇನೆ ಪುಂಡರನ್ನು ಮಹಾರಾಷ್ಟ್ರ ಪೊಲೀಸರು ತಡೆದು ವಶಕ್ಕೆ ಪಡೆದರು. ಬೆಳಗಾವಿ, ಕಾರವಾರ, ನಿಪ್ಪಾಣಿ, ಬೀದರ್, ಭಾಲ್ಕಿ ಸಂಯುಕ್ತ ಮಹಾರಾಷ್ಟ್ರಕ್ಕೆ ಸೇರ್ಪಡೆಯಾಗಬೇಕು ಎಂದು ನಾಡದ್ರೋಹಿ ಘೋಷಣೆ ಕೂಗುತ್ತಾ ಶಿವಸೇನೆ ಪುಂಡರು ಹೈಡ್ರಾಮಾ ಸೃಷ್ಟಿಸಿದ್ರು.

ಇದನ್ನೂ ಓದಿ – Chikodi: ಚಿಕ್ಕೋಡಿಯಲ್ಲಿ ಬಡ ರೈತರ ಮಕ್ಕಳಿಗೆ ಹಾಸ್ಟೆಲ್ ವ್ಯವಸ್ಥೆ ನಿರ್ಮಿಸಿಕೊಡಲು ಒತ್ತಾಯ

ಇಂದು ಕನ್ನಡ ರಾಜ್ಯೋತ್ಸವ ಹಾಗೂ ಮಹಾರಾಷ್ಟ್ರದಲ್ಲಿ ಮರಾಠಾ ಸಮುದಾಯ ಮೀಸಲಾತಿ ಹೋರಾಟ ಹಿನ್ನೆಲೆ ಎರಡನೇ ದಿನವೂ ಬಸ್​ಗಳ ಸಂಚಾರ ಸ್ಥಗಿತಗೊಳಿಸಿದ್ದರಿಂದ ಪ್ರಯಾಣಿಕರು ತೀವ್ರ ಪರದಾಡುವಂತಾಯಿತು. ಅದರಲ್ಲೂ ಮಹಾರಾಷ್ಟ್ರದ ಕೊಲ್ಹಾಪುರ ಮಹಾಲಕ್ಷ್ಮೀ ದೇವಿ ದರ್ಶನಕ್ಕೆ ಕರ್ನಾಟಕದಿಂದ ನಿತ್ಯ ಸಾವಿರಾರು ಭಕ್ತರು ತೆರಳುತ್ತಾರೆ. ಬಸ್​ಗಳ ಸಂಚಾರ ಸ್ಥಗಿತ ಹಿನ್ನೆಲೆ ನಿಪ್ಪಾಣಿಯಲ್ಲೇ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಇದನ್ನೇ ಬಂಡವಾಳ ಮಾಡಿಕೊಂಡ ಖಾಸಗಿ ವಾಹನ ಚಾಲಕರು ಪ್ರಯಾಣಿಕರಿಂದ ದುಪ್ಪಟ್ಟು ಹಣ ವಸೂಲಿ ಮಾಡುತ್ತಿದ್ದು ಇದಕ್ಕೆ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದರು.

ಇನ್ನು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಚಿಕ್ಕೋಡಿ ವಿಭಾಗದಿಂದ ನಿತ್ಯ ಮಹಾರಾಷ್ಟ್ರಕ್ಕೆ ತೆರಳುವ 215ಕ್ಕೂ ಹೆಚ್ಚು ಸರ್ಕಾರಿ ಬಸ್​ಗಳ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಮಹಾರಾಷ್ಟ್ರದ ಕೊಲ್ಹಾಪುರ ಮಾರ್ಗಕ್ಕೆ ತೆರಳುವ ಬಸ್​ಗಳು ನಿಪ್ಪಾಣಿವರೆಗೆ ಮಾತ್ರ ಸಂಚರಿಸಿದ್ರೆ, ಮೀರಜ್ ಗೆ ತೆರಳುವ ಬಸ್​ಗಳು ಕಾಗವಾಡ ಪಟ್ಟಣದವರೆಗೆ ಮಾತ್ರ ಸಂಚಾರ ವ್ಯವಸ್ಥೆ ಕಲ್ಪಿಸಲಾಗಿತ್ತು. ಇಚಲಕರಂಜಿ ಮಾರ್ಗಕ್ಕೆ ತೆರಳುವ ಬಸ್​ಗಳು ಬೋರಗಾಂವವರೆಗೆ ಮಾತ್ರ ಸಂಚರಿಸಿದವು. ನಿತ್ಯ ಕೊಲ್ಹಾಪುರದ ಮಹಾಲಕ್ಷ್ಮೀ ದೇವಿ ದರ್ಶನಕ್ಕೆ ಕರ್ನಾಟಕದಿಂದ ಸಾವಿರಾರು ಭಕ್ತರು ತೆರಳುತ್ತಾರೆ.

ಇದನ್ನೂ ಓದಿ: ರಾಜ್ಯೋತ್ಸವ ಸಂಭ್ರಮದ ನಡುವೆ ಬೆಳಗಾವಿಯಲ್ಲಿ ಎಂಇಎಸ್​ನಿಂದ ಕರಾಳ ದಿನಾಚರಣೆ: ಕೈ ಕಟ್ಟಿ ಕುಳಿತ ಜಿಲ್ಲಾಡಳಿತ

ಇತ್ತ ಮೀರಜ್​ನ ಆಸ್ಪತ್ರೆಗಳಿಗೆ ಹಲವು ರೋಗಿಗಳು, ರೋಗಿಗಳ ಸಂಬಂಧಿಕರು ತೆರಳುತ್ತಾರೆ. ಉಭಯ ರಾಜ್ಯಗಳ ಮಧ್ಯೆ ಬಸ್​ ಸಂಚಾರ ಸ್ಥಗಿತದಿಂದ ಪ್ರಯಾಣಿಕರು ತೀವ್ರ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ನಿಪ್ಪಾಣಿಯಿಂದ ಕೊಲ್ಹಾಪುರಕ್ಕೆ ಓರ್ವ ಪ್ರಯಾಣಿಕನಿಗೆ 69 ರೂಪಾಯಿ ದರ ಇದ್ರೆ ಖಾಸಗಿ ವಾಹನಗಳ ಚಾಲಕರು 150 ರೂಪಾಯಿ ವಸೂಲಿ ಮಾಡುತ್ತಿದ್ದಾರೆ. ಇದರಿಂದ ಜನರಿಗೆ ಸಿಕ್ಕಾಪಟ್ಟೆ ತೊಂದರೆಯಾಗುತ್ತಿದ್ದು ಖಾಸಗಿ ಟ್ರಾವೆಲ್ಸ್​ನವರು ಜನರಿಂದ ಹಗಲುದರೋಡೆಗಿಳಿದಿದ್ದು ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಪ್ರಯಾಣಿಕರು ಆಗ್ರಹಿಸಿದ್ದಾರೆ.

ಇನ್ನು ಮರಾಠಾ ಸಮುದಾಯಕ್ಕೆ ಮೀಸಲಾತಿ ನೀಡುವಂತೆ ಹೋರಾಟಗಾರ ಮನೋಜ್ ಜಾರಂಗೆ ಪಾಟೀಲ್ ಉಪವಾಸ ಸತ್ಯಾಗ್ರಹ ಎಂಟನೇ ದಿನಕ್ಕೆ ಕಾಲಿಟ್ಟಿದೆ. ಇತ್ತ ಮಹಾರಾಷ್ಟ್ರದ ಮರಾಠಾವಾಡ ಪ್ರದೇಶದ ಜಿಲ್ಲೆಗಳಲ್ಲಿ ಹೋರಾಟ ತೀವ್ರಗೊಳ್ಳುತ್ತಿದೆ. ಬೀಡ್ ಜಿಲ್ಲೆಯಲ್ಲಿ ಇಂದೂ ಸಹ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಿ ನಿಷೇಧಾಜ್ಞೆ ಮುಂದುವರಿಸಲಾಗಿತ್ತು. ಒಟ್ಟಾರೆ ಮಹಾರಾಷ್ಟ್ರದಲ್ಲಿ ಮರಾಠಾ ಮೀಸಲಾತಿ ಹೋರಾಟದ ಎಫೆಕ್ಟ್ ಗಡಿ ಭಾಗದ ಜನರಿಗೆ ತಟ್ಟಿದ್ದು ಪ್ರಯಾಣಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಬೆಳಗಾವಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಜಾಮ್‌ನಗರದ ಬಳಿ ವಾಯುಪಡೆಯ ಯುದ್ಧ ವಿಮಾನ ಪತನವಾದ ಕ್ಷಣ ಸಿಸಿಟಿವಿಯಲ್ಲಿ ಸೆರೆ
ಜಾಮ್‌ನಗರದ ಬಳಿ ವಾಯುಪಡೆಯ ಯುದ್ಧ ವಿಮಾನ ಪತನವಾದ ಕ್ಷಣ ಸಿಸಿಟಿವಿಯಲ್ಲಿ ಸೆರೆ
‘ದರ್ಶನ್ ಅಪ್ಪಟ ಬಂಗಾರ’: ಡಿ ಬಾಸ್ ವ್ಯಕ್ತಿತ್ವ ವಿವರಿಸಿದ ಗಣೇಶ್ ಕಾಸರಗೋಡು
‘ದರ್ಶನ್ ಅಪ್ಪಟ ಬಂಗಾರ’: ಡಿ ಬಾಸ್ ವ್ಯಕ್ತಿತ್ವ ವಿವರಿಸಿದ ಗಣೇಶ್ ಕಾಸರಗೋಡು
ಗ್ರಾಮಸ್ಥರ ಪ್ರಶ್ನೆಗಳಿಗೆ ಲಕ್ಷ್ಮಿಹೆಬ್ಬಾಳ್ಕರ್ ಅವರಲ್ಲಿ ಉತ್ತರವಿರಲಿಲ್ಲ
ಗ್ರಾಮಸ್ಥರ ಪ್ರಶ್ನೆಗಳಿಗೆ ಲಕ್ಷ್ಮಿಹೆಬ್ಬಾಳ್ಕರ್ ಅವರಲ್ಲಿ ಉತ್ತರವಿರಲಿಲ್ಲ
ಕೋಟೆನಾಡಲ್ಲಿ ನಾಳೆಯೂ ಅಗಲಿದೆಯಂತೆ ಮಳೆ
ಕೋಟೆನಾಡಲ್ಲಿ ನಾಳೆಯೂ ಅಗಲಿದೆಯಂತೆ ಮಳೆ
ಮಾರಿಗುಡಿ ದೇವಾಲಯಕ್ಕೆ ಭೇಟಿ ನೀಡಿದ ಅಶ್ವಿನಿ ಪುನೀತ್ ರಾಜ್​ಕುಮಾರ್: ವಿಡಿಯೋ
ಮಾರಿಗುಡಿ ದೇವಾಲಯಕ್ಕೆ ಭೇಟಿ ನೀಡಿದ ಅಶ್ವಿನಿ ಪುನೀತ್ ರಾಜ್​ಕುಮಾರ್: ವಿಡಿಯೋ
ರಿಷಬ್ ಶೆಟ್ಟಿ ಶಿವಾಜಿ ಪಾತ್ರ ಮಾಡುವುದು ಬೇಡ: ವಾಟಾಳ್ ನಾಗರಾಜ್
ರಿಷಬ್ ಶೆಟ್ಟಿ ಶಿವಾಜಿ ಪಾತ್ರ ಮಾಡುವುದು ಬೇಡ: ವಾಟಾಳ್ ನಾಗರಾಜ್
ಮಳೆಗಾಲದಲ್ಲಿ ಬೆಂಗಳೂರು ಹೇಗಿರಲಿದೆ ಅನ್ನೋದಿಕ್ಕೆ ಇದು ಟೀಸರ್ ಮಾತ್ರ!
ಮಳೆಗಾಲದಲ್ಲಿ ಬೆಂಗಳೂರು ಹೇಗಿರಲಿದೆ ಅನ್ನೋದಿಕ್ಕೆ ಇದು ಟೀಸರ್ ಮಾತ್ರ!
ಥಾಯ್ ಪ್ರಧಾನಿಯಿಂದ ಮೋದಿಗೆ ದಿ ವರ್ಲ್ಡ್ ಟಿಪಿಟಕ ಗ್ರಂಥ ಉಡುಗೊರೆ
ಥಾಯ್ ಪ್ರಧಾನಿಯಿಂದ ಮೋದಿಗೆ ದಿ ವರ್ಲ್ಡ್ ಟಿಪಿಟಕ ಗ್ರಂಥ ಉಡುಗೊರೆ
ವಕ್ಫ್ ತಿದ್ದುಪಡಿ ಬಿಲ್ ಬಗ್ಗೆ ನನ್ನ ಪಕ್ಷದ ಹಿರಿಯರು ಮಾತಾಡುತ್ತಾರೆ: ಸಚಿವೆ
ವಕ್ಫ್ ತಿದ್ದುಪಡಿ ಬಿಲ್ ಬಗ್ಗೆ ನನ್ನ ಪಕ್ಷದ ಹಿರಿಯರು ಮಾತಾಡುತ್ತಾರೆ: ಸಚಿವೆ
ಯಡಿಯೂರಪ್ಪ ಜೊತೆ ಬಸ್ಸಲ್ಲಿ ಹೋಗಲು ಬಿಜೆಪಿ ನಾಯಕರಲ್ಲಿ ಪೈಪೋಟಿ
ಯಡಿಯೂರಪ್ಪ ಜೊತೆ ಬಸ್ಸಲ್ಲಿ ಹೋಗಲು ಬಿಜೆಪಿ ನಾಯಕರಲ್ಲಿ ಪೈಪೋಟಿ