AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಾವರ್ಕರ್ ಆಯ್ತು ಈಗ ಸಂಗೊಳ್ಳಿ ರಾಯಣ್ಣ: ರಾಯಣ್ಣ ಭಾವಚಿತ್ರ ಹರಿದು ಕೃತ್ಯ, ಅಭಿಮಾನಿಗಳಿಂದ ಪ್ರತಿಭಟನೆ

ತಡರಾತ್ರಿ ಕೆಲ ಕಿಡಿಗೇಡಿಗಳು ಸಂಗೊಳ್ಳಿ ರಾಯಣ್ಣ ಭಾವಚಿತ್ರ ಹರಿದು ದರ್ಪ ಮೆರೆದಿದ್ದಾರೆ. ಕಿಡಿಗೇಡಿಗಳ ಕೃತ್ಯವನ್ನ ಖಂಡಿಸಿ ಗ್ರಾಮದಲ್ಲಿ ಸಂಗೊಳ್ಳಿ ರಾಯಣ್ಣ ಅಭಿಮಾನಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ.

ಸಾವರ್ಕರ್ ಆಯ್ತು ಈಗ ಸಂಗೊಳ್ಳಿ ರಾಯಣ್ಣ: ರಾಯಣ್ಣ ಭಾವಚಿತ್ರ ಹರಿದು ಕೃತ್ಯ, ಅಭಿಮಾನಿಗಳಿಂದ ಪ್ರತಿಭಟನೆ
ರಾಯಣ್ಣ ಭಾವಚಿತ್ರ ಹರಿದು ಕೃತ್ಯ, ಅಭಿಮಾನಿಗಳಿಂದ ಪ್ರತಿಭಟನೆ
TV9 Web
| Updated By: ಆಯೇಷಾ ಬಾನು|

Updated on:Aug 20, 2022 | 11:50 AM

Share

ಬೆಳಗಾವಿ: ರಾಜ್ಯದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಸಾವರ್ಕರ್(Veer Savarkar) ವಾರ್ ಶುರುವಾಗಿದೆ. ಶಿವಮೊಗ್ಗ, ಮಂಗಳೂರು, ತುಮಕೂರಿನಲ್ಲಿ ಸಾವರ್ಕರ್ ಭಾವಚಿತ್ರ ವಿಚಾರವಾಗಿ ಗಲಾಟೆಗಳು ನಡೆದಿವೆ. ಇದರ ನಡುವೆ ಈಗ ಮತ್ತೊಂದು ಹೊಸ ಗಲಾಟೆ ಶರುವಾಗಿದೆ. ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಖನಗಾಂವ್ ಗ್ರಾಮದಲ್ಲಿ ಸಂಗೊಳ್ಳಿ ರಾಯಣ್ಣ(Sangolli Rayanna) ಭಾವಚಿತ್ರಕ್ಕೆ ಅಪಮಾನ ಮಾಡಲಾಗಿದೆ.

ತಡರಾತ್ರಿ ಕೆಲ ಕಿಡಿಗೇಡಿಗಳು ಸಂಗೊಳ್ಳಿ ರಾಯಣ್ಣ ಭಾವಚಿತ್ರ ಹರಿದು ದರ್ಪ ಮೆರೆದಿದ್ದಾರೆ. ಕಿಡಿಗೇಡಿಗಳ ಕೃತ್ಯವನ್ನ ಖಂಡಿಸಿ ಗ್ರಾಮದಲ್ಲಿ ಸಂಗೊಳ್ಳಿ ರಾಯಣ್ಣ ಅಭಿಮಾನಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಟೈರ್ಗೆ ಬೆಂಕಿ ಹಚ್ಚಿ ಗ್ರಾಮದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲಾಗುತ್ತಿದೆ. ಗ್ರಾಮದ ರಸ್ತೆಗೆ ರಾಯಣ್ಣ ಸರ್ಕಲ್ ಎಂದು ಹೆಸರಿಡಿ ಎಂದು ಫೋಟೋ ಹಾಕಲಾಗಿತ್ತು. ಆ ಫೋಟೋವನ್ನು ಕಿಡಿಗೇಡಿಗಳು ಹರಿದು ಹಾಕಿದ್ದಾರೆ. ಗೋಕಾಕ್ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಕೊಡಗಿನಲ್ಲಿ ಸಿದ್ದರಾಮಯ್ಯ ವಿರುದ್ಧ ಸಿಡಿದ ಸಾವರ್ಕರ್ ಕಿಚ್ಚು

ಪ್ರತಿಪಕ್ಷದ ನಾಯಕರೂ ಆಗಿರೋ ಸಿದ್ದರಾಮಯ್ಯ, ಇತ್ತೀಚೆಗೆ ಕೊಡಗಿನಲ್ಲಿ ಸಂಭವಿಸಿದ ಮಳೆ, ನೆರೆ ಹಾನಿ ವೀಕ್ಷಣೆಗೆ ಅಂತಾ ಕೊಡಗು ಜಿಲ್ಲೆಗೆ ಹೋಗಿದ್ರು. ಈ ವೇಳೆ ಸಿದ್ದು ಭೇಟಿ ವಿರೋಧಿಸಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆಗೆ ಇಳಿದಿದ್ರು. ಸಿದ್ದರಾಮಯ್ಯ ವಿರಾಜಪೇಟೆಗೆ ಬರ್ತಿದ್ದಂತೆ, ಗೋಬ್ಯಾಕ್ ಸಿದ್ದು ಅಂತಾ ಘೋಷಣೆ ಕೂಗಿದ್ರು. ಕೆಲವರಂತೂ ಸಿದ್ದು ಕೂತಿದ್ದ ಕಾರಿನ ಮೇಲೆಯೇ ಎರಗಿ ಬಿಟ್ಟಿದ್ರು. ಮೊಟ್ಟೆಗಳನ್ನೂ ಎಸೆದ್ರು. ಸಾವರ್ಕರ್ ಫೋಟೋ ಎಸೆದು ಆಕ್ರೋಶ ಹೊರಹಾಕಿದ್ರು.

ಇನ್ನು ಮಡಿಕೇರಿಯ ಜನರಲ್ ತಿಮ್ಮಯ್ಯ ವೃತ್ತದಲ್ಲಂತೂ ದೊಡ್ಡ ಗಲಾಟೆಯೇ ನಡೆದು ಹೋಯ್ತು. ಯಾಕಂದ್ರೆ ಬಿಜೆಪಿ ಕಾರ್ಯಕರ್ತರ ನಡೆ ಖಂಡಿಸಿ ಅತ್ತ ಕಾಂಗ್ರೆಸ್ ಕಾರ್ಯಕರ್ತರೂ ಬೀದಿಗೆ ಇಳಿದಿದ್ರು. ಎರಡು ಕಡೆಯ ಕಾರ್ಯಕರ್ತರು ಎದುರುಬದುರಾಗುತ್ತಿದ್ದಂತೆ ಪರಿಸ್ಥಿತಿ ಪ್ರಕ್ಷುಬ್ಧಗೊಂಡಿತ್ತು. ಸಿದ್ದರಾಮಯ್ಯ ಪರ ವಿರೋಧ ಘೋಷಣೆಗಳು ಮೊಳಗಿದ್ವು. ಇದೇ ವೇಳೆ ಸಿದ್ದರಾಮಯ್ಯ ಕಾರಿನ ಮೇಲೆ ಕೆಲವರು ಮೊಟ್ಟೆಯನ್ನೂ ಎಸೆದಿದ್ರು. ಘರ್ಷಣೆಗೆ ಇಳಿದ ಎರಡು ಪಕ್ಷದ ಕಾರ್ಯಕರ್ತರನ್ನ ಸಮಾಧಾನ ಪಡಿಸುವಲ್ಲಿ ಪೊಲೀಸರು ಸುಸ್ತ್ ಹೊಡೆದಿದ್ರು.

Published On - 11:42 am, Sat, 20 August 22