ರಮೇಶ್ ಒಬ್ಬ ಬಂಡುಕೋರ, ಪರೋಕ್ಷವಾಗಿ ರಮೇಶ್ ಜಾರಕಿಹೊಳಿ ವಿರುದ್ಧ ಲಕ್ಷ್ಮೀ ಹೆಬ್ಬಾಳ್ಕರ್ ವಾಗ್ದಾಳಿ

ಪರೋಕ್ಷವಾಗಿ ರಮೇಶ್ ಒಬ್ಬ ಬಂಡುಕೋರ ಎಂದಿದ್ದಾರೆ. ಮೂವರು ಮಂದಿ ಎಲೆಕ್ಷನ್ ನಾವು ಗೆಲ್ಲಬೇಕು ನಾವು ಗೆಲ್ಲಬೇಕು ಅಂತಾ ಓಡಾಡ್ತಿದ್ದೀವಿ. ಒಬ್ಬರು ಬಿಜೆಪಿಯಿಂದ ಓಡಾಡ್ತಿದ್ರೆ, ನಾವು ಕಾಂಗ್ರೆಸ್‌ನಿಂದ ಓಡಾಡ್ತಿದೀವಿ. ಒಬ್ಬರು ಪಕ್ಷೇತರವಾಗಿ ಓಡಾಡುತ್ತಿದ್ದಾರೆ. -ಲಕ್ಷ್ಮೀ ಹೆಬ್ಬಾಳ್ಕರ್

ರಮೇಶ್ ಒಬ್ಬ ಬಂಡುಕೋರ, ಪರೋಕ್ಷವಾಗಿ ರಮೇಶ್ ಜಾರಕಿಹೊಳಿ ವಿರುದ್ಧ ಲಕ್ಷ್ಮೀ ಹೆಬ್ಬಾಳ್ಕರ್ ವಾಗ್ದಾಳಿ
ಲಕ್ಷ್ಮಿ ಹೆಬ್ಬಾಳ್ಕರ್ (ಎಡ) , ರಮೇಶ್ ಜಾರಕಿಹೊಳಿ (ಬಲ)
Follow us
TV9 Web
| Updated By: ಆಯೇಷಾ ಬಾನು

Updated on: Nov 28, 2021 | 9:09 AM

ಬೆಳಗಾವಿ: ರಮೇಶ್ ಜಾರಕಿಹೊಳಿ ವಿರುದ್ಧ ಲಕ್ಷ್ಮೀ ಹೆಬ್ಬಾಳ್ಕರ್ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ. ಬೆಳಗಾವಿ ಪರಿಷತ್ ಫೈಟ್‌ನಲ್ಲಿ ರಾಜಕೀಯ ಬದ್ಧವೈರಿಗಳ ವಾಗ್ದಾಳಿ ಜೋರಾಗಿದೆ. ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಹಂದಿಗುಂದದಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ರಮೇಶ್ ಜಾರಕಿಹೊಳಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಪರೋಕ್ಷವಾಗಿ ರಮೇಶ್ ಒಬ್ಬ ಬಂಡುಕೋರ ಎಂದಿದ್ದಾರೆ. ಮೂವರು ಮಂದಿ ಎಲೆಕ್ಷನ್ ನಾವು ಗೆಲ್ಲಬೇಕು ನಾವು ಗೆಲ್ಲಬೇಕು ಅಂತಾ ಓಡಾಡ್ತಿದ್ದೀವಿ. ಒಬ್ಬರು ಬಿಜೆಪಿಯಿಂದ ಓಡಾಡ್ತಿದ್ರೆ, ನಾವು ಕಾಂಗ್ರೆಸ್‌ನಿಂದ ಓಡಾಡ್ತಿದೀವಿ. ಒಬ್ಬರು ಪಕ್ಷೇತರವಾಗಿ ಓಡಾಡುತ್ತಿದ್ದಾರೆ. ಅವರು ಈ ಹಿಂದೆ ಕಾಂಗ್ರೆಸ್ ಪಕ್ಷದಲ್ಲಿ ಒಬ್ಬರಾಗಿ ನಮ್ಮ ಜತೆಯಿದ್ದರು. ಕಾಂಗ್ರೆಸ್ ಪಕ್ಷದಲ್ಲಿದ್ದಾಗ ಅವರು ಬಂಡುಕೋರಿ ಮಾಡ್ತಿದ್ದ. ಇಲ್ಲಿ ಸಮಾಧಾನವಾಗದೆ ಅವರು ಬಿಜೆಪಿಗೆ ಹೋಗಿದ್ದಾರೆ. ಅಲ್ಲಿಯೂ ಕೂಡ ಅವರಿಗೆ ಸಮಾಧಾನ ಆಗಲಿಲ್ಲ. ಹೀಗಾಗಿ ಬಿಜೆಪಿಗೆ ಹೋಗಿ ಅಲ್ಲೂ ಬಂಡುಕೋರಿತನ ಮಾಡ್ತಿದ್ದಾರೆ. ಈ ಬಗ್ಗೆ ಬಿಜೆಪಿಯವರು ನೋಡಿಕೊಳ್ತಾರೆ ನಾನು ಉತ್ತರಿಸಲ್ಲ ಎಂದು ಹಂದಿಗುಂದದಲ್ಲಿ ‘ಕೈ’ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ವಾಗ್ದಾಳಿ ನಡೆಸಿದ್ದಾರೆ.

ಆ ಪಕ್ಷದಲ್ಲಿ ಬಾಯಿ ತೆಗೆದ್ರೆ ರಾಮ ರಾಮ ಅಂತಾ ಹೇಳ್ತಾರೆ. ಆದರೆ ಒಬ್ಬ ಮಹಿಳಾ ಶಾಸಕಿ ಬಗ್ಗೆ ಮಾತನಾಡಿದ್ದಾರೆ. ನನಗೆ ಅದರ ಬಗ್ಗೆ ಕಮೆಂಟ್ ಮಾಡುವಷ್ಟು ಟೈಮ್ ಇಲ್ಲ, ತಲೆನೂ ಓಡಲ್ಲ. ನನಗೆ ನನ್ನ ಪಕ್ಷದ ಅಭ್ಯರ್ಥಿ ಗೆಲ್ಲಿಸಬೇಕು ಎನ್ನುವುದೊಂದೇ ಗುರಿ. ಅರ್ಜುನನ ಗುರಿ ಎಲ್ಲಿತ್ರಂದ್ರೆ ಪಾರಿವಾಳ ಕಣ್ಣಿಗೆ ಇತ್ತು ಅನ್ನೋ ಹಾಗೇ. ನಮ್ಮ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗೆಲ್ಲಿಸೋದೊಂದೇ ಗುರಿ. ನಾನು ಒಬ್ಬಳು ಶಾಸಕಿಗೆ ಕಿಮ್ಮತ್ತು ನೀಡದವರು ಮಹಿಳೆಗೆ ಕೊಡ್ತಾರಾ? ಎಂದಿದ್ದಾರೆ.

ಇದನ್ನೂ ಓದಿ: ನಮ್ಮ ಪಕ್ಷದಲ್ಲಿದ್ದು ಅನ್ಯಾಯ ಮಾಡಿದ್ದರು; ರಮೇಶ್ ಜಾರಕಿಹೊಳಿ ವಿರುದ್ಧ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ವಾಗ್ದಾಳಿ