
ನವದೆಹಲಿ/ಬೆಳಗಾವಿ, ಅಕ್ಟೋಬರ್ 12: ಕಬ್ಬಿಗೆ ಎಂಎಸ್‌ಪಿ ಘೋಷಣೆ ವಿಚಾರವಾಗಿ ಬೆಳಗಾವಿಯ ರೈತರ ಜೊತೆ ದೆಹಲಿಯಲ್ಲಿ ಕೇಂದ್ರ ಸರ್ಕಾರ ನಡೆಸಿದ್ದ ಸಭೆ ವಿಫಲವಾಗಿದೆ. ಹೀಗಾಗಿ ನಾಳೆಯಿಂದ ರಾಷ್ಟ್ರೀಯ ಹೆದ್ದಾರಿ ಬಂದ್‌ಗೆ ರೈತ ಸಂಘಟನೆಗಳಿಗೆ ಕರೆ ನೀಡಿರೋದಾಗಿ ಬೆಳಗಾವಿಯಲ್ಲಿ ರಾಜ್ಯ ರೈತ ಸಂಘದ ಅಧ್ಯಕ್ಷ ಚೂನಪ್ಪ ಪೂಜಾರಿ ತಿಳಿಸಿದ್ದಾರೆ. ಕರ್ನಾಟಕ 35 ರೈತರ ನಿಯೋಗದ ಜೊತೆ ಕೇಂದ್ರ ಕೃಷಿ ಸಚಿವ ಶಿವರಾಜ ಸಿಂಗ್ ಚವ್ಹಾಣ್ ನೇತೃತ್ವದಲ್ಲಿ ಸಭೆ ನಡೆದಿತ್ತು. ಮೀಟಿಂಗ್ನಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ರಾಜ್ಯದ ಸಹಕಾರ ಸಚಿವ ಲಕ್ಷಣ ಸವದಿ ಕೂಡ ಭಾಗಿಯಾಗಿದ್ದರು.
Delhi: Union Agriculture and Farmers Welfare Minister Shivraj Singh Chouhan meets sugarcane farmers from Karnataka. Union Minister Parlhad Joshi also present https://t.co/4Tt3OYTPD6
— IANS (@ians_india) October 12, 2026
ದೆಹಲಿಗೆ ಕರೆಯಿಸಿ ರೈತರನ್ನು ಅವಮಾನಿಸಲಾಗಿದೆ ಎಂದು ಚೂನಪ್ಪ ಪೂಜಾರಿ ಆರೋಪಿಸಿದ್ದು, ರೈತರಿಗೆ ಕೊಟ್ಟ ಮಾತು ಉಳಿಸಿಕೊಳ್ಳಲು ಕೇಂದ್ರ ವಿಫಲವಾಗಿದೆ. ರೈತರ ಹೆಸರಿನಲ್ಲಿ ರಾಜಕೀಯ ಮಾಡಬೇಡಿ. ಕರ್ನಾಟಕ-ಮಹಾರಾಷ್ಟ್ರ ರೈತರು ಒಗ್ಗಟ್ಟಾಗಿ ಹೋರಾಡುತ್ತೇವೆ ಎಂದು ತಿಳಿಸಿರುವ ಅವರು, ನಾಳೆ ಬೆಳಗ್ಗೆ 11 ಗಂಟೆಗೆ ರಾಷ್ಟ್ರೀಯ ಹೆದ್ದಾರಿ ಬಂದ್‌ಗೆ ಕರೆ ನೀಡಿದ್ದಾರೆ.
ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದೆಹಲಿಯಲ್ಲಿ ಸಭೆ: ಡಿಕೆಶಿಗೂ ಆಹ್ವಾನ
ಕಬ್ಬಿಗೆ ಎಂಎಸ್‌ಪಿ ದರ ಏರಿಕೆಗೆ ನಮ್ಮ ಬೇಡಿಕೆ ಇತ್ತು. ಆದರೆ ಕೇಂದ್ರ ಸರ್ಕಾರ ನಮ್ಮ ಬೇಡಿಕೆಗೆ ಸ್ಪಂದಿಸಿಲ್ಲ. ಇದೇ ಕಾರಣಕ್ಕೆ ನಾಳೆ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡುತ್ತೇವೆ. ಬೆಳಗಾವಿ ಜಿಲ್ಲೆಯಲ್ಲಿ ಮೂರು ಕಡೆ ಸೇರಿ ಧಾರವಾಡ, ಹಾವೇರಿ, ವಿಜಯಪುರ, ಬಾಗಲಕೋಟೆ, ಮಂಡ್ಯ, ಚಾಮರಾಜನಗರದಲ್ಲಿ ಹೆದ್ದಾರಿ ತಡೆ ಮಾಡುತ್ತೇವೆ. ಚಳುವಳಿಯಲ್ಲಿ ಸಾವಿರಾರು ಸಂಖ್ಯೆಯ ರೈತರು ಭಾಗಿಯಾಗಲಿದ್ದಾರೆ ಎಂದು ಟಿವಿ9ಗೆ ಚೂನಪ್ಪ ಪೂಜಾರಿ ತಿಳಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:31 pm, Mon, 12 October 26