ಮೂಡಲಗಿ: 3 ದಿನದ ಹಿಂದೆ ಪತ್ನಿ ಕೊಂದು ಮಂಚದೊಳಗಿಟ್ಟು ಪತಿ ಪರಾರಿ!
ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಕಮಲದಿನ್ನಿ ಗ್ರಾಮದಲ್ಲಿ ಭಯಾನಕ ಘಟನೆ ಬೆಳಕಿಗೆ ಬಂದಿದೆ. ಮೂರು ದಿನದ ಹಿಂದೆ ಪತ್ನಿಯನ್ನು ಕೊಂದು ಶವವನ್ನು ಮಂಚದ ಒಳಗಿಟ್ಟು ಬೆಡ್ ಮುಚ್ಚಿ ಪತಿ ಪರಾರಿ ಆಗಿರುವಂತಹ ಘಟನೆ ನಡೆದಿದೆ. ಸ್ಥಳಕ್ಕೆ ಮೂಡಲಗಿ ತಹಶೀಲ್ದಾರ್, ಗೋಕಾಕ್ ಡಿವೈಎಸ್ಪಿ ಭೇಟಿ ನೀಡಿದ್ದಾರೆ.

ಬೆಳಗಾವಿ, ಅಕ್ಟೋಬರ್ 08: ಪತ್ನಿ (wife) ಕೊಂದು ಶವವನ್ನು ಮಂಚದೊಳಗಿಟ್ಟು ಬೆಡ್ ಮುಚ್ಚಿ ಪತಿ (Husband) ಪರಾರಿ ಆಗಿರುವಂತಹ ಘಟನೆ ಜಿಲ್ಲೆಯ ಮೂಡಲಗಿ ತಾಲೂಕಿನ ಕಮಲದಿನ್ನಿ ಗ್ರಾಮದಲ್ಲಿ ನಡೆದಿದೆ. ಸಾಕ್ಷಿ ಕಂಬಾರ(20) ಕೊಲೆಯಾದ ಪತ್ನಿ. ಆಕಾಶ್ ಪರಾರಿಯಾಗಿರುವ ಪತಿ. ಮೂಡಲಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ನಾಲ್ಕು ತಿಂಗಳ ಹಿಂದೆಯಷ್ಟೇ ಮದುವೆ
ನಾಲ್ಕು ತಿಂಗಳ ಹಿಂದೆಯಷ್ಟೇ ಆಕಾಶ್ ಮತ್ತು ಸಾಕ್ಷಿ ಕಂಬಾರ ಮದುವೆ ಆಗಿತ್ತು. ಮೂರು ದಿನದ ಹಿಂದೆ ಸಾಕ್ಷಿ ಕಂಬಾರ ಕೊಂದು ಮಂಚದೊಳಗೆ ಶವ ಬಚ್ಚಿಟ್ಟು ಮೊಬೈಲ್ ಸ್ವಿಚ್ಆಫ್ ಮಾಡಿಕೊಂಡು ಆಕಾಶ್ ಪರಾರಿ ಆಗಿದ್ದಾನೆ. ಇತ್ತ ಊರಿಗೆ ಹೋಗಿದ್ದ ಅತ್ತೆ ಮನೆಗೆ ಹಿಂದಿರುಗಿದಾಗ ಹತ್ಯೆ ಬೆಳಕಿಗೆ ಬಂದಿದೆ.
ಇದನ್ನೂ ಓದಿ: ಕೋಲಾರ: ಒಂಟಿ ಮಹಿಳೆಯ ಬರ್ಬರ ಹತ್ಯೆ; ದೇವಾಲಯಕ್ಕೆ ಹೋಗಿ ಬರ್ತೀನಿ ಎಂದವಳು ಮಸಣಕ್ಕೆ
ಸದ್ಯ ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಮೂಡಲಗಿ ತಹಶೀಲ್ದಾರ್ ಶ್ರೀಶೈಲ್ ಗುಡಮೆ ಮತ್ತು ಗೋಕಾಕ್ ಡಿವೈಎಸ್ಪಿ ಭೇಟಿ ನೀಡಿ ಪರೀಶಿಲನೆ ಮಾಡಿದ್ದಾರೆ.
ಚಾಕುವಿನಿಂದ ಇರಿದು ಪತ್ನಿ ಹತ್ಯೆಗೈದ ಕಂಡಕ್ಟರ್: ಪತಿ ವಶಕ್ಕೆ
ಸಾರಿಗೆ ಸಂಸ್ಥೆಯ ಕಂಡಕ್ಟರ್ ಚಾಕುವಿನಿಂದ ಇರಿದು ಪತ್ನಿ ಹತ್ಯೆಗೈದಿರುವಂತಹ ಘಟನೆ ಗದಗ ತಾಲೂಕಿನ ಬಿಂಕದಕಟ್ಟಿ ಗ್ರಾಮದಲ್ಲಿ ನಡೆದಿದೆ. ಪತ್ನಿ ಯಲ್ಲಮ್ಮ ಅಲಿಯಾಸ್ ಸ್ವಾತಿಯನ್ನ ಪತಿ ರಮೇಶ್ ನರಗುಂದ ಕೊಲೆಗೈದಿದ್ದಾರೆ. ಸದ್ಯ ಪೊಲೀಸರು ಆರೋಪಿ ರಮೇಶ್ನನ್ನು ವಶಕ್ಕೆ ಪಡೆದಿದ್ದಾರೆ. ಗದಗ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: ಕೊಪ್ಪಳ: 25 ವಯಸ್ಸು ದಾಟದ ಯುವಕರಿಂದ ಬಿಜೆಪಿ ಮುಖಂಡನ ಬರ್ಬರ ಕೊಲೆ
ಗದಗ ಬಸ್ ಡಿಪೋದಲ್ಲಿ ಕಂಡಕ್ಟರ್ ಆಗಿರುವ ಆರೋಪಿ ರಮೇಶ್, ಮೂರು ಮಕ್ಕಳಾದರೂ ಪತ್ನಿ ಮೇಲೆ ಸಂಶಯ ಪಡುತ್ತಿದ್ದರು. ಬೀಸುವ ಕಲ್ಲು ಎತ್ತಿ ಹಾಕಿ ಬಳಿಕ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ. ಮನೆಯಲ್ಲಿ ಪತ್ನಿ ಕೊಂದು ಕೈಯಲ್ಲಿ ಚಾಕು ಹಿಡಿದುಕೊಂಡು ಹತ್ತಿರ ಬಂದರೆ ಚುಚ್ಚುವುದಾಗಿ ಸ್ಥಳೀಯರಿಗೆ ಬೆದರಿಕೆ ಹಾಕಿದ್ದರು. ಘಟನಾ ಸ್ಥಳಕ್ಕೆ ಗದಗ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಭೇಟಿ ನೀಡಿ ಪರಿಶಿಲನೆ ಮಾಡಿದ್ದಾರೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:40 pm, Wed, 8 October 25



