ಬೆಳಗಾವಿಯಲ್ಲಿ ತೀವ್ರಗೊಂಡ ಮಂದಿರ V/S ಮಸೀದಿ ವಿವಾದ! ಶಾಸಕ ಅಭಯ್ ಪಾಟೀಲ್ ವಿರುದ್ಧ ಸಿಡಿದೆದ್ದ ಮುಸ್ಲಿಂ ಮುಖಂಡರು
ಈ ಬಗ್ಗೆ ಕೂಲಂಕುಷವಾಗಿ ಸರ್ವೆ ಮಾಡಿ, ಸತ್ಯ ಹೊರಗೆ ಬರುವವರೆಗೆ ಹೋರಾಟ ಮಾಡುತ್ತೇನೆ ಎಂದು ಪಟ್ಟು ಹಿಡಿದಿರುವ ಶಾಸಕ ಅಭಯ್ ಪಾಟೀಲ್ ವಿರುದ್ಧ ಮುಸ್ಲಿಂ ಮುಖಂಡರು ಸಿಡಿದೆದ್ದಿದ್ದಾರೆ.
ಬೆಳಗಾವಿ: ರಾಮದೇವ ಗಲ್ಲಿಯ ಶಾಹಿ ಮಸೀದಿ (Shahe Masjid) ಈ ಹಿಂದೆ ಮಂದಿರವಾಗಿತ್ತು. ಈ ಬಗ್ಗೆ ಕೂಲಂಕುಷವಾಗಿ ಸರ್ವೆ ಮಾಡಿ, ಸತ್ಯ ಹೊರಗೆ ಬರುವವರೆಗೆ ಹೋರಾಟ ಮಾಡುತ್ತೇನೆ ಎಂದು ಪಟ್ಟು ಹಿಡಿದಿರುವ ಶಾಸಕ ಅಭಯ್ ಪಾಟೀಲ್ ವಿರುದ್ಧ (Abhay Patil) ಮುಸ್ಲಿಂ ಮುಖಂಡರು ಸಿಡಿದೆದ್ದಿದ್ದಾರೆ. ಜೊತೆಗೆ ಅಭಯ್ ಪಾಟೀಲ್ ಈ ಹಿಂದೆ ಅಂದರೆ 2011ರಲ್ಲಿ ಚಿಕ್ಕದಾದ ಸಾಯಿ ಮಂದಿರ ತೆರವುಗೊಳಿಸಿದ್ದಾರೆ ಎಂದು ಆರೋಪಿಸಿರುವ ಮುಸ್ಲಿಂ ಮುಖಂಡ ಮನ್ಸೂರ್ ಖಾನ್, ಹಿಂದುತ್ವ ಎನ್ನುವ ಅಭಯ್ ಪಾಟೀಲ್ ಇದರ ಬಗ್ಗೆ ಉತ್ತರಿಸಲಿ ಎಂದು ಆಗ್ರಹಿಸಿದ್ದಾರೆ.
ಮುಸ್ಲಿಂ ಮುಖಂಡರ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಶಾಸಕ ಅಭಯ್ ಪಾಟೀಲ್, ರಸ್ತೆಯ ಮಾಸ್ಟರ್‌ಪ್ಲ್ಯಾನ್ ವೇಳೆ ಸಾಯಿಮಂದಿರ ತೆರವು ಮಾಡಿದ್ದೇವೆ. ಅಲ್ಲಿಯ ಜನರ ಮನವೊಲಿಸಿ ಸಾಯಿ ಮಂದಿರ ತೆರವುಗೊಳಿಸಲಾಗಿದೆ. ನಾಥ್ ಪೈ ಸರ್ಕಲ್‌ನಿಂದ ಯಳ್ಳೂರ ಸರ್ಕಲ್ವರೆಗೆ ಮಾಸ್ಟರ್ ಪ್ಲ್ಯಾನ್ ಮಾಡಲಾಗಿತ್ತು. ಅನಗೋಳ ಮುಖ್ಯರಸ್ತೆಯಲ್ಲಿರುವ ಸಾಯಿಮಂದಿರ ತೆರವು ಮಾಡಿದ್ದೇವೆ. ರಸ್ತೆಯಲ್ಲಿ ದೇಗುಲ ಬರುತ್ತೆ ಅಂತಾ ಮಾಸ್ಟರ್‌ಪ್ಲ್ಯಾನ್ ವೇಳೆ ಸ್ಥಳೀಯರ ಮನವೊಲಿಸಿ ತೆರವುಗೊಳಿಸಿದ್ದೇವೆ ಎಂದರು.
ಇದನ್ನೂ ಓದಿ: ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ವಿರುದ್ಧ ದೂರು ದಾಖಲು
ಮಾಜಿ ಶಾಸಕ ಫಿರೋಜ್ ಸೇಠ್ ಆಕ್ರೋಶ: ದೇಶದಲ್ಲಿ ಅಶಾಂತಿ ಇದ್ದರೆ, ಜನರು ತೊಂದರೆಗೊಳಗಾಗುತ್ತಾರೆ. ಜವಾಬ್ದಾರಿಯುತ ಸ್ಥಾನದಲ್ಲಿ ಇದ್ದವರು ಈ ರೀತಿ ಮಾತು ಆಡಬಾರದು. ಗಾಳಿಮಾತು ಮಾತನಾಡಿ ಜನರನ್ನು ಪ್ರಚೋದಿಸುವುದು ಶೋಭೆ ತರಲ್ಲ. ಇಂತಹ ಕೆಲಸ ಮಾಡಬೇಡಿ ಎಂದು ನಾವು ಬಹಳ ಪ್ರೀತಿ, ಗೌರವದಿಂದ ಮನವಿ ಮಾಡುತ್ತೇವೆ. ನಮಗೆ ಗೊತ್ತು ಈಗ ಚುನಾವಣೆ ಹತ್ತಿರ ಬಂದಿದೆ ಏನಾದರೂ ನೀವು ಮಾಡಲೇಬೇಕು. ತಾಜ್‌ಮಹಲ್, ಕುತುಬ್‌ಮಿನಾರ್ ಶ್ರೀರಂಗಪಟ್ಟಣ ಇದೆಲ್ಲ ನಡೆಯುತ್ತಲೇ ಇರುತ್ತೆ. ಕೊವಿಡ್ ಸಂಕಷ್ಟದಿಂದ ಈಗಷ್ಟೇ ಜನರು ಹೊರಬಂದಿದ್ದಾರೆ. ಬೆಲೆ ಏರಿಕೆಗೆ ಜನರು ತತ್ತರಿಸಿ ಹೋಗಿದ್ದಾರೆ. ವಿಶ್ವದ ಎಲ್ಲ ರಾಷ್ಟ್ರಗಳ ಸರ್ಕಾರಗಳು ಹಣದುಬ್ಬರದಿಂದ ಬಹಳ ದೊಡ್ಡ ಸಮಸ್ಯೆ ಎದುರಿಸುತ್ತೀವೆ. ನಾವೆಲ್ಲ ಒಗ್ಗೂಡಿ ಹಣದುಬ್ಬರ ನಿಯಂತ್ರಣ ಮಾಡಿ ಹೇಗೆ ದೇಶದ ಅಭಿವೃದ್ಧಿ ಮಾಡಬೇಕು ಅಂತಾ ವಿಚಾರಿಸಬೇಕು ಅಂತ ಬಿಜೆಪಿ ಶಾಸಕ ಅಭಯ್ ಪಾಟೀಲ್ ವಿರುದ್ಧ ಮಾಜಿ ಶಾಸಕ ಫಿರೋಜ್ ಸೇಠ್ ಆಕ್ರೋಶ ಹೊರ ಹಾಕಿದರು.
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:50 am, Wed, 1 June 22