Belagavi News: ನಾಯಿಗಳ ಹಾವಳಿಗೆ ಬೆಚ್ಚಿಬಿದ್ದ ಕುಂದಾನಗರಿ ಜನ: 6 ತಿಂಗಳಲ್ಲಿ 14 ಸಾವಿರ ಜನರಿಗೆ ಕಚ್ಚಿರುವ ನಾಯಿಗಳು

ಆರು ತಿಂಗಳಲ್ಲಿ ಬೆಳಗಾವಿ ಜಿಲ್ಲೆಯಲ್ಲಿ 14,278‌ಜನರಿಗೆ ನಾಯಿಗಳು ಕಚ್ಚಿವೆ. ಜನವರಿ. 1ರಿಂದ ಜುಲೈವರೆಗೂ ನಾಯಿ ಕಡಿತದ ಕೇಸ್ ದಾಖಲಾಗಿವೆ.

Belagavi News: ನಾಯಿಗಳ ಹಾವಳಿಗೆ ಬೆಚ್ಚಿಬಿದ್ದ ಕುಂದಾನಗರಿ ಜನ: 6 ತಿಂಗಳಲ್ಲಿ 14 ಸಾವಿರ ಜನರಿಗೆ ಕಚ್ಚಿರುವ ನಾಯಿಗಳು
ಶ್ವಾನಗಳು
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on:Jul 22, 2022 | 9:19 AM

ಬೆಳಗಾವಿ: ನಾಯಿಗಳ ಹಾವಳಿಗೆ ಕುಂದಾನಗರಿ ಜನ ಬೆಚ್ಚಿ ಬಿದಿದ್ದು, ಕಳೆದ ಆರು ತಿಂಗಳಲ್ಲಿ ಅದೇಷ್ಟೂ ಜನರಿಗೆ ನಾಯಿ (Dog Attack) ಕಚ್ಚಿದೆ ಅನ್ನೋದನ್ನ ಕೇಳಿದ್ರೇ ನೀವು ಶಾಕ್ ಆಗುತ್ತೀರಿ. ಸಾವಿರಲ್ಲ ಎರಡು ಸಾವಿರಲ್ಲ ಬರೋಬ್ಬರಿ 14ಸಾವಿರ ಜನರ ರಕ್ತ ಹೀರಿವೆ ನಾಯಿಗಳು. ಆರೋಗ್ಯ ಇಲಾಖೆಯಿಂದಲೇ ಸ್ಪೋಟಕ ಮಾಹಿತಿ ಹೊರ ಬಿದಿದ್ದು, ನಗರ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಶ್ವಾನಗಳು ಅಟ್ಟಹಾಸ ಮೆರೆಯುತ್ತಿವೆ. ನಾಯಿಗಳ ಹಾವಳಿ ತಡೆಯುವಂತೆ ಸಾರ್ವಜನಿಕರಿಂದ ಜಿಲ್ಲಾಡಳಿತಕ್ಕೆ ಒತ್ತಾಯ ಮಾಡಲಾಗಿದೆ. ಈ ಕುರಿತಾಗಿ ಡಿಎಚ್‌ಒ ಡಾ.ಮಹೇಶ್ ಕೋಣೆ ಹೇಳಿಕೆ ನೀಡಿದ್ದು, ಆರು ತಿಂಗಳಲ್ಲಿ ಬೆಳಗಾವಿ ಜಿಲ್ಲೆಯಲ್ಲಿ 14,278‌ಜನರಿಗೆ ನಾಯಿಗಳು ಕಚ್ಚಿವೆ. ಜನವರಿ. 1ರಿಂದ ಜುಲೈವರೆಗೂ ನಾಯಿ ಕಡಿತದ ಕೇಸ್ ದಾಖಲಾಗಿವೆ. ಕಳೆದ ವರ್ಷ 1360ಜನರಿಗೆ ನಾಯಿ ಕಡಿತ ಕೇಸ್ ದಾಖಲಾಗಿವೆ. ಆದರೆ ಈ ವರ್ಷ ಆರು ತಿಂಗಳಲ್ಲೇ ಹೆಚ್ಚು ಪ್ರಮಾಣದಲ್ಲಿ ನಾಯಿ ಕಚ್ಚಿವೆ. ಈ ಕುರಿತು ಇಲಾಖೆ ಸಭೆಯಲ್ಲಿ ಪ್ರಸ್ತಾವನೆ ಕೂಡ ಆಗಿದೆ.

ಇದನ್ನೂ ಓದಿ:  ಪೋಷಕರೇ ಹುಷಾರ್: ಮಕ್ಕಳು ಹೊರಗಡೆ ಆಡುತ್ತಿದ್ದಾರೆಂದು ಸುಮ್ಮನಾದರೆ ಜೀವಕ್ಕೇ ಕುತ್ತು, ರಾಜಧಾನಿಯಲ್ಲಿ ಶುರುವಾಗಿದೆ ನಾಯಿ ಹಾವಳಿ

ಸಾರ್ವಜನಿಕ ಆಸ್ಪತ್ರೆಗಳಲ್ಲಿ ಹೆಚ್ಚು ನಾಯಿ ಕಡಿತದ ಕೇಸ್‌ಗಳು ಬಂದಿವೆ. ನಾಯಿ ಕಡಿತಕ್ಕೆ ಲಸಿಕೆ ಇದ್ದು ಯಾವ ತೊಂದರೆ ಇಲ್ಲಾ. 1548 ಲಸಿಕಾ ಡೋಸ್‌ಗಳು ಸದ್ಯ ಸ್ಟಾಕ್ ಇದೆ. ಪ್ರಾಥಮಿಕ, ಸಮುದಾಯ ಆರೋಗ್ಯ ಕೇಂದ್ರ ಸೇರಿದಂತೆ ಎಲ್ಲ ಕಡೆ ಔಷಧಿ ಸ್ಟಾಕ್ ಇದೆ. ನಾಯಿಗಳ ಸಂತಾನ ಹರಣ ಮಾಡಿದರೆ ಇದಕ್ಕೆ ಕಡಿವಾಣ ಹಾಕಬಹುದು. ಇಲ್ಲವಾದರೇ ಎಲ್ಲ ನಾಯಿಗಳನ್ನ ಬೇರೆ ಕಡೆ ಸ್ಥಳಾಂತರ ಮಾಡಬೇಕು ಎಂದು ಡಿಎಚ್‌ಒ ಡಾ. ಮಹೇಶ್ ಕೋಣೆ ಹೇಳಿದರು.

ಸಿಲಿಕಾನ್​ ಸಿಟಿಯಲ್ಲೂ ಶ್ವಾನಗಳ ಹಾವಳಿ

ಸಿಲಿಕಾನ್ ಸಿಟಿಯಲ್ಲಿ ಕಳೆದ ತಿಂಗಳ 14ರಂದು ಡೆಡ್ಲಿ ಡಾಗ್ ಅಟ್ಯಾಕ್ ಮಾಡಿರುವ ವಿಡಿಯೋ ತಡವಾಗಿ ಬೆಳಕಿಗೆ ಬಂದಿತ್ತು. ನಗರದ ಶಂಕರಮಠದ ಕರ್ನಾಟಕ ಲೇಔಟ್​ನಲ್ಲಿ ನಾಯಿಗಳ ದಂಡು ದಾಳಿಗೆ ಜನರು ರೋಸಿ ಹೋಗಿದ್ದರು. ಮನೆ ಹೊರಗಡೆ ಆಟವಾಡುತ್ತಿದ್ದ ಮಗು ಮೇಲೆ ಅಟ್ಯಾಕ್ ಮಾಡಲು ನಾಯಿಗಳು ಮುಂದಾಗಿದ್ದು, ತಾಯಿಯ ಸಮಯ ಪ್ರಜ್ಞೆಯಿಂದ ಬಡ ಜೀವ ಬದುಕುಳಿದಿದೆ. ಒಂದೇ ಬೀದಿಯಲ್ಲಿ 25ಕ್ಕೂ ಹೆಚ್ಚಿನ ನಾಯಿಗಳು ಬೀಡು ಬಿಟ್ಟಿದ್ದು, ಭಯದ ವಾತಾವರಣದಲ್ಲಿ ಜನರು ಬದುಕುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಬಿಬಿಎಂಪಿ ಅಧಿಕಾರಿಗಳ ಗಮನಕ್ಕೆ ತಂದಿದ್ರೂ ಉಪಯೋಗ ಇಲ್ಲ. ಬೀದಿ ನಾಯಿಗಳಿಂದ ದಾಳಿಗೆ ಒಳಗಾಗಿ ಜೀವಕ್ಕೆ ಕುತ್ತು ಬಂದರಷ್ಟೇ ಪರಿಹಾರ ನೀಡುತ್ತೀರಾ ಎಂದು ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Published On - 9:18 am, Fri, 22 July 22