ಪೋಷಕರೇ ಹುಷಾರ್: ಮಕ್ಕಳು ಹೊರಗಡೆ ಆಡುತ್ತಿದ್ದಾರೆಂದು ಸುಮ್ಮನಾದರೆ ಜೀವಕ್ಕೇ ಕುತ್ತು, ರಾಜಧಾನಿಯಲ್ಲಿ ಶುರುವಾಗಿದೆ ನಾಯಿ ಹಾವಳಿ

ರಾಜಧಾನಿಯಲ್ಲಿ ನಾಯಿ ಹಾವಳಿ ಶುರುವಾಗಿದ್ದು, ಜೀವ ಕೈಯಲ್ಲಿಡಿದು ಓಡಾಡುವ ಸ್ಥಿತಿ ನಿರ್ಮಾಣವಾಗಿದೆ. ಸಿಲಿಕಾನ್ ಸಿಟಿಯಲ್ಲಿ ಡೆಡ್ಲಿ ಡಾಗ್ ಅಟ್ಯಾಕ್ ವಿಡಿಯೋ ತಡವಾಗಿ ಬೆಳಕಿಗೆ ಬಂದಿದೆ.

ಪೋಷಕರೇ ಹುಷಾರ್: ಮಕ್ಕಳು ಹೊರಗಡೆ ಆಡುತ್ತಿದ್ದಾರೆಂದು ಸುಮ್ಮನಾದರೆ ಜೀವಕ್ಕೇ ಕುತ್ತು, ರಾಜಧಾನಿಯಲ್ಲಿ ಶುರುವಾಗಿದೆ ನಾಯಿ ಹಾವಳಿ
ಮನೆ ಮುಂದೆ ಆಟವಾಡುತ್ತಿದ್ದ ಬಾಲಕನ ಮೇಲೆ ದಾಳಿಗೆ ಮುಂದಾದ ನಾಯಿಗಳು
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on:May 28, 2022 | 9:06 AM

ಬೆಂಗಳೂರು: ಮಕ್ಕಳು ಹೊರಗಡೆ ಆಟವಾಡುತ್ತಿದ್ದಾರೆ ಅಂತ ಪೋಷಕರು ಸುಮ್ಮನಾದರೆ ಮಕ್ಕಳ ಜೀವಕ್ಕೇ ಕುತ್ತು. ರಾಜಧಾನಿಯಲ್ಲಿ ನಾಯಿ ಹಾವಳಿ ಶುರುವಾಗಿದ್ದು, ಜೀವ ಕೈಯಲ್ಲಿಡಿದು ಓಡಾಡುವ ಸ್ಥಿತಿಯುಂಟ್ಟಾಗಿದೆ. ಒಂದೇ ಸಮನೇ ಗುಂಪು ಗುಂಪಾಗಿ ಬೀದಿ ನಾಯಿಗಳು ದಾಳಿ ಮಾಡುತ್ತಿದ್ದು, ಸಿಲಿಕಾನ್ ಸಿಟಿಯಲ್ಲಿ ಕಳೆದ ತಿಂಗಳ 14ರಂದು ಡೆಡ್ಲಿ ಡಾಗ್ ಅಟ್ಯಾಕ್ ಮಾಡಿರುವ ವಿಡಿಯೋ ತಡವಾಗಿ ಬೆಳಕಿಗೆ ಬಂದಿದೆ. ನಗರದ ಶಂಕರಮಠದ ಕರ್ನಾಟಕ ಲೇಔಟ್​ನಲ್ಲಿ ನಾಯಿಗಳ ದಂಡು ದಾಳಿಗೆ ಜನರು ರೋಸಿ ಹೋಗಿದ್ದಾರೆ. ಮನೆ ಹೊರಗಡೆ ಆಟವಾಡುತ್ತಿದ್ದ ಮಗು ಮೇಲೆ ಅಟ್ಯಾಕ್ ಮಾಡಲು ನಾಯಿಗಳು ಮುಂದಾಗಿದ್ದು, ತಾಯಿಯ ಸಮಯ ಪ್ರಜ್ಞೆಯಿಂದ ಬಡ ಜೀವ ಬದುಕುಳಿದಿದೆ. ಒಂದೇ ಬೀದಿಯಲ್ಲಿ 25ಕ್ಕೂ ಹೆಚ್ಚಿನ ನಾಯಿಗಳು ಬೀಡು ಬಿಟ್ಟಿದ್ದು, ಭಯದ ವಾತಾವರಣದಲ್ಲಿ ಜನರು ಬದುಕುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿದೆ.

ಇದನ್ನೂ ಓದಿ; Monkeypox ಮಂಕಿಪಾಕ್ಸ್ ವೈರಲ್ ಸೋಂಕಿನ ಬಗ್ಗೆ ಕೇಳಿಬರುತ್ತಿರುವ ಮಿಥ್ಯೆಗಳು ಮತ್ತು ಸತ್ಯಗಳು

ಬಿಬಿಎಂಪಿ ಅಧಿಕಾರಿಗಳ ಗಮನಕ್ಕೆ ತಂದಿದ್ರೂ ಉಪಯೋಗ ಇಲ್ಲ. ಬೀದಿ ನಾಯಿಗಳಿಂದ ದಾಳಿಗೆ ಒಳಗಾಗಿ ಜೀವಕ್ಕೆ ಕುತ್ತು ಬಂದರಷ್ಟೇ ಪರಿಹಾರ ನೀಡುತ್ತೀರಾ ಎಂದು ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತರಕಾರಿ ತರುವ ಹಾಗಿಲ್ಲ, ಮಾರ್ಕೆಟ್​ಗೆ ಹೋಗುವ ಹಾಗಿಲ್ಲ, ವಾಕಿಂಗ್ ಮಾಡೋ ಹಾಗಿಲ್ಲ. ಹೊಂಚು ಹಾಕಿ ಜನರ ಮೇಲೆ ಎಗರಿ ಅಟ್ಯಾಕ್ ಮಾಡುತ್ತೆ ಬೀದಿ ನಾಯಿಗಳು. ಬೀದಿ ನಾಯಿಗಳ ಕಾಟಕ್ಕೆ ಕರ್ನಾಟಕ ಲೇಔಟ್​ನ ಮಂದಿ ಹೈರಾಣಾಗಿ ಹೋಗಿದ್ದಾರೆ.

ಹುಚ್ಚು ನಾಯಿಗಳ ದಾಳಿಗೆ 35ಕ್ಕೂ ಹೆಚ್ಚು ಜನರಿಗೆ ಗಾಯ

ಈ ಹಿಂದೆ ಕೂಡ ಹುಚ್ಚು ನಾಯಿಗಳ ದಾಳಿಗೆ 35ಕ್ಕೂ ಹೆಚ್ಚು ಜನರಿಗೆ ಗಾಯವಾದ ಘಟನೆ ಜಿಲ್ಲೆಯ ಹುಣಸೂರು ನಗರದ ಕಲ್ಪತರು ವೃತ್ತದ ಬಳಿ ನಡೆದಿತ್ತು. ಹುಚ್ಚು ನಾಯಿಗಳ ದಾಳಿಯಿಂದ ಶಾಲಾ ಮಕ್ಕಳು ಸೇರಿದಂತೆ 35ಕ್ಕೂ ಹೆಚ್ಚು ಜನರಿಗೆ ಗಾಯವಾಗಿತ್ತು. ಗಾಯಗೊಂಡವರನ್ನು ಹುಣಸೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಶಾಲಾ ಮಕ್ಕಳು ಸೇರಿದಂತೆ 10ಕ್ಕೂ ಹೆಚ್ಚು ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಗಾಯಾಳುಗಳಿಗೆ ಹುಣಸೂರು ಆಸ್ಪತ್ರೆಯಲ್ಲಿ ಹೊರರೋಗಿಗಳಾಗಿ ಚಿಕಿತ್ಸೆ ನೀಡಲಾಗಿತ್ತು.

ಪಾದಾಚಾರಿಗಳನ್ನು ಕಚ್ಚಿದ ಹುಚ್ಚು ನಾಯಿಗಳ ಗುಂಪು, 35ಕ್ಕೂ ಅಧಿಕ ಜನರನ್ನು ಕಚ್ಚಿ ಪರಾರಿಯಾಗಿದ್ದವು. ನಾಯಿಗಳ ಉಪಟಳದಿಂದ ಸಾರ್ವಜನಿಕರು ಬಹಳ ತೊಂದರೆಗೆ ಒಳಗಾಗಿದ್ದರು. ಘಟನೆ ಬೆನ್ನಲ್ಲೇ ನಾಯಿಗಳ ಹಾವಳಿ ತಡೆಯುವಂತೆ ಸಾರ್ವಜನಿಕರ ಒತ್ತಾಯ ಕೇಳಿಬಂದಿತ್ತು.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 9:05 am, Sat, 28 May 22