ಪೆಟ್ರೋಲ್, ಡೀಸೆಲ್ ಮೇಲಿನ ಸೆಸ್ ಹೆಚ್ಚಳ; ಕಾಂಗ್ರೆಸ್​ ದುರಾಡಳಿತಕ್ಕೆ ಎಷ್ಟು ಹಣ ಬಂದರೂ ಸಾಕಾಗಲ್ಲ-ಬಿಎಸ್​ ಯಡಿಯೂರಪ್ಪ

ಕಾಂಗ್ರೆಸ್ ಸರ್ಕಾರ ಎಲ್ಲಾ ರೀತಿಯ ಕಿರುಕುಳ ನೀಡಲು ಆರಂಭಿಸಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ(B.S Yediyurappa) ಹೇಳಿದರು. ಬೆಳಗಾವಿಯಲ್ಲಿ ಮಾತನಾಡಿದ ಅವರು ‘ಕಾಂಗ್ರೆಸ್(Congress)​ ದುರಾಡಳಿತಕ್ಕೆ ಎಷ್ಟು ಹಣ ಬಂದರೂ ಸಾಕಾಗಲ್ಲ ಎಂದರು.

ಪೆಟ್ರೋಲ್, ಡೀಸೆಲ್ ಮೇಲಿನ ಸೆಸ್ ಹೆಚ್ಚಳ; ಕಾಂಗ್ರೆಸ್​ ದುರಾಡಳಿತಕ್ಕೆ ಎಷ್ಟು ಹಣ ಬಂದರೂ ಸಾಕಾಗಲ್ಲ-ಬಿಎಸ್​ ಯಡಿಯೂರಪ್ಪ
ಬಿಎಸ್​ ಯಡಿಯೂರಪ್ಪ
Follow us
TV9 Web
| Updated By: ಕಿರಣ್ ಹನುಮಂತ್​ ಮಾದಾರ್

Updated on: Dec 13, 2023 | 8:09 PM

ಬೆಳಗಾವಿ, ಡಿ.13: ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಸೆಸ್ ಹೆಚ್ಚಳ ಪ್ರಸ್ತಾವನೆ ವಿಚಾರಕ್ಕೆ ಸಂಬಂಧಿಸಿದಂತೆ ‘ಕಾಂಗ್ರೆಸ್ ಸರ್ಕಾರ ಎಲ್ಲಾ ರೀತಿಯ ಕಿರುಕುಳ ನೀಡಲು ಆರಂಭಿಸಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ(B.S Yediyurappa) ಹೇಳಿದರು. ಬೆಳಗಾವಿಯಲ್ಲಿ ಮಾತನಾಡಿದ ಅವರು ‘ಕಾಂಗ್ರೆಸ್(Congress)​ ದುರಾಡಳಿತಕ್ಕೆ ಎಷ್ಟು ಹಣ ಬಂದರೂ ಸಾಕಾಗಲ್ಲ, ಈ ಮೂಲಕ ಜನರಿಗೆ ಕಿರುಕುಳ ನೀಡಿದರೆ, ಅಧಿವೇಶನ ಮುಗಿದ ಮೇಲೆ ಅಧಿಕಾರ ಬಿಟ್ಟು ತೊಲಗಿ ಎಂದು ರಾಜ್ಯಾದ್ಯಂತ ಪ್ರವಾಸ ಮಾಡಿ ಸರ್ಕಾರದ ವಿರುದ್ಧ ಹೋರಾಟ ಮಾಡುತ್ತೇನೆ. ಪೆಟ್ರೋಲ್, ಡೀಸೆಲ್ ಮೇಲಿನ ಸೆಸ್ ತಕ್ಷಣ ವಾಪಸ್ ಪಡೆಯಬೇಕು ಎಂದರು.

ಇನ್ನು ಈ ಕುರಿತು ಬಿಜೆಪಿ ಹೋರಾಟ ಸಮಾವೇಶದಲ್ಲಿ ಮಾತನಾಡಿದ ವಿಪಕ್ಷ ನಾಯಕ ಆರ್.ಅಶೋಕ ‘ ಸಿದ್ದರಾಮಯ್ಯ ಅವರು ಉತ್ತರ ಕರ್ನಾಟಕಕ್ಕೆ ಹೆಚ್ಚು ಅನುದಾನ ಬಿಡುಗಡೆ ಮಾಡಿದೆ ಅಂದಿದ್ದಾರೆ. ಮಾಡಿದ್ದಾರೆ ಅದು ಮುಲ್ಲಾಗಳಿಗೆ 10 ಸಾವಿರ ಕೋಟಿ ಘೋಷಣೆ ಮಾಡಿದ್ದಾರೆ. ಅದೇ ರೈತರಿಗೆ ನಯಾಪೈಸೆ ಅನುದಾನವನ್ನ ಕೊಟ್ಟಿಲ್ಲ. ನೀವು ಯಾರಾದರೂ ಮಕ್ಕಳನ್ನ ದತ್ತು ತಗೊಂಡ್ರೆ ಸರ್ಕಾರಕ್ಕೆ ಟ್ಯಾಕ್ಸ್ ಕೊಡಬೇಕು. ತೆರಿಗೆ ಸಂಗ್ರಹಿಸುವ ಬಿಲ್ ಗಳನ್ನು ಸದನದಲ್ಲಿ ಪಾಸ್ ಮಾಡುತ್ತಿದ್ದಾರೆ. 14 ಬಜೆಟ್ ಮಂಡಿಸಿರೋ ಸಿದ್ದರಾಮಯ್ಯ, ಮಕ್ಕಳು ಹಾಲು ಕುಡಿಬೇಕು ಅಂದ್ರೆ 3ರೂಪಾಯಿ ಹೆಚ್ಚಳ ಮಾಡಿದ್ದಾರೆ ಎನ್ನುವ ಮೂಲಕ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ:ಬೆಳಗಾವಿ ಅಧಿವೇಶನ: ರೈತರ ಸಂಕಷ್ಟ ಸದನದಲ್ಲಿ ಪ್ರಸ್ತಾಪಿಸಿದ ವಿಜಯೇಂದ್ರ ಸಿಎಂ ಸಿದ್ದರಾಮಯ್ಯರನ್ನು ಮನಸಾರೆ ಕೊಂಡಾಡಿದರು

ಸಿದ್ದರಾಮಯ್ಯ ಸರ್ಕಾರ ಜನರ ಮೇಲೆ 60 ಟ್ಯಾಕ್ಸ್​ಗಳನ್ನ ಹಾಕ್ತಿದೆ-ಆರ್​ ಅಶೋಕ

ಸಿದ್ದರಾಮಯ್ಯ ಸರ್ಕಾರ ಜನರ ಮೇಲೆ ವಿವಿಧ ರೀತಿಯಲ್ಲಿ 60 ಟ್ಯಾಕ್ಸ್​ಗಳನ್ನ ಹಾಕುತ್ತಿದೆ. ಸರ್ಕಾರದ ಫ್ರೀ ಯೋಜನೆ ದೊಡ್ಡ ಮೋಸ. ಇಂತಹ ಸಿಎಂಗೆ ನೊಬೆಲ್ ಪ್ರಶಸ್ತಿ ಕೊಡಬೇಕು ಎಂದು ಲೆವಡಿ ಮಾಡಿದ್ದಾರೆ. ಸಿದ್ದರಾಮಯ್ಯ ಬಜೆಟ್ ಖಾಲಿ ಖಾಲಿ ಬಜೆಟ್. ಬೆಳಗಾವಿಗೆ ಬಂದು ಜನರ ಮೇಲೆ ಟ್ಯಾಕ್ಸ್ ಹಾಕುತ್ತಿದ್ದಾರೆ. ರಾಜ್ಯ ಕಾಂಗ್ರೆಸ್ ಸರ್ಕಾರ ಪಾಪರ್ ಸರ್ಕಾರ ಎಂದು ವ್ಯಂಗ್ಯ ವಾಡಿದ ಅಶೋಕ, ಈ ರೀತಿಯ ಕೆಟ್ಟ ಸರ್ಕಾರ ತೊಲಗಬೇಕು ಎಂದರು.

ಮೋದಿ ಕೊಟ್ಟ 6 ಸಾವಿರಕ್ಕೆ ಯಡಿಯೂರಪ್ಪ 4 ಸಾವಿರ ಸೇರಿಸಿ ರೈತರಿಗೆ 10 ಸಾವಿರ ಕೊಟ್ಟರು‌. ಒಬ್ಬರಿಗೆ ಶಿಕ್ಷೆ ಕೊಡುವ ರೀತಿ, ರೈತರಿಗೆ ಅಪಹಾಸ್ಯ ಮಾಡೋ ರೀತಿ ಮಾಡ್ತಿದ್ದಾರೆ. ಯಡಿಯೂರಪ್ಪ ನೆರೆ ಪ್ರವಾಹದಲ್ಲಿ ರೈತರಿಗೆ 25 ಸಾವಿರ ಕೊಟ್ರೇ, ಸಿದ್ದರಾಮಯ್ಯ ರೈತರಿಗೆ ಬರ ಪರಿಹಾರ 2 ಸಾವಿರ ಕೊಟ್ಟಿದ್ದಾರೆ ಎಂದು ಯಡಿಯೂರಪ್ಪನವರ ಆಡಳಿತವನ್ನು ಕೊಂಡಾಡಿದ್ದಾರೆ. ಎಲ್ಲರೂ ಯಡಿಯೂರಪ್ಪ, ವಿಜಯೇಂದ್ರ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರ ತೊಲಗಿಸೋಣಾ ಎಂದು ಕಿಡಿಕಾರಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ