ಸೆಪ್ಟೆಂಬರ್ 14ರಿಂದ ಬಿಎಡ್ 4ನೇ ಸೆಮಿಸ್ಟರ್ ಸೇರಿ ವಿವಿಧ ಪರೀಕ್ಷೆ ನಿಗದಿಯಾಗಿತ್ತು. ಆದರೆ ಸೆಪ್ಟೆಂಬರ್ 15 ಮತ್ತು 16ರಂದು ಪಿಎಸ್ಐ ದೈಹಿಕ ಪರೀಕ್ಷೆಯಿದೆ. ಸೆಪ್ಟೆಂಬರ್ 18, 19ರಂದು ಎಸ್‌ಡಿಎ ಪರೀಕ್ಷೆ ನಿಗದಿಯಾಗಿದೆ.
ಕೈಯಲ್ಲಿ ಸೀಮೆಎಣ್ಣೆ ಹಿಡಿದು ಪ್ರತಿಭಟಿಸಿದ ವಿದ್ಯಾರ್ಥಿಗಳು
Follow us on
ಬೆಳಗಾವಿ: ವಿದ್ಯಾರ್ಥಿಗಳ ಪ್ರತಿಭಟನೆಯ ಒತ್ತಡಕ್ಕೆ ಮಣಿದು ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಪರೀಕ್ಷೆಯನ್ನು ಮುಂದೂಡಿ ಕುಲಪತಿ ರಾಮಚಂದ್ರಗೌಡ ಆದೇಶಿಸಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆಗಳ ಸಮಯದಲ್ಲೇ ವಿಶ್ವವಿದ್ಯಾಲಯದ ಪರೀಕ್ಷೆ ದಿನಾಂಕ ನಿಗದಿಪಡಿಸಿರುವ ಕಾರಣ ಪರೀಕ್ಷೆ ಮುಂದೂಡುವಂತೆ ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಎದುರು ವಿದ್ಯಾರ್ಥಿಗಳು ಧರಣಿ ನಡೆಸಿದ್ದಾರೆ.
ಸೆಪ್ಟೆಂಬರ್ 14ರಿಂದ ಬಿಎಡ್ 4ನೇ ಸೆಮಿಸ್ಟರ್ ಸೇರಿ ವಿವಿಧ ಪರೀಕ್ಷೆ ನಿಗದಿಯಾಗಿತ್ತು. ಆದರೆ ಸೆಪ್ಟೆಂಬರ್ 15 ಮತ್ತು 16ರಂದು ಪಿಎಸ್ಐ ದೈಹಿಕ ಪರೀಕ್ಷೆಯಿದೆ. ಸೆಪ್ಟೆಂಬರ್ 18, 19ರಂದು ಎಸ್‌ಡಿಎ ಪರೀಕ್ಷೆ ನಿಗದಿಯಾಗಿದೆ. ಈ ಪರೀಕ್ಷೆಗಳ ನಡುವೆಯೇ ಬಿಎಡ್ ಪರೀಕ್ಷೆ ನಡೆಸುವುದು ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಪ್ರತಿಭಟನೆ ವೇಳೆ ಸೀಮೆಎಣ್ಣೆ ಡಬ್ಬಿ ಕೈಯಲ್ಲಿ ಹಿಡಿದಿರುವ ವಿದ್ಯಾರ್ಥಿಗಳು ಪರೀಕ್ಷೆ ಮುಂದೂಡದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಒಡ್ಡಿದ್ದಾರೆ. ವಿದ್ಯಾರ್ಥಿಗಳ ಪ್ರತಿಭಟನೆಗೆ ವಿಶ್ವವಿದ್ಯಾಲಯ ಮಣಿದಿದೆ. ಪರೀಕ್ಷೆಗಳನ್ನು ಮುಂದೂಡಿದೆ. ಸದ್ಯ ಮುಂದೂಡಲ್ಪಟ್ಟಿರುವ ಪರೀಕ್ಷೆಗಳನ್ನು ನಡೆಸಲು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತೊಂದರೆಯಾಗದಂತೆ ಪರಿಷ್ಕೃತ ವೇಳಾಪಟ್ಟಿ ಪ್ರಕಟಿಸುವುದಾಗಿ ವಿಶ್ವವಿದ್ಯಾಲಯ ಭರವಸೆ ನೀಡಿದೆ.