ಸೋಷಿಯಲ್ ಮೀಡಿಯಾದಲ್ಲಿ ದಬದಬನೇ ಫೋಟೊ ಹಾಕುವ ಯುವತಿಯರೇ ಎಚ್ಚರಾ, ಎಚ್ಚರಾ! ದುಬೈ ಯುವತಿಯ ಈ ಕತೆ ಕೇಳಿ

ದುಬೈನಲ್ಲಿ ಸೆಟ್ಲ್ ಆಗಿದ್ದ ಆ ಯುವತಿ, ತನ್ನ ಪೋಟೊ ಮಿಸ್‌ ಯೂಸ್ ಆಗಿದ್ದನ್ನ ಕಂಡು ಶಾಕ್ ಆಗಿದ್ದಾರೆ. ಖುದ್ದು ಮಹಾಂತೇಶ್‌ಗೆ ಮೆಸೇಜ್ ಮಾಡಿ ಅಕೌಂಟ್ ಡಿಲಿಟ್ ಮಾಡುವಂತೆ ಮನವಿ ಮಾಡಿದ್ದಾರೆ. ಇಷ್ಟಾದರೂ ಆತ ಕೇಳದ ಹಿನ್ನೆಲೆ ಜುಲೈ 4ರಂದು ಬೆಳಗಾವಿಗೆ ಆಗಮಿಸಿ ದೂರು ನೀಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ದಬದಬನೇ ಫೋಟೊ ಹಾಕುವ ಯುವತಿಯರೇ ಎಚ್ಚರಾ, ಎಚ್ಚರಾ! ದುಬೈ ಯುವತಿಯ ಈ ಕತೆ ಕೇಳಿ
ಸೋಷಿಯಲ್ ಮೀಡಿಯಾದಲ್ಲಿ ದಬದಬನೇ ಫೋಟೊ ಹಾಕುವ ಯುವತಿಯರೇ ಎಚ್ಚರಾ, ಎಚ್ಚರಾ! ದುಬೈ ಯುವತಿಯ ಈ ಕತೆ ಕೇಳಿ
TV9kannada Web Team

| Edited By: sadhu srinath

Jul 28, 2022 | 9:24 PM

ಬೆಳಗಾವಿ: ಸಾಮಾಜಿಕ ಜಾಲತಾಣಗಳಲ್ಲಿ (Social Media) ಫೋಟೊ ಅಪ್ಲೋಡ್ ಮಾಡುವ ಯುವತಿಯರೇ ಎಚ್ಚರಾ, ಎಚ್ಚರಾ! ಹೆಚ್ಚು ಲೈಕ್ ಬರ್ತವೆ, ಕಮೆಂಟ್ ಬರ್ತೇವೆ ಅಂತಾ ತಮ್ಮೆಲ್ಲಾ ಫೋಟೋಗಳನ್ನ ದಬದಬನೇ ಅಪ್ಲೋಡ್ ಮಾಡಿಬಿಡಬೇಡಿ. ನಿಮ್ಮ ಪೋಟೊಗಳನ್ನೇ (woman photo) ಬಳಸಿಕೊಂಡು ಹಣ ಮಾಡುವ ಖದೀಮನ ಖತರ್ನಾಕ್ ಸ್ಟೋರಿ ಇಲ್ಲೊಂದು ಇದೆ ಓದಿಕೊಳ್ಳೀ.

ಒಬ್ಬ ಯುವತಿಯ ಪೋಟೊ ಬಳಸಿಕೊಂಡು 20 ಲಕ್ಷ ರೂ ಎಗರಿಸಿರುವ ಸ್ಟೋರಿ ಇದಾಗಿದೆ. ಈ ಸ್ಟೋರಿ ನೋಡಿದ್ರೇ ಫೇಸ್‌ಬುಕ್, ಇನ್ ಸ್ಟ್ರಾಗ್ರಾಂ ಬಳಸುವ ಯುವತಿಯರು ಬೆಚ್ಚಿಬೀಳುವುದು ಗ್ಯಾರಂಟಿ. ಆದರೂ ನಮ್ಮ ಬೆಳಗಾವಿಯ ಸಿಇಎನ್ ಪೊಲೀಸರು (Belagavi CEN police) ಭರ್ಜರಿ ಕಾರ್ಯಾಚರಣೆ ನಡೆಸಿ, ಪಾತಕಿಯನ್ನು ಬೇಟೆಯಾಡಿರುವುದು ಸಮಾಧಾನಕರ ಸಂಗತಿ.

ಆರೋಪಿ ಮಹಾಂತೇಶ ಪಿಎಸ್‌ಐ ಪರೀಕ್ಷೆ ಕೂಡ ಪಾಸ್ ಆಗಿದ್ದ!

ಪ್ರಕರಣದ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಅಕೌಂಟ್ ಮಾಡಿ ಹಣ ಪೀಕುತ್ತಿದ್ದ (20 ಲಕ್ಷ ರೂ ವಸೂಲಿ) ಯುವಕನನ್ನು ಬಂಧಿಸಲಾಗಿದೆ. ಬೆಳಗಾವಿ ನಗರದ ಎಂ‌. ಸ್ನೇಹಾ ಎಂಬ ಹೆಸರಿನಲ್ಲಿ ಫೇಕ್ ಐಡಿ ಮಾಡಿದ್ದ ಭೂಪ ಮಹಾಂತೇಶ್ ಮೂಡಸೆ ಬಂಧನಕ್ಕೀಡಾಗಿರುವ ಯುವಕ. ಈತ ಗ್ರಾಮೀಣ ಭಾಗದವ. ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ನಾಯಿಹಿಂಗ್ಲಜ್ ಗ್ರಾಮದ ನಿವಾಸಿ.

ಮಹಾಂತೇಶ್ ಮೂಡಸೆ ಪಿಎಸ್‌ಐ ದೈಹಿಕ ಪರೀಕ್ಷೆ ಕೂಡ ಪಾಸ್ ಆಗಿದ್ದ. ಧಾರವಾಡದಲ್ಲಿದ್ದುಕೊಂಡು ಪರೀಕ್ಷೆಗೆ ತಯಾರಿ ನಡೆಸಿದ್ದ ಈ ಮಹಾಂತೇಶ್. ಯುವತಿ ಹೆಸರಲ್ಲಿ ಹಣ ವಸೂಲಿ ಮಾಡಿ ಗೋವಾಕ್ಕೆ ತೆರಳಿ ಎಂಜಾಯ್ ಮಾಡಿದ್ದ ಭೂಪ ಈಗ ಅರೆಸ್ಟ್ ಆಗಿದ್ದಾನೆ ಅನ್ನಿ.

ಹೀಗಿತ್ತು ಮಹಾಂತೇಶನ ಕಾರ್ಯಾಚರಣೆ, ಆದರೆ ಅಸಲಿಗೆ ಯುವತಿ ದುಬೈನಲ್ಲಿ ಸೆಟ್ಲ್​ ಆಗಿದ್ದರು!

ಬೆಳಗಾವಿಯ ಸ್ನೇಹಾ ಹೆಸರಿನಲ್ಲಿ ಮಹಾಂತೇಶ ಫೇಸ್‌ಬುಕ್ ಮತ್ತು ಇನ್ ಸ್ಟ್ರಾಗ್ರಾಂ ಖಾತೆ ತೆರೆದು ಯುವಕರೊಂದಿಗೆ ಸ್ನೇಹ ಸಂಪಾದಿಸಿದ್ದ! ಯುವಕರಿಗೆ ತಾನೇ ಸ್ನೇಹಾ ಅಂತಾ ನಂಬಿಸಿ ಅವರ ನಂಬರ್ ಪಡೆಯುತ್ತಿದ್ದ ಮಹಾಂತೇಶ್. ಹೀಗೆ ನಂಬರ್ ಪಡೆದು ನಂತರ ಪೋನ್ ನಲ್ಲಿ ಮಾತನಾಡದೇ ಬರೀ ಚಾಟ್ ಮಾಡ್ತಿದ್ದ‌. ಈ ವೇಳೆ ಕೆಲವು ಪೋಟೊಗಳನ್ನ ವಾಟ್ಸಪ್ ಮಾಡ್ತಿದ್ದ. ಯುವತಿ ಅಂತಾ ನಂಬಿದ ಕೆಲವರಿಗೆ ಪಂಗನಾಮ ಬೀಳುತ್ತಿತ್ತು.

ಹಣದ ಅವಶ್ಯಕತೆ ಇದೆ ಅಂತಾ 10, 20, 50 ಸಾವಿರ ವರೆಗೂ ಹಣ ಹಾಕಿಸಿಕೊಂಡು ನಂಬರ್ ಬ್ಲಾಕ್ ಮಾಡಿಬಿಡುತ್ತಿದ್ದ‌ ಮಹಾಂತೇಶ. ಹೀಗೆ ಯುವತಿ ಪೋಟೊ ಹಾಕಿ ಯುವತಿ ಹೆಸರಲ್ಲಿ ಮಾಡಿದ್ದ ಅಕೌಂಟ್‌ಗೆ 15 ಸಾವಿರ ಫಾಲೋವರ್ಸ್ ಇದ್ದರು! ತನ್ನ ಪೋಟೊ ಬೇರೆಯವರು ಬಳಸುತ್ತಿದ್ದ ವಿಚಾರ ತಿಳಿದು ಫೋಟೋದಲ್ಲಿದ್ದ ಅಸಲಿ ಯುವತಿ ಸ್ನೇಹಾ ಶಾಕ್ ಆಗಿದ್ದರು.

ಆದರೆ ದುಬೈನಲ್ಲಿ ಸೆಟ್ಲ್ ಆಗಿದ್ದ ಆ ಯುವತಿ, ತನ್ನ ಪೋಟೊ ಮಿಸ್‌ ಯೂಸ್ ಆಗಿದ್ದನ್ನ ಕಂಡು ಶಾಕ್ ಆಗಿದ್ದಾರೆ. ಖುದ್ದು ಮಹಾಂತೇಶ್‌ಗೆ ಮೆಸೇಜ್ ಮಾಡಿ ಅಕೌಂಟ್ ಡಿಲಿಟ್ ಮಾಡುವಂತೆ ಮನವಿ ಮಾಡಿದ್ದಾರೆ. ಇಷ್ಟಾದರೂ ಆತ ಕೇಳದ ಹಿನ್ನೆಲೆ ಜುಲೈ 4ರಂದು ಬೆಳಗಾವಿಗೆ ಆಗಮಿಸಿ ದೂರು ನೀಡಿದ್ದಾರೆ. ಸಿಇಎನ್ ಪೊಲೀಸ್ ಠಾಣೆಯಲ್ಲಿ ಯುವತಿ ದೂರು ದಾಖಲಿಸಿದ್ದರು.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada