ಮಂದಿರ ವರ್ಸಸ್​ ಮಸೀದಿ ವಿವಾದ: ಶಾಸಕ ಅಭಯ್‌ ಪಾಟೀಲ್ ವಿರುದ್ಧ ಮಾಜಿ ಶಾಸಕ ಫಿರೋಜ್ ಸೇಠ್​ ವಾಗ್ದಾಳಿ

ಬೆಳಗಾವಿಯಲ್ಲಿ ಮಂದಿರ ಮಸೀದಿ ವಿವಾದ ತಾರಕಕ್ಕೇರಿದ್ದು, ಅಭಯ್ ಪಾಟೀಲ್ ಡಿಸಿ ಭೇಟಿ ಬೆನ್ನಲ್ಲೇ ಪ್ರಾದೇಶಿಕ ಆಯುಕ್ತರನ್ನ ಮುಸ್ಲಿಂ ಮುಖಂಡರು ಭೇಟಿಯಾಗಿದ್ದಾರೆ.

ಮಂದಿರ ವರ್ಸಸ್​ ಮಸೀದಿ ವಿವಾದ: ಶಾಸಕ ಅಭಯ್‌ ಪಾಟೀಲ್ ವಿರುದ್ಧ ಮಾಜಿ ಶಾಸಕ ಫಿರೋಜ್ ಸೇಠ್​ ವಾಗ್ದಾಳಿ
ಪ್ರಾದೇಶಿಕ ಆಯುಕ್ತರನ್ನು ಭೇಟಿಯಾದ ಮುಸ್ಲಿಂ ಮುಖಂಡರು
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: May 31, 2022 | 10:18 AM

ಬೆಳಗಾವಿ: ಯಾವುದೇ ಸರ್ಕಾರ ಇರಲಿ ಅಶಾಂತಿಯಿದ್ದರೆ ದೇಶ ಅಭಿವೃದ್ಧಿಯಾಗಲ್ಲ. ಜವಾಬ್ದಾರಿಯುತ ಸ್ಥಾನದಲ್ಲಿರುವವರು ಈ ರೀತಿ ಮಾತನಾಡಬಾರದು. ಗಾಳಿಮಾತು ಮಾತನಾಡಿ ಜನರನ್ನು ಪ್ರಚೋದಿಸುವುದು ಶೋಭೆ ತರಲ್ಲ ಎಂದು ಮಸೀದಿ ವಿವಾದ ವಿಚಾರವಾಗಿ ಪ್ರಾದೇಶಿಕ ಆಯುಕ್ತರ ಭೇಟಿ ಬಳಿಕ ಮಾಜಿ ಶಾಸಕ ಫಿರೋಜ್ ಸೇಠ್​ ಹೇಳಿಕೆ ನೀಡಿದ್ದು, ಅಭಯ್‌ ಪಾಟೀಲ್ ವಿರುದ್ಧ ವಾಗ್ದಾಳಿ ಮಾಡಿದರು. ಏನೂ ವಸ್ತುಸ್ಥಿತಿ ಇದೆ ಅದರ ಬಗ್ಗೆ ಪ್ರಾದೇಶಿಕ ಆಯುಕ್ತರ ಜೊತೆ ಮಾತನಾಡಿದ್ದೇನೆ. ಜವಾಬ್ದಾರಿ ಸ್ಥಾನದಲ್ಲಿ ಇರುವ ಶಾಸಕರು ಆರೋಪಿಸಿದ್ದಾರೆ. 1991ರ ಪೂಜಾ ಸ್ಥಳಗಳ ಕಾಯ್ದೆಯನ್ನು ಅವರು ಓದಬೇಕು. ನಾವು ಜನರ ಮಧ್ಯೆ ದ್ವೇಷ ಹಬ್ಬಿಸಲು ಯತ್ನಿಸುವರನ್ನು ದ್ವೇಷಿಸಲ್ಲ, ಪ್ರೀತಿಸುತ್ತೇವೆ. ನಾವು ದ್ವೇಷಕ್ಕೆ ಪ್ರೀತಿಯಿಂದಲೇ ಉತ್ತರ ನೀಡುತ್ತೇವೆ. ನನಗೆ ನನ್ನ ದೇಶ, ರಾಷ್ಟ್ರ ಮುಖ್ಯ, ರಾಷ್ಟ್ರದಲ್ಲಿ ಶಾಂತತೆ ಇದ್ರೆ ಎಲ್ಲವೂ ಸಾಧ್ಯ. ಯಾವುದೇ ಸರ್ಕಾರ ಇರಲಿ ಅಶಾಂತಿ ಇದ್ರೆ ದೇಶ ಅಭಿವೃದ್ಧಿ ಆಗಲ್ಲ ಎಂದು ಹೇಳಿದರು.

ಇದನ್ನೂ ಓದಿ; OnePlus Ace Racing ಆವೃತ್ತಿ ಭಾರತದಲ್ಲಿ ‘OnePlus 10R Lite’ ಆಗಿ ಬಿಡುಗಡೆ ಸಾಧ್ಯತೆ, ಇಲ್ಲಿದೆ ಫೀಚರ್ಸ್​

ದೇಶದಲ್ಲಿ ಅಶಾಂತಿ ಇದರೆ, ಜನರು ತೊಂದರೆಗೊಳಗಾಗುತ್ತಾರೆ. ಜವಾಬ್ದಾರಿಯುತ ಸ್ಥಾನದಲ್ಲಿ ಇದ್ದವರು ಈ ರೀತಿ ಮಾತು ಆಡಬಾರದು. ಗಾಳಿಮಾತು ಮಾತನಾಡಿ ಜನರನ್ನು ಪ್ರಚೋದಿಸುವುದು ಶೋಭೆ ತರಲ್ಲ. ಇಂತಹ ಕೆಲಸ ಮಾಡಬೇಡಿ ಎಂದು ನಾವು ಬಹಳ ಪ್ರೀತಿ, ಗೌರವದಿಂದ ಮನವಿ ಮಾಡುತ್ತೇವೆ. ನಮಗೆ ಗೊತ್ತು ಈಗ ಚುನಾವಣೆ ಹತ್ತಿರ ಬಂದಿದೆ ಏನಾದರೂ ನೀವು ಮಾಡಲೇಬೇಕು. ತಾಜ್‌ಮಹಲ್, ಕುತುಬ್‌ಮಿನಾರ್ ಶ್ರೀರಂಗಪಟ್ಟಣ ಇದೆಲ್ಲ ನಡೆಯುತ್ತಲೇ ಇರುತ್ತೆ. ಏಕೆಂದರೆ ಬೇರೆ ತೋರಿಸಲು ಏನೂ ಇಲ್ವಲ್ಲ ಎಂದು ಪ್ರಶ್ನಿಸಿದರು. ಕೊವಿಡ್ ಸಂಕಷ್ಟದಿಂದ ಈಗಷ್ಟೇ ಜನರು ಹೊರಬಂದಿದ್ದಾರೆ. ಬೆಲೆ ಏರಿಕೆಗೆ ಜನರು ತತ್ತರಿಸಿ ಹೋಗಿದ್ದಾರೆ. ವಿಶ್ವದ ಎಲ್ಲ ರಾಷ್ಟ್ರಗಳ ಸರ್ಕಾರಗಳು ಹಣದುಬ್ಬರದಿಂದ ಬಹಳ ದೊಡ್ಡ ಸಮಸ್ಯೆ ಎದುರಿಸುತ್ತೀವೆ. ನಾವೆಲ್ಲ ಒಗ್ಗೂಡಿ ಹಣದುಬ್ಬರ ನಿಯಂತ್ರಣ ಮಾಡಿ ಹೇಗೆ ದೇಶದ ಅಭಿವೃದ್ಧಿ ಮಾಡಬೇಕು ಅಂತಾ ವಿಚಾರಿಸಬೇಕು. ಕಾಯ್ದೆ ಪ್ರಕಾರ ಏನಿದೆ ಆ ಪ್ರಕಾರ ಕ್ರಮ ಕೈಗೊಳ್ಳಲಿ ಎಂದು ಮ‌ನವಿ ಮಾಡಿದ್ದೇನೆ. ಬಿಜೆಪಿ ಶಾಸಕ ಅಭಯ್ ಪಾಟೀಲ್ ವಿರುದ್ಧ ಮಾಜಿ ಶಾಸಕ ಫಿರೋಜ್ ಸೇಠ್​ ಆಕ್ರೋಶ ಹೊರ ಹಾಕಿದರು.

ಪ್ರಾದೇಶಿಕ ಆಯುಕ್ತರನ್ನು ಭೇಟಿಯಾದ ಮುಸ್ಲಿಂ ಮುಖಂಡರು

ಜಿಲ್ಲೆಯಲ್ಲಿ ಮಂದಿರ ಮಸೀದಿ ವಿವಾದ ತಾರಕಕ್ಕೇರಿದೆ. ಅಭಯ್ ಪಾಟೀಲ್ ಡಿಸಿ ಭೇಟಿ ಬೆನ್ನಲ್ಲೇ ಪ್ರಾದೇಶಿಕ ಆಯುಕ್ತರನ್ನು ಮುಸ್ಲಿಂ ಮುಖಂಡರು ಕಾಂಗ್ರೆಸ್‌ ಮಾಜಿ ಶಾಸಕ ಫಿರೋಜ್ ಸೇಠ್ ನೇತೃತ್ವದಲ್ಲಿ ಭೇಟಿಯಾಗಿದ್ದಾರೆ. ಬೆಳಗಾವಿಯ ಅಂಜುಮನ್ ಇಸ್ಲಾಂ ಕಮಿಟಿ ಅಧ್ಯಕ್ಷ ರಾಜು ಸೇಠ್, ಮುಸ್ಲಿಂ ಸಮುದಾಯದ ಧರ್ಮಗುರುಗಳು ಸೇರಿ ಹಲವರು ಸಾಥ್ ನೀಡಿದ್ದಾರೆ. ರಾಜಕೀಯ ಲಾಭಕ್ಕಾಗಿ ಎರಡು ಸಮುದಾಯ ನಡುವೆ ಬೆಂಕಿ ಹಚ್ಚಲು ಯತ್ನ ಆರೋಪಿಸಿದ್ದು, ರಾಮದೇವ ಗಲ್ಲಿಯ ಮಸೀದಿ ಇರೋ ಜಾಗದ ಪಹಣಿ ಸೇರಿ ಇತರ ದಾಖಲೆಪತ್ರ ಸಲ್ಲಿಕೆ ಮಾಡಿದರು. 1991ರ ಪೂಜಾ ಸ್ಥಳ ಕಾಯ್ದೆ ಯಂತೆ ಕ್ರಮಕ್ಕೆ ಪ್ರಾದೇಶಿಕ ಆಯುಕ್ತ ಅಮ್ಲಾನ್ ಆದಿತ್ಯ ಬಿಸ್ವಾಸ್​ಗೆ ಮನವಿ ಮಾಡಿದರು. ಬೆಳಗಾವಿಯ ರಾಮದೇವಗಲ್ಲಿಯ ಶಾಹೀ ಮಸೀದಿ ಮಂದಿರವಾಗಿತ್ತು ಎಂದು ಅಭಯ್ ಪಾಟೀಲ್ ಹೇಳಿದ್ದು, ನಿನ್ನೆಯಷ್ಟೇ ಡಿಸಿ ಭೇಟಿಯಾಗಿ ಮಸೀದಿ ಸರ್ವೆಗೆ ಮ‌ನವಿ ಮಾಡಿದ್ದರು.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್