AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಪ್ಪ ಅಮ್ಮ ಗೊತ್ತಿಲ್ಲದವರು ತಮ್ಮ ಧರ್ಮ ಜಾತ್ಯತೀತ ಎಂದು ಹೇಳ್ತಾರೆ, ಸಿದ್ದರಾಮಯ್ಯ ವಿರುದ್ಧ ಅನಂತ್ ಕುಮಾರ್ ಹೆಗಡೆ ಪರೋಕ್ಷ ವಾಗ್ದಾಳಿ

ನಾವು ಹಿಂದೂಗಳು ಎಂದು ಮರೆತು ಹೋಗಿತ್ತು. ಈಗಲೂ ಸಾಕಷ್ಟು ಜನ ತಕ್ಷಣ ಕೇಳಿದ್ರೇ ಅವರ ಜಾತಿ ಹೆಸರು ಹೇಳ್ತಾರೆ. ಹಿಂದೂ ಅಂತಾ ನೆನಪು ಮಾಡಿಕೊಂಡು ಹೇಳ್ತಾರೆ. ಸಂಸ್ಕಾರ ಇದ್ರೇ ಹಿಂದೂ ಅಂತಾ ಹೇಳ್ತಾರೆ. ಕೆಲವು ಮಂದಿ ಜಾತ್ಯತೀತ ಅಂತಾ ಹೇಳ್ತಾರೆ. ಅಪ್ಪ ಅಮ್ಮ ಗೊತ್ತಿಲ್ಲದವರು ಜಾತ್ಯಾತೀತ ಅಂತಾ ಹೇಳ್ತಾರೆ ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ವಿರುದ್ದ ಮತ್ತೊಮ್ಮೆ ಅನಂತ್ ಕುಮಾರ್ ಹೆಗಡೆ ವಾಗ್ದಾಳಿ ನಡೆಸಿದ್ದಾರೆ.

ಅಪ್ಪ ಅಮ್ಮ ಗೊತ್ತಿಲ್ಲದವರು ತಮ್ಮ ಧರ್ಮ ಜಾತ್ಯತೀತ ಎಂದು ಹೇಳ್ತಾರೆ, ಸಿದ್ದರಾಮಯ್ಯ ವಿರುದ್ಧ ಅನಂತ್ ಕುಮಾರ್ ಹೆಗಡೆ ಪರೋಕ್ಷ ವಾಗ್ದಾಳಿ
ಅನಂತ್ ಕುಮಾರ್ ಹೆಗಡೆ
Sahadev Mane
| Edited By: |

Updated on:Jan 18, 2024 | 8:59 AM

Share

ಬೆಳಗಾವಿ, ಜ.18: ನಾವು ಹಿಂದೂಗಳು ಎಂದು ಮರೆತು ಹೋಗಿತ್ತು. ಈಗಲೂ ಸಾಕಷ್ಟು ಜನ ತಕ್ಷಣ ಕೇಳಿದ್ರೇ ಅವರ ಜಾತಿ ಹೆಸರು ಹೇಳ್ತಾರೆ. ಹಿಂದೂ ಅಂತಾ ನೆನಪು ಮಾಡಿಕೊಂಡು ಹೇಳ್ತಾರೆ. ಸಂಸ್ಕಾರ ಇದ್ರೇ ಹಿಂದೂ ಅಂತಾ ಹೇಳ್ತಾರೆ. ಇನ್ನು ಅಪ್ಪ ಅಮ್ಮ ಗೊತ್ತಿಲ್ಲದವರು ಜಾತ್ಯತೀತ ಅಂತಾ ಹೇಳ್ತಾರೆ ಎಂದು ಪರೋಕ್ಷವಾಗಿ ಸಿದ್ದರಾಮಯ್ಯ (Siddaramaiah) ವಿರುದ್ದ ಮತ್ತೊಮ್ಮೆ ಅನಂತ್ ಕುಮಾರ್ ಹೆಗಡೆ (Ananth Kumar Hegde) ವಾಗ್ದಾಳಿ ನಡೆಸಿದ್ದಾರೆ. ಖಾನಾಪುರ ಪಟ್ಟಣದಲ್ಲಿ ಮಾತನಾಡಿದ ಸಂಸದ ಅನಂತಕುಮಾರ್ ಹೆಗಡೆ ಮತ್ತೆ ಸಿಎಂ ಸಿದ್ದರಾಮಯ್ಯ ವಿರುದ್ಧ ಪರೋಕ್ಷವಾಗಿ ಕಿಡಿಕಾರಿದ್ದಾರೆ.

ಈಗಾಗಲೇ ರಾಮ ಮಂದಿರ ಉದ್ಘಾಟನೆ ಅಕ್ಷತೆ ಮನೆ ಮನೆಗೆ ಹೋಗಿದೆ. ಐನೂರು ವರ್ಷದ ನಂತರ ನಮಗೆ ಜಯ ಸಿಕ್ಕಿದೆ. ರಾಮ ಮಂದಿರವನ್ನು ಯಾರೋ ಉದ್ಯಮಿ, ಕೈಗಾರಿಕೋದ್ಯಮಿಗಳು ಕಟ್ಟಿಲ್ಲ. ಹಳ್ಳಿ ಹಳ್ಳಿಯಿಂದ ಇಟ್ಟಿಗೆ ಕಳಿಸಿದ್ದೇವೆ, ಇಡೀ ದೇಶದ ಜನ ಜಾಗೃತರಾಗಿ ಕಟ್ಟಿದ್ದು. ಅಯೋಧ್ಯ ಹಿಂದೂಗಳ ಪ್ರತೀಕ, ಸೌರಾಷ್ಟ್ರದ ಸೋಮನಾಥ ದೇವಾಲಯ ಸರ್ಕಾರ ಕಟ್ಟಿದ್ದು. ರಾಮ ಮಂದಿರ ಸರ್ಕಾರ ಕಟ್ಟಿಲ್ಲ, ಹಿಂದೂಗಳು ಕಟ್ಟಿದ್ದಾರೆ. ಅಪಮಾನವನ್ನ ತೊಳೆದು ರಾಮ ಮಂದಿರ ಕಟ್ಟಲಾಗಿದೆ. ನಾವು ಹಿಂದೂಗಳು ಎಂದು ಮರೆತು ಹೋಗಿತ್ತು. ಈಗಲೂ ಸಾಕಷ್ಟು ಜನ ತಕ್ಷಣ ಕೇಳಿದ್ರೇ ಅವರ ಜಾತಿ ಹೆಸರು ಹೇಳ್ತಾರೆ. ಹಿಂದೂ ಅಂತಾ ನೆನಪು ಮಾಡಿಕೊಂಡು ಹೇಳ್ತಾರೆ. ಸಂಸ್ಕಾರ ಇದ್ರೇ ಹಿಂದೂ ಅಂತಾ ಹೇಳ್ತಾರೆ. ಕೆಲವು ಮಂದಿ ಜಾತ್ಯತೀತ ಅಂತಾ ಹೇಳ್ತಾರೆ. ಅಪ್ಪ ಅಮ್ಮ ಗೊತ್ತಿಲ್ಲದವರು ಜಾತ್ಯಾತೀತ ಅಂತಾ ಹೇಳ್ತಾರೆ ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ವಿರುದ್ದ ಮತ್ತೊಮ್ಮೆ ಅನಂತ್ ಕುಮಾರ್ ಹೆಗಡೆ ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ: Fact Check: ಇಂದಿರಾ ಗಾಂಧಿ ಕುಟುಂಬಕ್ಕೆ ಗೋಪಾಷ್ಟಮಿ ಶಾಪ?; ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ ಹೇಳಿಕೆಯ ಅಸಲಿಯತ್ತೇನು?

ಜಾತಿ ಹೆಸರಲ್ಲಿ, ಭಾಷೆ ಹೆಸರಲ್ಲಿ ನಮ್ಮನ್ನ ಒಡೆದ್ರು. ಮರಾಠಿ, ಕನ್ನಡ ಒಂದಾಗ್ತಾರೆ ಅಂದ್ರೇ ಕತ್ತಿ ತಗೊಂಡು ಬರ್ತಾರೆ. ಈ ರೀತಿ ಒಡೆದು ಇಟ್ರೇ ಅವರ ರಾಜಕಾರಣ ನಡೆಯುವುದು. ಸ್ವಾತಂತ್ರ್ಯದ ನಂತರ ಮರಾಠಿ-ಕನ್ನಡ ಜಗಳ ಶುರುವಾಯಿತು. ಸ್ವಾತಂತ್ರ್ಯ ನಂತರ ಎಲ್ಲದರಲ್ಲೂ ನಮ್ಮನ್ನ ಒಡೆದ್ರು. ಇದನ್ನ ಹೊರತಾಗಿ ಒಟ್ಟಾಗಿ ಒಂದಾಗಿ ಹಿಂದೂ ಹೆಸರಲ್ಲಿ ಎದ್ದು ನಿಂತೆವು. ರಣ ಭೈರವ ರೀತಿಯಲ್ಲಿ ನಾವು ಈಗ ಏಳುತ್ತಿದ್ದೇವೆ. ನಾವು ಏಳ್ತಾಯಿದೀವಿ ಅಂದ ತಕ್ಷಣ ಇಡೀ ಜಗತ್ತು ಅಲ್ಲಾಡಿದೆ ಎದ್ರೇ ಹೇಗಿರಬಹುದು. ಐನೂರು ವರ್ಷದ ಪಾಪವನ್ನ ಇಂದು ತೊಳೆದುಕೊಂಡು ರಾಮ ಮಂದಿರ ಕಟ್ಟುತ್ತಿದ್ದೇವೆ‌. ಇನ್ನೂ ಕಾಶಿ ಇದೆ, ಮಥುರಾ ಇದೆ ಹಳ್ಳಿ ಹಳ್ಳಿಗಳಲ್ಲಿ ಅಪಮಾನ ಆದ ತುಂಬಾ ದೇವಸ್ಥಾನ ಇವೆ. ಹಳ್ಳಿ ಹಳ್ಳಿಯಲ್ಲಿ ಆಗಿರುವ ಅಪಮಾನ ಸೇಡು ತೀರಿಸಿಕೊಳ್ಳಬೇಕು ಎಂದರು.

ಸಂಸದ ಅನಂತಕುಮಾರ್​ ಹೆಗಡೆಗೆ ಬಿಜೆಪಿ ಕಾರ್ಯಕರ್ತರ ಕ್ಲಾಸ್​

ಇನ್ನು ಬೆಳಗಾವಿ ಜಿಲ್ಲೆಯ ಖಾನಾಪುರದಲ್ಲಿ ನಡೆದ ಸಭೆಯಲ್ಲಿ ಅನಂತಕುಮಾರ್​ ಹೆಗಡೆಗೆ ಬಿಜೆಪಿ ಕಾರ್ಯಕರ್ತರ ಕ್ಲಾಸ್​ ತೆಗೆದುಕೊಂಡಿದ್ದಾರೆ. ಕಳೆದ ಹಲವು ವರ್ಷಗಳಿಂದ ಕಾರ್ಯಕರ್ತರ ಕೈಗೆ ನೀವು ಸಿಕ್ಕಿಲ್ಲ. ನಿಮ್ಮ ಪಿಎಗಳು ಕೂಡ ಸರಿಯಾಗಿ ಸ್ಪಂದಿಸಿಲ್ಲ, ಹೇಗೆ ಮಾಡಬೇಕು. ನಮ್ಮ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳು ಕೂಡ ಕುಂಠಿತಗೊಂಡಿವೆ. ಖಾನಾಪುರದಲ್ಲಿ ಸಂಸದರ ಕಾರ್ಯಾಲಯ ಓಪನ್​ ಮಾಡಿ ಎಂದು ಒತ್ತಾಯ ಮಾಡಿದ್ದಾರೆ. ಖಾನಾಪುರ ಜನ ಬೆಳಗಾವಿಗೆ ಹೋದ್ರೆ ಕಾರವಾರಕ್ಕೆ ಹೋಗಿ ಅಂತಾರೆ. ಕಾರವಾರಕ್ಕೆ ಹೋದ್ರೆ ನೀವು ಬೆಳಗಾವಿ ಜಿಲ್ಲೆಯವರು ಅಂತಾರೆ. ಖಾನಾಪುರ ತಾಲೂಕಿನ ಜನ ನಡುವಿನಲ್ಲಿ ಸಿಕ್ಕಿ ಒದ್ದಾಡುತ್ತಿದ್ದಾರೆ. ಕಾರ್ಯಕರ್ತರಿಗೆ ನಿಮ್ಮ ಕಡೆಯಿಂದ ಉತ್ತಮ ಸ್ಪಂದನೆ ಸಿಗುತ್ತಿಲ್ಲ. ಅನಂತಕುಮಾರ್ ಹೆಗಡೆ ಎಲ್ಲಿದ್ದಾರೆ ಅಂತಾ ಜನ ಪ್ರಶ್ನೆ ಮಾಡ್ತಿದ್ದಾರೆ. 200 ಕಿ.ಮೀ ದೂರದಿಂದ ನಿಮ್ಮನ್ನು ಭೇಟಿಯಾಗಲು ಬಂದ್ರೂ ಸಿಗಲ್ಲ ಎಂದು ಸಂಸದ ಅನಂತಕುಮಾರ್ ಹೆಗಡೆಗೆ ಬಿಜೆಪಿ ಕಾರ್ಯಕರ್ತರು ಕ್ಲಾಸ್​ ತೆಗೆದುಕೊಂಡರು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 8:27 am, Thu, 18 January 24