Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೋಟಿಸ್​ ಕೊಟ್ಟು ಹೊರ ಹಾಕುತ್ತೇನೆ ಅಂದವರೇ, ಮೊನ್ನೆ ಬಂದು ನಮಸ್ಕಾರ ಮಾಡಿದರು: ಶಾಸಕ ಯತ್ನಾಳ

ನನಗೆ ನೋಟಿಸ್ ಕೊಟ್ಟು ಹೊರ ಹಾಕುತ್ತೇನೆ ಅಂದವರು ಮೊನ್ನೆ ಬಂದು ನಮಸ್ಕಾರ ಯತ್ನಾಳ ಜೀ ಅಂದರು.

ನೋಟಿಸ್​ ಕೊಟ್ಟು ಹೊರ ಹಾಕುತ್ತೇನೆ ಅಂದವರೇ, ಮೊನ್ನೆ ಬಂದು ನಮಸ್ಕಾರ ಮಾಡಿದರು: ಶಾಸಕ ಯತ್ನಾಳ
ಶಾಸಕ ಬಸನಗೌಡ ಪಾಟೀಲ್ ಯತ್ನಾಳ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on:Nov 13, 2022 | 9:00 PM

ಬೆಳಗಾವಿ: ನನಗೆ ನೋಟಿಸ್ ಕೊಟ್ಟು ಹೊರ ಹಾಕುತ್ತೇನೆ ಅಂದವರು ಮೊನ್ನೆ ಬಂದು ನಮಸ್ಕಾರ ಯತ್ನಾಳ ಜೀ ಅಂದರು. ನೀವು ಕರ್ನಾಟಕದ ಅತೀ ದೊಡ್ಡ ಲೀಡರ್. ನಮ್ಮ ಪಕ್ಷದ ಸಂಪತ್ತು ಅಂದರು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ (Basanagouda Patil Yatnal) ಹೇಳಿದರು. ಜಿಲ್ಲೆಯ ಗೋಕಾಕ್‌ ಪಟ್ಟಣದಲ್ಲಿ ಆಯೋಜಿಸಿದ್ದ 2ಎ ಮೀಸಲಾತಿಗೆ ಆಗ್ರಹಿಸಿ ಪಂಚಮಸಾಲಿ ಬೃಹತ್ ಸಮಾವೇಶದಲ್ಲಿ ಅವರು ಮಾತನಾಡಿದರು. ನಮ್ಮ ಜೀವನ ಇರೋದೆ ಹಿಂದುತ್ವ. ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ಛತ್ರಪತಿ ಶಿವಾಜಿ ಬಗ್ಗೆ ಹಗುರವಾಗಿ ಮಾತಾಡಿದರೆ, ಇದು ನಿಮ್ಮ ಕೊನೆಯ ದಿನಗಳು ಅಂತಾ ತಿಳಿದುಕೊಂಡು ಬಿಡಿ ಎಂದು ಎಚ್ಚರಿಕೆ ನೀಡಿದರು. ಪಾಪ ಈರಣ್ಣ ಕಡಾಡಿ ಸಂಬಾಯತ ವ್ಯಕ್ತಿ. ಯಾರ ಗಾಡಿಗೆ ಗುದ್ದುತ್ತೀರಿ ಇನ್ನು ಮುಂದೆ ಗುದ್ದಿ. ನಮಗೂ ಗುದ್ದುವ ಶಕ್ತಿ ಇದೆ ಎಂದು ಯತ್ನಾಳ ಟಾಂಗ್​ ನೀಡಿದರು.

ಭಾಷಣದುದ್ದಕ್ಕೂ ಸತೀಶ್ ಜಾರಕಿಹೊಳಿ ವಿರುದ್ಧ ತೀವ್ರ ವಾಗ್ದಾಳಿ ಮಾಡಿದ ಯತ್ನಾಳ 

ಡಾ. ಅಂಬೇಡ್ಕರ್ ಅವರು ಈ ದೇಶದ ಸಂವಿಧಾನವನ್ನು ಬರೆದರು. ಅವರು ಅನುಭವಿಸಿರುವಷ್ಟು ಕಷ್ಟ ಜಗತ್ತಿನ ಯಾವುದೇ ನಾಯಕ ಅನುಭವಿಸಿಲ್ಲ. ಡಾ. ಅಂಬೇಡ್ಕರ್‌ ಯಾವತ್ತೂ ಹಿಂದೂ ಧರ್ಮದ ವಿರುದ್ಧ ಮಾತಾಡಲಿಲ್ಲ. ದೇಶದಲ್ಲಿ ಬುದ್ಧ, ಬಸವ, ಅಂಬೇಡ್ಕರ್ ಅಂತಾ ಮಾಡಿದ್ದೇ ನಾವು. ನೀನು ಕೇವಲ ಫೋಟೋ ಹಾಕೊಂಡ್ರೆ ಮುಗಿತಾ ಎಂದು ಸತೀಶ್ ಜಾರಕಿಹೊಳಿ ಹೆಸರು ಪ್ರಸ್ತಾಪಿಸದೆ ಯತ್ನಾಳ್ ವಾಗ್ದಾಳಿ ಮಾಡಿದರು. 1956ರಲ್ಲಿ ಅಂಬೇಡ್ಕರ್​ರು ಬೌದ್ಧ ಧರ್ಮ ಸ್ವೀಕಾರ ಮಾಡಿದ್ದರು. 20 ಸಾವಿರ ಜನರನ್ನು ಕರೆದುಕೊಂಡು ಬೌದ್ಧ ಧರ್ಮ ಸ್ವೀಕರಿಸಿದ್ರು. ಅವರು ತಪ್ಪಿ ಸಹ ಇಸ್ಲಾಂ, ಮುಸ್ಲಿಂ, ಸಿಖ್ ಧರ್ಮಕ್ಕೆ ಹೋಗಲಿಲ್ಲ ಎಂದರು.

ಅಂಬೇಡ್ಕರ್ ಪುಸ್ತಕ ಓದಿದ್ದೇನೆ, ವಿಧಾನಸಭೆಯಲ್ಲೂ ಮಾತಾಡಿದ್ದೇನೆ. ತಾಕತ್ ಇದ್ದರೆ ನೀನು ವಿಧಾನಸಭೆಯಲ್ಲಿ ಮಾತನಾಡಬೇಕಾಗಿತ್ತು ಎಂದು ಪ್ರಶ್ನಿಸಿದರು. ಅಂಬೇಡ್ಕರ್​​ ಅವರು ಪಾಕಿಸ್ತಾನ ಒಡೆದು ಕೊಡಬೇಡಿ ಅಂತಾ ಜವಾಹರಲಾಲ್ ನೆಹರೂಗೆ ಹೇಳಿದ್ದರು. ಮೊಘಲರು ಬಂದರೂ ನಮ್ಮ ಹಿಂದೂ ಧರ್ಮಕ್ಕೆ ಏನೂ ಆಗಿಲ್ಲ. ಇನ್ನೂ ನೀನು ಏನ್ ಮಾಡುತ್ತೀಯಾ ಎಂದು ಸತೀಶ್ ವಿರುದ್ಧ ಹರಿಹಾಯ್ದರು. ನಿನಗೆ ತಾಕತ್ ಇದ್ದರೆ ನನ್ನ ಜೊತೆ ನೇರವಾಗಿ ಯುದ್ಧಕ್ಕೆ ಬಾ. ಅಧಿಕಾರದಲ್ಲಿದ್ದ ಸಿಎಂ ಕೂಡ ಏನೂ ಮಾಡುವುದಕ್ಕೆ ಆಗಿಲ್ಲ. ಮುಗ್ಧ ಜನರನ್ನು ಇಟ್ಟುಕೊಂಡು ನೀನು ಏನ್ ಮಾಡುತ್ತೀಯಾ ಎಂದು ಭಾಷಣದುದ್ದಕ್ಕೂ ಸತೀಶ್ ಜಾರಕಿಹೊಳಿ ವಿರುದ್ಧ ತೀವ್ರ ವಾಗ್ದಾಳಿ ಮಾಡಿದರು.

ಗೋಕಾಕ್​ಗೆ ಒಬ್ಬನೇ ಬರುತ್ತೇನೆ: ಸತೀಶ್ ಬೆಂಬಲಿಗರಿಗೆ ಯತ್ನಾಳ್ ಟಾಂಗ್

ಈಗ ಕೇವಲ ಕ್ಷಮೆಯಾಚನೆ ಅಷ್ಟೇ ಮಾಡಿದ್ದೀರಿ. ಇನ್ಮುಂದೆ ಹಿಂದೂ ಧರ್ಮದ ವಿರುದ್ಧ ಹಾರಾಡಿದರೆ ಅಷ್ಟೇ. ಪೊಲೀಸರನ್ನು ಬಿಟ್ಟು ಗೋಕಾಕ್​ಗೆ ನಾನು ಒಬ್ಬನೇ ಬರುತ್ತೇನೆ. ಯಾವ ಚೌಕ್​ನಲ್ಲಿ ಬೇಕಾದರೂ ಬಂದು ನಿಲುತ್ತೇನೆ. ಕಲ್ಲು ಒಗೆಯುತ್ತೀರಾ, ಮೊಟ್ಟೆ ಒಗೆಯುತ್ತೀರಾ ನೋಡೋಣ‌ ಎಂದು ಸತೀಶ್ ಬಗ್ಗೆ ಮಾತಾಡಿದ್ರೆ ವೇದಿಕೆಗೆ ನುಗ್ಗಿ ಹೊಡೆಯುತ್ತೇವೆ ಎಂದಿದ್ದ ಸತೀಶ್ ಬೆಂಬಲಿಗರಿಗೆ ಶಾಸಕ ಯತ್ನಾಳ್ ಟಾಂಗ್ ನೀಡಿದರು. ವಾಲ್ಮೀಕಿ ಸಮುದಾಯ, ಪರಿಶಿಷ್ಟ ಸಮಾಜಕ್ಕೆ ಮೀಸಲಾತಿ ಬೇಕು ಅಂತಾ ವಿಧಾನಸಭೆಯಲ್ಲಿ ಕೇಳಿದೆ. ನಾನು ಕೇವಲ ಪಂಚಮಸಾಲಿ ಸಮಾಜದ ಬಗ್ಗೆ ಮಾತನಾಡಿಲ್ಲ. ಸಮಾಜದ ಎಲ್ಲ ಜನರ ವಿಚಾರ ಬಗ್ಗೆ ಮಾತನಾಡಿದೀನಿ. ನೀ ಎಂದು ಮಾತನಾಡಿದೀಯಪ್ಪ ಎಂದು ಪರೋಕ್ಷವಾಗಿ ಸತೀಶ್ ಜಾರಕಿಹೊಳಿಯನ್ನು ಪ್ರಶ್ನಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:58 pm, Sun, 13 November 22