ಐತಿಹಾಸಿಕ ಕಿತ್ತೂರು ಉತ್ಸವಕ್ಕೆ ಸಿಎಂ ಪದೇ ಪದೇ ಗೈರು, ಮೌಡ್ಯಕ್ಕೆ ಹೆದರಿದ್ರಾ ಸಿದ್ದರಾಮಯ್ಯ?
Kittur Utsav 2023: ಇಂದಿನಿಂದ ಬೆಳಗಾವಿಯ ಕೋಟೆ ಆವರಣದಲ್ಲಿ ಮೂರು ದಿನಗಳ ಕಾಲ ಕಿತ್ತೂರು ಉತ್ಸವ ನಡೆಯಲಿದೆ. ಆದ್ರೆ, ಕಿತ್ತೂರು ಉತ್ಸವಕ್ಕೆ ಸಿಎಂ ಸಿದ್ದರಾಮಯ್ಯ ಗೈರು ಎದ್ದು ಕಾಣುತ್ತಿದೆ. ಕಳೆದ ಅವಧಿಕಯಲ್ಲೂ ಸಿದ್ದರಾಮಯ್ಯ ಕಿತ್ತೂರು ಉತ್ಸವದಲ್ಲಿ ಪಾಲ್ಗೊಂಡಿರಲಿಲ್ಲ. ಈ ಬಾರಿಯೂ ಸಹ ಉತ್ಸವದಿಂದ ದೂರ ಉಳಿದಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ಮೌಡ್ಯಕ್ಕೆ ಹೆದರಿದ್ರಾ? ಹಲವು ಬಾರಿ ಚಾಮರಾಜನಗರಕ್ಕೆ ಭೇಟಿ ನೀಡಿ ಮೌಡ್ಯಕ್ಕೆ ಸೆಡ್ಡು ಹೊಡೆದಿರುವ ಸಿದ್ದರಾಮಯ್ಯ ಕಿತ್ತೂರು ಉತ್ಸವಕ್ಕೆ ಮಾತ್ರ ಗೈರಾಗುತ್ತಿರುವುದು ಹಲವು ಚರ್ಚೆಗೆ ಗ್ರಾಸವಾಗಿದೆ.
ಬೆಳಗಾವಿ (ಅಕ್ಟೋಬರ್ 23): ಬೆಳಗಾವಿಯ (Belagavi) ಕೋಟೆ ಆವರಣದಲ್ಲಿ ಇಂದಿನಿಂದ (ಅ. 23) ಮೂರು ದಿನಗಳ ಕಾಲ ಐತಿಹಾಸಿಕ ಕಿತ್ತೂರು ಉತ್ಸವ (Kittur Utsav) ನಡೆಯಲಿದೆ. ಈಗಾಗಲೇ ಸಕಲ ಸಿದ್ಧತೆಗಳು ಪೂರ್ಣಗೊಂಡಿದ್ದು, ಉತ್ಸವಕ್ಕೆ ಇಂದು (ಸೋಮವಾರ) ಸಂಜೆ 7 ಗಂಟೆಗೆ ಅದ್ಧೂರಿಯಾಗಿ ಚಾಲನೆ ದೊರೆಯಲಿದೆ. ಆದ್ರೆ, ಈ ಬಾರಿಯೂ ಸಹ ಕಿತ್ತೂರು ಉತ್ಸವಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಗೈರಾಗಲಿದ್ದಾರೆ. ಈಗಾಗಲೇ ಸಿದ್ದರಾಮಯ್ಯ ಅವರು ದಸರಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳಲು ಮೈಸೂರು ಪ್ರವಾಸ ಕೈಗೊಂಡಿದ್ದಾರೆ. ಹೀಗಾಗಿ ಇಂದಿನ ಕಿತ್ತೂರು ಉತ್ಸವಕ್ಕೆ ಗೈರಾಗಲಿದ್ದಾರೆ. ಇನ್ನು ಅಧಿಕಾರ ಹೋಗುತ್ತೆ ಎಂಬ ಭಯದಿಂದ ಸಿದ್ದರಾಮಯ್ಯನವರು ಉತ್ಸವಕ್ಕೆ ಬರುತ್ತಿಲ್ವಾ ಎನ್ನುವ ಚರ್ಚೆ ಶುರುವಾಗಿದೆ.
ಹೌದು… ಹಿಂದೆ ಮುಖ್ಯಮಂತ್ರಿ ಇದ್ದಾಗಲೂ ಸಹ ಐದೂ ವರ್ಷ ಉತ್ಸವದಲ್ಲಿ ಸಿದ್ದರಾಮಯ್ಯ ಪಾಲ್ಗೊಳ್ಳದೇ ಗೈರಾಗಿದ್ದರು. ಈ ಸಲ ರಾಜ್ಯಮಟ್ಟದ ಉತ್ಸವವಾಗುತ್ತಿದ್ದರೂ ಸಹ ಪಾಲ್ಗೊಳ್ಳುತ್ತಿಲ್ಲ. ಇದನ್ನು ಗಮನಿಸಿದರೆ ಅಧಿಕಾರ ಹೋಗುತ್ತೆ ಎಂಬ ಭಯಕ್ಕೆ ಕಿತ್ತೂರು ಉತ್ಸವಕ್ಕೆ ಸಿಎಂ ಸಿದ್ದರಾಮಯ್ಯ ಬರುತ್ತಿಲ್ಲ ಎನ್ನುವ ಪ್ರಶ್ನಿಗಳು ಉದ್ಭವಿಸಿವೆ.
ಈವರೆಗೆ ಮೂವರು ಸಿಎಂ ಮಾತ್ರ ಉತ್ಸವದಲ್ಲಿ ಭಾಗಿ
ಈ ವರೆಗೆ ಕೇವಲ ಕರ್ನಾಟಕದ ಮೂವರು ಮುಖ್ಯಮಂತ್ರಿಗಳು ಮಾತ್ರ ಈ ಕಿತ್ತೂರು ಉತ್ಸವದಲ್ಲಿ ಭಾಗಿಯಾಗಿದ್ದಾರೆ. ಬಂಗಾರಪ್ಪ, ಜಗದೀಶ್ ಶೆಟ್ಟರ್ ಮತ್ತು ಬಸವರಾಜ ಬೊಮ್ಮಾಯಿ ಮಾತ್ರ ಉತ್ಸವದಲ್ಲಿ ಪಾಲ್ಗೊಂಡಿದ್ದರು. ಆದ್ರೆ, ಕಾಕತಾಳೀಯ ಎಂಬಂತೆ ಕಿತ್ತೂರು ಉತ್ಸವದಲ್ಲಿ ಪಾಲ್ಗೊಂಡ ಈ ಮೂವರು ಮತ್ತೊಮ್ಮೆ ಮುಖ್ಯಮಂತ್ರಿ ಆಗಿಲ್ಲ. ಹೀಗಾಗಿ ಕಿತ್ತೂರು ಉತ್ಸವಕ್ಕೆ ಹೋದರೆ ಮತ್ತೆ ಮುಖ್ಯಮಂತ್ರಿಯಾಗಲ್ಲ ಎನ್ನುವ ಮೌಢ್ಯ ಪ್ರಚಲಿತದಲ್ಲಿದೆ ಈ ಕಾರಣಕ್ಕೆ ಹಿಂದೆ ಸಿಎಂ ಆಗಿದ್ದಾಗಲೂ ಐದೂ ವರ್ಷ ಉತ್ಸವಕ್ಕೆ ಗೈರಾಗಿದ್ದ ಸಿದ್ದರಾಮಯ್ಯ. ಈ ಸಲವೂ ಸಹ ಮೌಡ್ಯಕ್ಕೆ ಹೆದರಿ ಉತ್ಸವದಲ್ಲಿ ಪಾಲ್ಗೊಳ್ಳುತ್ತಿಲ್ವಾ? ಎನ್ನುವ ಚರ್ಚೆ ಸಾರ್ವಜನಿಕ ವಲಯದಲ್ಲಿ ನಡೆದಿವೆ. ಇನ್ನೊಂದೆಡೆ ಇಂತಹ ಮೌ ಡ್ಯಕ್ಕೆ ಸಿದ್ದರಾಮಯ್ಯ ಕೇರ್ ಮಾಡುವುದಿಲ್ಲ.
ಚಾಮರಾಜನಗರಕ್ಕೆ ಮುಖ್ಯಮಂತ್ರಿಗಳು ಭೇಟಿ ನೀಡಿದ ಆರು ತಿಂಗಳ ಒಳಗೆ ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ ಮೂಢನಂಬಿಕೆ ಇದೆ. ಆದ್ರೆ, ಸಿಎಂ ಸಿದ್ದರಾಮಯ್ಯ ಹಲವು ಬಾರಿ ಚಾಮರಾಜನಗರಕ್ಕೆ ಭೇಟಿ ನೀಡಿ ಮೌಡ್ಯಕ್ಕೆ ಸೆಡ್ಡು ಹೊಡೆದಿದ್ದಾರೆ. ಆದ್ರೆ, ಕಿತ್ತೂರು ಉತ್ಸವಕ್ಕೆ ಪದೇ ಪದೇ ಗೈರಾಗುತ್ತಿರುವುದು ಹಲವು ಚರ್ಚೆಗೆ ಗ್ರಾಸವಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ