ಸತೀಶ್ ಜಾರಕಿಹೋಳಿ ತೇಜೋವಧೆ ಖಂಡಿಸಿ ನ.10 ರಂದು ವಿವಿಧ ಸಂಘಟನೆಗಳಿಂದ ಪ್ರತಿಭಟನೆ

ಸತೀಶ್ ಜಾರಕಿಹೊಳಿ ತೇಜೋವಧೆ ಖಂಡಿಸಿ ನಾಳೆ (ನ.10) ವಿವಿಧ ಸಂಘಟನೆಗಳು ನಿಪ್ಪಾಣಿಯಲ್ಲಿ ಬೃಹತ್​ ಪ್ರತಿಭಟನೆ ಮಾಡಲು ಮುಂದಾಗಿವೆ.

ಸತೀಶ್ ಜಾರಕಿಹೋಳಿ ತೇಜೋವಧೆ ಖಂಡಿಸಿ ನ.10 ರಂದು ವಿವಿಧ ಸಂಘಟನೆಗಳಿಂದ ಪ್ರತಿಭಟನೆ
ಕಾಂಗ್ರೆಸ್ ನಾಯಕ ಸತೀಶ್ ಜಾರಕಿಹೊಳಿ
Follow us
TV9 Web
| Updated By: ವಿವೇಕ ಬಿರಾದಾರ

Updated on:Nov 09, 2022 | 11:08 PM

ಬೆಳಗಾವಿ: ಹಿಂದೂ (Hindu) ಪದದ ಬಗ್ಗೆ ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್​ ಜಾರಕಿಹೋಳಿ (Satish Jarakiholi) ಅವಹೇಳನಕಾರಿ ಹೇಳಿಕೆ ನೀಡಿದ್ದರು. ಇದನ್ನು ಖಂಡಿಸಿ ಇಂದು (ನ.9) ಬಿಜೆಪಿ (BJP) ರಾಜ್ಯವ್ಯಾಪಿ ಪ್ರತಿಭಟನೆ ನಡೆಸಿ, ದೂರು ದಾಖಲಿಸಿತ್ತು. ನಂತರ ಸತೀಶ್ ಜಾರಕಿಹೋಳಿ ವಿಷಾದ ವ್ಯಕ್ತಪಡಿಸಿದ್ದರು. ಈಗ ಸತೀಶ್ ಜಾರಕಿಹೊಳಿ ತೇಜೋವಧೆ ಖಂಡಿಸಿ ನಾಳೆ (ನ.10) ವಿವಿಧ ಸಂಘಟನೆಗಳು ಬೃಹತ್​ ಪ್ರತಿಭಟನೆ ಮಾಡಲು ಮುಂದಾಗಿವೆ. ಮಾನವ ಬಂಧುತ್ವ ವೇದಿಕೆ ಮತ್ತು ದಲಿತ, ಪ್ರಗತಿಪರ ಸಂಘಟನೆಗಳ ಒಕ್ಕೂಟ, ಪ್ರಗತಿಪರ ಸ್ವಾಮೀಜಿಗಳು ಪ್ರತಿಭಟನೆ ಮಾಡಲು ಮುಂದಾಗಿದ್ದಾರೆ.

ಸತೀಶ್​ ಜಾರಕಿಹೋಳಿ ನ. 6ರಂದು ನಿಪ್ಪಾಣಿಯಲ್ಲೇ ಹಿಂದೂ ಶಬ್ದದ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದರು. ನಿನ್ನೆಯಷ್ಟೇ ಹೇಳಿಕೆ ಖಂಡಿಸಿ ನಿಪ್ಪಾಣಿಯಲ್ಲಿ ಸಚಿವೆ ಶಶಿಕಲಾ ಜೊಲ್ಲೆ ನೇತೃತ್ವದಲ್ಲಿ ಪ್ರತಿಭಟನೆ ನಡೆದಿತ್ತು. ಈ ಸಂಬಂಧ ನಾಳೆ ಸತೀಶ್ ಜಾರಕಿಹೊಳಿ ಬೆಂಬಲಿಸಿ ನಿಪ್ಪಾಣಿಯಲ್ಲಿ ಪ್ರತಿಭಟನೆ ಮಾಡಲು ವಿವಿಧ ಸಂಘಟನೆಗಳು ಮುಂದಾಗಿವೆ.

Published On - 11:07 pm, Wed, 9 November 22