ಮಹಿಳೆಯರಿಗೆ ಅಶ್ಲೀಲ ಮೆಸೇಜ್ ಕಳಿಸಿದಾತನ ತಲೆ ಬೋಳಿಸಿದ ಗ್ರಾಮಸ್ಥರು; ವ್ಯಕ್ತಿ ಪರಾರಿ, ವಿಡಿಯೋ ವೈರಲ್
ಗ್ರಾಮಸ್ಥರಿಂದ ಶಿಕ್ಷೆಗೆ ಒಳಗಾದ ಸುಧಾಕರ್ ಡುಮ್ಮಗೋಳ ಸದ್ಯ ಊರು ಬಿಟ್ಟು ತಲೆಮರೆಸಿಕೊಂಡಿರುವುದಾಗಿ ತಿಳಿದುಬಂದಿದೆ. ಆದರೆ, ತಲೆ ಬೋಳಿಸುವ ಸಂದರ್ಭದ ವಿಡಿಯೋವನ್ನು ಗ್ರಾಮಸ್ಥರು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದು, ಅದು ಸಂಪೂರ್ಣ ವೈರಲ್ ಆಗಿದೆ.
ಬೆಳಗಾವಿ: ಮಹಿಳೆಯರಿಗೆ ವಾಟ್ಸ್ಯಾಪ್ ಮೂಲಕ ಅಶ್ಲೀಲ ಮೆಸೇಜ್ ಕಳುಹಿಸುತ್ತಿದ್ದ ಯುವಕನಿಗೆ ಗ್ರಾಮಸ್ಥರೇ ಸೇರಿ ತಲೆ ಬೋಳಿಸಿದ ಘಟನೆ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಮಹೇಶವಾಡಗಿ ಗ್ರಾಮದಲ್ಲಿ ನಡೆದಿದೆ. ಸುಧಾಕರ್ ಡುಮ್ಮಗೋಳ ಎಂಬಾತ ತನ್ನ ಮೊಬೈಲ್ನಿಂದ ವಾಟ್ಸ್ಯಾಪ್ ಮೂಲಕ ಮಹಿಳೆಯರಿಗೆ ಅಶ್ಲೀಲ ಮೆಸೇಜ್ ಕಳುಹಿಸುತ್ತಿದ್ದ ಆರೋಪ ಎದುರಿಸುತ್ತಿದ್ದು, ಮಾಡಿದ ತಪ್ಪಿಗೆ ತಕ್ಕ ಶಿಕ್ಷೆ ಆಗಲೇಬೇಕೆಂದು ನಿರ್ಧರಿಸಿದ ಗ್ರಾಮಸ್ಥರು ಆತನನ್ನು ಹಿಡಿದು ಕೂರಿಸಿ ತಲೆ ಬೋಳಿಸಿದ್ದಾರೆ. ನಂತರದಲ್ಲಿ ಅವಮಾನ ತಾಳಲಾರದೇ ಯುವಕ ಊರನ್ನೇ ತೊರೆದಿದ್ದಾನೆ ಎಂದು ತಿಳಿದುಬಂದಿದೆ.
ಈತ ಹಿಂದೆಯೂ ಅನೇಕ ಬಾರಿ ಮಹಿಳೆಯರಿಗೆ ಅಶ್ಲೀಲ ಮೆಸೇಜ್ ಕಳುಹಿಸುತ್ತಿದ್ದ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಎಷ್ಟೇ ಬಾರಿ ಎಚ್ಚರಿಕೆ ನೀಡಿದರೂ ತಪ್ಪನ್ನು ತಿದ್ದಿಕೊಳ್ಳದೇ ಮತ್ತೆ ಅದೇ ಚಾಳಿ ಮುಂದುವರೆಸಿದ ಕಾರಣಕ್ಕಾಗಿ ಕುಪಿತರಾದ ಜನರು ತಲೆ ಬೋಳಿಸಿ ಶಿಕ್ಷೆ ನೀಡಿದ್ದಾರೆ. ಗ್ರಾಮದ ಹಲವು ಮಂದಿಯ ಸಮ್ಮುಖದಲ್ಲೇ ತಲೆ ಬೋಳಿಸಲಾಗಿದ್ದು, ಆ ಸಂದರ್ಭದಲ್ಲಿ ಕೆಲವರು ಮೊಬೈಲ್ ಮುಲಕ ಚಿತ್ರೀಕರಣವನ್ನೂ ಮಾಡಿದ್ದಾರೆ.
ಗ್ರಾಮಸ್ಥರಿಂದ ಶಿಕ್ಷೆಗೆ ಒಳಗಾದ ಸುಧಾಕರ್ ಡುಮ್ಮಗೋಳ ಸದ್ಯ ಊರು ಬಿಟ್ಟು ತಲೆಮರೆಸಿಕೊಂಡಿರುವುದಾಗಿ ತಿಳಿದುಬಂದಿದೆ. ಆದರೆ, ತಲೆ ಬೋಳಿಸುವ ಸಂದರ್ಭದ ವಿಡಿಯೋವನ್ನು ಗ್ರಾಮಸ್ಥರು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದು, ಅದು ಸಂಪೂರ್ಣ ವೈರಲ್ ಆಗಿದೆ. ಹಲವು ಬಾರಿ ಎಚ್ಚರಿಕೆ ನೀಡಿದರೂ ತನ್ನ ಖಯಾಲಿ ಮುಂದುವರೆಸಿದ್ದ ಹೀಗಾಗಿ ಈ ಶಿಕ್ಷೆ ನೀಡಿದ್ದೇವೆ ಎಂದು ಕೆಲ ಗ್ರಾಮಸ್ಥರು ಘಟನೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಫೇಸ್ಬುಕ್ನಲ್ಲಿ ಪರಿಚಯವಾದ ಮಹಿಳೆಯಿಂದ ವಿಡಿಯೋ ಕಾಲ್‌ನಲ್ಲಿ ಅಸಭ್ಯ ವರ್ತನೆ, ಹಣಕ್ಕಾಗಿ ಬೆದರಿಕೆ ಬೆಂಗಳೂರು: ಬಿಜೆಪಿ ಮುಖಂಡ, ಡಾ.ಅಂಬೇಡ್ಕರ್ ಫೌಂಡೇಷನ್ ನಿರ್ದೇಶಕ ಚಿ.ನಾ.ರಾಮು ತಮಗೆ ಅಪರಿಚಿತ ವ್ಯಕ್ತಿಯಿಂದ ಬೆದರಿಕೆ ಒಡ್ಡಲಾಗಿದೆ ಎಂದು ದೂರು ದಾಖಲಿಸಿದ್ದಾರೆ. ಅಪರಿಚಿತ ವ್ಯಕ್ತಿ ಫೋನ್ ಮಾಡಿ ಹಣ ನೀಡುವಂತೆ ಬೆದರಿಕೆ ಹಾಕಿದ್ದಾರೆ, ಫೇಸ್‌ಬುಕ್ ಮೆಸೆಂಜರ್ ಮೂಲಕ ಪರಿಚಯವಾಗಿದ್ದ ಮಹಿಳೆ ಮೊಬೈಲ್ ನಂಬರ್ ಪಡೆದು ವಿಡಿಯೋ ಕಾಲ್ ಮಾಡಿದ್ದಳು. ವಿಡಿಯೋ ಕಾಲ್‌ನಲ್ಲಿ ಅಸಭ್ಯವಾಗಿ ವರ್ತಿಸಿದ್ದಳು. ಬಳಿಕ ಅಪರಿಚಿತ ವ್ಯಕ್ತಿ ಕರೆ ಮಾಡಿ ಹಣ ನೀಡುವಂತೆ ಬೆದರಿಕೆ ಒಡ್ಡುತ್ತಿದ್ದಾನೆ. ‘ಯುವತಿಯೊಂದಿಗೆ ನಗ್ನವಾಗಿರುವ ವಿಡಿಯೋ ನನ್ನ ಬಳಿ ಇದೆ. ಹಣ ನೀಡದಿದ್ದರೆ ವಿಡಿಯೋ ವೈರಲ್ ಮಾಡುವುದಾಗಿ ಬೆದರಿಕೆ ಒಡ್ಡುತ್ತಿದ್ದಾರೆ’ ಎಂದು ಬೆಂಗಳೂರು ಸೆಂಟ್ರಲ್ ಸಿಇಎನ್ ಠಾಣೆಗೆ ಬಿಜೆಪಿ ಮುಖಂಡ ಚಿ.ನಾ.ರಾಮು ದೂರು ದಾಖಲಿಸಿದ್ದಾರೆ.
ವ್ಯಕ್ತಿಯ ಬೆದರಿಕೆ ಹೆದರಿ ಬಿಜೆಪಿ ಮುಖಂಡ ಚಿ.ನಾ.ರಾಮು ಈಗಾಗಲೇ 31,500 ಹಣವನ್ನು ಅಪರಿಚಿತನ ಖಾತೆಗೆ ಹಾಕಿದ್ದಾರೆ. ಚಿ.ನಾ.ರಾಮು ನೀಡಿರುವ ದೂರು ಆಧರಿಸಿ ಎಫ್ಐಆರ್ ದಾಖಲಾಗಿದೆ. ಬಿಜೆಪಿ ಮುಖಂಡ ಚಿ.ನಾ.ರಾಮು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ಅಡಿಯ ಅಂಬೇಡ್ಕರ್ ಪೌಂಡೇಶನ್ ನಿರ್ದೇಶಕರಾಗಿದ್ದಾರೆ.
ಇದನ್ನೂ ಓದಿ: ಯುವತಿಯನ್ನು ಚುಡಾಯಿಸಿದ ಆರೋಪ: ಪೆಟ್ರೋಲ್ ತುಂಬಿಸುತ್ತಿದ್ದ ಯುವಕನಿಗೆ ಹಾಲಿನ ಕ್ಯಾನ್ನಿಂದ ಹೊಡೆದು ಮಾರಣಾಂತಿಕ ಹಲ್ಲೆ
ಉಡುಪಿಯಲ್ಲಿ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ: 65 ವರ್ಷ ಪ್ರಾಯದ ವ್ಯಕ್ತಿ ಬಂಧನ
(Villagers punished a man by shaving his head for sending vulgar messages to ladies in Belagavi)