ಅನಗತ್ಯ ವಿವಾದಗಳು ಮೂಲೆಗುಂಪು: ಬೆಳಗಾವಿಯಲ್ಲಿ ವಾಯುಸೇನೆಗೆ ಅಗ್ನಿವೀರರ ಸೇರ್ಪಡೆ ಪ್ರಕ್ರಿಯೆ ಹವಾ ಜೋರು
ನಾಲ್ಕು ವರ್ಷಗಳ ಅವಧಿಯಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸೊ ಶೇಕಡಾ 25 ರಷ್ಟು ಅಗ್ನಿವೀರರಿಗೆ ವಾಯುಸೇನೆಯಲ್ಲೇ ಅವಕಾಶ ನೀಡಲಾಗುತ್ತೆ. ಉಳಿದ ಸಿಬ್ಬಂದಿ ಸಮಾಜದ ಮುಖ್ಯವಾಹಿನಿಯಲ್ಲಿ ಕಾರ್ಯನಿರ್ವಹಿಸಬಹುದು - ವಾಯು ಸೇನೆ ಉನ್ನತ ಅಧಿಕಾರಿ
ವಿವಾದದ ಕಿಡಿ ಹೊತ್ತಿಸಿದ್ದ ಅಗ್ನಿವೀರ್, ಅಗ್ನಿಪತ್ ಯೋಜನೆಗಳ (agniveer) ಜಾಯಿನಿಂಗ್ ಪ್ರಕ್ರಿಯೆ ಭರದಿಂದ ಅಲ್ಲಲ್ಲಿ ನಡೀತಿದೆ. ವಿರೋಧದ ಮಧ್ಯೆಯೂ ಅಗ್ನಿವೀರ್ ವಿಭಾಗದಲ್ಲಿ ಆಯ್ಕೆಗೊಂಡ ಅಭ್ಯರ್ಥಿಗಳು ಸೇನೆಯನ್ನ ಸೇರಿಕೊಳ್ತಿದ್ದಾರೆ. ಅಗ್ನಿವೀರರ ತರಬೇತಿಗಳು ಹೇಗಿರುತ್ವೆ ಅನ್ನೋದರ ಚಿತ್ರಣ ಇಲ್ಲಿದೆ ನೋಡಿ. ಅದು ವಿಶಾಲ ಮೈದಾನ… ಅಲ್ಲಿ ವಿವಿಧ ಅಥ್ಲೆಟಿಕ್ ಆಟಗಳನ್ನ ಆಡ್ತಿರೊ ಕ್ರೀಡಾಪಟುಗಳು.. ಒಂದೊಂದು ಆಟವೂ ಒಂದೊಂದು ರೀತಿ ಮೈ ಝುಮ್ಮೆನ್ನಿಸುವಂತಹುದು. ಆದರೆ ಉಸಿರು ಬಿಗಿ ಹಿಡಿದು ನೋಡೊ ರೀತಿ ಅಬ್ಬರಿಸುತ್ತಿರೊ ಇವ್ರೆಲ್ಲಾ ಕ್ರೀಡಾಪಟುಗಳಲ್ಲ. ಬದಲಿಗೆ ಭಾರತೀಯ ವಾಯುಸೇನೆಯ (airforce) ಸಿಬ್ಬಂದಿಯಾಗಬಯಸಿರುವ ಯುವಜನತೆ (youth). ಹೌದು.. ಅಗ್ನಿವೀರ್, ಅಗ್ನಿಪತ್ ಯೋಜನೆಗಳು (recruitment) ಜಾರಿಯಾದಾಗ ದೇಶಾದ್ಯಂತ ವಿವಾದದ ಕಿಡಿ ಹೊತ್ತಿಸಿದ್ದವು.. ಕೇಂದ್ರ ಸರ್ಕಾರದ ಈ ಮಹತ್ವದ ಯೋಜನೆ ವಿರುದ್ಧ ದೇಶ ಅಲ್ಲಲ್ಲಿ ಧಗಧಗಿಸಿತ್ತು.. ವ್ಯಾಪಕ ವಿರೋಧ ವ್ಯಕ್ತವಾದ್ರೂ ಕೇಂದ್ರ ಸರ್ಕಾರ ಮಾತ್ರ ತಲೆ ಕೆಡಿಸಿಕೊಂಡಿರ್ಲಿಲ್ಲ..ಅಗ್ನಿವೀರ್, ಅಗ್ನಿಪತ್ ಜಾರಿ ಮಾಡಿಯೇ ತೀರ್ತಿವಿ ಅಂದ ಕೇಂದ್ರ ಸರ್ಕಾರ ಕೊನೆಗೂ ತನ್ನ ಕನಸಿನ ಯೋಜನೆಗೆ ಐತಿಹಾಸಿಕ ಮುನ್ನುಡಿ ಬರೆದಿದೆ.
ಭಾರತೀಯ ವಾಯುಸೇನೆಯ ಭಾಗವಾಗಿ ಅಗ್ನಿವೀರ್ ವಾಯು ಯೋಜನೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳ ಜಾಯಿನಿಂಗ್ ಪ್ರಕ್ರಿಯೆ ಬೆಳಗಾವಿಯಲ್ಲಿ (belagavi) ಪ್ರಾರಂಭವಾಗಿದೆ. ಬೆಳಗಾವಿಯ ಏರ್ ಮನ್ ಟ್ರೈನಿಂಗ್ ಕೇಂದ್ರದಲ್ಲಿ ಭಾನುವಾರದಂದು ಬೆಳಿಗ್ಗೆಯಿಂದಲೇ ಅಗ್ನಿವೀರ್ ವಾಯು ಗೆ ಆಯ್ಕೆಯಾದೋರನ್ನ ಸೇನೆಗೆ ಜಾಯಿನ್ ಮಾಡಿಕೊಳ್ಳುವ ಪ್ರಕ್ರಿಯೆ ಶುರುವಾಗಿದೆ. ಆಯ್ಕೆಯಾದ ಅಭ್ಯರ್ಥಿಗಳು ಸರತಿ ಸಾಲಿನಲ್ಲಿ ನಿಂತು ದಾಖಲೆಗಳನ್ನ ನೀಡಿ, ಅಗ್ನಿವೀರ್ ವಾಯುಗೆ ಸೇರ್ಪಡೆಗೊಂಡಿದ್ದಾರೆ.
ಹೌದು.. ಅಗ್ನಿವೀರ್ ವಾಯುಗೆ ಸೇರ್ಪಡೆಯಾಗಲು ದೇಶಾದ್ಯಂತ ಒಟ್ಟು 7 ಲಕ್ಷ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು.. ಈ ಪೈಕಿ ಒಟ್ಟು 2,850 ಅಭ್ಯರ್ಥಿಗಳು ಅಗ್ನಿವೀರ್ ವಾಯುಗೆ ಆಯ್ಕೆಯಾಗಿದ್ದಾರೆ. ಇಲ್ಲಿ ಆಯ್ಕೆಯಾದ ಅಗ್ನಿವೀರರಿಗೆ ಆರು ತಿಂಗಳ ಕಾಲ ತರಬೇತಿ ನೀಡಲಾಗುತ್ತದೆ. ವಾಯುಸೇನೆಗೆ ಸಂಬಂಧಿಸಿದ ಹೊಟೆಲ್ ಮ್ಯಾನೇಜ್ಮೆಂಟ್, ಸಾಮಾನ್ಯ ಸೈನಿಕರಿಗೆ ನೀಡೊ ದೈಹಿಕ ತರಬೇತಿಗಳನ್ನು ಕಡ್ಡಾಯಗೊಳಿಸಲಾಗಿದೆ.
Also Read:
ದುರ್ಗದ ಕುರಿಗಾಹಿ ಬಾಲಕಿ ವಿಶ್ವ ಥ್ರೋಬಾಲ್ ಗೆದ್ದುಬಂದಳು, ಆದರೆ ಹೋಗುವ ಮುನ್ನ ಆರ್ಥಿಕ ನೆರವು ಕೇಳಿದರೆ ಸಿಎಂ ಬೊಮ್ಮಾಯಿ ಇಲ್ಲಾ ಅಂದರು!
ಅಗ್ನಿವೀರ್ ವಾಯು ಸಿಬ್ಬಂದಿಗೆ ಅಥ್ಲೆಟಿಕ್ ತರಬೇತಿಯನ್ನೂ ನೀಡಲಾಗ್ತಿದೆ. ಅಂತರಾಷ್ಟ್ರೀಯ ಗುಣಮಟ್ಟದ ಸೌಕರ್ಯಗಳನ್ನು ನೀಡುವ ಮೂಲಕ ಟ್ರೈನಿಂಗ್ ನೀಡಲಾಗುತ್ತೆ. ನ್ಯಾಷನಲ್, ಇಂಟರ್ನ್ಯಾಷನಲ್ ಮಟ್ಟದಲ್ಲಿ ಅಥ್ಲೆಟಿಕ್ ಗಳಲ್ಲಿ ಸ್ಪರ್ಧಿಸೊ ರೀತಿ ಉನ್ನತ ಮಟ್ಟದ ತರಬೇತಿಯನ್ನು ನೀಡಲಾಗುತ್ತದೆ. ಹೀಗೆ ವಿವಿಧ ಬಗೆಯ ಟ್ರೈನಿಂಗ್ ಗಳನ್ನ ನೀಡೊ ಮೂಲಕ ಅಗ್ನಿವೀರ್ ರನ್ನ ದೇಶ ಸೇವೆಗೆ ಸನ್ನದ್ದರನ್ನಾಗಿ ಮಾಡಲಾಗುತ್ತಿದೆ ಎಂದು ವಾಯು ಸೇನೆ ಉನ್ನತ ಅಧಿಕಾರಿ ಎಸ್.ಶ್ರೀಧರ್ ಮಾಹಿತಿ ಹಂಚಿಕೊಂಡಿದ್ದಾರೆ.
ಇನ್ನು ಅಗ್ನಿವೀರ್ ವಾಯು, ಅಗ್ನಿಪತ್ ವಿಭಾಗದ ನಾಲ್ಕು ವರ್ಷಗಳ ಸೇವೆಗಳ ಬಳಿಕ ಮುಂದೇನು ಅನ್ನೋದಕ್ಕೆ ಹೋರಾಟಗಳೇ ನಡೆದಿದ್ವು. ಆದ್ರೆ ಈ ಬಗ್ಗೆ ವಾಯುಸೇನೆಯ ಉನ್ನತ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.
ನಾಲ್ಕು ವರ್ಷಗಳ ಅವಧಿಯಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸೊ ಶೇಕಡಾ 25 ರಷ್ಟು ಅಗ್ನಿವೀರರಿಗೆ ವಾಯುಸೇನೆಯಲ್ಲೇ ಅವಕಾಶ ನೀಡಲಾಗುತ್ತೆ. ಉಳಿದ ಸಿಬ್ಬಂದಿ ಸಮಾಜದ ಮುಖ್ಯವಾಹಿನಿಯಲ್ಲಿ ಕಾರ್ಯನಿರ್ವಹಿಸಬಹುದು ಅಂತ ಹೇಳ್ತಿದ್ದಾರೆ. ಅದೇನೇ ಇರಲಿ, ವಿರೋಧದ ಮಧ್ಯೆಯೂ ಅಗ್ನಿವೀರ್ ವಾಯು ಯೋಜನೆ ಕಾರ್ಯಗತವಾಗಲು ಸಜ್ಜಾಗಿದೆ.
ವರದಿ: ಭೀಮೇಶ್ ಪೂಜಾರ್, ಟಿವಿ 9, ಬೆಳಗಾವಿ
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ