ಕೋವಿಡ್ ಪರಿಹಾರ ಚೆಕ್ ಡ್ರಾ ಆಗದೆ ಫಲಾನುಭವಿಗಳು ಪರದಾಟ; ಬ್ಯಾಂಕ್ ಮ್ಯಾನೇಜರನಿಂದ ದೊಡ್ಡ ಎಡವಟ್ಟು

ಹೆಸರಿಗೆ ಮಾತ್ರ ಕೋವಿಡ್ ಪರಿಹಾರ ಕೈಗೆ ಬರ್ತಾಯಿಲ್ಲ ಹಣ. ಕೋವಿಡ್ ಪರಿಹಾರದ ಚೆಕ್ ಡ್ರಾ ಆಗದೇ ಫಲಾನುಭವಿಗಳು ಪರದಾಟ.

ಕೋವಿಡ್ ಪರಿಹಾರ ಚೆಕ್ ಡ್ರಾ ಆಗದೆ ಫಲಾನುಭವಿಗಳು ಪರದಾಟ; ಬ್ಯಾಂಕ್ ಮ್ಯಾನೇಜರನಿಂದ ದೊಡ್ಡ ಎಡವಟ್ಟು
ಸರ್ಕಾರ ನೀಡಿದ ಕೋವಿಡ್ ಪರಿಹಾರ ಚೆಕ್ ಬೌನ್ಸ್! ಸುತ್ತಿ ಸುತ್ತಿ ಸುಸ್ತಾದರೂ ಪರಿಹಾರ ಹಣ ಮಾತ್ರ ಕೈಗೆ ಸಿಗ್ತಿಲ್ಲ
Updated By: ಗಂಗಾಧರ​ ಬ. ಸಾಬೋಜಿ

Updated on: Jan 22, 2022 | 5:13 PM

ಮಹಾಮಾರಿ ಕೊರೊನಾದಿಂದ ಮೃತಪಟ್ಟ ವ್ಯಕ್ತಿಯ ಕುಟುಂಬಸ್ಥರಿಗೆ ರಾಜ್ಯ ಸರ್ಕಾರ ಚೆಕ್ ನೀಡುವುದಾಗಿ ಭರವಸೆ ನೀಡಿತ್ತು. ಅದೇ ರೀತಿಯಾಗಿ ಚೆಕ್ ಕೂಡ ನೀಡಲಾಗಿದೆ. ಆದರೆ  ಸರ್ಕಾರದ ಕೊವಿಡ್ ಪರಿಹಾರ ಚೆಕ್ ಡ್ರಾ ಆಗದ ಪ್ರಕರಣ ಒಂದು ಬೆಳಕಿಗೆ ಬಂದಿದೆ. ಪರಿಹಾರ ಹಣ ಸಿಗದೆ ಫಲಾನುಭವಿಗಳು ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ.ಕೊರೊನಾದಿಂದ ಮೃತಪಟ್ಟ ಬಿಪಿಎಲ್ ಕಾರ್ಡು ಹೊಂದಿರುವ ಕುಟುಂಬಗಳಿಗೆ ರಾಜ್ಯ ಸರ್ಕಾರ 1 ಲಕ್ಷ ರೂ ಪರಿಹಾರ ಘೋಷಣೆ ಮಾಡಿತ್ತು.

ಕೊವಿಡ್​ನಿಂದ ಮೃತಪಟ್ಟ ಕುಟುಂಬಸ್ಥರಿಗೆ‌ ಪರಿಹಾರದ ಚೆಕ್ ಡ್ರಾ ಆಗದ ಕಾರಣ ಫಲಾನುಭವಿಗಳು ಚೆಕ್ ಹಿಡಿದು ಬ್ಯಾಂಕ್​ಗಳಿಗೆ ಅಲೆದಾಡುವಂತ್ತಾಗಿದೆ. ಯಾದಗಿರಿ ಜಿಲ್ಲೆ ಸುರಪುರದ ಕರ್ನಾಟಕ ಗ್ರಾಮೀಣ ಬ್ಯಾಂಕ್ ಎಡವಟ್ಟಿನಿಂದ ಈ ಘಟನೆ ಸಂಭವಿಸಿದೆ. ಕರ್ನಾಟಕ ಗ್ರಾಮೀಣ ಬ್ಯಾಂಕ್​ ಮ್ಯಾನೇಜರ್ ಎಡವಟ್ಟಿನಿಂದ 1 ತಿಂಗಳಿಂದ ಕೊವಿಡ್ ಪರಿಹಾರ ಚೆಕ್ ಜಮಾ‌ ಆಗಿರಲಿಲ್ಲ. ಸದ್ಯ ಸುರಪುರದ ಕರ್ನಾಟಕ ಗ್ರಾಮೀಣ ಬ್ಯಾಂಕ್ ನ ಮ್ಯಾನೇಜರ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ಕಂದಾಯ ಇಲಾಖೆಯ‌ ಶಿರಸ್ತೆದಾರ್ ನಿಂದ ಕೇಸ್ ದಾಖಲು ಮಾಡಲಾಗಿದೆ.

ಹೆಸರಿಗೆ ಮಾತ್ರ ಕೋವಿಡ್ ಪರಿಹಾರ ಕೈಗೆ ಬರ್ತಾಯಿಲ್ಲ ಹಣ ಇನ್ನು ಇದೇ ರೀತಿ ಮತ್ತೊಂದು ಕುಟುಂಬ ಕೂಡ ಹಣಕ್ಕಾಗಿ ಅಲೆದಾಡಿ ಹೈರಾಣಾಗಿದೆ. ಚೆಕ್ ಪಡೆದ ದೇವಿಕೇರ ಗ್ರಾಮದ ಕುಟುಂಬ ಬ್ಯಾಂಕ್​ಗೆ ಅಲೆದು ಅಲೆದು ಬೇಸತ್ತಿದೆ. ಸುರಪುರ ತಾಲೂಕಿನ ದೇವಿಕೇರ ಗ್ರಾಮದ ನಾಗಪ್ಪ ಕೋವಿಡ್​ನಿಂದ ಮೃತಪಟ್ಟಿದ್ದರು. ಇವರ ಕುಟುಂಬಸ್ಥರಿಗೆ ಪರಿಹಾರದ ಚೆಕ್ ನೀಡಲಾಗಿತ್ತು. ಆದ್ರೆ ಎಷ್ಟೋ ಬ್ಯಾಂಕ್​ಗಳಿಗೆ ಅಲೆಯುತ್ತಿದ್ರು ಹಣ ಮಾತ್ರ ಜಮೆ ಆಗುತ್ತಿಲ್ಲ ಎಂದು ಕುಟುಂಬ ಅಳಲು ತೋಡಿಕೊಂಡಿದೆ.

ನಾನೇ ಕೆಲ‌ ಫಲನಾಭವಿಗಳಿಗೆ ಕಳೆದ ತಿಂಗಳು ಪರಿಹಾರ‌ದ‌ ಚೆಕ್ ವಿತರಣೆ ಮಾಡಿದ್ದೇನೆ. ಆದ್ರೆ ಜಾಲಿಬೆಂಚಿ ಹಾಗೂ ದೇವಿಕೇರದ ಕುಟುಂಬಗಳಿಗೆ ಚೆಕ್ ನೀಡಿದ್ರು ಹಣ ಖಾತೆಗೆ ಜಮಾ ಆಗಿಲ್ಲ ಎನ್ನುವ ವಿಚಾರ ಗೊತ್ತಾಗುತ್ತಿದಂತೆ ಬ್ಯಾಂಕ್ ಮ್ಯಾನೇಜರ್ ಗೆ ಮಾತಾಡಿದ್ದೇನೆ ಇದು ಬ್ಯಾಂಕ್ ನವರ ತಪ್ಪಿನಿಂದ ಆಗಿದ್ದು ಸರಿ ಪಡಿಸಲು ಹೇಳಿದ್ದೇನೆ ಎಂದು ಸುರಪುರದ ಬಿಜೆಪಿ ಶಾಸಕ ರಾಜುಗೌಡ ಹೇಳಿದ್ದಾರೆ.

ಇನ್ನೂ ಈ ವಿಚಾರ ಸಿಎಂ ಬಸವರಾಜ ಬೊಮ್ಮಾಯಿ ಅವರ ಗಮಕ್ಕೆ ಬಂದಿದ್ದು, ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳುತ್ತೇನೆ ಎಂದಿದ್ದಾರೆ.

ಇದನ್ನೂ ಓದಿ:

ಮಗಳು ಆಯ್ರಾಗೆ ಕನ್ನಡ ಪಾಠ; ರಾಧಿಕಾ ಪಂಡಿತ್ ಹಂಚಿಕೊಂಡ್ರು​ ವಿಶೇಷ ವಿಡಿಯೋ

 

Published On - 5:12 pm, Sat, 22 January 22