AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು: ಕೆಲಸ ಕಳೆದುಕೊಂಡ ಮಹಿಳಾ ಟೆಕ್ಕಿ ಮಾಡಬಾರದನ್ನ ಮಾಡಿ ಸಿಕ್ಕಿಬಿದ್ದಳು

14 ರಿಂದ 15 ಲಕ್ಷ ರೂ. ಮೌಲ್ಯದ 24 ಲ್ಯಾಪ್‌ಟಾಪ್‌ಗಳನ್ನು ಕದ್ದ ಆರೋಪದ ಮೇಲೆ ಮಹಿಳಾ (woman) ಟೆಕ್ಕಿಯನ್ನು ಹೆಚ್‌ಎಎಲ್ ಪೊಲೀಸರು ಬಂಧಿಸಿದ್ದಾರೆ. ಪೇಯಿಂಗ್ ಗೆಸ್ಟ್‌ಗಳು (PGs) ಮತ್ತು ನಗರದ ಹೋಟೆಲ್‌ಗಳಲ್ಲಿ ಲ್ಯಾಪ್‌ಟಾಪ್ ಕಳ್ಳತನಕ್ಕೆ ಸಂಬಂಧಿಸಿದಂತೆ ಸಾಕಷ್ಟು ದೂರುಗಳು ಬಂದನಂತರ ಆರೋಪಿಯನ್ನು ಬಂಧಿಸಲಾಗಿದೆ.

ಬೆಂಗಳೂರು: ಕೆಲಸ ಕಳೆದುಕೊಂಡ ಮಹಿಳಾ ಟೆಕ್ಕಿ ಮಾಡಬಾರದನ್ನ ಮಾಡಿ ಸಿಕ್ಕಿಬಿದ್ದಳು
ಬಂಧಿತ ಮಹಿಳೆ
TV9 Web
| Edited By: |

Updated on: Mar 29, 2024 | 5:21 PM

Share

ಬೆಂಗಳೂರು, ಮಾರ್ಚ್​ 29: 14 ರಿಂದ 15 ಲಕ್ಷ ರೂ. ಮೌಲ್ಯದ 24 ಲ್ಯಾಪ್‌ಟಾಪ್‌ಗಳನ್ನು ಕದ್ದ ಆರೋಪದ ಮೇಲೆ ಮಹಿಳಾ (woman) ಟೆಕ್ಕಿಯನ್ನು ಹೆಚ್‌ಎಎಲ್ ಪೊಲೀಸರು ಬಂಧಿಸಿದ್ದಾರೆ. ಪೇಯಿಂಗ್ ಗೆಸ್ಟ್‌ಗಳು (PGs) ಮತ್ತು ನಗರದ ಹೋಟೆಲ್‌ಗಳಲ್ಲಿ ಲ್ಯಾಪ್‌ಟಾಪ್ ಕಳ್ಳತನಕ್ಕೆ ಸಂಬಂಧಿಸಿದಂತೆ ಸಾಕಷ್ಟು ದೂರುಗಳು ಬಂದನಂತರ ಆರೋಪಿಯನ್ನು ಬಂಧಿಸಲಾಗಿದೆ. ಉತ್ತರ ಪ್ರದೇಶದ ನೋಯ್ಡಾ ಮೂಲದ ಜಸ್ಸಿ ಅಗರ್ವಾಲ್ (26) ಬಂಧಿತ ಮಹಿಳೆ ಎಂದು ಗುರುತಿಸಲಾಗಿದೆ. ಕಳೆದ ವರ್ಷ ಖಾಸಗಿ ಬ್ಯಾಂಕ್‌ನಲ್ಲಿ ಕೆಲಸ ಕಳೆದುಕೊಂಡ ಬಳಿಕ ಲ್ಯಾಪ್‌ಟಾಪ್ ಕದಿಯುವ ಕೆಲಸ ಆರಂಭಿಸಿದ್ದಳು.

ಜಸ್ಸಿ ಅಗರ್ವಾಲ್ ತನ್ನ ಈ ಕಳ್ಳತನದ ಕೆಲಸಕ್ಕೆ ನಗರದ ಪಿಜಿಗಳು ಮತ್ತು ಹೋಟೆಲ್‌ಗಳನ್ನು ಟಾರ್ಗೆಟ್​ ಮಾಡಿಕೊಂಡಿದ್ದಳು. ಸಂದರ್ಶನಕ್ಕೆ ಬಂದಿರುವುದಾಗಿ ಹೇಳಿಕೊಂಡು ನಗರದ ವಿವಿಧ ಪಿಜಿಗಳಲ್ಲಿ ವಾಸ್ತವ್ಯ ಹೂಡುತ್ತಿದ್ದಳು. ಅಕ್ಕಪಕ್ಕದ ಕೋಣೆಗಳ ಮೇಲೆ ನಿಗಾಯಿಟ್ಟಿದ್ದಳು.

ಇದನ್ನೂ ಓದಿ: ಶಾಲಾ-ಕಾಲೇಜು ಸುತ್ತಮುತ್ತಲಿನ ಅಂಗಡಿಗಳ ಮೇಲೆ ಪೊಲೀಸ್​ ದಾಳಿ; ಸಿಗರೇಟ್ ಸೇಲ್ ಮಾಡ್ತಿದ್ದ 19 ಮಾಲೀಕರ ವಿರುದ್ಧ ಕೇಸ್

ತಿಂಡಿ ಅಥವಾ ಚಹಾ ಕುಡಿಯಲು ರೂಮ್​ನಿಂದ ಹೊರಗೆ ಹೋದಾಗ ಜಸ್ಸಿ ಲ್ಯಾಪ್‌ಟಾಪ್‌ಗಳನ್ನು ಕದಿಯುತ್ತಿದ್ದಳು. ಬಳಿಕ ಅವಳು ತನ್ನ ಪಿಜಿಯನ್ನು ಬದಲಾಯಿಸುತ್ತಿದ್ದಳು ಎನ್ನಲಾಗಿದೆ. ಕೋರಮಂಗಲ, ಎಚ್‌ಎಎಲ್ ಮತ್ತು ಇಂದಿರಾನಗರ ಪೊಲೀಸ್ ಠಾಣೆಗಳಿಗೆ ಈ ಕುರಿತಾಗಿ ಹಲವು ದೂರುಗಳು  ದಾಖಲಾಗಿದ್ದರಿಂದ ಘಟನೆ ಬೆಳಕಿಗೆ ಬಂದಿದೆ.

ಸದ್ಯ ಸಿಸಿಟಿವಿ ಮತ್ತು ಇತರೆ ಡಿಜಿಟಲ್ ಸಾಕ್ಷಿಗಳನ್ನು ಆಧರಿಸಿ ಪೊಲೀಸರು ಜೆಸ್ಸಿಯನ್ನು ಬಂಧಿಸಿದ್ದಾರೆ. ಇನ್ನು ಆರೋಪಿಯು ತಾನು ಕದ್ದ ಲ್ಯಾಪ್‌ಟಾಪ್‌ಗಳನ್ನು ನೋಯ್ಡಾದ ಕಾಳಸಂತೆಯಲ್ಲಿ ಕಡಿಮೆ ದರಕ್ಕೆ ಮಾರಾಟ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. 14-15 ಲಕ್ಷ ರೂ. ಮೌಲ್ಯದ ಕನಿಷ್ಠ 24 ಲ್ಯಾಪ್‌ಟಾಪ್‌ಗಳನ್ನು ಆಕೆ ಕದ್ದಿದ್ದಾಳೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: SSLC ಪರೀಕ್ಷೆ ವೇಳೆ ವಿದ್ಯಾರ್ಥಿಗಳ ಮಾರಾಮಾರಿ: ಗಲಾಟೆಯಲ್ಲಿ ಮೂವರಿಗೆ ಚಾಕು ಇರಿತ

ಈಕೆಯ ಬಂಧನದೊಂದಿಗೆ ಪೊಲೀಸರು ಇತರೆ 24 ಕಳ್ಳತನ ಪ್ರಕರಣಗಳನ್ನು ಭೇದಿಸಿದ್ದಾರೆ. ಆರೋಪಿಯು ದೇಶದ ಇತರ ನಗರಗಳಲ್ಲಿ ಇದೇ ರೀತಿಯ ಅಪರಾಧಗಳನ್ನು ಮಾಡಿದ್ದಾಳೆಯೇ ಎಂದು ತಿಳಿಯಲು ಪೊಲೀಸರು ಆರೋಪಿಯನ್ನು ವಿಚಾರಣೆ ಮಾಡುತ್ತಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.