ನೆಲಮಂಗಲ: ಆಸ್ತಿಯಲ್ಲಿ ಪಾಲು ಕೇಳಿದ್ದಕ್ಕೆ ಮಗನ ಮೇಲೆ ಕೆಮಿಕಲ್ ಮಿಶ್ರಿತ ಆ್ಯಸಿಡ್ ಎರಚಿದ ತಂದೆ
ಬೆಂಗಳೂರಿನ ಟಿ.ದಾಸರಹಳ್ಳಿಯಲ್ಲಿ ಆಸ್ತಿಯಲ್ಲಿ ಪಾಲು ಕೇಳಿದ್ದಕ್ಕೆ ಮಗನ ಮೇಲೆ ತಂದೆ ಕೆಮಿಕಲ್ ಮಿಶ್ರಿತ ಆ್ಯಸಿಡ್ ದಾಳಿ ಮಾಡಿರುವಂತಹ ಘಟನೆ 25 ರಂದು ಘಟನೆ ನಡೆದದ್ದು ತಡವಾಗಿ ಬೆಳಕಿಗೆ ಬಂದಿದೆ. ಆರೋಪಿಗಳ ಪತ್ತೆಗಾಗಿ ಬಾಗಲಗುಂಟೆ ಪೊಲೀಸರು ಶೋಧ ನಡೆಸುತ್ತಿದ್ದಾರೆ. ತಂದೆ ಜೊತೆ ಅಣ್ಣ, ಅಕ್ಕ ಸೇರಿರುವ ಆರೋಪ ಮಾಡಲಾಗಿದೆ.

ನೆಲಮಂಗಲ, ಮಾರ್ಚ್ 29: ಆಸ್ತಿಯಲ್ಲಿ ಪಾಲು ಕೇಳಿದ್ದಕ್ಕೆ ಮಗನ ಮೇಲೆ ತಂದೆ ಕೆಮಿಕಲ್ ಮಿಶ್ರಿತ ಆ್ಯಸಿಡ್ (acid) ದಾಳಿ ಮಾಡಿರುವಂತಹ ಘಟನೆ ಬೆಂಗಳೂರಿನ ಟಿ.ದಾಸರಹಳ್ಳಿಯಲ್ಲಿ ನಡೆದಿದೆ. ನಿವೃತ್ತ ಪಿಎಸ್ಐ ರಾಮಕೃಷ್ಣಯ್ಯರಿಂದ ಕೃತ್ಯವೆಸಗಲಾಗಿದೆ. ತಂದೆ ಜೊತೆ ಅಣ್ಣ ಉಪೇಂದ್ರ ಕುಮಾರ್, ಅಕ್ಕ ಕಲಾವತಿಯೂ ಸೇರಿರುವ ಆರೋಪ ಮಾಡಲಾಗಿದೆ. 25 ರಂದು ಘಟನೆ ನಡೆದದ್ದು ತಡವಾಗಿ ಬೆಳಕಿಗೆ ಬಂದಿದೆ. ಆರೋಪಿಗಳ ಪತ್ತೆಗಾಗಿ ಬಾಗಲಗುಂಟೆ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ಆ್ಯಸಿಡ್ ದಾಳಿಯಿಂದ ಕಿರಣ್ ಅವರ ಒಂದು ಕಣ್ಣಿಗೆ ಮತ್ತು ಮೈಮೇಲಲ್ಲ ಗಾಯಗಳಾಗಿ ರೋಧಿಸಿದ್ದಾರೆ. ಬಳಿಕ ಆಸ್ಪತ್ರೆಗೆ ಸೇರಿಸಿದ್ದು ಪ್ರಯತ್ನ ಮಾಡುತ್ತೇವೆ ದೃಷ್ಟಿ ಬರುವುದು ಡೌಟು ಎಂದು ನಾರಾಯಣ ನೇತ್ರಾಲಯದ ವೈದ್ಯರು ಹೇಳಿದ್ದಾರೆ.
ಬಡ್ಡಿ ಹಣಕ್ಕಾಗಿ ವ್ಯಕ್ತಿ ಮೇಲೆ ಆ್ಯಸಿಡ್ ದಾಳಿ
ಕಲಬುರಗಿ: ಸಂಸಾರ ನಡೆಸಲು ದೂರದ ಮುಂಬೈನಲ್ಲಿ ಮೀನಿನ ವ್ಯಾಪಾರ ಮಾಡಿಕೊಂಡಿದ್ದ. ವ್ಯಾಪರಕ್ಕೆ ಬೇಕು ಅಂತ ಕೆಲವರ ಬಳಿ ಸಾಲ ಪಡೆದಿದ್ದ. ಆದ್ದರೆ ಅವರೆಲ್ಲಾ ಬಡ್ಡಿ ಚಕ್ರ ಬಡ್ಡಿ ಸೇರಿಸಿ ಲಕ್ಷ ಲಕ್ಷ ರೂ. ಹಣ ವಸೂಲಿ ಮಾಡಲು ಫ್ಲ್ಯಾನ್ ಮಾಡಿದ್ದರು. ಅದಕ್ಕಾಗಿ ಆತನನ್ನು ರೂಂನಲ್ಲಿ ಕೂಡಿಹಾಕಿ ಮನಬಂದಂತೆ ಥಳಿಸಿ, ಆ್ಯಸಿಡ್ ದಾಳಿ ಮಾಡಿರುವಂತಹ ಘಟನೆ ಇತ್ತೀಚೆಗೆ ನಗರದಲ್ಲಿ ನಡೆದಿತ್ತು.
ಇದನ್ನೂ ಓದಿ: ಮಂಗಳೂರು: ವಿದ್ಯಾರ್ಥಿನಿಯರ ಮೇಲೆ ಆ್ಯಸಿಡ್ ದಾಳಿ ಪ್ರಕರಣ: ಕೇರಳದ ಇನ್ನಿಬ್ಬರು ಪೊಲೀಸ್ ವಶಕ್ಕೆ
ಆ್ಯಸಿಡ್ ದಾಳಿಗೊಳಗಾದ ವ್ಯಕ್ತಿಯ ಹೆಸರು ಜುಬೇರ್ ಅಹ್ಮದ್. ಕಲಬುರರಗಿ ನಗರ ನಿವಾಸಿ. ಆದರೆ ದೂರದ ಮುಂಬೈ ಮಹಾನಗರದಲ್ಲಿ ಮೀನಿನ ವ್ಯಾಪರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ. ಅಲ್ಲದೇ ಲಕ್ಷಾಂತರ ವ್ಯವಹಾರ ಮಾಡುತ್ತಿದ್ದ. ಎಲ್ಲವೂ ಚೆನ್ನಾಗಿಯೇ ನಡೆಯುತ್ತಿತ್ತು. ತನ್ನ ವ್ಯಾಪರವನ್ನ ಇನ್ನಷ್ಟು ಹೆಚ್ಚಿಸಲು ಜುಬೇರ್ ಕಲಬುರಗಿ ನಗರದ ಅರ್ಷದ್, ಪರ್ವೇಜ್ ಬಳಿ ಬಡ್ಡಿಯಾಗಿ 35 ಲಕ್ಷ ರೂ. ಹಣ ತೆಗೆದುಕೊಂಡಿದ್ದ. ಅದಕ್ಕಾಗಿ ಮೊದಲು ಬಡ್ಡಿಯ ಹಣವನ್ನೂ ಕಟ್ಟಿದ. ಆದರೆ ಯಾವಾಗ ಲಾಕ್ ಡೌನ್ ಆಯಿತೋ ಆಗ ಜುಬೇರ್ ಮೀನಿನ ವ್ಯಾಪತ ನೆಲಕಚ್ಚಿತ್ತು.
ಇದನ್ನೂ ಓದಿ: ಮಂಗಳೂರು ಆ್ಯಸಿಡ್ ದಾಳಿ, ಸಂತ್ರಸ್ತ ಮೂವರು ವಿದ್ಯಾರ್ಥಿನಿಯರಿಗೆ 4 ಲಕ್ಷ ರೂ. ಪರಿಹಾರ
ಮೀನಿನ ವ್ಯಾಪರದ ಮೇಲೆ ಬಂಡವಾಳ ಹೂಡಿದ್ದ ಲಕ್ಷಾಂತರ ರೂ. ಹಣ ಲಾಸ್ ಆಗಿತ್ತು. ಆವಾಗಿಂದ ಬಡ್ಡಿ ಹಣ ನೀಡಿರಲಿಲ್ಲವಂತೆ ಬಡ್ಡಿ, ಚಕ್ರ ಬಡ್ಡಿ ಸೇರಿಸಿ ಬರೋಬ್ಬರಿ 90 ಲಕ್ಷ ರೂ. ಮಾಡಿದ್ದರಂತೆ. ಅಲ್ಲದೇ ತಮ್ಮ 90 ಲಕ್ಷ ರೂ. ಹಣ ನೀಡುವಂತೆ ಪೀಡಿಸುತ್ತಿದ್ದರಂತೆ. ಮೊನ್ನೆ ಅರ್ಷದ್, ಪರ್ವೇಜ್ ಸೇರಿಕೊಂಡು ಜುಬೇರ್ನ್ನ ಕರೆಯಿಸಿದ್ದಾರೆ. ಆತ ಬರುತ್ತಿದ್ದಂತೆ ಕಾರಿನಲ್ಲಿ ಆತನನ್ನ ಕರೆದುಕೊಂಡು ಹೋಗಿ ಒಂಟಿ ರೂಂನಲ್ಲಿ ಕೂಡಿಹಾಕಿ ಮನಬಂದಂತೆ ಥಳಿಸಿದ್ದಾರಂತೆ. ಹೇಗೋ ತಪ್ಪಿಸಿಕೊಂಡು ಬರಬೇಕು ಎನ್ನೋವಷ್ಟರಲ್ಲಿ ಈ ಕಮ್ರಾನ್ ಖಾನ್ ಆ್ಯಸಿಡ್ ದಾಳಿ ಮಾಡಿದ್ದಾನೇ ಎಂದು ಜುಬೇರ್ ಅಳಲು ತೋಡಿಕೊಳ್ಳುತ್ತಿದ್ದಾರೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 2:51 pm, Fri, 29 March 24