ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ನಿನ್ನೆ (ಜೂನ್ 27) ಅಷ್ಟೇ ಒಟ್ಟು ಐದು ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ಚಾಲನೆ ನೀಡಿದ್ದರು. ಇದರಲ್ಲಿ ಬೆಂಗಳೂರು-ಧಾರವಾಡ ರೈಲಿಗೂ ಚಾಲನೆ ಸಿಕ್ಕಿತ್ತು. ಆದ್ರೆ, ಈ ರೈಲಿನ ಟಿಕೆಟ್ ದರದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಯಾಗಿತ್ತು. ಬಡವರು ಓಡಾಡುವ ರೈಲು ಇದಲ್ಲ ಅಂತೆಲ್ಲ ಟೀಕೆಗಳು ವ್ಯಕ್ತವಾಗುತ್ತಿದ್ದವು. ಇದರ ಬೆನ್ನಲ್ಲೇ ನೈಋುತ್ಯ ರೈಲ್ವೆಯು ಬೆಂಗಳೂರು-ಧಾರವಾಡ-ಬೆಂಗಳೂರು ವಂದೇ ಭಾರತ್ ರೈಲು ಟಿಕೆಟ್ ದರವನ್ನು ಪರಿಷ್ಕರಣೆ ಮಾಡಿದೆ. ಎಕ್ಸಿಕ್ಯೂಟಿವ್ ಕ್ಲಾಸ್ ಟಿಕೆಟ್ ದರ ಹೆಚ್ಚಿಸಿದ್ದರೆ, ಎಸಿ ಕಾರ್ಚೇರ್ ಟಿಕೆಟ್ ದರ ಇಳಿಕೆ ಮಾಡಲಾಗಿದೆ. ಜತೆಗೆ ಪ್ರತಿ ನಿಲ್ದಾಣಗಳ ನಡುವಿನ ಪ್ರಯಾಣದ ದರವನ್ನು 20 ರೂ. ಹೆಚ್ಚಿಸಲಾಗಿದೆ. ಹಾಗಾದ್ರೆ, ಎಷ್ಟೆಷ್ಟು ಇಳಿಕೆಯಾಗಿದೆ ಎನ್ನುವ ವಿವರ ಈ ಕೆಳಗಿನಂತಿದೆ.
ಇದನ್ನೂ ಓದಿ: ಧಾರವಾಡ-ಬೆಂಗಳೂರು ವಂದೇ ಭಾರತ್ ರೈಲಿನ ವಿಶೇಷತೆ ಏನು? ಎಲ್ಲೆಲ್ಲಿ ನಿಲ್ಲುತ್ತೆ? ಟಿಕೆಟ್ ಎಷ್ಟು?
ಈ ಮೊದಲು ಬೆಂಗಳೂರು ಸಿಟಿ ರೈಲು ನಿಲ್ದಾಣದಿಂದ (ಕೆಎಸ್ಆರ್) ಯಶವಂತಪುರಕ್ಕೆ 410 ರೂ. ಟಿಕೆಟ್ ದರ ನಿಗದಿ ಮಾಡಲಾಗಿತ್ತು. ಈಗ 365 ರೂ.ಗೆ ಇಳಿಕೆ ಮಾಡಲಾಗಿದೆ. ಅದೇ ರೀತಿ ಧಾರವಾಡದಿಂದ ಹುಬ್ಬಳ್ಳಿಗೆ ಇದೇ ರೀತಿ ಕಡಿಮೆ ಮಾಡಲಾಗಿದೆ. ಆದರೆ ಎಕ್ಸಿಕ್ಯೂಟಿವ್ ಕ್ಲಾಸ್ನಲ್ಲಿ ಇದೇ ನಿಲ್ದಾಣಗಳ ನಡುವೆ ಸಂಚರಿಸಲು ಈ ಮೊದಲು ನಿಗದಿ ಮಾಡಿದ್ದ 545 ರೂ. ಬದಲು 690 ರೂ.ಗೆ ಹೆಚ್ಚಿಸಲಾಗಿದೆ.
ಕೇವಲ ಎಸಿ ಕಾರ್ಚೇರ್ ಟಿಕೆಟ್ ದರ ಇಳಿಕೆ ಮಾಡಲಾಗಿದ್ದು, ಪರಿಷ್ಕೃತ ದರ ಇಂತಿದೆ. ಬೆಂಗಳೂರು-ಧಾರವಾಡ 1185 ರೂ., ಬೆಂಗಳೂರು- ಹುಬ್ಬಳ್ಳಿ 1155 ರೂ., ಬೆಂಗಳೂರು- ದಾವಣಗೆರೆ 935 ರೂ., ಯಶವಂತಪುರ-ದಾವಣಗೆರೆ 920 ರೂ, ಯಶವಂತಪುರ-ಹುಬ್ಬಳ್ಳಿ 1155 ರೂ., ಯಶವಂತಪುರ-ಧಾರವಾಡ 1185 ರೂ., ದಾವಣಗೆರೆ-ಧಾರವಾಡ ರೂ.555, ದಾವಣಗೆರೆ-ಹುಬ್ಬಳ್ಳಿ 520 ರೂ, ಹುಬ್ಬಳ್ಳಿಯಿಂದ ಧಾರವಾಡಕ್ಕೆ 365 ರೂ. ನಿಗದಿಪಡಿಸಲಾಗಿದೆ.
ಇನ್ನು ರೂಲಿನ ಎಕ್ಸಿಕ್ಯೂಟಿವ್ ಕ್ಲಾಸ್ ಟಿಕೆಟ್ ದರ ಏರಿಕೆ ಮಾಡಲಾಗಿದ್ದು, ಅದು ಇಂತಿದೆ. ಬೆಂಗಳೂರು- ಧಾರವಾಡ 2265 ರೂ., ಬೆಂಗಳೂರು- ಹುಬ್ಬಳ್ಳಿ 2200ರೂ., ಬೆಂಗಳೂರು-ದಾವಣಗೆರೆ 1760ರೂ., ಯಶವಂತಪುರ- ಧಾರವಾಡ .2265ರೂ, ಯಶವಂತಪುರ- ಹುಬ್ಬಳ್ಳಿ 2200ರೂ., ಯಶವಂತಪುರ- ದಾವಣಗೆರೆ 1730ರೂ., ದಾವಣಗೆರೆ- ಹುಬ್ಬಳ್ಳಿ 1005ರೂ., ದಾವಣಗೆರೆ- ಧಾರವಾಡ 1075ರೂ., ಹುಬ್ಬಳ್ಳಿ -ಧಾರವಾಡ 690ರೂ.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ