ಟರ್ಕಿ ಹಾಗೂ ಅಜರ್​ಬೈಜನ್​ಗೆ ಶಾಕ್ ಕೊಟ್ಟ ಬೆಂಗಳೂರಿನ ಬಟ್ಟೆ ವ್ಯಾಪಾರಿಗಳು: ಆಮದು, ರಫ್ತು ನಿಷೇಧ

ಪಾಕ್​ಗೆ ಬೆಂಬಲ ನೀಡುವ ಮೂಲಕ ಟರ್ಕಿ ಹಾಗೂ ಅಜರ್‌ಬೈಜಾನ್​ ರಾಷ್ಟ್ರೀಯ ಭಾವನೆಗೆ ಧಕ್ಕೆ ತಂದ ಹಿನ್ನಲೆ ಇತ್ತ ಬೆಂಗಳೂರಿನ ಬಟ್ಟೆ ವ್ಯಾಪಾರಿಗಳು ಬಟ್ಟೆ ವಸ್ತುಗಳ ಆಮದು ಮತ್ತು ರಫ್ತು ವ್ಯವಹಾರ ತಕ್ಷಣದಿಂದಲೇ ಸಂಪೂರ್ಣ ರದ್ದು ಮಾಡುವ ಮೂಲಕ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಆ ಮೂಲಕ ಎರಡು ದೇಶಗಳಿಗೆ ಶಾಕ್​ ನೀಡಿದ್ದಾರೆ.

ಟರ್ಕಿ ಹಾಗೂ ಅಜರ್​ಬೈಜನ್​ಗೆ ಶಾಕ್ ಕೊಟ್ಟ ಬೆಂಗಳೂರಿನ ಬಟ್ಟೆ ವ್ಯಾಪಾರಿಗಳು: ಆಮದು, ರಫ್ತು ನಿಷೇಧ
ದಿ ಬೆಂಗಳೂರು ಹೋಲ್ ಸೇಲ್ ಕ್ಲಾಥ್ ಮರ್ಚೆಂಟ್ ಅಸೋಸಿಯೇಶನ್
Updated By: ಗಂಗಾಧರ​ ಬ. ಸಾಬೋಜಿ

Updated on: May 17, 2025 | 1:05 PM

ಬೆಂಗಳೂರು, ಮೇ 17: ಭಾರತದ ವಿರುದ್ಧ ದಾಳಿ ಮಾಡಿದ ಪಾಕಿಸ್ತಾನದ (Pakistan) ಜತೆ ಕೈಜೋಡಿಸಿರುವ ರಾಷ್ಟ್ರಗಳಿಗೆ ಬ್ಯಾನ್​ ಬಿಸಿ ತಟ್ಟುತ್ತಿದೆ. ಟರ್ಕಿ ಮೇಲೆ ಭಾರತ ಟ್ರೇಡ್​ ವಾರ್ ಸಾರಿದೆ. ಇನ್ನು ಪಾಕಿಸ್ತಾನಕ್ಕೆ ಸಪೋರ್ಟ್ ಮಾಡಿದ್ದರಿಂದ ಈಗಾಗಲೇ ಅಜರ್​​ಬೈಜನ್ (Azerbaijan)​​ ವಿರುದ್ಧ ಬಾಯ್ಕಾಟ್ ಅಭಿಯಾನ ಶುರುವಾಗಿದೆ. ಹಾಗಾಗಿ ಟರ್ಕಿ ಹಾಗೂ ಅಜರ್​​ಬೈಜನ್ ಜತೆಗಿನ ವ್ಯಾಪಾರ ವಹಿವಾಟಕ್ಕೆ ಬಹಿಷ್ಕಾರ ವಿಧಿಸಲಾಗಿದೆ. ಇದರ ಬೆನ್ನಲ್ಲೇ ಇದೀಗ ಬಟ್ಟೆ ವಸ್ತುಗಳ ಆಮದು ಮತ್ತು ರಫ್ತು ವ್ಯವಹಾರ ರದ್ದು ಮಾಡುವ ಮೂಲಕ ಬೆಂಗಳೂರಿನ ಬಟ್ಟೆ ವ್ಯಾಪಾರಿಗಳಿಂದ ಆ ಎರಡು ದೇಶಗಳಿಗೆ ಶಾಕ್​ ನೀಡಲಾಗಿದೆ.

ಟರ್ಕಿ ಹಾಗೂ ಅಜರ್‌ಬೈಜಾನ್ ಯುದ್ಧದಲ್ಲಿ ಪಾಕಿಸ್ತಾನಕ್ಕೆ ಸಾಥ್ ನೀಡಿದ್ದ ಹಿನ್ನೆಲೆ ಆ ದೇಶಗಳ ಹೋಲ್ ಸೇಲ್ ವ್ಯಾಪರಕ್ಕೆ ಬಾಯ್ಕಾಟ್ ಹೇಳಲಾಗುತ್ತಿದೆ. ಈ ನಿಟ್ಟಿನಲ್ಲಿ ದಿ ಬೆಂಗಳೂರು ಹೋಲ್​ಸೇಲ್ ಕ್ಲಾಥ್ ಮರ್ಚೆಂಟ್ ಅಸೋಸಿಯೇಶನ್​ನಿಂದ ಟರ್ಕಿ ಹಾಗೂ ಅಜರ್ ಬೈಜಾನ್ಗೆ ಶಾಕ್​ ನೀಡಿದೆ. ಚಿಕ್ಕಪೇಟೆ ಸೇರಿದ್ದಂತೆ ಇತರೆ ವ್ಯಾಪರಿಗಳಿಂದ ಟರ್ಕಿ ಹಾಗೂ ಅಜರ್‌ಬೈಜಾನ್​ನಿಂದ ಆಮದು ನಿಷೇಧಿಸಲಾಗಿದೆ.

ಇದನ್ನೂ ಓದಿ: ಟರ್ಕಿ ಬೆನ್ನಲ್ಲೆ ಅಜೆರ್ಬೈಜಾನ್ ಬಾಯ್ಕಾಟ್ಗೆ ಮುಂದಾದ ಪ್ರವಾಸಿಗರು: ನೂರಾರು ಕನ್ನಡಿಗರಿಂದ ಟ್ರಿಪ್​ ಕ್ಯಾನ್ಸಲ್

ಇದನ್ನೂ ಓದಿ
ಬೆಂಗಳೂರು ತುಮಕೂರು ಮೆಟ್ರೋ ಸ್ಟುಪಿಡ್ ಐಡಿಯಾ ಎಂದ ತೇಜಸ್ವಿ ಸೂರ್ಯ!
ಅಜೆರ್ಬೈಜಾನ್ ಬಾಯ್ಕಾಟ್ಗೆ ಮುಂದಾದ ಕನ್ನಡಿಗರು: ಟ್ರಿಪ್​ ಕ್ಯಾನ್ಸಲ್
ಸಕಲೇಶಪುರ–ಸುಬ್ರಹ್ಮಣ್ಯ ಮಾರ್ಗ ಕಾಮಗಾರಿ: 6 ತಿಂಗಳು ರೈಲುಗಳ ಸಂಚಾರ ರದ್ದು
ಹೆಬ್ಬಾಳ ಫ್ಲೈಓವರ್​​ ಇಂದಿನಿಂದ ಮೇ 21ರವರೆಗೆ ಪ್ರತಿದಿನ 3 ಗಂಟೆ ಬಂದ್

ಟರ್ಕಿ ಹಾಗೂ ಅಜರ್‌ಬೈಜಾನ್​ ರಾಷ್ಟ್ರೀಯ ಭಾವನೆಗೆ ಧಕ್ಕೆ ತಂದಿವೆ. ನಮ್ಮ ದೇಶದ ವಿರುದ್ಧ ಪಾಕ್​ಗೆ ಬೆಂಬಲ ನೀಡಿವೆ. ಹೀಗಾಗಿ ವ್ಯಾಪಾರ ವಹಿವಾಟು ಆ ದೇಶಗಳೊಂದಿಗೆ ನಿಲ್ಲಿಸುವಂತೆ ಬೆಂಗಳೂರು ಹೋಲ್ ಸೇಲ್ ಬಟ್ಟೆ ವ್ಯಾಪಾರಿಗಳ ಸಂಘಟನೆಯಿಂದ ನಿರ್ಧರಿಸಲಾಗಿದೆ.

ಇದನ್ನೂ ಓದಿ: ಶರಾವತಿ ನದಿ ತೀರದ ‘ರಾಣಿ ವೀಳ್ಯದೆಲೆ’ಗೆ ಪಾಕಿಸ್ತಾನವೇ ದೊಡ್ಡ ಮಾರುಕಟ್ಟೆ! ಆದರೂ ರಫ್ತು ನಿರಾಕರಿಸಿದ ರೈತರು

ಟರ್ಕಿ ಮತ್ತು ಅಜರ್‌ಬೈಜಾನ್ ದೇಶಗಳೊಂದಿಗೆ ಬಟ್ಟೆ ವ್ಯಾಪಾರದ ಸ್ಥಗಿತ ಮಾಡುವಂತೆ ವ್ಯಾಪರಿಗಳಿಗೆ ಸೂಚನೆ ನೀಡಲಾಗಿದೆ. ಟರ್ಕಿ ಮತ್ತು ಅಜರ್‌ಬೈಜಾನ್ ದೇಶಗಳೊಂದಿಗೆ ಬಟ್ಟೆ ವಸ್ತುಗಳ ಆಮದು ಮತ್ತು ರಫ್ತು ವ್ಯವಹಾರ ತಕ್ಷಣದಿಂದಲೇ ಸಂಪೂರ್ಣ ರದ್ದು ಮಾಡುವ ಮೂಲಕ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.

ಅಜರ್​​ಬೈಜನ್ ಟ್ರಿಪ್​​​​​​​​ನಿಂದ ಹಿಂದೆ ಸರಿದ ಭಾರತೀಯರು

ಅಜರ್​​ಬೈಜನ್​​ನ ರಾಜಧಾನಿ ಬಾಕೂ ಪ್ರವಾಸಕ್ಕೆ ತೆರಳುತ್ತಿದ್ದವ್ರೆಲ್ಲ ಹಿಂದೆ ಸರಿಯುತ್ತಿದ್ದಾರೆ. ಪ್ರತಿ ವರ್ಷ 2 ರಿಂದ 3 ಲಕ್ಷ ಭಾರತೀಯರು ಅಜರ್​​ಬೈಜನ್​​ಗೆ ಪ್ರವಾಸಕ್ಕೆ ಹೋಗುತ್ತಿದ್ದರು. ಬೆಂಗಳೂರಿಂದ ವಾರಕ್ಕೆ 46 ಫ್ಲೈಟ್​​ ಅಜರ್​ಬೈಜನ್​​ಗೆ ಸಂಚಾರ ಮಾಡುತ್ತವೆ. ಆದ್ರೀಗ, ಭಾರತದ ಶತ್ರುವಿನ ಜತೆ ನಿಂತ ದೇಶಕ್ಕೆ ನಾವು ತೆರಳಲ್ಲ ಅಂತ, ಟ್ರಿಪ್​​ಗಳನ್ನ ಕ್ಯಾನ್ಸಲ್ ಮಾಡುತ್ತಿದ್ದಾರೆ. ಬೆಂಗಳೂರಿನ ಸಾವಿರಾರು ಜನರು ಅಜರ್​​ಬೈಜನ್ ಪ್ರವಾಸದಿಂದ ಹಿಂದೆ ಸರಿದಿದ್ದಾರೆ. ಸದ್ಯ ಪಾಕ್​​ಗೆ ಸಾಥ್​ ಕೊಟ್ಟು ಟರ್ಕಿ ಹಾಗೂ ಅಜರ್​ ಬೈಜನ್​​​​ ಪೀಕಲಾಟಕ್ಕೆ ಸಿಲುಕಿವೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 12:53 pm, Sat, 17 May 25