
ಬೆಂಗಳೂರು, ಆಗಸ್ಟ್ 17: ಸ್ವಾತಂತ್ರ್ಯ ದಿನ ರಜೆ, ವಾರಾಂತ್ಯ ಹಿನ್ನೆಲೆಯಲ್ಲಿ ಊರು, ಪ್ರವಾಸಕ್ಕೆ ತೆರಳಿದ ಜನರು ಸೋಮವಾರ (ಆ.18) ಬೆಳಗ್ಗೆ ಬೆಂಗಳೂರಿಗೆ (Bengaluru) ಮರಳುತ್ತಾರೆ. ಇದರಿಂದ ಸಹಜವಾಗಿ ನಮ್ಮ ಮೆಟ್ರೋದಲ್ಲಿ (Namma Metro) ಪ್ರಯಾಣಿಕರ ಸಂಖ್ಯೆ ಏರಿಕೆಯಾಗುವ ಸಾಧ್ಯತೆ ಇದೆ. ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಯಂತ್ರಿಸಲು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಹಳದಿ ಮಾರ್ಗದ ರೈಲು ಸಂಚಾರವನ್ನು ಸೋಮವಾರ (ಆ.18) ಒಂದು ದಿನ ಬೇಗ ಆರಂಭಿಸಲು ನಿರ್ಧರಿಸಿದೆ.
ನಮ್ಮ ಮೆಟ್ರೋ ಹಳದಿ ಮಾರ್ಗದ ರೈಲುಗಳುಬೆಳಿಗ್ಗೆ 5:00 ಗಂಟೆಗೆ ಆರಂಭವಾಗಲಿವೆ. ಮೊದಲ ಮೆಟ್ರೋ ರೈಲು ಸೇವೆ ಆರ್.ವಿ ರಸ್ತೆಯಿಂದ ಡೆಲ್ಯಾ ಎಲೆಕ್ಟ್ರಾನಿಕ್ಸ್, ಬೊಮ್ಮಸಂದ್ರ ನಿಲ್ದಾಣಗಳಿಂದ ಹೊರಡಲಿದೆ. ಈ ವಿಶೇಷ ವ್ಯವಸ್ಥೆ ಕೇವಲ ಸೋಮವಾರಕ್ಕೆ ಮಾತ್ರ ಅನ್ವಯವಾಗುತ್ತದೆ. ಮರುದಿನ ಮಂಗಳವಾರ (ಆ.19) ದಿಂದ ಹಳದಿ ಮಾರ್ಗದ ಮೆಟ್ರೋ ಸೇವೆಗಳು ಎಂದಿನಂತೆ ಬೆಳಿಗ್ಗೆ 6:30 ರಿಂದ ಪ್ರಾರಂಭವಾಗಲಿವೆ.
ಇನ್ನು. ನೇರಳೆ ಮಾರ್ಗ ಮತ್ತು ಹಸಿರು ಮಾರ್ಗದ ಮೆಟ್ರೋ ಸೇವೆಗಳು ಸೋಮವಾರದಂದು ಸಾಮಾನ್ಯವಾಗಿ ಬೆಳಿಗ್ಗೆ 4:15 ರಿಂದಲೇ ಕಾರ್ಯನಿರ್ವಹಿಸುತ್ತವೆ.
Attention passengers: Yellow Line Services to begin at 5:00 am on Monday 18th August 2025
Check the media release for more details. pic.twitter.com/s9ZmCQxQ2z— ನಮ್ಮ ಮೆಟ್ರೋ (@OfficialBMRCL) August 17, 2025
ಆರ್ ವಿ ರಸ್ತೆಯಿಂದ ಬೊಮ್ಮಸಂದ್ರದವರೆಗೂ ಸಂಪರ್ಕ ಕಲಿಸಲಾಗಿದ್ದು, ಒಟ್ಟು 19.15 ಕಿಲೋ ಮೀಟರ್ ಉದ್ದದ ಮಾರ್ಗವಾಗಿದೆ. ಬೆಂಗಳೂರಿನ ಐಟಿ ಹಬ್ ಎಲೆಕ್ಟ್ರಾನಿಕ್ ಸಿಟಿಯಿಂದ ಬೆಂಗಳೂರಿನ ಕೇಂದ್ರ ಭಾಗದ ನಡುವೆ ಸಂಪರ್ಕ ಕೊಂಡಿಯಾಗಿದೆ.
ಹಳದಿ ಮಾರ್ಗದಲ್ಲಿ ಒಟ್ಟು 16 ನಿಲ್ದಾಣಗಳಿವೆ. ಹಳದಿ ಮಾರ್ಗದ ರೈಲು 3 ಮೆಟ್ರೋ ಲೈನ್‌ಗೆ ಕೂಡುತ್ತದೆ. ಹಳದಿ ಮಾರ್ಗವು ಹಸಿರು ಮಾರ್ಗ, ಗುಲಾಬಿ, ನೀಲಿ ಮಾರ್ಗಕ್ಕೆಕ್ಕೆ ಕೂಡುತ್ತದೆ. ಜಯದೇವ ಆಸ್ಪತ್ರೆ ನಿಲ್ದಾಣವು ಅತಿ ಎತ್ತರ ಹಾಗೂ ದೊಡ್ಡ ಮೆಟ್ರೋ ನಿಲ್ದಾಣ ಎಂಬ ಖ್ಯಾತಿ ಪಡೆದಿದೆ.
ಇದನ್ನೂ ಓದಿ: ನಮ್ಮ ಮೆಟ್ರೋ ಹಳದಿ ಮಾರ್ಗದ ವಿಶೇಷತೆಗಳೇನು? ಇಲ್ಲಿದೆ ವಿವರ, ಫೋಟೋಸ್ ನೋಡಿ
ನಮ್ಮ ಮೆಟ್ರೋ ಹಳದಿ ಮಾರ್ಗದ ನಿಲ್ದಾಣಗಳು: ಬೊಮ್ಮಸಂದ್ರ, ಹೆಬ್ಬಗೋಡಿ, ಹುಸ್ಕೂರ್ ರಸ್ತೆ, ಇನ್ಫೋಸಿಸ್ ಫೌಂಡೇಶನ್ ಕೋನಪ್ಪನ ಅಗ್ರಹಾರ, ಎಲೆಕ್ಟ್ರಾನಿಕ್ ಸಿಟಿ, ಬೆರತೇನ ಅಗ್ರಹಾರ, ಹೊಸ ರೋಡ್, ಸಿಂಗಸಂದ್ರ, ಕೂಡ್ಲು ಗೇಟ್, ಹೊಂಗಸಂದ್ರ, ಬೊಮ್ಮನಹಳ್ಳಿ, ಸೆಂಟ್ರಲ್ ಸಿಲ್ಕ್ ಬೋರ್ಡ್, ಬಿಟಿಎಂ ಲೇಔಟ್, ಜಯದೇವ ಆಸ್ಪತ್ರೆ, ರಾಗಿ ಗುಡ್ಡ ದೇವಸ್ಥಾನ, ಆರ್.ವಿ (ರಾಷ್ಟ್ರೀಯ ವಿದ್ಯಾಲಯ) ರಸ್ತೆ.
Published On - 4:36 pm, Sun, 17 August 25