AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಳದಿ ಮಾರ್ಗದ ಮೆಟ್ರೋ ಪ್ರಯಾಣಿಕರಿಗೆ ಮತ್ತೊಂದು ಗುಡ್​ನ್ಯೂಸ್

ಬೆಂಗಳೂರಿನಲ್ಲಿ ಯೆಲ್ಲೋ ಲೈನ್ ಮೆಟ್ರೋ ಮಾರ್ಗ ಸಂಚಾರಕ್ಕೆ ಮುಕ್ತವಾಗಿದೆ. ಆರ್.ವಿ. ರಸ್ತೆ ಮತ್ತು ಡೆಲ್ಮಾ ಎಲೆಕ್ಟ್ರಾನಿಕ್ಸ್ ಬೊಮ್ಮಸಂದ್ರ ಮೆಟ್ರೋ ನಿಲ್ದಾಣಗಳಿಂದ ಬೆಳಿಗ್ಗೆ 6.30 ಕ್ಕೆ ರೈಲುಗಳು ಸಂಚಾರ ಪ್ರಾಂಭಿಸುತ್ತಿದ್ದು, ಅದೆಷ್ಟೋ ಪ್ರಯಾಣಿಕರು ಟ್ರಾಫಿಕ್ ಕಿರಿಕಿರಿ ಬೇಡವೆಂದು ಮೆಟ್ರೋ ಮೊರೆ ಹೋಗುತ್ತಿದ್ದಾರೆ. ಇದರಿಂದ ಸಿಲ್ಕೋ ಬೋರ್ಡ್​ ಮಾರ್ಗದಲ್ಲಿ ಕೊಂಚ ಸಂಚಾರ ದಟ್ಟಣೆ ಕಡಿಮೆಯಾಗಿದೆ. ಇದರ ನಡುವೆ ಇದೀಗ ರಾಜ್ಯ ಸರ್ಕಾರ ಈ ಮಾರ್ಗದ ಪ್ರಯಾಣಿಕರಿಗೆ ಮತ್ತೊಂದು ಸಿಹಿಸುದ್ದಿಯೊಂದು ಕೊಟ್ಟಿದೆ.

ಹಳದಿ ಮಾರ್ಗದ ಮೆಟ್ರೋ ಪ್ರಯಾಣಿಕರಿಗೆ ಮತ್ತೊಂದು ಗುಡ್​ನ್ಯೂಸ್
ಮೆಟ್ರೋ ಯೆಲ್ಲೋ ಲೈನ್
ರಮೇಶ್ ಬಿ. ಜವಳಗೇರಾ
|

Updated on: Aug 13, 2025 | 7:30 PM

Share

ಬೆಂಗಳೂರು, (ಆಗಸ್ಟ್ 13): ಆಗಸ್ಟ್ 11ರಿಂದ ಸಾರ್ವಜನಿಕರ ಪ್ರಯಾಣಕ್ಕೆ ಮುಕ್ತವಾಗಿರುವ ಹಳದಿ ಮೆಟ್ರೋ ಮಾರ್ಗದ (Yellow Metro Line) ಪ್ರಯಾಣಿಕರಿಗೆ ರಾಜ್ಯ ಸರ್ಕಾರ ಮತ್ತೊಂದು ಸಿಹಿ ಸುದ್ದಿಯೊಂದನ್ನು ನೀಡಿದೆ. BMTC ಹಳದಿ ಮೆಟ್ರೋ ನಿಲ್ದಾಣಗಳಿಂದ ಫೀಡರ್ ಬಸ್ ಸರ್ವಿಸ್ (BMTC feeder bus) ಆರಂಭಿಸಿದೆ. ಹೌದು..ಮೆಟ್ರೊ ಪ್ರಯಾಣಿಕರ ಅನುಕೂಲಕ್ಕಾಗಿ ಆರ್‌.ವಿ.ರಸ್ತೆ-ಬೊಮ್ಮಸಂದ್ರ ಮಾರ್ಗದಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು(ಬಿಎಂಟಿಸಿ) ಹೊಸದಾಗಿ ಫೀಡರ್‌ ಬಸ್‌ಗಳ ಕಾರ್ಯಾಚರಣೆಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಂಗಳವಾರ ಚಾಲನೆ ನೀಡಿದ್ದಾರೆ. ಹೀಗಾಗಿ ಹಳದಿ ಮೆಟ್ರೊ ಮಾರ್ಗದಲ್ಲಿ ಸಂಸ್ಥೆಯು ಒಟ್ಟು 4 ಮಾರ್ಗಗಳಲ್ಲಿ ಫೀಡರ್‌ ಸೇವೆ ಆರಂಭಿಧಿಸಿದ್ದು, 12 ಬಸ್‌ಗಳು 96 ಟ್ರಿಪ್‌ ಕಾರ್ಯಾಚರಣೆ ನಡೆಸುತ್ತಿವೆ.

 ಹಳದಿ ಮಾರ್ಗದ 6 ನಿಲ್ದಾಣಗಳಿಂದ ಫೀಡರ್‌ ಬಸ್‌

ಹೊಸ ರೋಡ್‌, ಬೆರಟೇನ ಅಗ್ರಹಾರ, ಎಲೆಕ್ಟ್ರಾನಿಕ್‌ ಸಿಟಿ, ಇನ್ಫೋಸಿಸ್‌ ಫೌಂಡೇಶನ್‌, ಕೋನಪ್ಪನ ಅಗ್ರಹಾರ, ಹೆಬ್ಬಗೋಡಿ ಹಾಗೂ ಬೊಮ್ಮಸಂದ್ರ ಸೇಧಿರಿಧಿದಂತೆ ಒಟ್ಟು 6 ಮೆಟ್ರೊ ನಿಲ್ದಾಣಗಳಿಗೆ ಫೀಡರ್‌ ಸೇವೆಗಳ ಸೌಲಭ್ಯ ಇದೆ. ಪ್ರತಿದಿನ 12 ಬಿಎಂಟಿಸಿ ಬಸ್‌ಗಳು, ಪ್ರತಿದಿನ 96 ಟ್ರಿಪ್ ಮಾಡಲಿವೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಮಾಹಿತಿ ನೀಡಿದ್ದಾರೆ. ಇದರಿಂದ ಮೆಟ್ರೋ ನಿಲ್ದಾಣದಿಂದ ಅಥವಾ ಬೇರೆ ಕಡೆಯಿಂದ ಈ ಮಾರ್ಗದ ಮೆಟ್ರೋಗೆ ಹೋಗಬೇಕಾದವರಿಗೆ ತುಂಬ ಅನುಕೂಲವಾಗಿದೆ.

ಇದನ್ನೂ ಓದಿ
Image
ಯೆಲ್ಲೋ ಲೈನ್​​ನಲ್ಲಿ ಮೆಟ್ರೋ ಮಿಸ್ ಮಾಡಿಕೊಂಡಿದ್ದಕ್ಕೆ ಪ್ರಯಾಣಿಕನಿಗೆ ದಂಡ
Image
ಯೆಲ್ಲೋ ಲೈನ್ ಉದ್ಘಾಟನೆ ಬೆನ್ನಲ್ಲೇ ಮಿಲಿಯನ್ ದಾಟಿದ ಮೆಟ್ರೋ ಪ್ರಯಾಣಿಕರು!
Image
ಮೆಟ್ರೋ ಹಳದಿ ಮಾರ್ಗ ಶುರು: ಪ್ರಯಾಣಿಕರು ಏನಂದ್ರು ನೋಡಿ
Image
ನಮ್ಮ ಮೆಟ್ರೋ ಹಳದಿ ಮಾರ್ಗದ ವಿಶೇಷತೆಗಳೇನು? ಇಲ್ಲಿದೆ ವಿವರ, ಫೋಟೋಸ್​ ನೋಡಿ

ಇದನ್ನೂ ಓದಿ: ಮೋದಿ ಉದ್ಘಾಟಿಸಿದ ಹಳದಿ ಮೆಟ್ರೋ ಟಿಕೆಟ್ ದರ,ರೈಲು ವೇಳಾಪಟ್ಟಿ ಹೀಗಿದೆ

ಸೋಮವಾರದಿಂದ ನಮ್ಮ ಮೆಟ್ರೋ ಮಾರ್ಗದಲ್ಲಿ ವಾಣಿಜ್ಯ ಸಂಚಾರ ಆರಂಭವಾಗಿದೆ. ಮೊದಲ ದಿನವೇ ಸಾವಿರಾರು ಸಂಖ್ಯೆಯಲ್ಲಿ ಜನ ಪ್ರಯಾಣ ಮಾಡಿದ್ದಾರೆ. ಈ ಮಾರ್ಗದ ಮೆಟ್ರೋ ನಿಲ್ದಾಣಗಳಿಗೆ ತೆರಳಲು ವಿವಿಧ ಬಡಾವಣೆಗಳಿಂದ ಬಿಎಂಟಿಸಿ ಬಸ್‌ ಸೇವೆಯನ್ನು ಆರಂಭಿಸಿದೆ. ಮಂಗಳವಾರ ಈ ಫೀಡರ್‌ ಬಸ್‌ಗಳಿಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಚಾಲನೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಪ್ರತಿದಿನ ಬಿಎಂಟಿಸಿ 6,217 ಬಸ್‌ಗಳು ಚಲಿಸುತ್ತವೆ. ಈ ಬಸ್‌ಗಳಲ್ಲಿ ದಿನಕ್ಕೆ ಸುಮಾರು 44 ಲಕ್ಷ ಪ್ರಯಾಣಿಕರು ಪ್ರಯಾಣಿಸುತ್ತಾರೆ. ಬಸ್‌ಗಳು 65,206 ಟ್ರಿಪ್ ಮೂಲಕ 12.85 ಲಕ್ಷ ಕಿ.ಮೀ. ಕವರ್ ಮಾಡುತ್ತವೆ. ಈಗ ಹಳದಿ ಮೆಟ್ರೋ ಪ್ರಯಾಣಿಕರಿಗಾಗಿ ಫೀಡರ್ ಬಸ್ ಸೇವೆಯನ್ನು ಆರಂಭಿಸಿದೆ. ಈ ಹಿಂದೆ ಕೆ.ಆರ್. ಪುರಂ ರೈಲು ನಿಲ್ದಾಣ ಮತ್ತು ಬಿಟಿಎಂ ಲೇಔಟ್ ಬಸ್ ನಿಲ್ದಾಣದ ನಡುವೆ ಫೀಡರ್ ಬಸ್ ಸೇವೆ ಆರಂಭಿಸಲಾಗಿತ್ತು. ಹೊಸ ಫೀಡರ್ ಬಸ್ ಸೇವೆಯ ಮಾಹಿತಿ ಈ ಕೆಳಗಿನಂತಿದೆ.

ಎಲೆಕ್ಟ್ರಾನಿಕ್‌ ಸಿಟಿ – ಕೊಡತಿ ವಿಪ್ರೋ

  • ಬಸ್‌ ಮಾರ್ಗ ಸಂಖ್ಯೆ MF -22
  • ಎಲೆಕ್ಟ್ರಾನಿಕ್ಸ್ ಸಿಟಿ ವಿಪ್ರೋ ಗೇಟ್‌ನಿಂದ ಬಸ್‌ ಬಿಡುವ ವೇಳೆ – ಬೆಳಿಗ್ಗೆ 08.20, 08.50, 09.20, 09.50, 10.45, 11.30, ಮಧ್ಯಾಹ್ನ 12.00, 12.30, 1.00, 1.55, 2.25, 2.55, 3.25, 3.55, 4.25, 4.55.
  • ಕೊಡತಿ ವಿಪ್ರೋವಿನಿಂದ ಬಸ್‌ ಬಿಡುವ ವೇಳೆ – ಬೆಳಿಗ್ಗೆ 07.10, 07.40, 08.10, 08.40, 09.35, 10.30, 11.00, 11.30, ಮಧ್ಯಾಹ್ನ 12.00, 12.30, ಮಧ್ಯಾಹ್ನ 1 ಕ್ಕೆ 1.30, 2.25, 2.55, 3.25, 3.55.
  • ಎಲ್ಲೆಲ್ಲಿ ಸ್ಟಾಪ್‌ – ಎಲೆಕ್ಟ್ರಾನಿಕ್ಸ್ ಸಿಟಿ, ಕೋನಪ್ಪನ ಅಗ್ರಹಾರ, ಹೊಸರೋಡ್, ಕಸವನಹಳ್ಳಿ, ಕೈಕೊಂಡ್ರಹಳ್ಳಿ, ದೊಡ್ಡಕನಹಳ್ಳಿ.
  • ಬಸ್‌ಗಳ ಸಂಖ್ಯೆ – 4.
  • ಟ್ರಪ್‌ಗಳು – 32

ಎಲೆಕ್ಟ್ರಾನಿಕ್‌ ಸಿಟಿ – ಚಂದಾಪುರ- ಕೊಡತಿ ವಿಪ್ರೋ

  • ಬಸ್‌ ಮಾರ್ಗ ಸಂಖ್ಯೆ MF – 22A: ಎಲೆಕ್ಟ್ರಾನಿಕ್ಸ್ ಸಿಟಿ ವಿಪ್ರೋ ಗೇಟ್‌ನಿಂದ ಬಸ್‌ ಬಿಡುವ ವೇಳೆ – ಬೆಳಿಗ್ಗೆ 08.40, 9.20, 9.45, 10.30, ಮಧ್ಯಾಹ್ನ 12.25, 12.50, 12.55, 1.20, 1.40, ಸಂಜೆ 4.05, 4.20, 4.50 ಕೊಡತಿ ವಿಪ್ರೋದಿಂದ ಬಸ್‌ ಬಿಡುವ ವೇಳೆ: ಬೆಳಿಗ್ಗೆ 8.05, 8.35, 10.25, 11.00, 11.25, 11.55, ಮಧ್ಯಾಹ್ನ 1.50, 2.20, 2.40, 3.10, 5.05, 5.35.
  • ಎಲ್ಲೆಲ್ಲಿ ಸ್ಟಾಪ್‌- ಕೋನಪ್ಪನ ಅಗ್ರಹಾರ, ಎಲೆಕ್ಟ್ರಾನಿಕ್ಸ್ ಸಿಟಿ, ಹುಸ್ಕೂರು ಗೇಟ್, ಚಿಂತಲ ಮಡಿವಾಳ, ಮುತ್ತಾನಲ್ಲೂರು ಕ್ರಾಸ್, ತಿಮ್ಮಸಂದ್ರ ಕ್ರಾಸ್, ಚಂದಾಪುರ ಕ್ರಾಸ್.
  • ಸಂಚರಿಸುವ ಬಸ್‌ಗಳು – 4
  • ಟ್ರಪ್‌ಗಳ ಸಂಖ್ಯೆ – 24

ಬೊಮ್ಮಸಂದ್ರ ರೌಂಡ್‌ ಟ್ರಿಪ್‌

  • ಬಸ್‌ ಮಾರ್ಗ ಸಂಖ್ಯೆ – MF 22B ರೌಂಡ್‌ ಟ್ರಿಪ್‌.
  • ಬೊಮ್ಮಸಂದ್ರದಿಂದ ಬಸ್‌ ಬಿಡುವ ವೇಳೆ: ಬೆಳಿಗ್ಗೆ 8.30, 9.00, 9.25, 9.55, 10.45, 11.15, 11.40, 12.10, 12.30, ಮಧ್ಯಾಹ್ನ 1.00, 1.40, 2.10, 2.35, 3.05, 3.30, 4.00, 4.40, 5.10, 5.35, 6.05.
  • ಎಲ್ಲಿಲ್ಲಿ ಬಸ್‌ ಸ್ಟಾಪ್‌ – ಬೊಮ್ಮಸಂದ್ರ, ತಿರುಪಾಳ್ಯ ಕ್ರಾಸ್, ಎಸ್-ಮಾಂಡೋ-3, ಎಲೆಕ್ಟ್ರಾನಿಕ್ಸ್ ಸಿಟಿ ವಿಪ್ರೋ ಗೇಟ್, ಕೋನಪ್ಪನ ಅಗ್ರಹಾರ, ಎಲೆಕ್ಟ್ರಾನಿಕ್ಸ್ ಸಿಟಿ, ಹೆಬ್ಬಗೋಡಿ, ಬೊಮ್ಮಸಂದ್ರ.
  • ಬಸ್‌ಗಳ ಸಂಖ್ಯೆ – 2
  • ಟ್ರಿಪ್‌ಗಳ ಸಂಖ್ಯೆ – 20

ಬೊಮ್ಮಸಂದ್ರ ರೌಂಡ್‌ ಟ್ರಿಪ್‌

  • ಬಸ್‌ ಮಾರ್ಗ ಸಂಖ್ಯೆ – 4 MF – 22C ರೌಂಡ್‌ ಟ್ರಿಪ್‌
  • ಕೋನಪ್ಪನ ಅಗ್ರಹಾರದಿಂದ ಬಸ್‌ ಬಿಡುವ ವೇಳೆ: ಬೆಳಿಗ್ಗೆ 8.25, 8.55, 9.20, 9.50, 10.35, 11.05, 11.25, 11.55, ಮಧ್ಯಾಹ್ನ 12.15, 12.45, ಮಧ್ಯಾಹ್ನ 1.40, 2.05, 2.30, 2.55, 3.25, 3.50, ಸಂಜೆ 4.45, 5.10, 5.40, 6.05
  • ಎಲ್ಲೆಲ್ಲಿ ಸ್ಟಾಪ್‌ – ಎಲೆಕ್ಟ್ರಾನಿಕ್ಸ್ ಸಿಟಿ ವಿಪ್ರೋ ಗೇಟ್, ಎಸ್-ಮಾಂಡೋ-3, ತಿರುಪಾಳ್ಯ ಕ್ರಾಸ್, ಬೊಮ್ಮಸಂದ್ರ, ಹೆಬ್ಬಗೋಡಿ, ಎಲೆಕ್ಟ್ರಾನಿಕ್ಸ್ ಸಿಟಿ, ಕೋನಪ್ಪನ ಅಗ್ರಹಾರ
  • ಬಸ್‌ಗಳ ಸಂಖ್ಯೆ – 2
  • ಟ್ರಪ್‌ಗಳ ಸಂಖ್ಯೆ – 20