AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೋದಿ ಉದ್ಘಾಟಿಸಿದ ಹಳದಿ ಮೆಟ್ರೋ ಟಿಕೆಟ್ ದರ,ರೈಲು ವೇಳಾಪಟ್ಟಿ ಹೀಗಿದೆ

ಬಹುನಿರೀಕ್ಷಿತ ನಮ್ಮ ಮೆಟ್ರೋ ಹಳದಿ ಮಾರ್ಗ ಈಗಾಗಲೇ ಲೋಕಾರ್ಪಣೆಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿಗೆ ಆಗಮಿಸಿ ಆರ್.ವಿ. ರೋಡ್ ಬೊಮ್ಮಸಂದ್ರ ಯೆಲ್ಲೋ ಲೈನ್ ಮೆಟ್ರೋ ಮಾರ್ಗವನ್ನು ಉದ್ಘಾಟಿಸಿದ್ದು, ಮೊದಲ ದಿನವೇ 83 ಸಾವಿರ ಪ್ರಯಾಣಿಕರು ಪ್ರಯಾಣ ಮಾಡಿದ್ದಾರೆ. ಇನ್ನು ಈ ಹಳದಿ ಮಾರ್ಗದಿಂದ ಸಿಲ್ಕ್ ಬೋರ್ಡ್ ಟ್ರಾಫಿಕ್ ಸಮಸ್ಯೆ ಕೊಂಚ ಕಡಿಮೆಯಾಗಲಿದೆ. ಇನ್ನು ಈ ಹಳದಿ ಮಾರ್ಗ ಮೆಟ್ರೋ ಸಂಚಾರ ಬೆಳಗ್ಗೆ ಎಷ್ಟು ಗಂಟೆಗೆ ಶುರುವಾಗುತ್ತೆ? ಲಾಸ್ಟ್ ಮೆಟ್ರೋ ಎಷ್ಟು ಗಂಟೆಗೆ ಎನ್ನುವ ಮಾಹಿತಿ ಇಲ್ಲಿದೆ.

ಮೋದಿ ಉದ್ಘಾಟಿಸಿದ ಹಳದಿ ಮೆಟ್ರೋ ಟಿಕೆಟ್ ದರ,ರೈಲು ವೇಳಾಪಟ್ಟಿ ಹೀಗಿದೆ
Yellow Metro Line
ರಮೇಶ್ ಬಿ. ಜವಳಗೇರಾ
|

Updated on: Aug 13, 2025 | 6:19 PM

Share

ಬೆಂಗಳೂರು, (ಆಗಸ್ಟ್ 13): ಬಹುನಿರೀಕ್ಷಿತ ಆರ್.ವಿ. ರಸ್ತೆ ಟು ಡೆಲ್ಮಾ ಎಲೆಕ್ಟ್ರಾನಿಕ್ಸ್ ಬೊಮ್ಮಸಂದ್ರ ಹಳದಿ ಮೆಟ್ರೋ ಮಾರ್ಗವನ್ನು (Yellow Metro Line) ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಬಂದು ಲೋಕಾರ್ಪಣೆ ಮಾಡಿ ಹೋಗಿದ್ದು, ಈ ಭಾಗದ ಜನರಿಗೆ ಭಾರಿ ಅನುಕೂಲಕರವಾಗಿದೆ. ಐಟಿ ಬಿಟಿ ಕಂಪನಿಗಳಿರುವ ಕಾರಣ ಈ ಭಾಗದಲ್ಲೇ ಹೆಚ್ಚು ಟ್ರಾಫಿಕ್ ಸಮಸ್ಯೆ ಇತ್ತು. ಆದ್ರೆ, ಇದೀಗ ಮೆಟ್ರೋ ಶುರುವಾಗಿದ್ದರಿಂದ ಜನರು ಸಂತಸಗೊಂಡಿದ್ದಾರೆ. ಇನ್ನು ಈ ಹಳದಿ ಮಾರ್ಗದ ಮೆಟ್ರೋ ವೇಳಾಪಟ್ಟಿಯನ್ನು ನೋಡುವುದಾದರೆ ವಾರದ ಎಲ್ಲಾ ದಿನಗಳಲ್ಲಿ ಆರ್.ವಿ. ರಸ್ತೆ ಮತ್ತು ಡೆಲ್ಮಾ ಎಲೆಕ್ಟ್ರಾನಿಕ್ಸ್ ಬೊಮ್ಮಸಂದ್ರ ಮೆಟ್ರೋ ನಿಲ್ದಾಣಗಳಿಂದ ಬೆಳಿಗ್ಗೆ 6.30 ಕ್ಕೆ ರೈಲುಗಳು ಪ್ರಾರಂಭವಾಗುತ್ತವೆ. ಇನ್ನು ಪ್ರಮುಖವಾಗಿ ಗಮನಿಸಬೇಕಾದ ಅಂಶ ಅಂದರೆ ಗ್ರೀನ್​ ಹಾಗೂ ಪರ್ಪಲ್ ಲೈನ್ ಮೆಟ್ರೋ ಪ್ರತಿ ದಿನ ಬೆಳಗ್ಗೆ 5 ಗಂಟೆಗೆ ಪ್ರಾರಂಭವಾದರೆ,  ಈ ಹೊಸ ಹಳದಿ ಮಾರ್ಗದಲ್ಲಿ ಮೆಟ್ರೋ ಸಂಚಾರ ಬೆಳಗ್ಗೆ 6.30ರಿಂದ ಶುರುವಾಗುತ್ತವೆ.

ಹಳದಿ ಮಾರ್ಗ ಮಟ್ರೋ ವೇಳಾಪಟ್ಟಿ

  • ಸೋಮವಾರದಿಂದ ಶನಿವಾರದವರೆಗೆ ಪ್ರತಿ ದಿನ ಆರ್.ವಿ. ರಸ್ತೆ ಮತ್ತು ಡೆಲ್ಮಾ ಎಲೆಕ್ಟ್ರಾನಿಕ್ಸ್ ಬೊಮ್ಮಸಂದ್ರ ಮೆಟ್ರೋ ನಿಲ್ದಾಣಗಳಿಂದ ಬೆಳಿಗ್ಗೆ 6.30 ಕ್ಕೆ ರೈಲುಗಳು ಪ್ರಾರಂಭವಾಗುತ್ತವೆ. ಭಾನುವಾರ ಮಾತ್ರ ಬೆಳಿಗ್ಗೆ 6.30 ಬದಲಾಗಿ 7.00 ಕ್ಕೆ ಪ್ರಾರಂಭವಾಗುತ್ತವೆ.
  • ಪ್ರತಿ ನಿಲ್ದಾಣದಲ್ಲಿ ನಿಲುಗಡೆ ಸಹಿತ ಈ ವಿಭಾಗದ ಒಟ್ಟು ಪ್ರಯಾಣ ಸಮಯವು ಒಂದು ದಿಕ್ಕಿನಲ್ಲಿ ಸುಮಾರು 35 ನಿಮಿಷಗಳಾಗಿರುತ್ತದೆ.
  • ಒಟ್ಟು 16 ನಿಲ್ದಾಣಗಳಿದ್ದು, ಇದರಲ್ಲಿ ಎರಡು ಟರ್ಮಿನಲ್‌ಗಳು ಸೇರಿವೆ. ಡೆಲ್ಲಾ ಎಲೆಕ್ಟ್ರಾನಿಕ್ಸ್ ಬೊಮ್ಮಸಂದ್ರದಿಂದ ಕೊನೆಯ ರೈಲು ರಾತ್ರಿ 10.42 ಕ್ಕೆ ಮತ್ತು ಆರ್.ವಿ.ರೋಡ್ ಇಂಟರ್‌ಚೇಂಜ್ ನಿಲ್ದಾಣದಿಂದ ಕೊನೆಯ ರೈಲು ರಾತ್ರಿ 11.55 ಕ್ಕೆ ಹೊರಡುತ್ತದೆ.
  • ಬೆಳಿಗ್ಗೆ 6.30 ರಿಂದ ಡೆಲ್ಟಾ ಎಲೆಕ್ಟ್ರಾನಿಕ್ಸ್ ಬೊಮ್ಮಸಂದ್ರದಿಂದ ಹಾಗೂ ಬೆಳಿಗ್ಗೆ 7.10 ರಿಂದ ಆರ್.ವಿ. ರಸ್ತೆ ಮೆಟ್ರೋ ನಿಲ್ದಾಣದಿಂದ ಪ್ರತಿ 25 ನಿಮಿಷಕ್ಕೊಮ್ಮೆ ರೈಲುಗಳು ಸಂಚರಿಸಲಿವೆ.
  • ರಾತ್ರಿ 10.00 ಗಂಟೆಯ ನಂತರ ರೈಲು ಸಂಚಾರದ ಅವಧಿ ಕಡಿಮೆಯಾಗುತ್ತದೆ.
  • ಭಾನುವಾರಗಳಲ್ಲಿ ರೈಲು ಸೇವೆಗಳು ಬೆಳಿಗ್ಗೆ 6.30 ಬದಲಾಗಿ 7.00 ಕ್ಕೆ ಪ್ರಾರಂಭವಾಗುತ್ತವೆ. ಅವಧಿ ಅದೇ ರೀತಿಯೇ ಇರುತ್ತದೆ.

ಇದನ್ನೂ ಓದಿ: ಲೋಕಾರ್ಪಣೆ ಬೆನ್ನಲ್ಲೇ ಅನಾಹುತಕ್ಕೆ ಆಹ್ವಾನ ನೀಡುತ್ತಿದೆ ಯೆಲ್ಲೋ ಲೈನ್ ಮೆಟ್ರೋ ಸ್ಟೇಷನ್: ಪ್ರಯಾಣಿಕರೇ ಎಚ್ಚರ

ಹಳದಿ ಮಾರ್ಗದ ಟರ್ಮಿನಲ್ ನಿಲ್ದಾಣಗಳ ನಡುವಿನ ಪ್ರಯಾಣದ ದರ 60ರೂ. ಟೋಕನ್‌ಗಳು, NCMC ಕಾರ್ಡ್‌ಗಳು, ಬಿಎಂಆರ್‌ಸಿಎಲ್ ಸ್ಮಾರ್ಟ್ ಕಾರ್ಡ್‌ ಗಳು, QR ಟಿಕೆಟ್‌ಗಳು ಎಂದಿನಂತೆಯೇ ಲಭ್ಯವಿದೆ. ಟಿಕೆಟ್‌ ವಿತರಣೆ ವಿಧಾನದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಐಫೋನ್ ಬಳಸುವ ಬಿಎಂಆರ್‌ಸಿಎಲ್ ಪ್ರಯಾಣಿಕರು ಆಪಲ್ ಸ್ಟೋರ್‌ನಿಂದ ನಮ್ಮ ಅಧಿಕೃತ ಮೆಟ್ರೋ ಆಪ್‌ ಅನ್ನು ಡೌನ್‌ಲೋಡ್‌ ಮಾಡಿಕೊಂಡು, ಕ್ಯೂರ್‌ ಕೋಡ್‌ ಆಧಾರಿತ ಟಿಕೆಟ್‌ಗಳನ್ನು ಖರೀದಿಸಲು ಹಾಗೂ ಬಿಎಂಆರ್‌ಸಿಎಲ್ ಸ್ಮಾರ್ಟ್ ಕಾರ್ಡ್‌ಗಳನ್ನು ರೀಚಾರ್ಜ್ ಮಾಡಲು ಬಳಸಿಕೊಳ್ಳಬಹುದು.

ಮೆಟ್ರೋ ಬಳಸಲು ಉದ್ಯೋಗಿಗಳಿಗೆ ಸೂಚಿಸಿದ ಇನ್ಫೋಸಿಸ್

ಆರ್‌ವಿ.ರಸ್ತೆಯಿಂದ ಬೊಮ್ಮಸಂದ್ರ ವರೆಗೆ ದೈನಂದಿನ ಪ್ರಯಾಣವು ಈ ಹಿಂದೆ ಈ ಒಂದು ಮಾರ್ಗದಲ್ಲಿ ಒಂದುವರೆ ಗಂಟೆಗಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತಿತ್ತು. ಈಗ ಕೇವಲ 35 ನಿಮಿಷಗಳಲ್ಲಿ ತಲುಪಬಹುದು. ಹೀಗಾಗಿ ಸಂಚಾರ ದಟ್ಟಣೆ ಕಡಿಮೆ ಮಾಡಲು ಸಹಕಾರಿಯಾಗಲು ಇನ್ಫೋಸಿಸ್ ತನ್ನ ಉದ್ಯೋಗಿಗಳನ್ನು ಹೊಸ ಹಳದಿ ಮೆಟ್ರೋ ಮಾರ್ಗವನ್ನು ಬಳಸಲು ಪ್ರೋತ್ಸಾಹಿಸಿದೆ. ಸಂಸ್ಥೆಯು ಕಳುಹಿಸಿದ ಆಂತರಿಕ ಇಮೇಲ್‌ನಲ್ಲಿ, ವಿಶೇಷವಾಗಿ ಪೀಕ್ ಅವಧಿಯಲ್ಲಿ ಈ ಮಾರ್ಗವನ್ನು “ದಕ್ಷ” ಎಂದು ವರ್ಣಿಸಿ, ಟ್ರಾಫಿಕ್-ಮುಕ್ತ ಪ್ರಯಾಣಕ್ಕೆ ಶಿಫಾರಸು ಮಾಡಲಾಗಿದೆ.

ಇದನ್ನೂ ಓದಿ
Image
ಯೆಲ್ಲೋ ಲೈನ್​​ನಲ್ಲಿ ಮೆಟ್ರೋ ಮಿಸ್ ಮಾಡಿಕೊಂಡಿದ್ದಕ್ಕೆ ಪ್ರಯಾಣಿಕನಿಗೆ ದಂಡ
Image
ಯೆಲ್ಲೋ ಲೈನ್ ಉದ್ಘಾಟನೆ ಬೆನ್ನಲ್ಲೇ ಮಿಲಿಯನ್ ದಾಟಿದ ಮೆಟ್ರೋ ಪ್ರಯಾಣಿಕರು!
Image
ಮೆಟ್ರೋ ಹಳದಿ ಮಾರ್ಗ ಶುರು: ಪ್ರಯಾಣಿಕರು ಏನಂದ್ರು ನೋಡಿ
Image
ನಮ್ಮ ಮೆಟ್ರೋ ಹಳದಿ ಮಾರ್ಗದ ವಿಶೇಷತೆಗಳೇನು? ಇಲ್ಲಿದೆ ವಿವರ, ಫೋಟೋಸ್​ ನೋಡಿ

ಫೀಡರ್‌ ಬಸ್‌ ಸೇವೆ

ಮೆಟ್ರೊ ಪ್ರಯಾಣಿಕರ ಅನುಕೂಲಕ್ಕಾಗಿ ಆರ್‌.ವಿ.ರಸ್ತೆ-ಬೊಮ್ಮಸಂದ್ರ ಮಾರ್ಗದಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು(ಬಿಎಂಟಿಸಿ) ಹೊಸದಾಗಿ ಫೀಡರ್‌ ಬಸ್‌ಗಳ ಕಾರ್ಯಾಚರಣೆಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಂಗಳವಾರ ಚಾಲನೆ ನೀಡಿದ್ದಾರೆ. ಹೀಗಾಗಿ ಹಳದಿ ಮೆಟ್ರೊ ಮಾರ್ಗದಲ್ಲಿ ಸಂಸ್ಥೆಯು ಒಟ್ಟು 4 ಮಾರ್ಗಗಳಲ್ಲಿ ಫೀಡರ್‌ ಸೇವೆ ಆರಂಭಿಧಿಸಿದ್ದು, 12 ಬಸ್‌ಗಳು 96 ಟ್ರಿಪ್‌ ಕಾರ್ಯಾಚರಣೆ ನಡೆಸುತ್ತಿವೆ. ಹೊಸ ರೋಡ್‌, ಬೆರಟೇನ ಅಗ್ರಹಾರ, ಎಲೆಕ್ಟ್ರಾನಿಕ್‌ ಸಿಟಿ, ಇನ್ಫೋಸಿಸ್‌ ಫೌಂಡೇಶನ್‌, ಕೋನಪ್ಪನ ಅಗ್ರಹಾರ, ಹೆಬ್ಬಗೋಡಿ ಹಾಗೂ ಬೊಮ್ಮಸಂದ್ರ ಸೇಧಿರಿಧಿದಂತೆ ಒಟ್ಟು 6 ಮೆಟ್ರೊ ನಿಲ್ದಾಣಗಳಿಗೆ ಫೀಡರ್‌ ಸೇವೆಗಳ ಸೌಲಭ್ಯ ಇದೆ.

ಮಾದಾವರ ಟು ಸಿಲ್ಕ್ ಇನ್ಸ್ಟಿಟ್ಯೂಟ್ (ಗ್ರೀನ್ ಲೈನ್) ಮತ್ತು ವೈಟ್ ಫೀಲ್ಡ್ ನಿಂದ ಚೆಲ್ಲಘಟ್ಟ ( ನೇರಳೆ ಮಾರ್ಗ ) ದಿಂದ ಹಾಗೂ ನಾಡಪ್ರಭು ಕೆಂಪೇಗೌಡ (ಮೆಜಸ್ಟಿಕ್ ) ಇಂಟರ್ ಚೇಂಜ್‌ ಮೆಟ್ರೋ ಸ್ಟೇಷನ್ ನಿಂದಲೂ ಎಲೆಕ್ಟ್ರಾನಿಕ್ ಸಿಟಿ, ಬೊಮ್ಮಸಂದ್ರ ಮಾರ್ಗಕ್ಕೆ ದೊಡ್ಡ ಪ್ರಮಾಣದಲ್ಲಿ ಪ್ರಯಾಣಿಕರು ಆರ್.ವಿ ರೋಡ್ ಇಂಟರ್ ಚೇಂಜ್‌ ಮೆಟ್ರೋ ಸ್ಟೇಷನ್ ಮೂಲಕ ಪ್ರಯಾಣ ಮಾಡುತ್ತಿದ್ದಾರೆ.

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!