ನೆಲಮಂಗಲ ಬಲಮುರಿ ಗಣಪತಿ ದೇವಸ್ಥಾನದಲ್ಲಿ 5 ಲಕ್ಷ ಹಣ ಕಳವು!
ದೇಣಿಗೆ ಹಣ ಸೇರಿದಂತೆ ದೇವಸ್ಥಾನಕ್ಕೆ ಸಂಬಂಧಿಸಿದ ಎಲ್ಲ ಹಣವನ್ನು ಹುಂಡಿಯಲ್ಲಿ ಹಾಕಿ ಶೇಖರಣೆ ಮಾಡಿದ್ದರು. ಆದರೆ ಹುಂಡಿಯಲ್ಲಿದ್ದ ಸುಮಾರು ಐದು ಲಕ್ಷ ಹಣ ಕಳ್ಳತನವಾಗಿದೆ.
ನೆಲಮಂಗಲ: ಬೆಂಗಳೂರು ಉತ್ತರ ತಾಲೂಕಿನ ಚಿಕ್ಕಬಾಣಾವರದ ದೇಗುಲವೊಂದರಲ್ಲಿ ಹಣ ಕಳವಾಗಿದೆ. ಬಲಮುರಿ ಗಣಪತಿ ದೇವಸ್ಥಾನದ ಹುಂಡಿಯಲ್ಲಿದ್ದ ಸುಮಾರು 5 ಲಕ್ಷ ಹಣ ಕಳ್ಳತನವಾಗಿದ್ದು, ಈ ಪ್ರಕರಣ ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ದೇಣಿಗೆ ಹಣ ಸೇರಿದಂತೆ ದೇವಸ್ಥಾನಕ್ಕೆ ಸಂಬಂಧಿಸಿದ ಎಲ್ಲ ಹಣವನ್ನು ಹುಂಡಿಯಲ್ಲಿ ಹಾಕಿ ಶೇಖರಣೆ ಮಾಡಿದ್ದರು. ಆದರೆ ಹುಂಡಿಯಲ್ಲಿದ್ದ ಸುಮಾರು ಐದು ಲಕ್ಷ ಹಣ ಕಳ್ಳತನವಾಗಿದೆ. ಅರ್ಚಕ ಎಂದಿನಂತೆ ಬೆಳಿಗ್ಗೆ ಪೂಜೆ ಮಾಡಲು ಹೋಗಿದ್ದ ವೇಳೆ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ.
ನೆಲಮಂಗಲದ ಹೇರೋಹಳ್ಳಿಯಲ್ಲಿ ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಕಳ್ಳತನವಾಗಿದೆ. ಪ್ರಣೀತ್ ಎಂಬುವವರಿಗೆ ಸೇರಿದ ರಾಯಲ್ ಎನ್ ಫೀಲ್ಡ್ ಬೈಕ್ ಕಳವಾಗಿದೆ. ದಿನನಿತ್ಯ ಕೆಲಸಕ್ಕೆ ತೆರಳಲು ಬಳಸುತ್ತಿದ್ದ ಸುಮಾರು ಒಂದು ಲಕ್ಷ ಬೆಲೆಬಾಳುವ ಬೈಕ್ ಕಳವಾಗಿದ್ದಕ್ಕೆ ಬೈಕ್ ಮಾಲೀಕ ಕಂಗಾಲಾಗಿದ್ದಾರೆ. ಈ ಘಟನೆ ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
5 ಹಸು ಸಾವು ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ವೇಳೆ 5 ಹಸು ಸಾವನ್ನಪ್ಪಿರುವ ಘಟನೆ ಕೋಲಾರ ತಾಲೂಕಿನ ಚಾಕರಾಸನಹಳ್ಳಿಯ ಬಳಿ ಸಂಭವಿಸಿದೆ. 2 ಲಾರಿಗಳಲ್ಲಿ 20ಕ್ಕೂ ಹೆಚ್ಚು ಜಾನುವಾರು ತರಲಾಗುತ್ತಿತ್ತು. ಛತ್ತೀಸ್‌ಗಢದಿಂದ ಕೋಲಾರಕ್ಕೆ ಜಾನುವಾರು ತರಲಾಗುತ್ತಿತ್ತು. ಹೀಗೆ ಅಕ್ರಮವಾಗಿ ಸಾಗಿಸುತ್ತಿದ್ದ ಜಾನುವಾರಗಳನ್ನು ಪೊಲೀಸರು ರಕ್ಷಿಸಿದ್ದಾರೆ. ಸದ್ಯ ಜಾನುವಾರುಗಳು ವೇಮಗಲ್ ಪೊಲೀಸರ ವಶದಲ್ಲಿವೆ.
ಇದನ್ನೂ ಓದಿ
ಉಡುಪಿ: ಆದರ್ಶ ಗ್ರಾಮ ಎಂದು ಕರೆಸಿಕೊಂಡ ಕೆರಾಡಿಯಲ್ಲಿ ಕಾಡುತ್ತಿದೆ ಮೂಲಭೂತ ಸೌಕರ್ಯದ ಕೊರತೆ
(5 lakhs in Ganapathi temple is theft at Nelamangala)
Published On - 8:54 am, Tue, 28 September 21