ದೇವನಹಳ್ಳಿ: ಇತ್ತೀಚೆಗೆ ನಿಧಿ ಆಸೆಗಾಗಿ ಅನೇಕ ವಾಮಾಚಾರ ಕೃತ್ಯಗಳು ನಡೆಯುತ್ತಿರುವುದು ಹೆಚ್ಚಾಗಿದೆ. ನಿಧಿ ಆಸೆಗಾಗಿ ಜನ ಮಕ್ಕಳನ್ನು ಸಹ ಬಲಿ ಕೊಡಲು ಹಿಂದೆ ಮುಂದೆ ನೋಡಲ್ಲ. ಆದ್ರೆ ದೇವನಹಳ್ಳಿಯಲ್ಲಿ ನಿಧಿ ಆಸೆಗಾಗಿ ಮೇಕೆ ಮತ್ತು ನಾಗರಹಾವನ್ನು ಬಲಿ ಕೊಟ್ಟ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಸೀಗೆಹಳ್ಳಿಯಲ್ಲಿ ನಡೆದಿದೆ.
ಕಿಡಿಗೇಡಿಗಳು ನಿಧಿಗಾಗಿ ಹೊಲದಲ್ಲಿ ವಾಮಾಚಾರ ಮಾಡಿಸಿದ್ದಾರೆ. ಮೇಕೆ ಮತ್ತು ನಾಗರಹಾವನ್ನ ಬಲಿ ನೀಡಿ ವಾಮಾಚಾರ ಮಾಡಿಸಿದ್ದಾರೆ. ಗ್ರಾಮದ ಮುನೇಗೌಡ ಎಂಬುವವರ ಹೊಲದಲ್ಲಿ ಸುಮಾರು 6 ಅಡಿಗೂ ಹೆಚ್ಚು ಆಳಕ್ಕೆ ಗುಂಡಿ ತೆಗೆದು, ಹೊಲದ ಪಕ್ಕದಲ್ಲೇ ಇದ್ದ ಹುತ್ತ ಹೊಡೆದು ಹಾವಿನಲ್ಲಿ ಮಣಿ ಸಿಗಬಹುದೆಂದು ನಾಗರ ಹಾವನ್ನು ಸಾಯಿಸಿ ಹಾವನ್ನು ಎರಡು ಭಾಗವಾಗಿ ಸೀಳಿ ವಿಕೃತಿ ಮೆರೆದಿದ್ದಾರೆ. ಘಟನೆ ಬಗ್ಗೆ ಗ್ರಾಮದಲ್ಲಿ ಸುದ್ದಿ ಹರಡುತ್ತಿದ್ದಂತೆ ಸ್ಥಳೀಯರಲ್ಲಿ ಆತಂಕ ಮನೆ ಮಾಡಿದೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಕಿಡಿಗೇಡಿಗಳು ಗ್ರಾಮದ ಸುತ್ತಾಮುತ್ತ ವಾಮಾಚಾರ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಊರಿನ ಸುತ್ತಾ ದಿಗ್ಬಂದನ ಹಾಕಿ ನಂತರ ನಿಧಿ ಶೋಧ ಮಾಡಿದ್ದಾರೆ ಎನ್ನಲಾಗುತ್ತಿದೆ. ಸುಮಾರು 50 ವರ್ಷಗಳಿಂದ ಇದ್ದಂತಹ ಹುತ್ತ ಮತ್ತು ವೀರಗಲ್ಲುಗಳನ್ನ ಕೆಡವಿ ವಾಮಾಚಾರ ಮಾಡಿದ್ದಾರೆ. ಸುಮಾರು 15 ದಿನಗಳಿಂದ ಪೂಜೆ ಪುನಸ್ಕಾರ ಮಾಡಿ ನಿಧಿ ತೆಗೆದುಕೊಂಡು ಹೋಗಿದ್ದಾರೆ ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ. ವಾಮಾಚಾರ ಮಾಡಿರುವ ಸ್ಥಳದಲ್ಲಿ ಬಾಡಿದ ಹೂ, ಬಾಳೆಹಣ್ಣು, ಅಕ್ಕಿ ಸೇರಿದಂತೆ ಹಲವು ಪೂಜಾ ಸಾಮಾಗ್ರಿಗಳು ಪತ್ತೆಯಾಗಿವೆ. ನಿಧಿಗಳ್ಳರ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ನಿಧಿ ಆಸೆಗಾಗಿ ದಾವಣಗೆರೆ ಹನುಮ ದೇವಾಲಯಕ್ಕೆ ವಾಮಾಚಾರ; ಗ್ರಾಮಸ್ಥರ ಆರೋಪ
ಅಪ್ಪನ ಮೇಲಿನ ಸಿಟ್ಟಿಗೆ ಪುಟ್ಟ ಮಗುವನ್ನೇ ನೇಣಿಗೆ ಏರಿಸಿದ ತಾಲಿಬಾನಿಗಳು; ವಿಡಿಯೋದಲ್ಲಿ ಸೆರೆಯಾದ ದುಷ್ಕೃತ್ಯ