ಐಶ್ವರ್ಯ ರೈ ತರ ಕಾಣ್ತೀಯ ಅಂತ ಹೇಳಿ ವಿವಾಹಿತ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನ!

ಐಶ್ವರ್ಯ ರೈ ತರ ಕಾಣ್ತೀಯ ಅಂತ ಹೇಳಿ ವಿವಾಹಿತ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನ!
ಹನುಮಂತರಾಯ

ಬೆಂಗಳೂರಿನ ಪೀಣ್ಯ ಪೊಲೀಸ್ ಠಾಣೆಗೆ ವಿವಾಹಿತ ಮಹಿಳೆ ದೂರು ನೀಡಿದ್ದು, ಆರೋಪಿ ಹನುಮಂತರಾಯನನ್ನು ಪೊಲೀಸರು ವಶಕ್ಕೆ ಪಡೆದು ಠಾಣೆ ಬೇಲ್ ಮೇಲೆ ಬಿಟ್ಟು ಕಳುಹಿಸಿದ್ದಾರೆ.

TV9kannada Web Team

| Edited By: sandhya thejappa

Jan 03, 2022 | 2:34 PM

ನೆಲಮಂಗಲ: ಚಿತ್ರ ನಟಿ ಐಶ್ವರ್ಯ ರೈ ತರ ಕಾಣ್ತೀಯ ಅಂತ ಹೇಳಿ ವಿವಾಹಿತ ಮಹಿಳೆ ಮೇಲೆ ವ್ಯಕ್ತಿಯೊಬ್ಬ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಬೆಂಗಳೂರಿನ ಪೀಣ್ಯ ಪೊಲೀಸ್ ಠಾಣೆಗೆ ವಿವಾಹಿತ ಮಹಿಳೆ ದೂರು ನೀಡಿದ್ದು, ಆರೋಪಿ ಹನುಮಂತರಾಯನನ್ನು ಪೊಲೀಸರು ವಶಕ್ಕೆ ಪಡೆದು ಠಾಣೆ ಬೇಲ್ ಮೇಲೆ ಬಿಟ್ಟು ಕಳುಹಿಸಿದ್ದಾರೆ. ಡಿಸೆಂಬರ್ 28ರಂದು ಈ ಘಟನೆ ನಡೆದಿದ್ದು. ತಡವಾಗಿ ಬೆಳಕಿಗೆ ಬಂದಿದೆ.

ಬಾಲಕಿ ಮೇಲೆ ಅತ್ಯಾಚಾರವೆಸಗಿ ಕೊಂದು, ಶವ ಬಚ್ಚಿಟ್ಟ ಕಾಮುಕರು ಆಟವಾಡಿಕೊಂಡು ಇರುತ್ತಿದ್ದ 5 ವರ್ಷದ ಬಾಲಕಿಯ ಮೇಲೆ ಆಕೆಯ ಮನೆಯಲ್ಲೇ ಅಮಾನುಷವಾಗಿ ಅತ್ಯಾಚಾರ ನಡೆದಿದೆ. ಮಧ್ಯಪ್ರದೇಶದ ಹೋಶಂಗಾಬಾದ್ ಜಿಲ್ಲೆಯಲ್ಲಿ ಐದು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ, ನಿರ್ದಯವಾಗಿ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ಅಲ್ಲದೆ, ಆ ಬಾಲಕಿಯ ಶವವನ್ನು ಮನೆಯ ಚಾವಣಿಯ ಮೇಲೆ ಅಡಗಿಸಿ ಇಟ್ಟಿದ್ದಾರೆ.

ಪತ್ನಿಯನ್ನು ಕೊಲೆ ಮಾಡಿದ ಪತಿ ಕೌಟುಂಬಿಕ ಕಲಹ ಹಿನ್ನೆಲೆ ರಾಡ್​ನಿಂದ ಹೊಡೆದು ಪತ್ನಿಯನ್ನು ಪತಿ ಕೊಲೆ ಮಾಡಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಇಳಕಲ್ ನಗರದ ಕವಿಶೆಟ್ಟಿ ಓಣಿಯಲ್ಲಿ ಸಂಭವಿಸಿದೆ. 27 ವರ್ಷದ ಮದೀನಾ ಬಂಡಿ ಕೊಲೆಯಾದ ಗೃಹಿಣಿ. ಮದೀನಾ ಪತಿ ಮೆಹಬೂಬ್ ಬಂಡಿ ಕುಡಿದು ಪತ್ನಿ ಜೊತೆ ಜಗಳವಾಡಿದ್ದಾನೆ. ಜಗಳವಾಡುತ್ತಿದ್ದ ವೇಳೆ ಮೆಹಬೂಬ್ ರಾಡ್​ನಿಂದ ಹೊಡೆದು ತನ್ನ ಪತ್ನಿಯನ್ನು ಕೊಲೆಗೈದಿದ್ದಾನೆ. ನಿನ್ನೆ (ಜ.2) ರಾತ್ರಿ 1 ಗಂಟೆಗೆ ಈ ಘಟನೆ ನಡೆದಿದೆ.

ಇದನ್ನೂ ಓದಿ

ಕನ್ನಡದಲ್ಲೊಂದು ವೆಬ್ ಸಿರೀಸ್ ಬಿಡುಗಡೆಗೆ ಸಿದ್ಧ; ಗಮನ ಸೆಳೆದ ‘ವೈಟ್ ಆ್ಯಂಡ್ ಬ್ಲಾಕ್’ ಪೋಸ್ಟರ್

ಮಹಿಳೆಯರ ಮದುವೆ ವಯಸ್ಸಿನ ಮಿತಿ ಏರಿಕೆ ಮಸೂದೆ ಪರಿಶೀಲಿಸುವ ಸಂಸದೀಯ ಸಮಿತಿಯಲ್ಲಿರುವುದು ಒಬ್ಬರೇ ಮಹಿಳೆ

Follow us on

Related Stories

Most Read Stories

Click on your DTH Provider to Add TV9 Kannada