ಬರದ ಮಧ್ಯೆ ಪ್ರಾಣಿ ಪಕ್ಷಿಗಳ ಉಳಿಸುವ ಉದಾತ್ತ ಕಾರ್ಯದಲ್ಲಿ ಯುವ ತಂಡ ಮಗ್ನ, ಎಲ್ಲಿ? ಹೇಗೆ?
ಬರಗಾಲದ ಹಿನ್ನೆಲೆ ಜಾನುವಾರುಗಳಿಗೆ ನೀರಿಲ್ಲ. ಪಕ್ಷಿಗಳಿಗೆ ನೀರಿಲ್ಲದೆ ಪರಿತಪ್ಪಿಸುತ್ತಿದ್ದು ಪಕ್ಷಿಗಳ ಸಂರಕ್ಷಣೆಯಾಗದೇ ಇದ್ರೆ ಕಷ್ಟ ಎಂಬುದನ್ನ ಅರಿತ ಯುವ ತಂಡ ಅಲ್ಲಲ್ಲಿ ವೇಸ್ಟ್ ಆಗಿ ಬಿದ್ದಿದ್ದ ಪ್ಲಾಸ್ಟಿಕ್ ಬಾಟಲ್ಗಳನ್ನ ಆಯ್ದು ತಂದಿದ್ದಾರೆ. ಬಾಟಲ್ಗಳನ್ನ ಕಟ್ ಮಾಡಿಕೊಂಡು ಅದಕ್ಕೆ ಸಣ್ಣ ತಂತಿಗಳನ್ನ ಕಟ್ಟಿ ಅತಿ ಹೆಚ್ಚು ಪಕ್ಷಿಗಳು ವಾಸಿಸೋ ಕಡೆ ರೆಂಬೆಗಳಿಗೆ ಕಟ್ಟುತ್ತಿದ್ದಾರೆ.
ರಾಜ್ಯಾದ್ಯಂತ ಭೀಕರ ಬರಗಾಲ ತಾಂಡವವಾಡುತ್ತಿದ್ದು ಕೆರೆ ಕುಂಟೆಗಳಲ್ಲಿ ನೀರು ಭರ್ತಿ ಬತ್ತುಹೋಗಿದೆ. ಈಗಾಗಲೇ ಜನ ಜಾನುವಾರುಗಳು ಸಂಕಷ್ಟಕ್ಕೆ ಸಿಲುಕಿವೆ. ಒಂದ್ಕಡೆ ಕುಡಿಯೋ ನೀರಿಗಾಗಿ ಜನರಿಗೆ ಜಲಕ್ಷಾಮ ಎದುರಾಗಿದ್ದು ಕೆರೆಗಳಲ್ಲಿ ನೀರಿಲ್ಲದೆ ಪಕ್ಷಿ ಸಂಕುಲಗಳು ಸರಣಿ ಸಾವನ್ನಪ್ಪುತ್ತಿವೆ. ಆದರೆ ಇಲ್ಲೊಂದು ತಂಡ ( young team) ಕೆರೆ, ಅರಣ್ಯ ಪ್ರದೇಶಗಳ ಕಡೆ ಪ್ರಾಣಿ ಪಕ್ಷಿಗಳ ಜೀವ ಉಳಿಸಲು ಮುಂದಾಗಿದ್ದಾರೆ. ಅದು ಎಲ್ಲಿ ಅಂತೀರಾ ಈ ಸ್ಟೋರಿ ನೋಡಿ. ಸರಿಯಾಗಿ ಮಳೆಯಾಗದೆ ನೀರಿಲ್ಲದೆ ಬತ್ತಿ ಹೋಗಿರೋ ಕೆರೆಗಳು. ಪಕ್ಷಿಗಳಿಗೆ ಕೆರೆಗಳಲ್ಲಿ ನೀರಿಲ್ಲದೆ, ಪಕ್ಷಿ ಸಂಕುಲಗಳ (animals and birds) ಸಂರಕ್ಷಣೆಗೆ ಮುಂದಾಗಿರೋ ತಂಡ. ಪ್ಲಾಸ್ಟಿಕ್ ಬಾಟಲ್ಗಳ ಕಟ್ ಮಾಡಿ ಅದಕ್ಕೆ ತಂತಿ ಕಟ್ಟಿ ಮರಗಳಿಗೆ ಕಟ್ಟುತ್ತಿರೋ ಪಕ್ಷಿ ಪ್ರೇಮಿಗಳು. ಬಾಟಲ್ಗೆ ಬೇರೆ ಕಡೆಯಿಂದ ನೀರು ತಂದು ಹಾಕಿ, ಅದಕ್ಕೆ ಆಹಾರ ಹಾಕ್ತಿರೋ ಯುವಪಡೆ. ಹೌದು ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ (devanahalli) ದೊಡ್ಡತತ್ತಮಂಗಲ ಗ್ರಾಮದ ಪ್ರಾಣಿ ಪಕ್ಷಿಗಳ ಸಂರಕ್ಷಣ ತಂಡವೊಂದು ಪಕ್ಷಿಗಳ ಪ್ರಾಣವನ್ನ ಉಳಿಸುವ ಅಭಿಯಾನಕ್ಕೆ ಮುಂದಾಗಿದೆ.
ಅಂದಹಾಗೆ ತಾಲೂಕಿನ ಹಲವು ಕಡೆ ಈಗಾಗಲೇ ಕೆರೆ ಕುಂಟೆಗಳಲ್ಲಿ ನೀರಿಲ್ಲದೆ ಪಕ್ಷಿಗಳು ಸಂಕಷ್ಟಕ್ಕೆ ಸಿಲುಕಿವೆ. ಕುಡಿಯೋಕ್ಕೆ ಪಕ್ಷಿಗಳಿಗೆ ನೀರು ಸಿಗದೇ ಅರಣ್ಯ ಪ್ರದೇಶಗಳ ಕಡೆ, ಕೆರೆಗಳ ಅಂಚಿನ ಪ್ರದೇಶಗಳ ಕಡೆ ಜೀವ ಕಳೆದುಕೊಳ್ಳುತ್ತಿವೆ. ಹೀಗಾಗಿ ಬೇಸಿಗೆ ಮುಗಿಯುವವರೆಗೂ ಪಕ್ಷಿಗಳ ಪ್ರಾಣ ಉಳಿಸಲು ಅಲ್ಲಲ್ಲಿ ಪ್ಲಾಸ್ಟಿಕ್ ಬಾಟಲ್ಗಳನ್ನ ಆಯ್ದು ತಂದು ಮರಗಳಿಗೆ ಕಟ್ಟಿ ನೀರು ಇಡುವ ಕಾರ್ಯಕ್ಕೆ ತಮ್ಮ ತಂಡ ಮುಂದಾಗಿದೆ ಎಂದು ಪಕ್ಷಿ ಪ್ರೇಮಿ ಗಜೇಂದ್ರ ತಿಳಿಸಿದ್ದಾರೆ.
ಅಂದಹಾಗೆ ಈಗಾಗಲೇ ಬರಗಾಲದ ಹಿನ್ನೆಲೆ ಜಾನುವಾರುಗಳಿಗೆ ನೀರಿಲ್ಲ. ಪಕ್ಷಿಗಳಿಗೆ ನೀರಿಲ್ಲದೆ ಪರಿತಪ್ಪಿಸುತ್ತಿದ್ದು ಪಕ್ಷಿಗಳ ಸಂರಕ್ಷಣೆಯಾಗದೇ ಇದ್ರೆ ಕಷ್ಟ ಎಂಬುದನ್ನ ಅರಿತ ಈ ತಂಡ ಎಲ್ಲೆಡೆ ವೇಸ್ಟ್ ಆಗಿ ಬಿದ್ದಿದ್ದ ಪ್ಲಾಸ್ಟಿಕ್ ಬಾಟಲ್ಗಳನ್ನ ಆಯ್ದು ತಂದಿದ್ದಾರೆ. ಬಾಟಲ್ಗಳನ್ನ ಕಟ್ ಮಾಡಿಕೊಂಡು ಅದಕ್ಕೆ ಸಣ್ಣ ತಂತಿಗಳನ್ನ ಕಟ್ಟಿ ಅತಿ ಹೆಚ್ಚು ಪಕ್ಷಿಗಳು ವಾಸಿಸೋ ಕಡೆ ರೆಂಬೆಗಳಿಗೆ ಕಟ್ಟುತ್ತಿದ್ದಾರೆ. ಇನ್ನೂ ಸಾವಿರಾರು ನೀರಿನ ಬಾಟಲ್ಗಳನ್ನ ಮರಗಳಿಗೆ ಕಟ್ಟಿ ಅದಕ್ಕೆ ನೀರು ಹಾಯಿಸುವ ಮೂಲಕ ಪಕ್ಷಿಗಳ ಜೀವವನ್ನ ಉಳಿಸುತ್ತಿದ್ದಾರೆ.
ದೇವನಹಳ್ಳಿ ಭಾಗದ ಖಾಲಿಯಾಗಿರೋ ಕೆರೆಗಳ ಅಂಚಿನ ಮರಗಳಿಗೆ ಅತಿ ಹೆಚ್ಚು ನೀರಿನ ಬಾಟಲ್ ಕಟ್ಟುವ ಅಭಿಯಾನಕ್ಕೆ ಈ ತಂಡ ಮುಂದಾಗಿದೆ. ಜೊತೆಗೆ ಅಕ್ಕಿ, ನುಚ್ಚನ್ನ ಪಕ್ಷಿಗಳ ಆಹಾರಕ್ಕೂ ನೀಡುವ ಮೂಲಕ ತಮ್ಮ ನಿಸ್ವಾರ್ಥ ಸೇವೆಯನ್ನ ಮಾಡ್ತಿದ್ದಾರೆ.
ಒಟ್ಟಾರೆ ಬರಗಾಲದಿಂದ ಕುಡಿಯೋ ನೀರಿಲ್ಲದೆ ಬೆಂಗಳೂರು ಸೇರಿದಂತೆ, ರಾಜ್ಯದ ಎಲ್ಲೆಡೆ ಜಲಕ್ಷಾಮದ ಕಂಟಕ ಜನ ಎದುರಿಸುತ್ತಿದ್ದಾರೆ. ಇದರ ನಡುವೆ ದೇವನಹಳ್ಳಿಯ ಈ ಪ್ರಾಣಿ ಪಕ್ಷಿ ಸಂರಕ್ಷಣಾ ತಂಡ ಪಕ್ಷಿ ಸಂಕುಲಗಳ ಉಳಿಸುವ ನಿಟ್ಟಿನಲ್ಲಿ ಎಲ್ಲಡೆ ಪಕ್ಷಿಗಳಿಗೆ ನೀರು ಕೊಡುವ ಇಂತಹ ಅಭಿಯಾನ ನಿಜಕ್ಕೂ ಶ್ಲಾಘನೀಯ. ಹೀಗಾಗಿ ಈ ತಂಡ ಮಾಡುತ್ತಿರೋ ಪಕ್ಷಿಗಳ ಉಳಿಸುವ ನಿಸ್ವಾರ್ಥ ಉದಾತ್ತ ಕಾರ್ಯ ರಾಜ್ಯದ ಎಲ್ಲೆಡೆ ಬೇಸಿಗೆ ಮುಗಿಯುವವರೆಗೂ ಪಕ್ಷಿ ಪ್ರೇಮಿಗಳು ಮಾಡುವಂತಾಗಲಿ ಅನ್ನೋದು ಎಲ್ಲರ ಆಶಯ.