ಆನೇಕಲ್​: ನಿಧಿಗಾಗಿ ತಂದೆಯಿಂದಲೇ ಹಣ ವಸೂಲಿ ಆರೋಪ; ಮಗಳು ನೀಡಿದ ಸ್ಪಷ್ಟನೆ ಇಲ್ಲಿದೆ

ನಿಧಿಗಾಗಿ ತಂದೆಯಿಂದಲೇ ಹಣ ವಸೂಲಿ ಆರೋಪಕ್ಕೆ ಸಮಬಂಧಿಸಿದಂತೆ ‘ಈ ಬಗ್ಗೆ ಪ್ರತ್ಯಾರೋಪ ಮಾಡಿರುವ ತಿಮ್ಮರಾಯಪ್ಪನ ಪುತ್ರಿ ಮಂಜುಳ, ನಾವು ಯಾವುದೇ ನಿಧಿಗಾಗಿ ಮೋಸ ಮಾಡಿಲ್ಲ. ಜಮೀನಿನಲ್ಲಿ ಭಾಗ ಕೇಳುತ್ತಿದ್ದಂತೆ ತಂದೆ ಹಾಗೂ ಸಹೋದರ ಇಲ್ಲಸಲ್ಲದ ಆರೋಪವನ್ನ ಮಾಡುತ್ತಿದ್ದಾರೆ ಎಂದು ಮಗಳು ಪ್ರತ್ಯಾರೋಪ ಮಾಡಿದ್ದಾರೆ.

ಆನೇಕಲ್​: ನಿಧಿಗಾಗಿ ತಂದೆಯಿಂದಲೇ ಹಣ ವಸೂಲಿ ಆರೋಪ; ಮಗಳು ನೀಡಿದ ಸ್ಪಷ್ಟನೆ ಇಲ್ಲಿದೆ
ಪ್ರಾತಿನಿಧಿಕ ಚಿತ್ರ
Follow us
ರಾಮು, ಆನೇಕಲ್​
| Updated By: ಕಿರಣ್ ಹನುಮಂತ್​ ಮಾದಾರ್

Updated on: Sep 08, 2023 | 7:43 PM

ಆನೇಕಲ್​, ಸೆ.08: ನಿಧಿಗಾಗಿ ತಂದೆಯಿಂದಲೇ ಹಣ ವಸೂಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ‘ಜಮೀನಿನಲ್ಲಿ ಭಾಗ ಕೇಳಿದ್ದಕ್ಕೆ ಈ ರೀತಿ ಆರೋಪ ಮಾಡಿದ್ದಾರೆ ಎಂದು ಮಗಳು ಮಂಜುಳಾ ಪ್ರತ್ಯಾರೋಪ ಮಾಡಿದ್ದಾರೆ. ಬೆಂಗಳೂರು ಹೊರವಲಯ ಆನೇಕಲ್ (Anekal) ತಾಲ್ಲೂಕಿನ ಬಂಡಾಪುರ ಗ್ರಾಮದ ನಿವಾಸಿ ತಿಮ್ಮರಾಯಪ್ಪ ಎಂಬುವವರಿಗೆ ನಿಧಿ ಆಸೆ ತೋರಿಸಿ ಪುತ್ರಿ ಮಂಜುಳ ಹಾಗೂ ಅಳಿಯ ಮಂಜುನಾಥ್ ಲಕ್ಷಾಂತರ ರೂಪಾಯಿ ಹಣ ವಂಚನೆ ಮಾಡಿದ್ದಾರೆಂದು ತಿಮ್ಮರಾಯಪ್ಪ ಹಾಗೂ ಪುತ್ರ ಪ್ರದೀಪ್ ಕುಮಾರ್ ಆರೋಪ ಮಾಡಿದ್ದರು. ಈ ಬಗ್ಗೆ ಪ್ರತ್ಯಾರೋಪ ಮಾಡಿರುವ ತಿಮ್ಮರಾಯಪ್ಪನ ಪುತ್ರಿ ಮಂಜುಳ, ನಾವು ಯಾವುದೇ ನಿಧಿಗಾಗಿ ಮೋಸ ಮಾಡಿಲ್ಲ. ಜಮೀನಿನಲ್ಲಿ ಭಾಗ ಕೇಳುತ್ತಿದ್ದಂತೆ ತಂದೆ ಹಾಗೂ ಸಹೋದರ ಇಲ್ಲಸಲ್ಲದ ಆರೋಪವನ್ನ ಮಾಡುತ್ತಿದ್ದಾರೆ ಎಂದಿದ್ದಾರೆ.

ನಾವು ನಿಧಿಯ ಆಸೆಯನ್ನು ತೋರಿಸಿಲ್ಲ ಅವರ ಬಳಿ ಹಣವನ್ನು ಸಹ ಪಡೆದಿಲ್ಲ. ಇದ್ದರೆ ಈ ಬಗ್ಗೆ ದಾಖಲೆಗಳನ್ನ ತೋರಿಸಲಿ ಸುಖಾಸುಮ್ಮನೆ ನಮ್ಮ ಹೆಸರನ್ನ ಹಾಳು ಮಾಡಿದ್ದಾರೆ. ನಮಗೂ ಈ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ, ಈ ಬಗ್ಗೆ ನಾವು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುತ್ತೇನೆ ಎಂದು ತಿಳಿಸಿದ್ದಾರೆ. ಬಳಿಕ ಮಾತನಾಡಿದ ತಿಮ್ಮರಾಯಪ್ಪನ ಅಳಿಯ ಮಂಜುನಾಥ್, ಜಮೀನಿನಲ್ಲಿ ಭಾಗ ಕೇಳಿದ್ದಕ್ಕೆ ನಮ್ಮ ಮಾವ ಈ ರೀತಿಯಾಗಿ ಆರೋಪ ಮಾಡಿದ್ದು, ನಾನು ಯಾವುದೇ ಹಣಕ್ಕೆ ಬೇಡಿಕೆ ಇಟ್ಟಿಲ್ಲ ಅವರ ಬಳಿಯೂ ಹಣವನ್ನ ಪಡೆದಿಲ್ಲ. ನಮ್ಮ ಮೇಲೆ ಮಾಡಿರುವ ಆರೋಪದ ವಿರುದ್ದ ಕಾನೂನ ಹೋರಾಟ ಮಾಡುವುದಾಗಿ ತಿಳಿಸಿದರು.

ಇದನ್ನೂ ಓದಿ:ನಟಿಯ ತಾಯಿ ಬಳಿ ಹೋಂಗಾರ್ಡ್ ಹಣ ವಸೂಲಿ ಮಾಡಿದ ಪ್ರಕರಣ, ಹೊರಬಿತ್ತು ತಾಯಿಯ ಮಸಾಜ್ ಪಾರ್ಲರ್​​ನ ಚಿನ್ನದ ಕಥೆ!

ಘಟನೆ ವಿವರ

ನಿಧಿ ಆಸೆ ತೋರಿಸಿ ಮಕ್ಕಳಿಂದಲೇ ತಂದೆ ಹಾಗೂ ಸಹೋದರನಿಗೆ ಭಾರಿ ವಂಚನೆ ಎಸಗಲಾಗಿದೆ ಎಂಬ ಆರೋಪ ಸೆ.5 ರಂದು ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಬಂಡಾಪುರ ಗ್ರಾಮದಲ್ಲಿ ಕೇಳಿ ಬಂದಿತ್ತು. ನಿಧಿ ಆಸೆ ತೋರಿಸಿ ಮಗಳು ಅಳಿಯನಿಂದಲೇ ತಂದೆಗೆ 50 ಲಕ್ಷ ಪಂಗನಾಮ ಹಾಕಿರುವ ಪ್ರಕರಣ ವರದಿಯಾಗಿತ್ತು. ಮನೆಯಲ್ಲಿ ನಿಧಿಯಿದೆ ನಂಬಿಸಿ ತಮಿಳುನಾಡು ಮೂಲದ ಪೂಜಾರಿಯನ್ನು ಕರೆಸಿ ವೃದ್ಧ ದಂಪತಿಗಳಿಗೆ ಹೆದರಿಸಿ ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿತ್ತು. ಇದೀಗ ಮಗಳು ಘಟನೆ ಕುರಿತು ಸ್ಪಷ್ಟ ಪಡಿಸಿದ್ದಾರೆ. ಜೊತೆಗೆ ನಾವು ಕೂಡ ಅವರ ಮೇಲೆ ದೂರು ನೀಡುವುದಾಗಿ ತಿಳಿಸಿದ್ದಾರೆ.

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ