ಮೊನ್ನೆ ಟೊಮ್ಯಾಟೊ ಲಾರಿ ಹೈಜಾಕ್​ ಆಗಿತ್ತು, ಇಂದು 12 ಲಕ್ಷ ಮೌಲ್ಯದ ವಸ್ತುಗಳಿದ್ದ ಲಾರಿ ಹೈಜಾಕ್​ ಮಾಡಿದ ಚಾಲಕ! ಎಲ್ಲಿ?

lorry hijack: ಸ್ಮಾರ್ಟ್ ಎಕ್ಸ್‌ಪ್ರೆಸ್‌ ಗೆ ಸೇರಿದ 18 ಲಕ್ಷ ಬೆಲೆಬಾಳುವ ಸಾಮಾಗ್ರಿಗಳು ಲಾರಿಯಲ್ಲಿದ್ದವು. ಕೇರಳದ ಕೊಚ್ಚಿಗೆ ಡೆಲಿವರಿ ಕೊಡಬೆಕಿತ್ತು. ಸೇಲಂ ರಸ್ತೆ ಬಳಿ ಕಂಟೇನರ್ ನಿಲ್ಲಿಸಿ, ಕಳ್ಳತನ ಮಾಡಿ ಪರಾರಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ.

ಮೊನ್ನೆ ಟೊಮ್ಯಾಟೊ ಲಾರಿ ಹೈಜಾಕ್​ ಆಗಿತ್ತು, ಇಂದು 12 ಲಕ್ಷ ಮೌಲ್ಯದ ವಸ್ತುಗಳಿದ್ದ ಲಾರಿ ಹೈಜಾಕ್​ ಮಾಡಿದ ಚಾಲಕ! ಎಲ್ಲಿ?
12 ಲಕ್ಷ ಮೌಲ್ಯದ ವಸ್ತುಗಳಿದ್ದ ಲಾರಿ ಹೈಜಾಕ್​ ಮಾಡಿದ ಚಾಲಕ!
Edited By: ಸಾಧು ಶ್ರೀನಾಥ್​

Updated on: Aug 10, 2023 | 1:07 PM

ನೆಲಮಂಗಲ, ಆಗಸ್ಟ್​ 10: ಚಾಲಕನೊಬ್ಬ ತಾನು ಚಲಾಯಿಸುತ್ತಿದ್ದ ಲಾರಿಯನ್ನೇ ಹೈಜಾಕ್ ಮಾಡಿಕೊಂಡು ಹೋಗಿದ್ದಾನೆ. ಯಾಕಪ್ಪಾ ಹೀಗೆ? ಎಂದು ನೋಡಿದಾಗ ಲಾರಿಯಲ್ಲಿ 12 ಲಕ್ಷ ರೂಪಾಯಿ ಬೆಲೆಬಾಳುವ ವಸ್ತುಗಳು ಇದ್ದವು. ಅದರೊಂದಿಗೆ ಚಾಲಕ ಲಾರಿ (lorry driver) ಕದ್ದು ಪರಾರಿಯಾಗಿದ್ದಾನೆ (escape). ಬೆಂಗಳೂರು ಉತ್ತರ ತಾಲೂಕಿನ (Nelamangala) ಅಡಕಮಾರನಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಚಾಲಕ ಪ್ರಭು ಸೇರಿದಂತೆ ಮೊವರಿಗೆ ಪೊಲೀಸರು ಈಗ ತಲಾಷ್ ನಡೆಸುತ್ತಿದ್ದಾರೆ.

ಸ್ಮಾರ್ಟ್ ಎಕ್ಸ್‌ಪ್ರೆಸ್‌ ಗೆ ಸೇರಿದ 18 ಲಕ್ಷ ಬೆಲೆಬಾಳುವ ಸಾಮಾಗ್ರಿಗಳು ಲಾರಿಯಲ್ಲಿದ್ದವು. ಕೇರಳದ ಕೊಚ್ಚಿಗೆ ಡೆಲಿವರಿ ಕೊಡಬೆಕಿತ್ತು. ಸೇಲಂ ರಸ್ತೆ ಬಳಿ ಕಂಟೇನರ್ ನಿಲ್ಲಿಸಿ, ಕಳ್ಳತನ ಮಾಡಿ ಪರಾರಿಯಾಗಿದ್ದಾನೆ. ಲಾರಿ ಚಾಲಕ 18 ಲಕ್ಷ ವಸ್ತುಗಳಲ್ಲಿ 12 ಲಕ್ಷ ಬೆಲೆಬಾಳುವ ವಸ್ತುಗಳನ್ನು ಕದ್ದಿದ್ದಾನೆ ಎಂದು ಆರೋಪಿಸಲಾಗಿದೆ.

ನಿಗದಿತ ಸಮಯಕ್ಕೆ ಸಾಮಾಗ್ರಿಗಳು ತಲುಪದ ಕಾರಣ ಲಾರಿ ಮಾಲೀಕ ಚೌಡರೆಡ್ಡಿ ಚಾಲಕನಿಗೆ ಮೊಬೈಲ್​ನಲ್ಲಿ ಕರೆ ಮಾಡಿದ್ದಾನೆ. ಚಾಲಕ ಪ್ರಭು ಎಂಬಾತ ಅಡ್ರೆಸ್ ಮಿಸ್ ಆಗಿದೆಯೆಂದು ಕಥೆ ಕಟ್ಟಿದ್ದ. ಡೌಟ್ ಬಂದು ಜಿಪಿಎಸ್ ಪರಿಶೀಲನೆ ನಡೆಸಿದಾಗ ಕುಕೃತ್ಯ ಬೆಳಕಿಗೆ ಬಂದಿದೆ.

ಇದನ್ನೂ ಓದಿ: ಕೆಆರ್ ಆಸ್ ಜಲಾಶಯದಿಂದ ವಿಸಿ ಮತ್ತು ಆಣೆಕಟ್ಟು ನಾಲೆಗಳಿಗೆ ಷರತ್ತಿನ ಮೇಲೆ ನೀರು ಹರಿಸುವ ಆದೇಶ ಹೊರಡಿಸಿದ ಕೃಷಿ ಇಲಾಖೆ

ಮಾರ್ಗ ಮಧ್ಯೆಯ ಕೆಲ ಸಿಸಿಟಿವಿ ವಿಡಿಯೋ ಪಡೆದು ತಲೆಮರೆಸಿಕೊಂಡಿರುವ ಅರೋಪಿಗಳಿಗಾಗಿ ಶೋಧ ಕಾರ್ಯ ನಡೆದಿದೆ. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೋಲಾರದ ಟೊಮ್ಯಾಟೊ ಲಾರಿಯೂ ಹೀಗೆಯೇ ನಾಪತ್ತೆಯಾಗಿತ್ತು!

ಜುಲೈ 27ರಂದು ಕೋಲಾರದಿಂದ ರಾಜಸ್ಥಾನದ ಜೈಪುರಕ್ಕೆ ತೆರಳಿದ್ದ 21 ಲಕ್ಷ ಮೌಲ್ಯದ ಟೊಮ್ಯಾಟೊ ತುಂಬಿದ್ದ ಲಾರಿ ನಾಪತ್ತೆಯಾಗಿತ್ತು. ರಾಜಸ್ಥಾನದ ಜೈಪುರಕ್ಕೆ ತೆರಳಿದ್ದ 21 ಲಕ್ಷ ಮೌಲ್ಯದ ಟೊಮ್ಯಾಟೊ ತುಂಬಿದ್ದ ಲಾರಿ ನಾಪತ್ತೆಯಾಗಿತ್ತು. ಕೋಲಾರದ ಮೆಹತ್ ಟ್ರಾನ್ಸ್​​ಪೋರ್ಟ್​ಗೆ ಸೇರಿದ ಲಾರಿ ಇದಾಗಿದ್ದು ಇದರಲ್ಲಿ ಎ.ಜಿ. ಟ್ರೇಡರ್ಸ್ ಸಕ್ಲೇನ್, ಹಾಗೂ ಎಸ್.ವಿ.ಟಿ ಟ್ರೇಡರ್ಸ್ ಮುನಿರಡ್ಡಿ ಎಂಬುವರಿಗೆ ಸೇರಿದ 21 ಲಕ್ಷ ಮೌಲ್ಯದ ಟೊಮೆಟೊಗಳಿದ್ದವು. ಲಾರಿ ಚಾಲಕ ಮೊಬೈಕ್​ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಮಂಡಿ ಮಾಲೀಕರು ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ನೆಲಮಂಗಲ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಬಿ ಮೂರ್ತಿ, ನೆಲಮಂಗಲ

ದೊಡ್ಡಬಳ್ಳಾಪುರ ತಾಲ್ಲೂಕಿನ ಮಧುರೆ ಹೋಬಳಿಯ ಬೀರಯ್ಯನಪಾಳ್ಯದ ಮೂರ್ತಿ.ಬಿ.ನಾನು ಓದಿದ್ದು ಪಿಯುಸಿ,ಹೆಸರಘಟ್ಟ ಫಿಲ್ಮ್ ಆ್ಯಂಡ್ ಟಿವಿ ಕಾಲೇಜಿನಲ್ಲಿ ಕೆಲಸಗಾರನಾಗಿ ಕ್ಯಾಮರಾ ಕಲಿತು ದಿನಪತ್ರಿಕೆಗಳಿಗೆ ಪೋಟೋ ಕಳಿಸುವ ಕೆಲಸ ಬಳಿಕ 17ವರ್ಷದ ಹಿಂದೆ ನೇರವಾಗಿ ಟಿವಿನೈ ನಲ್ಲಿ ಕ್ಯಾಮರಾಮೆನ್ ಕೆಲಸಕ್ಕೆ ಸೇರಲಾಯಿತು. ಕಳೆದ 6ವರ್ಷದ ಹಿಂದೆ ಇದ್ದಕ್ಕಿದ್ದಂತೆ ಕ್ರೈಂ ಸಿಟಿ,ರಕ್ತಮಂಗಲ ಅಂತೆಲ್ಲ ಖ್ಯಾತಿ ಪಡೆದಿದ್ದ ನೆಲಮಂಗಲಕ್ಕೆ ಕ್ಯಾಮರಾ ಮ್ಯಾನ್ ಹಾಗೂ ವರದಿಗಾರನಾಗಿ ಕೆಲಸ ಮಾಡುವ ಅವಕಾಶ ನಮ್ಮ ಸೀನಿಯರ್ ಗಳಿಂದ ಕೂಡಿ ಬಂತು,ತನಗಿಂತ ಚನ್ನಾಗಿ ಕೆಲಸ ಮಾಡುವ ಕ್ಯಾಮರಾ ಮ್ಯಾನ್ ಗಳು ಇದ್ದರು ನನಗೆ ಅವಕಾಶ ಸಿಕ್ಕಿದ್ದಕ್ಕೆ ನನಗೆ ಹೆಮ್ಮೆ ಇದೆ,ನಾನು ಈ ಭಾಗದಲ್ಲಿ ಬಂದಾಗಿನಿಂದ ರೌಡಿಶೀಟರಗಳ ಉಪಟಳ ಕಂಟ್ರೋಲ್ಗೆ ಬಂದಿದೆ,ಯಾವುದೇ ಒಂದು ಚಿಕ್ಕದಾಗಲಿ ದೊಡ್ಡ ಮಟ್ಟದ ಕ್ರೈಂ ಅದ್ರೂ ಮೊದಲು ನಮ್ಮಲ್ಲಿ ನ್ಯೂಸ್ ಕವರ್ ಆಗಿರುತ್ತೆ,

Read More
Follow Us