ವಿಜೃಂಭಣೆಯಿಂದ ನಡೆದ ಆನೇಕಲ್ ಕರಗ ಮಹೋತ್ಸವ; ನಾದಸ್ವರದ ವಾದ್ಯಕ್ಕೆ ತಕ್ಕ ಹೆಜ್ಜೆ ಹಾಕಿದ ಕರಗ ಹೊತ್ತ ಪೂಜಾರಿ

ಅದು ನೂರಾರು ವರ್ಷಗಳ ಇತಿಹಾಸ ಹೊಂದಿರುವ ಶ್ರೀ ಧರ್ಮರಾಯಸ್ವಾಮಿ ದ್ರೌಪದಮ್ಮ ದೇವಿ ದೇವಾಲಯ. ಇಲ್ಲಿ ನಡೆದ ಕರಗ ಮಹತ್ಸೋವವನ್ನ ಸಹಸ್ರಾರು ಭಕ್ತರು ಕಣ್ತುಂಬಿಕೊಂಡು ವೈಭವದ ಕರಗ ಮಹೋತ್ಸವಕ್ಕೆ ಸಾಕ್ಷಿಯಾದರು. ನಾದಸ್ವರ ವಾದ್ಯದ ತಾಳಕ್ಕೆ ತಕ್ಕಂತೆ ಕರಗ ಹೊತ್ತ ಪೂಜಾರಿ ಹೆಜ್ಜೆ ಹಾಕಿದ್ದು, ನೆರೆದಿದ್ದ ಸಹಸ್ರಾರು ಭಕ್ತರನ್ನ ಮಂತ್ರ ಮುಗ್ಧರನ್ನಾಗಿಸಿತ್ತು‌‌.

ವಿಜೃಂಭಣೆಯಿಂದ ನಡೆದ ಆನೇಕಲ್ ಕರಗ ಮಹೋತ್ಸವ; ನಾದಸ್ವರದ ವಾದ್ಯಕ್ಕೆ ತಕ್ಕ ಹೆಜ್ಜೆ ಹಾಕಿದ ಕರಗ ಹೊತ್ತ ಪೂಜಾರಿ
ಆನೇಕಲ್​ ಕರಗ
Follow us
ರಾಮು, ಆನೇಕಲ್​
| Updated By: ಕಿರಣ್ ಹನುಮಂತ್​ ಮಾದಾರ್

Updated on: May 24, 2024 | 9:08 PM

ಬೆಂಗಳೂರು ಗ್ರಾಮಾಂತರ, ಮೇ.22: ಆನೇಕಲ್(Anekal)  ಪಟ್ಟಣದ ಇತಿಹಾಸ ಪ್ರಸಿದ್ದ ಶ್ರೀ ಧರ್ಮರಾಯಸ್ವಾಮಿ ದ್ರೌಪದಮ್ಮ ದೇವಿಯ ಕರಗ(Karaga) ಮಹೋತ್ಸವವೂ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಶ್ರದ್ದೆ ಭಕ್ತಿಯಿಂದ ನೆರವೇರಿತು. ಕಳೆದ ನಾಲ್ಕೈದು ಬಾರಿಯಿಂದ ಕರಗ ಹೊತ್ತಿದ್ದ ಚಂದ್ರಪ್ಪ ಅವರು ಈ ಬಾರಿಯೂ ಕರಗವನ್ನ ಹೊತ್ತರು. ವೀರಕುಮಾರರು ಢಿಕ್‌ ಡೀ ಗೋವಿಂದ..ಗೋವಿಂದ.. ಎಂದು ಜಯಘೋಷ ಕೂಗುತ್ತಾ ಬೆಳಿಗ್ಗೆ 3.30 ರ ಸುಮಾರಿಗೆ ಕರಗವನ್ನ ಬರಮಾಡಿಕೊಂಡರು.

ಮೊಣಕಾಲಿನಲ್ಲಿ ದೇವಾಲಯದಿಂದ ಕರಗ ಹೊರ ಬರುತ್ತಿದ್ದಂತೆ ವಹ್ನಿಕುಲದ ಕುಲಸ್ಥರು ಡಮರುಗದ ನಾದ ಹಾಗೂ ಗೆಜ್ಜೆ ಸಪ್ಪಳದ ಜೊತೆಗೆ ಭಕ್ತರು ಜಯಘೋಷ ಮೂಲಕ ಕರಗವನ್ನು ಸ್ವಾಗತಿಸಿದರು. ಕರಗ ಹೊರಬರುತ್ತಿದ್ದಂತೆ ಅಲ್ಲಿದ್ದ ನೂರಾರು ಮಂದಿ ವೀರಕುಮಾರರು ಗೋವಿಂದ ಎನ್ನುತ್ತಾ ಕತ್ತಿಯಲ್ಲಿ ಎದೆಗೆ ಬಡಿದುಕೊಂಡು ಹಲಗು ಸೇವೆಯನ್ನ ಸಲ್ಲಿಸಿದರು. ದೇವಾಲಯದ ಪ್ರಾಂಗಣವನ್ನು ಪ್ರದಕ್ಷಿಣೆ ಮಾಡಿ ಕರಗವು ಹೊರ ಬರುತ್ತಿದ್ದಂತೆ ಶಂಕರಮಠದಲ್ಲಿ ಪೂಜೆ ಸಲ್ಲಿಸಿದರು.

ಇದನ್ನೂ ಓದಿ:ಗತವೈಭವ ಮರುಕಳಿಸುವ ಆನೇಕಲ್ ಕರಗಕ್ಕೆ ಆದ್ದೂರಿ ಸಿದ್ದತೆ; 9 ದಿನಗಳ ಕಾಲ ಶಾಸ್ತೋಕ್ತವಾಗಿ ನಡೆಯಲಿದೆ ಕರಗ ಉತ್ಸವ

ನಂತರ ವೀರವಸಂತರಾಯನ (ಬಲರಾಮನ) ಮೂರ್ತಿಯ ಬಳಿಗೆ ಬಂದು ಪಟ್ಟಣದ ತಿಲಕ್ ವೃತ್ತ, ಚರ್ಚ್ ರೋಡ್, ದೇವರಕೊಂಡಪ್ಪ ವೃತ್ತ, ಶ್ರೀರಾಮ ಮಂದಿರ ಸೇರಿದಂತೆ ವಿವಿಧ ಬೀದಿಗಳಲ್ಲಿ ಸಾಗಿ ಬಂದ ಕರಗ ಉತ್ಸವವನ್ನ ಭಕ್ತರು ಕಣ್ತುಂಬಿಕೊಂಡರು. ಇನ್ನು ಶ್ರೀ ಧರ್ಮರಾಯಸ್ವಾಮಿ ದ್ರೌಪದಮ್ಮ ಕರಗ ಉತ್ಸವದ ಹಿನ್ನೆಲೆಯಲ್ಲಿ ಮನೆಗಳ ಮುಂದೆ ರಂಗೋಲಿ ಬಿಡಿಸಿ ಅಲಂಕಾರ ಮಾಡಲಾಗಿತ್ತು. ಕರಗೋತ್ಸವ ನೋಡಲು ಜನಸಾಗರವೇ ಹರಿದು ಬಂದಿತ್ತು. ಕರಗವು ಪಟ್ಟಣದ ವಿವಿಧ ದೇವಾಲಯಗಳ ಹಾಗೂ ಪ್ರಮುಖ ಬೀದಿಗಳಲ್ಲಿ ಸಾಗುವಾಗ ಜನರು ಆರತಿ ಬೆಳಗಿ ಕರಗದ ಮೇಲೆ ಮಲ್ಲಿಗೆ ಹೂವು ಎರಚಿ ಜನರು ಭಕ್ತಿ ಸಮರ್ಪಿಸಿದರು.

ಕರಗ ಹೋದ ಕಡೆಯಲ್ಲೆಲ್ಲ ನಾದಸ್ವರ ವಾದ್ಯ ತಂಡಗಳನ್ನ ನಿಯೋಜನೆ ಮಾಡಲಾಗಿತ್ತು. ನಾದಸ್ವರ, ಡೋಲು, ತಮಟೆಯ ವಾದನಕ್ಕೆ ತಕ್ಕಂತೆ ಕರಗವು ಹೆಜ್ಜೆ ಹಾಕಿ ಮುಂದೆ ಸಾಗುವಾಗ ಮಲ್ಲಿಗೆ ಹೂವುಗಳನ್ನು ಕರಗಕ್ಕೆ ಅರ್ಪಿಸುವ ಮೂಲಕ ಜನರು ಭಕ್ತಿ,ಭಾವ ಮೆರೆದರು. ಸಹಸ್ರಾರು ಮಂದಿ ಭಕ್ತರು ವೈಭವದ ಕರಗ ಉತ್ಸವವನ್ನು ಕಣ್ತುಂಬಿಕೊಂಡಿದ್ದು, ಗ್ರಾಮ ದೇವತೆಗಳ 25ಕ್ಕೂ ಹೆಚ್ಚು ಪಲ್ಲಕ್ಕಿಗಳ ಉತ್ಸವ ಆಯೋಜಿಸಲಾಗಿತ್ತು.

ಇನ್ನು ಕರಗ ಮಹೋತ್ಸವದ ಅಂಗವಾಗಿ ವೀರ ವಸಂತರಾಯ(ಬಲಿರಾಮ) ಪ್ರತಿಷ್ಠಾಪನೆಯಾಗಿದ್ದು, ನಾಳೆ(ಮೇ.25) ಸಂಜೆ ಕೋಟೆ ಜಗಳ ನಡೆಯಲಿದೆ. 26 ನೇ ತಾರೀಖಿನಂದು ವಿಜೃಂಭನೆಯ ಒಣಕರಗ ಮಹೋತ್ಸವ ನಡೆಯಲಿದ್ದು, ಆನೇಕಲ್​ನಲ್ಲಿ ಹಬ್ಬದ ವಾತಾವರಣ ಕಳೆಗಟ್ಟಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ