ನೆಲಮಂಗಲ: ಹಣ ಸಹಾಯ ಮಾಡಿಲ್ಲವೆಂದು ಐಎಂಎ ಅಧ್ಯಕ್ಷರ ಮೇಲೆ ಹಲ್ಲೆ

ಹಣ ಸಹಾಯ ಮಾಡಿಲ್ಲವೆಂದು ಐಎಂಎ ಅಧಕ್ಷ ಡಾ.ಜಯಪ್ರಸಾದ್ ಅವರ ಮೇಲೆ ಹಲ್ಲೆ ಮಾಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ. ಡಾ.ಅಬ್ದುಲ್ ಹಲ್ಲೆ ಮಾಡಿದ ಆರೋಪಿ. ಸದ್ಯ ಆರೋಪಿ ಅಬ್ದುಲ್​ ವಿರುದ್ಧ ನೆಲಮಂಗಲ ಟೌನ್​ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನೆಲಮಂಗಲ: ಹಣ ಸಹಾಯ ಮಾಡಿಲ್ಲವೆಂದು ಐಎಂಎ ಅಧ್ಯಕ್ಷರ ಮೇಲೆ ಹಲ್ಲೆ
ಆರೋಪಿ ಅಬ್ದುಲ್​​, ಐಎಂಎ ಅಧ್ಯಕ್ಷ ಡಾ.ಜಯಪ್ರಸಾದ್
Follow us
| Updated By: ವಿವೇಕ ಬಿರಾದಾರ

Updated on:Jun 30, 2024 | 1:06 PM

ನೆಲಮಂಗಲ, ಜೂನ್​​ 30: ಬೆಂಗಳೂರು ಗ್ರಾಮಾಂತರ (Bengaluru Rural) ಜಿಲ್ಲೆಯ ನೆಲಮಂಗಲದ (Nelamangala) ಖಾಸಗಿ ಆಸ್ಪತ್ರೆಯಲ್ಲಿ ಐಎಮ್​ಎ (IMA) ಅಧ್ಯಕ್ಷರಿಗೆ ಕಪಾಳಮೋಕ್ಷ ಮಾಡಲಾಗಿದೆ. ಡಾ.ಜಯಪ್ರಸಾದ್ ಹಲ್ಲೆಗೆ ಒಳಗಾದ ಐಎಂಎ ಅಧ್ಯಕ್ಷ. ಡಾ.ಅಬ್ದುಲ್ ಹಲ್ಲೆ ಮಾಡಿದ ಆರೋಪಿ. ಆರೋಪಿ ಡಾ.ಅಬ್ದುಲ್ ರೆಹಮಾನ್ ಶರೀಫ್ ಖಾಸಗಿ ಅಸ್ಪತ್ರೆಯಲ್ಲಿ ಮೈಕ್ರೋ ಬಯಾಲಜಿಸ್ಟ್ ಆಗಿ ಕೆಲಸ ಮಾಡುತ್ತಿದ್ದನು. ಮಗನ ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ಡಾ. ಅಬ್ದುಲ್ ವೈದ್ಯಕೀಯ ಸಂಘದಿಂದ 25 ಲಕ್ಷ ರೂ. ಸಹಾಯ ಮಾಡಿ ಎಂದು ಐಎಂಎ ಅಧ್ಯಕ್ಷ ಡಾ.ಜಯಪ್ರಸಾದ್ ಅವರಿಗೆ ಮನವಿ ಮಾಡಿದ್ದನು.

ಆದರೆ, ಐಎಂಎ ಅಧ್ಯಕ್ಷ ಡಾ.ಜಯಪ್ರಸಾದ್ ಹಣ ಸಹಾಯ ಮಾಡಿರಲಿಲ್ಲ. ಇದರಿಂದ ಕೋಪಕೊಂಡ ಡಾ.ಅಬ್ದುಲ್​​ ಡಾ.ಜಯಪ್ರಸಾದ್ ಮೇಲೆ ಹಲ್ಲೆ ಮಾಡಿದ್ದಾನೆ. ಹಲ್ಲೆಯಿಂದಾಗಿ ಅಧ್ಯಕ್ಷ ಡಾ.ಜಯಪ್ರಸಾದ್ ಎಡಕಿವಿ ಮತ್ತು ಎಡ ದವಡೆಗೆ ಪೆಟ್ಟಾಗಿದೆ. ಎಡ ಕಿವಿ ತಮಟೆ ಹೊಡೆದು ಕಿವಿ ಕೇಳುತ್ತಿಲ್ಲ.

ಇದನ್ನೂ ಓದಿ: ಕದ್ದ ಕಾರನ್ನು ರಾಜಕಾರಣಿಗೆ ಮಾರಾಟ ಮಾಡಿದ ಖದೀಮರು, ಚಲಾಕಿಗಳಿಗಾಗಿ ಹುಡುಕಾಟ

ಆರೋಪಿ ಡಾ.ಅಬ್ದುಲ್ ರೆಹಮಾನ್ ಷರೀಫ್ ವಿರುದ್ಧ ನೆಲಮಂಗಲ ಟೌನ್​​​ ಪೊಲೀಸ್​ ಠಾಣೆಯಲ್ಲಿ ಐಪಿಸಿ ಸೆಕ್ಷನ್ 323, 504, 506 ಜೊತೆಗೆ 34ರ ಅಡಿ ಪ್ರಕರಣ ದಾಖಲಾಗಿದೆ.

ಕ್ಷುಲ್ಲಕ ಕಾರಣಕ್ಕೆ ಹಲ್ಲೆ, ವ್ಯಕ್ತಿ ಸಾವು

ಚಾಮರಾಜನಗರ: ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯ ಮೇಲೆ ಹಲ್ಲೆ ಮಾಡಿರುವ ಘಟನೆ ಚಾಮರಾಜನಗರ ತಾಲೂಕು ಅಮಚವಾಡಿಯಲ್ಲಿ ನಡೆದಿದೆ. ದನಗಳು ತನ್ನ ಜಮೀನಿಗೆ ನುಗ್ಗಿವೆ ಎಂದು ನಂಜುಂಡ (68) ಎಂಬುವರ ಮೇಲೆ (ಶನಿವಾರ ಜೂ.29) ರಂದು ವಿಘ್ನೇಶ್ ಮುರುಳಿ ಎಂಬುವನ್ನು ಹಲ್ಲೆ ಮಾಡಿದ್ದನು. ಬಳಿಕ ನಂಜುಂಡ ಮನೆಗೆ ಬಂದು ರಾತ್ರಿ ಊಟ ಮಾಡಿ ಮಲಗಿದ್ದಲ್ಲೇ ಮೃತಪಟ್ಟಿದ್ದಾನೆ. ನಂಜುಂಡನನ್ನು ಕೊಲೆ ಮಾಡಲಾಗಿದ ಎಂದು ಸಂಬಂಧಿಕರು ಚಾಮರಾಜನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಸಾಲಬಾಧೆ ತಾಳದೆ ಯುವಕ ಆತ್ಮಹತ್ಯೆ

ಮೈಸೂರು: ಸಾಲಬಾಧೆ ತಾಳದೆ ಯುವಕ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಿರಿಯಾಪಟ್ಟಣ ತಾಲೂಕಿನ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ಬೆಟ್ಟದಲ್ಲಿ ನಡೆದಿದೆ. ಕೆ.ಆರ್.ತಾಲೂಕಿನ ಹೆಬ್ಬಾಳು ಕೊಪ್ಪಲು ಗ್ರಾಮದ ಯತೀಕ್ (25) ಮೃತ ದುರ್ದೈವಿ. ಯತಿಕ್​​ ಬೆಂಗಳೂರಿನಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದನು. ಮನೆಯಲ್ಲಿ ಸಮಸ್ಯೆ ಹಿನ್ನೆಲೆಯಲ್ಲಿ ಕ್ರೆಡಿಟ್ ಕಾರ್ಡ್, ಪರ್ಸನಲ್ ಲೋನ್ ಪಡೆದಿದ್ದನು. ಇದರ ಇಎಂಐ ಕಟ್ಟಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಡೆತ್​ನೋಟ್​ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾನೆ. ಬೆಟ್ಟದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 11:11 am, Sun, 30 June 24

ತಾಜಾ ಸುದ್ದಿ
ಜೈಲಿನಲ್ಲಿ ದರ್ಶನ್​ನ​ ಅಪ್ಪಿ ಕಣ್ಣೀರು ಹಾಕಿದ ತಾಯಿ ಮೀನಾ
ಜೈಲಿನಲ್ಲಿ ದರ್ಶನ್​ನ​ ಅಪ್ಪಿ ಕಣ್ಣೀರು ಹಾಕಿದ ತಾಯಿ ಮೀನಾ
Daily Devotional: ಸನಾತನ ಧರ್ಮದಲ್ಲಿ 108ರ ಮಹತ್ವ ತಿಳಿದುಕೊಳ್ಳಿ
Daily Devotional: ಸನಾತನ ಧರ್ಮದಲ್ಲಿ 108ರ ಮಹತ್ವ ತಿಳಿದುಕೊಳ್ಳಿ
Daily Horoscope: ವೈವಾಹಿಕ ಜೀವನವು ಸುಖಮಯವಾಗಿ ಸಾಗಲಿದೆ
Daily Horoscope: ವೈವಾಹಿಕ ಜೀವನವು ಸುಖಮಯವಾಗಿ ಸಾಗಲಿದೆ
‘ದರ್ಶನ್ ರಿಲೀಸ್​ ಆಗ್ತಾರಾ?’: ದೇವರಿಗೆ ಪ್ರಶ್ನೆ ಕೇಳಿ ಉತ್ತರ ಪಡೆದ ಪೂಜಾರಿ
‘ದರ್ಶನ್ ರಿಲೀಸ್​ ಆಗ್ತಾರಾ?’: ದೇವರಿಗೆ ಪ್ರಶ್ನೆ ಕೇಳಿ ಉತ್ತರ ಪಡೆದ ಪೂಜಾರಿ
ಭಾರೀ ಮಳೆಯಿಂದ ಟ್ರಾಫಿಕ್ ಮಧ್ಯೆ 8 ಅಡಿ ಉದ್ದದ ಮೊಸಳೆ ಪ್ರತ್ಯಕ್ಷ!
ಭಾರೀ ಮಳೆಯಿಂದ ಟ್ರಾಫಿಕ್ ಮಧ್ಯೆ 8 ಅಡಿ ಉದ್ದದ ಮೊಸಳೆ ಪ್ರತ್ಯಕ್ಷ!
ಅಪ್ಪ ಕೊಚ್ಚಿ ಹೋಗುವ ವಿಡಿಯೋ ಮಗಳ ಮೊಬೈಲ್​ನಲ್ಲಿ ಸೆರೆ
ಅಪ್ಪ ಕೊಚ್ಚಿ ಹೋಗುವ ವಿಡಿಯೋ ಮಗಳ ಮೊಬೈಲ್​ನಲ್ಲಿ ಸೆರೆ
ಪಿಕ್ನಿಕ್ ಹೋದ ಐವರು ಜಲಪಾತದಲ್ಲಿ ಕೊಚ್ಚಿ ಹೋದ ಭಯಾನಕ ವಿಡಿಯೋ ವೈರಲ್
ಪಿಕ್ನಿಕ್ ಹೋದ ಐವರು ಜಲಪಾತದಲ್ಲಿ ಕೊಚ್ಚಿ ಹೋದ ಭಯಾನಕ ವಿಡಿಯೋ ವೈರಲ್
ಸಿದ್ದರಾಮಯ್ಯ ಮೇಲಿನ ವೈರತ್ವ ಮಗನ ಮೇಲೆ ಸಾಧಿಸುವುದು ಸರಿಯಲ್ಲ:ಭೈರತಿ ಸುರೇಶ್
ಸಿದ್ದರಾಮಯ್ಯ ಮೇಲಿನ ವೈರತ್ವ ಮಗನ ಮೇಲೆ ಸಾಧಿಸುವುದು ಸರಿಯಲ್ಲ:ಭೈರತಿ ಸುರೇಶ್
ಶೇ 60 ರಷ್ಟು ಕನ್ನಡ ಕಡ್ಡಾಯ; ಸರ್ಕಾರದಿಂದ  ಸೂಕ್ತ ಕ್ರಮ: ನಾರಾಯಣಗೌಡ, ಕರವೇ
ಶೇ 60 ರಷ್ಟು ಕನ್ನಡ ಕಡ್ಡಾಯ; ಸರ್ಕಾರದಿಂದ  ಸೂಕ್ತ ಕ್ರಮ: ನಾರಾಯಣಗೌಡ, ಕರವೇ
ಪ್ರಜ್ವಲ್​ ಮಾತಾಡಿಸಲು ಜೈಲಿಗೆ ಬಂದ ಭವಾನಿ ಮಾಧ್ಯಮಗಳಿಗೆ ಮುಖ ತೋರಿಸಲಿಲ್ಲ!
ಪ್ರಜ್ವಲ್​ ಮಾತಾಡಿಸಲು ಜೈಲಿಗೆ ಬಂದ ಭವಾನಿ ಮಾಧ್ಯಮಗಳಿಗೆ ಮುಖ ತೋರಿಸಲಿಲ್ಲ!