ಕದ್ದ ಕಾರನ್ನು ರಾಜಕಾರಣಿಗೆ ಮಾರಾಟ ಮಾಡಿದ ಖದೀಮರು, ಚಲಾಕಿಗಳಿಗಾಗಿ ಹುಡುಕಾಟ
ಎಸ್ಆರ್ ವಿಶ್ವನಾಥ್ ಆಪ್ತ, ಯಲಹಂಕ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಕಾರ್ಯದರ್ಶಿ ಹಾಗೂ ಉದ್ಯಮಿ ಆಗಿರುವ ರಾಜೇಶ್ ಅವರಿಗೆ 15 ಲಕ್ಷದ 60 ಸಾವಿರಕ್ಕೆ ಕಳ್ಳತನ ಮಾಡಲಾಗಿದ್ದ ಕೆಎ-19-ಎಂಕೆ 4809 ಇನ್ನೋವ ಕಾರನ್ನು ಮಾರಾಟ ಮಾಡಿ ದುಷ್ಕರ್ಮಿಗಳು ಮೋಸ ಮಾಡಿರುವ ಘಟನೆ ನಡೆದಿದೆ. ಘಟನೆ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ನೆಲಮಂಗಲ, ಜೂನ್.29: ಕದ್ದ ಕಾರನ್ನು ಮಾರಾಟ ಮಾಡಿ ಉದ್ಯಮಿ, ರಾಜಕಾರಣಿ ಆಗಿರುವ ರಾಜೇಶ್ಗೆ ಲಕ್ಷಾಂತರ ರೂ ಹಣ ವಂಚನೆ ಮಾಡಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ಮಾಚೋಹಳ್ಳಿಯಲ್ಲಿ ನಡೆದಿದೆ. ಯಲಹಂಕ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಕಾರ್ಯದರ್ಶಿ ಹಾಗೂ ಉದ್ಯಮಿ ಆಗಿರುವ ರಾಜೇಶ್ ಅವರಿಗೆ 15 ಲಕ್ಷದ 60 ಸಾವಿರಕ್ಕೆ ಕಳ್ಳತನ ಮಾಡಲಾಗಿದ್ದ ಕೆಎ-19-ಎಂಕೆ 4809 ಇನ್ನೋವ ಕಾರನ್ನು ಮಾರಾಟ ಮಾಡಿ ದುಷ್ಕರ್ಮಿಗಳು ಮೋಸ (Cheat) ಮಾಡಿದ್ದಾರೆ. ಘಟನೆ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ (Madanayakanahalli Police Station) ಪ್ರಕರಣ ದಾಖಲಾಗಿದ್ದು ಬಾಲರಾಜ್, ಪ್ರಭಾಕರ್, ಶಫಿ, ಪುಟ್ಟ ವಿರುದ್ಧ ದೂರು ದಾಖಲಾಗಿದೆ.
ಆರೋಪಿಗಳು ಮಂಗಳೂರಿನ ಮಾಲತಿ ಎಂಬುವವರ ಕಾರನ್ನ ಕಳ್ಳತನ ಮಾಡಿ ಅದನ್ನು 15 ಲಕ್ಷದ 60 ಸಾವಿರಕ್ಕೆ ರಾಜೇಶ್ ಅವರಿಗೆ ಮಾರಾಟ ಮಾಡಿದ್ದಾರೆ. ರಾಜೇಶ್ ಅವರು ಆರೋಪಿಗಳಿಗೆ ಮೊದಲು ಅಡ್ವಾನ್ಸ್ ಎಂದು 5 ಲಕ್ಷದ 60 ಸಾವಿರ ನಗದು ಹಣವನ್ನು ಕೊಟ್ಟು, ಉಳಿದ 10 ಲಕ್ಷಕ್ಕೆ ಚೆಕ್ ನೀಡಿದ್ದರು. ಇನ್ನು ಆರೋಪಿಗಳಿಗೆ ಕಾರಿನ ಒರಿಜಿನಲ್ ಡಾಕ್ಯುಮೆಂಟ್ಗಳನ್ನು ಕೇಳಿದಾಗ ಆರೋಪಿ ಬಾಲರಾಜ್ ಆರ್.ಸಿ ಕಾರ್ಡ್ ಸೇರಿದಂತೆ ಫೇಕ್ ಡಾಕ್ಯೂಮೆಂಟ್ ಸೃಷ್ಟಿ ಮಾಡಿ ವಂಚನೆ ಮಾಡಿರುವುದು ಪತ್ತೆಯಾಗಿದೆ. ಆರೋಪಿಗಳ ವಿರುದ್ದ IPC1860 ಕಲಂ 465, 468, 420 ಜೊತೆಗೆ 34 ಐಪಿಸಿ ರೀತ್ಯಾ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಗದಗ: ಪೊಲೀಸರ ಮೇಲೆ ಅಟ್ಯಾಕ್ ಮಾಡಿ ಆರೋಪಿ ಜೊತೆ ದುಷ್ಕರ್ಮಿಗಳು ಎಸ್ಕೇಪ್, ಖದೀಮರಿಗಾಗಿ ಹುಡುಕಾಟ
ಗಾಂಜಾ ಮಾರುತ್ತಿದ್ದ ಅಪ್ರಾಪ್ತರು ಸೇರಿ ಐವರು ಸೆರೆ
ಗಾಂಜಾ ಮಾರುತ್ತಿದ್ದ ಇಬ್ಬರು ಅಪ್ರಾಪ್ತ ಬಾಲಕರು ಸೇರಿ ಐವರನ್ನ ಬಂಧಿಸಲಾಗಿದೆ. ಹುಬ್ಬಳ್ಳಿಯ ಬೆಂಡಿಗೇರಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಮಂಟೂರ ರಸ್ತೆಯ ಬಳಿಯ ರೈಲ್ವೆ ಗೇಟ್ ಬಳಿ ವೀರಾಪುರದ ಮುಬಾರಕ್, ಕೇಶ್ವಾಪುರದ ಚಂದ್ರಶೇಖರ ಸೇರಿ ಐವರನ್ನ ಬಂಧಿಸಲಾಗಿದೆ. ಅಂತರಾಜ್ಯದಿಂದ ಗಾಂಜಾ ತಂದು ಹುಬ್ಬಳ್ಳಿಯಲ್ಲಿ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಬಂದ ಹಿನ್ನೆಲೆ ದಾಳಿ ನಡೆಸಿ ಹೆಡೆಮುರಿ ಕಟ್ಟಲಾಗಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ