ಬೆಡ್​​ ರೂಮ್​ನಲ್ಲಿ ಯುವಕನ ಜೊತೆ ಹೆಂಡ್ತಿ ಕಂಡು ಹೌಹಾರಿದ ಪತಿ, ಡೆತ್​ನೋಟ್ ನಲ್ಲಿ ಭಾವುಕ ನುಡಿ ಬರೆದಿಟ್ಟು ಬಿಬಿಎಂಪಿ ನೌಕರ ಆತ್ಮಹತ್ಯೆ

ಪ್ರೀತಿ ಮದುವೆಯಾಗಿದ್ದ ಹೆಂಡತಿ ಪರ ಪುರಷನ ಜೊತೆ ಬೆಡ್​​ ರೂಮ್​ನಲ್ಲಿರುವುದನ್ನು ನೋಡಿ ಪತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನಲ್ಲಿ ನಡೆದಿದೆ. ಇನ್ನು ಆತ್ಮಹತ್ಯೆಗೂ ಮುನ್ನ ಪತಿ, ತನ್ನ ಹೆಂಡತಿ ಬಗ್ಗೆ ಮನಮಿಡಿಯುವಂತೆ ಡೆತ್​ನೋಟ್​ ಬರೆದಿಟ್ಟಿದ್ದಾನೆ. ಆ ಡೆತ್​ನೋಟ್​ನ​ ವಿವರ ಈ ಕೆಳಗಿನಂತಿದೆ ನೋಡಿ.

ಬೆಡ್​​ ರೂಮ್​ನಲ್ಲಿ ಯುವಕನ ಜೊತೆ ಹೆಂಡ್ತಿ ಕಂಡು ಹೌಹಾರಿದ ಪತಿ, ಡೆತ್​ನೋಟ್ ನಲ್ಲಿ ಭಾವುಕ ನುಡಿ ಬರೆದಿಟ್ಟು ಬಿಬಿಎಂಪಿ ನೌಕರ ಆತ್ಮಹತ್ಯೆ
ಡೆತ್​ನೋಟ್ ಬರೆದಿಟ್ಟು ಲೋಕೇಶ್ ಆತ್ಮಹತ್ಯೆ
Edited By:

Updated on: Aug 20, 2023 | 1:35 PM

ಬೆಂಗಳೂರು, (ಆಗಸ್ಟ್ 20): ಪರ ಪುರುಷನ ಜತೆ ಪತ್ನಿಯ ಲವ್ವಿಡವ್ವಿ ನೋಡಿ ಪತಿ ನೇಣಿಗೆ ಶರಣಾಗಿರುವ ದಾರುಣ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂರಿಕಿನ ಚಿಕ್ಕಮಾರನಹಳ್ಳಿಯಲ್ಲಿ ನಡೆದಿದೆ. ಲೋಕೇಶ್(35)ಮರಕ್ಕೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ನಾಗರಬಾವಿ ಬಿಬಿಎಂಪಿ ಕಚೇರಿಯಲ್ಲಿ ಗುತ್ತಿಗೆ ನೌಕರನಾಗಿದ್ದ ಲೋಕೇಶ್, ತನ್ನ ಪತ್ನಿ ಶಶಿಕಲಾ ಜತೆ ಯುವಕ ಚಿರಂಜೀವಿ ಮನೆಯ ಬೆಡ್ ರೂಂನಲ್ಲಿ ಇರುವುದನ್ನು ನೋಡಿ ಮನನೊಂದಿದ್ದ. ಬಳಿಕ ಲೋಕೇಶ್ ಡೆತ್​ನೋಟ್ ಬರೆದಿಟ್ಟು, ಬಳಿಕ ಗ್ರಾಮದ ಹೊರಗಿನ ಹೊಂಗೆ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಇನ್ನು ಲೋಕೇಶ್ ಕಾಣದಿದ್ದಾಗ ತಾಯಿ ಲಕ್ಷ್ಮಮ್ಮ ಗಾಬರಿಯಲ್ಲಿ ಹುಡುಕಾಡುತ್ತಿದ್ದಳು. ಕೊನೆಗೆ ಸಾಕು ನಾಯಿ ಲಕ್ಷ್ಮಮ್ಮಳನ್ನು ನೇರವಾಗಿ ಲೋಕೇಶ್ ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಳಕ್ಕೆ ಕರೆದುಕೊಂಡು ಹೋಗಿದ್ದು, ಮಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ತಾಯಿ ಲಕ್ಷ್ಮಮ್ಮ,ಅಕ್ಕ ಮಂಜುಳರ ಆಕ್ರಂದನ ಮುಗಿಲು ಮುಟ್ಟಿದೆ. ಇನ್ನು ಈ ಘಟನೆ ಸಂಬಂಧ ನೆಲಮಂಗಲ ಗ್ರಾಮಾಂತರ ಪೊಲೀಸರು ಚಿರಂಜೀವಿಯನ್ನ ಬಂಧಿಸಿ ತನಿಖೆ ನಡೆಸಿದ್ದಾರೆ.

ಇದನ್ನೂ ಓದಿ: ದಾವಣಗೆರೆಯಲ್ಲಿ ಕೌಟುಂಬಿಕ ಕಲಹ ಹಿನ್ನೆಲೆ ಪತ್ನಿಯನ್ನ ಕೊಂದ ಪತಿ

ಡೆತ್​ ನೋಟ್​ನಲ್ಲೇನಿದೆ?

“ಯಾವ ದೈವವೂ ನಿಮ್ಮನ್ನು ಕ್ಷಮಿಸುವುದಿಲ್ಲ ಅಕ್ಕ ಅಕ್ಕ ಎಂದುಕೊಂಡು ಈ ರೀತಿ ಮೋಸ ಮಾಡಿದಿಯಾ”, “ಒಳಿತು ಮಾಡು ಮನುಷ ಇರೋದು ಮೂರು ದಿವಸ”. ಶಶಿಕಲಾ ನಾನು ನಿನ್ನನ್ನು ಪ್ರೀತಿಸಿ ಮದುವೆಯಾದೆ ಆದರೆ ನೀನು ನನಗೆ ಇಂಥ ಮೋಸ ಮಾಡಿದಿಯಲ್ಲ, ಇದನ್ನು ಕನಸಿನಲ್ಲೂ ಕೂಡ ಇಂತಹದ್ದನ್ನ ಊಹಿಸಿರಲಿಲ್ಲ. ನಮಗೆ ಇರುವ ಇಬ್ಬರು ಹೆಣ್ಣುಮಕ್ಕಳಿಗೆ ದಾರಿ ದೀಪವಾಗಬೇಕಿತ್ತು. ನನಗೆ ಮೋಸ ಮಾಡಿಬಿಟ್ಟೆ. ನೀನು ಹಾಗೂ ಚಿರಂಜೀವಿ ಜೀವನ ಸುಖವಾಗಿರಲೆಂದು ಹಾರೈಸಿ ಕೊನೆಯಲ್ಲಿ ಪತ್ನಿ ಶಶಿಕಲಾಗೆ I love you. ಪ್ರಿಯಕರನಿಗೆ I hate you ಚಿರಂಜೀವಿ ಎಂದು ಲೋಕೇಶ್ ಡೆತ್ ನೋಟ್​ನಲ್ಲಿ ಬರೆದಿದ್ದಾನೆ. ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 12:45 pm, Sun, 20 August 23

ಬಿ ಮೂರ್ತಿ, ನೆಲಮಂಗಲ

ದೊಡ್ಡಬಳ್ಳಾಪುರ ತಾಲ್ಲೂಕಿನ ಮಧುರೆ ಹೋಬಳಿಯ ಬೀರಯ್ಯನಪಾಳ್ಯದ ಮೂರ್ತಿ.ಬಿ.ನಾನು ಓದಿದ್ದು ಪಿಯುಸಿ,ಹೆಸರಘಟ್ಟ ಫಿಲ್ಮ್ ಆ್ಯಂಡ್ ಟಿವಿ ಕಾಲೇಜಿನಲ್ಲಿ ಕೆಲಸಗಾರನಾಗಿ ಕ್ಯಾಮರಾ ಕಲಿತು ದಿನಪತ್ರಿಕೆಗಳಿಗೆ ಪೋಟೋ ಕಳಿಸುವ ಕೆಲಸ ಬಳಿಕ 17ವರ್ಷದ ಹಿಂದೆ ನೇರವಾಗಿ ಟಿವಿನೈ ನಲ್ಲಿ ಕ್ಯಾಮರಾಮೆನ್ ಕೆಲಸಕ್ಕೆ ಸೇರಲಾಯಿತು. ಕಳೆದ 6ವರ್ಷದ ಹಿಂದೆ ಇದ್ದಕ್ಕಿದ್ದಂತೆ ಕ್ರೈಂ ಸಿಟಿ,ರಕ್ತಮಂಗಲ ಅಂತೆಲ್ಲ ಖ್ಯಾತಿ ಪಡೆದಿದ್ದ ನೆಲಮಂಗಲಕ್ಕೆ ಕ್ಯಾಮರಾ ಮ್ಯಾನ್ ಹಾಗೂ ವರದಿಗಾರನಾಗಿ ಕೆಲಸ ಮಾಡುವ ಅವಕಾಶ ನಮ್ಮ ಸೀನಿಯರ್ ಗಳಿಂದ ಕೂಡಿ ಬಂತು,ತನಗಿಂತ ಚನ್ನಾಗಿ ಕೆಲಸ ಮಾಡುವ ಕ್ಯಾಮರಾ ಮ್ಯಾನ್ ಗಳು ಇದ್ದರು ನನಗೆ ಅವಕಾಶ ಸಿಕ್ಕಿದ್ದಕ್ಕೆ ನನಗೆ ಹೆಮ್ಮೆ ಇದೆ,ನಾನು ಈ ಭಾಗದಲ್ಲಿ ಬಂದಾಗಿನಿಂದ ರೌಡಿಶೀಟರಗಳ ಉಪಟಳ ಕಂಟ್ರೋಲ್ಗೆ ಬಂದಿದೆ,ಯಾವುದೇ ಒಂದು ಚಿಕ್ಕದಾಗಲಿ ದೊಡ್ಡ ಮಟ್ಟದ ಕ್ರೈಂ ಅದ್ರೂ ಮೊದಲು ನಮ್ಮಲ್ಲಿ ನ್ಯೂಸ್ ಕವರ್ ಆಗಿರುತ್ತೆ,

Read More
Follow Us