ಆನೇಕಲ್ ಬಳಿ ಕರಡಿ ಪ್ರತ್ಯಕ್ಷ, ಹುಬ್ಬಳ್ಳಿಯಲ್ಲಿ ಹುಲಿ ಓಡಾಟದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ

ಈ ಹಿಂದೆ ಮಾರ್ಚ್ ತಿಂಗಳ 28ನೇ ತಾರೀಖು ಬನ್ನೇರುಘಟ್ಟ ಜೈವಿಕ ಉದ್ಯಾನವನದಿಂದ ಪರಾರಿಯಾಗಿದ್ದ ಕರಡಿ ಸೆರೆಯಾಗಿತ್ತು. ಏಪ್ರಿಲ್ 9ರ ಬೆಳಿಗ್ಗೆ ಬನ್ನೇರುಘಟ್ಟ ಜೈವಿಕ ಉದ್ಯಾನವನದ ಸಿಬ್ಬಂದಿ ಉದ್ಯಾನವನ ವ್ಯಾಪ್ತಿಯ ಹುಚ್ಚನಕುಂಟೆ ಬಳಿ ಇರಿಸಿದ್ದ ಬೋನಿಗೆ ಕರಡಿ ಬಿದ್ದಿತ್ತು. 

ಆನೇಕಲ್ ಬಳಿ ಕರಡಿ ಪ್ರತ್ಯಕ್ಷ, ಹುಬ್ಬಳ್ಳಿಯಲ್ಲಿ ಹುಲಿ ಓಡಾಟದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ
ಸಿಸಿ ಕ್ಯಾಮರಾದಲ್ಲಿ ಕರಡಿ ಓಡಾಟದ ದೃಶ್ಯ ಸೆರೆ

ಆನೇಕಲ್: ಎರಡು ದಿನದ ಹಿಂದೆ ದೊಡ್ಡ ತೋಗೂರು ಬಳಿ ಕಾಣಿಸಿಕೊಂಡಿದ್ದ ಕರಡಿ ನಿನ್ನೆ ರಾತ್ರಿ ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಬೇಗಿಹಳ್ಳಿ ಬಳಿ ಪ್ರತ್ಯಕ್ಷವಾಗಿದೆ. ಬೇಗಿಹಳ್ಳಿ ಗ್ರಾಮದ ಪ್ಲೇಗು ಮಾರಮ್ಮ ದೇವಾಲಯದ ಬಳಿ ಕಾಣಿಸಿಕೊಂಡಿರುವ ಕರಡಿಯ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ರಾತ್ರಿ ಸುಮಾರು 9 ಗಂಟೆ ಹೊತ್ತಿಗೆ ದೇವಾಲಯದ ಬಳಿ ಓಡಾಡಿದೆ ಎನ್ನಲಾಗಿದೆ. ಕೊರೊನಾ ನಡುವೆ ಜನರನ್ನು ಭಯಗೊಳಿಸುತ್ತಿರುವ ಕರಡಿಯನ್ನು ಸೆರೆ ಹಿಡಿಯಬೇಕೆಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

ಈ ಹಿಂದೆ ಮಾರ್ಚ್ ತಿಂಗಳ 28ನೇ ತಾರೀಖು ಬನ್ನೇರುಘಟ್ಟ ಜೈವಿಕ ಉದ್ಯಾನವನದಿಂದ ಪರಾರಿಯಾಗಿದ್ದ ಕರಡಿ ಸೆರೆಯಾಗಿತ್ತು. ಏಪ್ರಿಲ್ 9ರ ಬೆಳಿಗ್ಗೆ ಬನ್ನೇರುಘಟ್ಟ ಜೈವಿಕ ಉದ್ಯಾನವನದ ಸಿಬ್ಬಂದಿ ಉದ್ಯಾನವನ ವ್ಯಾಪ್ತಿಯ ಹುಚ್ಚನಕುಂಟೆ ಬಳಿ ಇರಿಸಿದ್ದ ಬೋನಿಗೆ ಕರಡಿ ಬಿದ್ದಿತ್ತು.  ಕರಡಿಯನ್ನು ಉದ್ಯಾನವನದ ರೆಸ್ಕ್ಯೂ ಸೆಂಟರ್​ನ ಬೋನಿನಲ್ಲಿಟ್ಟು ಆರೈಕೆ ಮಾಡಿ, ಕರಡಿ ಆರೋಗ್ಯವಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದರು.

ಸ್ಥಳೀಯರಿಗೆ ಆತಂಕ
ಹುಬ್ಬಳ್ಳಿ: ಜಿಲ್ಲೆಯ ಕಲಘಟಗಿ ತಾಲೂಕಿನ ಬಿ.ಗುಡಿಹಾಳ ಗ್ರಾಮದ ಬಳಿ ಹುಲಿ ಕಾಣಿಸಿಕೊಂಡಿದ್ದು, ಗ್ರಾಮಸ್ಥರಿಗೆ ಆತಂಕ ಶುರುವಾಗಿದೆ. ಹುಲಿ ಓಡಾಡುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಹುಲಿಯ ಚಲನ ವಲನ ಸಂಪೂರ್ಣ ದೃಶ್ಯ ಬನಶ್ರೀ ಪೆಟ್ರೋಲ್ ಬಂಕ್​ನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಹುಲಿಯ ದೃಶ್ಯ ಕಂಡು ಆತಂಕಗೊಂಡ ಸುತ್ತಮುತ್ತಲಿನ ಗ್ರಾಮಸ್ಥರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಸಿಸಿ ಕ್ಯಾಮರಾದಲ್ಲಿ ಸೆರೆಯಾದ ಹುಲಿಯ ದೃಶ್ಯ

ಇದನ್ನೂ ಓದಿ

ರಾಯಚೂರಿನಲ್ಲಿ 539 ಕೊರೊನಾ ಸೋಂಕಿತರು ನಾಪತ್ತೆ; ಸೋಂಕಿತರ ಪತ್ತೆಗೆ ಆರೋಗ್ಯ ಇಲಾಖೆ ಹರಸಾಹಸ

ಕೊವಿಡ್​ ಆಸ್ಪತ್ರೆಯಲ್ಲಿ ಭೀಕರ ಅಗ್ನಿದುರಂತ; 27 ರೋಗಿಗಳು ಸಾವು, 90ಕ್ಕೂ ಹೆಚ್ಚು ಜನರ ರಕ್ಷಣೆ

(bear appeared near Anekal and tiger footage is captured on CC camera)