ಬೆಳ್ಳಂ ಬೆಳಗ್ಗೆ ಸದ್ದು ಮಾಡಿದ ಬೆಂಗಳೂರು ಪೊಲೀಸರ ಬಂದೂಕು, ರೌಡಿ ಶೀಟರ್​ಗೆ ಗುಂಡೇಟು

| Updated By: ವಿವೇಕ ಬಿರಾದಾರ

Updated on: Dec 16, 2024 | 10:54 AM

ಆನೇಕಲ್ ತಾಲ್ಲೂಕಿನ ಮಾಯಸಂದ್ರದಲ್ಲಿ ಪೊಲೀಸರು ರೌಡಿಶೀಟರ್ ಲೋಕೇಶ್ ಅಲಿಯಾಸ್ ಲೋಕಿಯನ್ನು ಆತ್ಮರಕ್ಷಣೆಗಾಗಿ ಗುಂಡು ಹೊಡೆದು ಬಂಧಿಸಿದ್ದಾರೆ. ಲೋಕಿ ಪೊಲೀಸರ ಮೇಲೆ ಹಲ್ಲೆ ನಡೆಸಲು ಯತ್ನಿಸಿದ್ದಾನೆ. ಈತನ ಮೇಲೆ ಕೊಲೆ ಮತ್ತು ಕೊಲೆ ಯತ್ನದ ಪ್ರಕರಣಗಳು ದಾಖಲಾಗಿವೆ. ಲೋಕಿಯ ಸಹಚರರನ್ನು ಪತ್ತೆ ಹಚ್ಚಲು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಬೆಳ್ಳಂ ಬೆಳಗ್ಗೆ ಸದ್ದು ಮಾಡಿದ ಬೆಂಗಳೂರು ಪೊಲೀಸರ ಬಂದೂಕು, ರೌಡಿ ಶೀಟರ್​ಗೆ ಗುಂಡೇಟು
ಎಸ್​ಪಿ, ಆರೋಪಿ ಲೋಕಿ
Follow us on

ಆನೆಕಲ್​, ಡಿಸೆಂಬರ್​ 16: ಬೆಂಗಳೂರು (Bengaluru) ನಗರ ಜಿಲ್ಲೆಯ ಆನೇಕಲ್ (Anekal) ತಾಲೂಕಿನ ಮಾಯಸಂದ್ರ ಬಳಿ ಜಿಗಣಿ ಪೊಲೀಸ್​ ಠಾಣೆ ಇನ್ಸ್‌ಪೆಕ್ಟರ್ ಮಂಜುನಾಥ್ ಅವರು ಆತ್ಮರಕ್ಷಣೆಗಾಗಿ ರೌಡಿಶೀಟರ್ ಬೆಸ್ತಮಾನಹಳ್ಳಿ ಲೋಕೇಶ್ ಅಲಿಯಾಸ್ ಲೋಕಿ ಕಾಲಿಗೆ ಗುಂಡು ಹೊಡೆದು ಬಂಧಿಸಿದ್ದಾರೆ. ಇಂದು (ಡಿಸೆಂಬರ್​ 16) ಬೆಳಗಿನ ಜಾವ ಘಟನೆ ನಡೆದಿದೆ. ಲೋಕಿ ಗ್ಯಾಂಗ್ ರೌಡಿಶೀಟರ್ ಮನೋಜ್ ಎಂಬುವನ ಮೇಲೆ ದಾಳಿ ಮಾಡಿ, ಹಲ್ಲೆ ಮಾಡಿತ್ತು. ಘಟನೆ ಬಳಿಕ ಲೋಕಿ ಆ್ಯಂಡ್​ ಗ್ಯಾಂಗ್ ತಲೆಮರೆಸಿಕೊಂಡಿತ್ತು.

ಪ್ರಕರಣ ಸಂಬಂಧ ಬಂಧಿಸಲು ತೆರಳಿದ್ದಾಗ ಆರೋಪಿ ಲೋಕೇಶ್ ಅಲಿಯಾಸ್ ಲೋಕಿ ಪೊಲೀಸರ ಮೇಲೆ ಹಲ್ಲೆ ಮಾಡಲು ಪರಾರಿಯಾಗಲು ​ಯತ್ನಿಸಿದ್ದಾನೆ. ಈ ವೇಳೆ ಇನ್ಸ್‌ಪೆಕ್ಟರ್ ಮಂಜುನಾಥ್​ ಅವರು ಆತ್ಮರಕ್ಷಣೆಗಾಗಿ ಲೋಕಿ ಬಲಗಾಲಿಗೆ ಗುಂಡು ಹೊಡೆದು ಬಂಧಿಸಿದ್ದಾರೆ. ಗಾಯಗೊಂಡಿರುವ ರೌಡಿಶೀಟರ್​​ ಲೋಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಡಿವೈಎಸ್​ಪಿ ಮೋಹನ್​ಕುಮಾರ್ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಆರೋಪಿ​ ಲೋಕೇಶ್​ ಅಲಿಯಾಸ್ ಲೋಕಿ ಮೂರು ಪ್ರಕರಣಗಳಲ್ಲಿ ಬೇಕಾಗಿದ್ದಾನೆ.

ಇದನ್ನೂ ಓದಿ: ಅತುಲ್​ ಸುಭಾಷ್​ ಆತ್ಮಹತ್ಯೆ: ಪೊಲೀಸರು ಸೃಷ್ಟಿಸಿದ್ದ ವ್ಯೂಹಕ್ಕೆ ಆರೋಪಿಗಳು ಬಿದ್ದಿದ್ದು ಹೀಗೆ

ಪ್ರಕರಣ ಸಂಬಂಧ ಬೆಂಗಳೂರು ಗ್ರಾಮಾಂತರ ಹೆಚ್ಚುವರಿ ಎಸ್ಪಿ ನಾಗೇಶ್ ಕುಮಾರ್ ಮಾತನಾಡಿ, ಜಿಗಣಿ ಪೊಲೀಸ್​ ಠಾಣೆಯಲ್ಲಿ ಆರೋಪಿ ಲೋಕಿ ವಿರುದ್ಧ ಯತ್ನ ಕೇಸ್ ದಾಖಲಾಗಿದೆ. ಆರೋಪಿಯನ್ನು ಬಂಧಿಸಲು ಪಿಎಸ್ಐ ಸಿದ್ದನಗೌಡ ನೇತೃತ್ವದ ​ತಂಡ ತೆರಳಿತ್ತು. ಈ ವೇಳೆ ಆರೋಪಿ ಲೋಕಿ ಪೊಲೀಸರ ಮೇಲೆ ಹಲ್ಲೆ ಮಾಡಿ, ಪರಾರಿಯಾಗಲು ಯತ್ನಿಸಿದ್ದನು. ಈ ವೇಳೆ ಕಾಲಿಗೆ ಗುಂಡು ಹೊಡೆದು ಬಂಧಿಸಲಾಗಿದೆ ಎಂದು ತಿಳಿಸಿದರು.

ಆರೋಪಿ ಲೋಕಿ ಮೇಲೆ ಕೊಲೆ, ಕೊಲೆ ಯತ್ನ ಕೇಸ್​ಗಳಿವೆ. ರೌಡಿ ಶೀಟರ್ ಮನು ಹತ್ಯೆಗೆ ಯತ್ನಸಿದ್ದ ಪ್ರಕರಣದಲ್ಲಿ ಲೋಕಿ ಪ್ರಮುಖ ಆರೋಪಿಯಾಗಿದ್ದಾನೆ. ಲೋಕಿ ಸಹಚರರ ಪತ್ತೆಗಾಗಿ ನಾಲ್ಕು ತಂಡ ರಚನೆ ಮಾಡಲಾಗಿದೆ ಬೆಂಗಳೂರು ಗ್ರಾಮಾಂತರ ವಿಭಾಗದಲ್ಲಿ ಗೌಡಿಸಂ ಮಟ್ಟ ಹಾಕುತ್ತೇವೆ. ಶೀಘ್ರದಲ್ಲಿ ಉಳಿದ ಆರೋಪಿಗಳ ಬಂಧನ ಮಾಡಲಾಗುವುದು ಎಂದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ