- Kannada News Karnataka Bengaluru rural Competitors racing in different cars, dust rising into the sky from the car race, techies enjoying this, Elli Antira, see this story
ವಿವಿಧ ಕಾರುಗಳಲ್ಲಿ ರೇಸ್ ಮಾಡ್ತಿರೋ ಸ್ಪರ್ಧಿಗಳು, ಕಾರ್ ರೇಸ್ನಿಂದ ಆಕಾಶದೆತ್ತರಕ್ಕೆ ಎಳುತ್ತಿರುವ ದೂಳು, ಇದನ್ನ ನೋಡಿ ಮಸ್ತ್ ಖುಷಿ ಪಡ್ತಿರೋ ಟೆಕ್ಕಿಗಳು, ಎಲ್ಲಿ ಅಂತಿರಾ ಈ ಸ್ಟೋರಿ ನೋಡಿ
ದೇವನಹಳ್ಳಿ ತಾಲೂಕಿನಲ್ಲಿ ಇತ್ತೀಚೆಗಷ್ಟೆ ಕೊಟ್ಯಾಂತರ ರೂ ಖರ್ಚು ಮಾಡಿ ಕ್ರೀಡಾಂಗಣವನ್ನ ನಿರ್ಮಾಣ ಮಾಡಲಾಗಿದ್ದು, ಕ್ರಿಕೆಟ್, ಕಬ್ಬಡಿ, ಖೊಖೊ ವಾಲಿಬಾಲ್ ಅಂತಹ ಕ್ರೀಡೆಗಳಿಗೆ ಅನುಮತಿ ನೀಡುವ ಬದಲು, ಕಾರ್ ರೇಸ್ಗೆ ಕ್ರೀಡಾ ಇಲಾಖೆ ಅವಕಾಶ ಕೊಟ್ಟಿದ್ದು, ಕಾರ್ ರೇಸ್ನಿಂದ ದೂಳು ಆಕಾಶದ ಎತ್ತರಕ್ಕೆ ಹರಡುತ್ತಿದೆ. ಇದರಿಂದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
Updated on: Jan 29, 2023 | 3:26 PM

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯ ಹೊರವಲಯದ ತಾಲೂಕು ಕ್ರೀಡಾಂಗಣದಲ್ಲಿ ಕಾರ್ ರೇಸ್ ಆಯೋಜಿಸಲಾಗಿದ್ದು, ನಾಗಲ್ಯಾಂಡ್, ಕೊಲ್ಕಾತ್ತಾ, ಮುಂಬೈ, ಪುಣೆ, ಬೆಂಗಳೂರು, ಹೈದರಾಬಾದ್ ಸೇರಿದಂತೆ ಕೇರಳ ದಿಂದ 60 ಸ್ಪರ್ಧಿಗಳು ಭಾಗವಹಿಸಿದ್ದಾರೆ.

ಇನ್ನೂ ಈಗಷ್ಟೆ ಕೊಟ್ಯಾಂತರ ರೂ. ಬಂಡವಾಳ ಹಾಕಿ ತಾಲೂಕು ಕ್ರೀಡಾಂಗಣದಲ್ಲಿ ಟ್ರ್ಯಾಕ್ ರೆಡಿ ಮಾಡಲಾಗಿದ್ದು, ವಿವಿಧ ಕಾರುಗಳ ಸ್ಪರ್ಧಿಗಳು ದೂಳೆಬ್ಬಿಸುತ್ತಿದ್ದಾರೆ. ಇದರಿಂದ ಪಕ್ಕದಲ್ಲೆ ಇರುವ ಸರ್ಕಾರಿ ಆಸ್ಪತ್ರೆಯ ರೋಗಿಗಳು ಹಾಗೂ ಕಾಲೇಜು ವಿದ್ಯಾರ್ಥಿಗಳು ಪರದಾಡುವಂತಾಗಿದೆ.

ಅಂದಹಾಗೆ ಮೂರು ದಿನಗಳ ಕಾಲ ಆಯೋಜನೆ ಮಾಡಲಾಗಿರುವ ಈ ಕಾರ್ ರೇಸ್ ಬೆಳಗ್ಗೆ 9 ರಿಂದ ಸಂಜೆ 5 ಗಂಟೆವರೆಗೂ ನಡೆಯುತ್ತಿದೆ. ಅದರಲ್ಲೂ ಬೆಂಗಳೂರಿನ ಟೆಕ್ಕಿಗಳು ಸೇರಿದಂತೆ ಕಾರು ರೇಸ್ ಪ್ರೀಯರು ಆಗಮಿಸಿ ರೇಸ್ ನೋಡಿ ಖುಷಿ ಪಡ್ತಿದ್ದಾರೆ. ಇತ್ತ ಆಸ್ಪತ್ರೆಯ ರೋಗಿಗಳ ಸ್ಥಿತಿ ಹೇಳತೀರದು.

ಹೊಸದಾಗಿ ನಿರ್ಮಿಸಿರುವ ಕ್ರೀಡಾಂಗಣದಲ್ಲಿ ಕಾರು ರೇಸ್ಗೆ ಅನುಮತಿ ನೀಡಿದ ಅಧಿಕಾರಿಗಳ ವಿರುದ್ದ ಇದೀಗ ಸ್ಥಳಿಯರು ಆಕ್ರೋಶ ಹೊರ ಹಾಕುತ್ತಿದ್ದಾರೆ. ಅತಿ ವೇಗದಲ್ಲಿ ಕಾರ್ ಹೋಗುತ್ತಿದ್ದರೆ, ಆಕಾಶದೆತ್ತರಕ್ಕೆ ದೂಳು ಎದ್ದು ಕ್ರೀಡಾಂಗಣ ಪಕ್ಕದ ಆಸ್ಪತ್ರೆ ರೋಗಿಗಳು ದೂಳು ಕುಡಿಯಬೇಕಾಗಿದೆ.

ಜೊತೆಗೆ ಧೂಳಿನಿಂದ ಪರಿಸರಕ್ಕೂ ಹಾನಿಯಾಗುತ್ತಿದ್ದು, ಕೂಡಲೇ ಅನುಮತಿ ಕೊಟ್ಟಿರುವ ಅಧಿಕಾರಿಗಳು ರೇಸ್ ನಿಲ್ಲಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ. ಈ ಬಗ್ಗೆ ರೇಸ್ ಆಯೋಜಕರನ್ನ ಕೇಳಿದ್ರೆ ನಾವು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಕ್ರೀಡಾಂಗಣದ ಟ್ರ್ಯಾಕ್ನ್ನ ರೆಡಿ ಮಾಡಿದ್ದೇವೆ. ರೇಸ್ ಬಗ್ಗೆ ಅನುಮತಿ ಪಡೆದಿದ್ದು, ಯಾವುದೇ ರೀತಿಯಲ್ಲಿ ಕ್ರೀಡಾಂಗಣ ಹಾಳಗದಂತೆ ನೋಡಿಕೊಳ್ಳತ್ತೇವೆ ಎನ್ನುತ್ತಿದ್ದಾರೆ.

ಒಟ್ಟಾರೆ ನ್ಯಾಷನಲ್ ಕಾರು ರೇಸ್ ಚಾಂಪಿಯನ್ಶೀಪ್ ನಗರದ ಹೊರಗಡೆ ಮಾಡಬೇಕಾದ ಆಯೋಜಕರು, ತಮ್ಮ ಪ್ರಭಾವದಿಂದ ತಾಲೂಕು ಕ್ರೀಡಾಂಗಣವನ್ನೆ ಕಾರು ರೇಸ್ಗೆ ಬಳಸಿಕೊಂಡಿರೋದು ಕ್ರೀಡಾಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಜೊತೆಗೆ ವಿಕೆಂಡ್ ಹಿನ್ನೆಲೆ ಬೆಂಗಳೂರಿನ ಟೆಕ್ಕಿಗಳು ಕಾರುಗಳ ರೇಸ್ ನೋಡಿ ಮಸ್ತ್ ಎಂಜಾಯ್ ಮಾಡಿದ್ದಂತು ಸುಳ್ಳಲ್ಲ.




