ಕೊರೊನಾ ಆರ್ಭಟ: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಆರ್​ಟಿಪಿಸಿಆರ್​​ ಟಸ್ಟ್​​ಗೆ ವಿಟಿಎಮ್ ಕೊರತೆ

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಜಿಲ್ಲಾಡಳಿತ ಅಲರ್ಟ್ ಆಗಿದ್ದು, ಡಿಹೆಚ್ಒ ಸುನೀಲ್ ಮತ್ತು ಟಿಹೆಚ್ಒ ಸಂಜಯ್​ರಿಂದ ಕೊರೊನಾ ಟೆಸ್ಟಿಂಗ್ ಹಾಗೂ ಆರ್ಟಿಪಿಸಿಆರ್ ಲ್ಯಾಬ್ ಪರಿಶೀಲನೆ ಮಾಡಲಾಗಿದೆ. ಆರ್​ಟಿಪಿಸಿಆರ್​ ಟೆಸ್ಟ್​ನ ವಿಟಿಎಮ್​ ಕಿಟ್​ ಮಾತ್ರ ಬಂದಿಲ್ಲ. ಹೀಗಾಗಿ ಆರ್​ಟಿಪಿಸಿಆರ್​ ಟೆಸ್ಟಿಂಗ್ ಆರಂಭವಾಗಿಲ್ಲ.

ಕೊರೊನಾ ಆರ್ಭಟ: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಆರ್​ಟಿಪಿಸಿಆರ್​​ ಟಸ್ಟ್​​ಗೆ ವಿಟಿಎಮ್ ಕೊರತೆ
ವಿಟಿಎಮ್ ಕೊರತೆ
Follow us
| Updated By: ಗಂಗಾಧರ​ ಬ. ಸಾಬೋಜಿ

Updated on:Dec 21, 2023 | 4:54 PM

ದೇವನಹಳ್ಳಿ, ಡಿಸೆಂಬರ್​ 21: ರಾಜಧಾನಿಯಲ್ಲಿ ಮತ್ತೆ ಕೊರೊನಾ (Corona) ಭೀತಿ ಶುರುವಾಗಿದೆ. ಕೊರೊನಾ ಆರ್ಭಟ ಹೆಚ್ಚಾಗುತ್ತಿದ್ದರು ಆರ್​ಟಿಪಿಸಿಆರ್​ ಟೆಸ್ಟ್​ನ ವಿಟಿಎಮ್​ ಕಿಟ್​ ಮಾತ್ರ ಬಂದಿಲ್ಲ. ವಿಟಿಎಮ್ ಕಿಟ್​​ಗಳಿಲ್ಲದ ಕಾರಣ ಆರ್​ಟಿಪಿಸಿಆರ್​ ಟೆಸ್ಟಿಂಗ್ ಆರಂಭವಾಗಿಲ್ಲ. ಹಾಗಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಆರ್​ಟಿಪಿಸಿಆರ್ ಟೆಸ್ಟ್​ಗೆ ಗಂಟಲು ದ್ರವ ತೆಗೆದು ಬಾಕ್ಸ್ ಉಳಗಡೆ ಇಡುವ ವಿಟಿಎಮ್ ಕೊರತೆ ಉಂಟಾಗಿದೆ.

ಈ ಹಿಂದೆ ಕಳಿಸಿದ್ದ 3 ಸಾವಿರ ವಿಟಿಎಮ್ ಕಿಟ್​ಗಳು ಅವಧಿ ಮುಗಿದ ಕಾರಣ ನಿಷ್ಕ್ರಿಯವಾಗಿದೆ. ಹೊಸ ವಿಟಿಎಮ್​ಗೆ ಸಿಬ್ಬಂದಿಗಳು ಮನವಿ ಮಾಡಿದ್ದಾರೆ. ಆದರೆ ಡಿಹೆಚ್ಒ ನಿರ್ಲಕ್ಷ್ಯದಿಂದ ಇನ್ನೂ ವಿಟಿಎಮ್ ಬಂದಿಲ್ಲ. ಲ್ಯಾಬ್ ಟೆಕ್ನಿಷಿಯನ್ ಸಿಬ್ಬಂದಿ ಎಲ್ಲರೂ ಸಿದ್ದವಿದ್ದರು ವಿಟಿಎಮ್ ಇಲ್ಲದ ಕಾರಣ ಟೆಸ್ಟಿಂಗ್ ಆರಂಭವಾಗುತ್ತಿಲ್ಲ.

ಇದನ್ನೂ ಓದಿ: ಬೆಳಗಾವಿ ಗಡಿಯಲ್ಲಿ ಹೈಅಲರ್ಟ್: ಶಬರಿಮಲೆ, ಮಹಾರಾಷ್ಟ್ರದಿಂದ ಬರುವವರಿಗೆ RTPCR ಟೆಸ್ಟ್​​​ ಕಡ್ಡಾಯ

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಜಿಲ್ಲಾಡಳಿತ ಅಲರ್ಟ್ ಆಗಿದ್ದು, ಡಿಹೆಚ್ಒ ಸುನೀಲ್ ಮತ್ತು ಟಿಹೆಚ್ಒ ಸಂಜಯ್​ರಿಂದ ಕೊರೊನಾ ಟೆಸ್ಟಿಂಗ್ ಹಾಗೂ ಆರ್ಟಿಪಿಸಿಆರ್ ಲ್ಯಾಬ್ ಪರಿಶೀಲನೆ ಮಾಡಲಾಗಿದೆ. ಜಿಲ್ಲೆಯ ನಾಲ್ಕು ತಾಲೂಕು ಹಾಗೂ ಏರ್ಪೋಟ್ ಸ್ಯಾಂಪಲ್ ಟೆಸ್ಟಿಂಗ್ ಮಾಡುವ ಲ್ಯಾಬ್​ ಒಳಗಿನ ಯಂತ್ರಗಳು ಹಾಗೂ ಸಿದ್ದೆತಗಳ ಪರಿಶೀಲನೆ ಮಾಡಲಾಗಿದೆ.

ಸರ್ಕಾರದ ಗೈಡ್ ಲೈನ್ಸ್​​ ನಂತರ ಏರ್ಪೋಟ್​ನಲ್ಲಿ ಟೆಸ್ಟಿಂಗ್ ಆರಂಭವಾಗಲಿದೆ. ದೇವನಹಳ್ಳಿಯ ಸರ್ಕಾರಿ‌ ಆಸ್ವತ್ರೆ ಆವರಣದಲ್ಲಿ ಆರ್ಟಿಪಿಸಿಆರ್ ಲ್ಯಾಬ್ ತೆರೆಯಲಾಗಿದ್ದು, ಸಿಬ್ಬಂದಿಯಿಂದ ಟೆಸ್ಟಿಂಗ್ ಬಗ್ಗೆ ಅಧಿಕಾರಿಗಳು ಮಾಹಿತಿ‌ ಪಡೆದುಕೊಂಡಿದ್ದಾರೆ. ಈಗಾಗಲೆ ಜಿಲ್ಲಾಡಳಿತ ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿ ಟೆಸ್ಟಿಂಗ್ ಆರಂಭಿಸಿದೆ.

ಇದನ್ನೂ ಓದಿ: ಶಾಲಾ ಮಕ್ಕಳಿಗೆ ಪ್ರತ್ಯೇಕ ಮಾರ್ಗಸೂಚಿ ಬಿಡುಗಡೆ ಮಾಡ್ತೇವೆ: ಸಚಿವ ಮಧು ಬಂಗಾರಪ್ಪ

ಎರಡು ವರ್ಷಗಳ ಹಿಂದೆ ಸಾವಿರಾರು ಜನರನ್ನು ಬಲಿ ಪಡೆದಿದ್ದ ಮಹಾಮಾರಿ, ಸಿಲಿಕಾನ್ ಸಿಟಿಯಲ್ಲಿ ಮತ್ತೆ ವೃದ್ಧ ಆಪೋಷನ ಪಡೆದುಕೊಂಡಿದೆ. ಚಾಮರಾಜಪೇಟೆ ನಿವಾಸಿಯಾಗಿದ್ದ ಮೃತಪಟ್ಟ ವ್ಯಕ್ತಿಯು ವಾರದ ಹಿಂದೆಯಷ್ಟೇ ಮಲ್ಲಿಗೆ ಆಸ್ಪತ್ರೆಗೆ ದಾಖಲಾಗಿದ್ದ. ತೀವ್ರ ಅನಾರೋಗ್ಯ ದಿಂದ ಬಳಲುತ್ತಿದ್ದ 64 ವರ್ಷದ ವ್ಯಕ್ತಿಗೆ ಶ್ವಾಸಕೋಶದ ಸಮಸ್ಯೆ, ಹೃದಯಸಂಬಂಧಿ ಸಮಸ್ಯೆ, ಅಸ್ತಮಾ ಹಾಗೂ ರಕ್ತದೊತ್ತಡದ ತೊಂದರೆಯಿಂದ ಬಳಲುತ್ತಿದ್ದಾತ ಡಿಸೆಂಬರ್ 15 ರಂದು ಮೃತಪಟ್ಟಿದ್ದ.

ರಕ್ತ, ಸ್ವ್ಯಾಬ್‌ ಸ್ಯಾಂಪಲ್‌ ಪರೀಕ್ಷೆಗೆ ಒಳಪಡಿಸಿದಾಗ ವೃದ್ಧನಿಗೆ ಕೊರೊನಾ ದೃಢಪಟ್ಟಿತ್ತು. ಮೃತನಿಗೆ ಯಾವುದೇ ಟ್ರಾವೆಲ್‌ ಹಿಸ್ಟರಿ ಇಲ್ಲ. ಆದರೆ, ವೃದ್ಧನ ಸಂಪರ್ಕದಲ್ಲಿದ್ದ 10 ಮಂದಿಗೂ ಕೋವಿಡ್‌ ಪರೀಕ್ಷೆ ನಡೆಸಲಾಗಿದೆ.

4 ಮಂದಿ ಪ್ರಾಥಮಿಕ ಸಂಪರ್ಕ ಹೊಂದಿದ್ದರೆ 6 ಜನರು ಸೆಕೆಂಡರಿ ಕಾಂಟ್ಯಾಕ್ಟ್ ಹೊಂದಿರೋದು ಪತ್ತೆಯಾಗಿದೆ. ಮೃತ ವ್ಯಕ್ತಿ ಸಂಪರ್ಕದಲ್ಲಿದ್ದವರಿಗೆ ಏಳು ದಿನ ಹೋಂ ಐಸೋಲೇಷನ್ ಗೆ ಸೂಚಿಸಲಾಗಿದೆ. ವೃದ್ಧ ವಾಸವಿದ್ದ ಮನೆಯ ಅಕ್ಕಪಕ್ಕದ ನಿವಾಸಿಗಳಿಗೂ ಕೊವಿಡ್​ ಪರೀಕ್ಷೆ ಮಾಡಿ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:50 pm, Thu, 21 December 23

ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು