AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಂದಾಯ ಇಲಾಖೆಯಲ್ಲಿ ಥಂಬ್ ಕೊಟ್ಟು ಬಂದವರಿಗೆ ಶಾಕ್: ಬ್ಯಾಂಕ್ ಖಾತೆಯಿಂದ 50 ಸಾವಿರ ರೂ. ಮಾಯ!

ಸಬ್ ರಿಜಿಸ್ಟರ್ ಆಪೀಸ್, ರೇಷನ್ ಕಾರ್ಡ್ ತಾಲೂಕು ಕಛೇರಿ ಸೇರಿದಂತೆ ಸರ್ಕಾರಿ ಕೆಲಸಗಳ ಸಾಕಷ್ಟು ಕಡೆ ಸರ್ಕಾರಿ ಸೌಕರ್ಯಗಳಿಗೆ ಆಧಾರ್ ಮತ್ತು ಥಂಬ್ ನೀಡುವುದು ಸಹಜ. ಹೀಗೆ ಥಂಬ್ ನೀಡಿದವರೇ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ.

ಕಂದಾಯ ಇಲಾಖೆಯಲ್ಲಿ ಥಂಬ್ ಕೊಟ್ಟು ಬಂದವರಿಗೆ ಶಾಕ್: ಬ್ಯಾಂಕ್ ಖಾತೆಯಿಂದ 50 ಸಾವಿರ ರೂ. ಮಾಯ!
ಸಾಂದರ್ಭಿಕ ಚಿತ್ರ
ನವೀನ್ ಕುಮಾರ್ ಟಿ
| Edited By: |

Updated on: Jan 13, 2024 | 11:33 AM

Share

ದೇವನಹಳ್ಳಿ, ಜನವರಿ 13: ಸರ್ಕಾರ ಇತ್ತೀಚೆಗೆ ಕಚೇರಿಗಳಲ್ಲಿ ಎಲ್ಲಾ ಕೆಲಸಗಳಿಗೂ ಡಿಜಿಟಲೀಕರಣ ಮಾಡಲು ಮುಂದಾಗಿದೆ. ಹೀಗಾಗಿ ಸರ್ಕಾರ ಪ್ರತಿಯೊಂದು ಕೆಲಸಕ್ಕೂ ಆಧಾರ್ (Aadhar)ಮತ್ತು ಥಂಬ್ (Thumb) ಇಂಪ್ರೆಷನ್ ಕಡ್ಡಾಯಗೊಳಿಸುತ್ತಿದೆ. ಆದ್ರೆ ಇದನ್ನೆ ಬಂಡವಾಳ ಮಾಡಿಕೊಂಡಿರುವ ಕೆಲ ಖದೀಮರು ಜನ ಥಂಬ್ ಕೊಟ್ಟು ಬರುವುದನ್ನೆ ಟಾರ್ಗೆಟ್ ಮಾಡ್ತಿದ್ದು, ಥಂಬ್ ಕೊಟ್ಟ ಕ್ಷಣ ಮಾತ್ರದಲ್ಲೇ ಖಾತೆಗೆ ಕನ್ನ ಹಾಕಿ ಹಣ ಎಗರಿಸುತ್ತಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆ ಗ್ರಾಮದ ಗ್ರಾಮದ ನಾರಾಯಣಪ್ಪ ಎನ್ನುವವರು ಕಳೆದ ತಿಂಗಳು ತನ್ನ ಮಗಳಿಗೆ ಒಂದು ಗುಂಟೆ ಭೂಮಿಯನ್ನ ಕ್ರಯ ಮಾಡಿಕೊಟ್ಟಿದ್ದರಂತೆ. ಈ ವೇಳೆ ಸಬ್ ರಿಜಿಸ್ಟ್ರಾರ್ ಕಚೇರಿಗೆ ಹೋಗಿ ಕಾವೇರಿ ತಂತ್ರಾಂಶದಡಿ ಥಂಬ್ ಕೊಟ್ಟು ರಿಜಿಸ್ಟರ್ ಮಾಡಿಸಿದ್ದಾರೆ. ರಿಜಿಸ್ಟರ್ ಮಾಡಿಸಿದ ಮರುದಿನದಿಂದ ನಾರಾಯಣಪ್ಪ ಅವರ ಬ್ಯಾಂಕ್ ಖಾತೆಯಿಂದ 5 ಸಾವಿರ ರೂ. ಕಡಿತಗೊಂಡಿದೆ. ಹೀಗೆ ಐದು ದಿನಗಳ ಕಾಲ ಇದ್ದ 40 ಸಾವಿರ ಹಣವೂ ಖಾತೆಯಿಂದ ಮಾಯವಾಗಿದೆ. ಜೊತೆಗೆ ತನ್ನ ಮಗಳ ಖಾತೆಯಲ್ಲೂ ಐದು ಸಾವಿರ ಹಣ ಮಾಯವಾಗಿದೆ. ತಕ್ಷಣ ಬ್ಯಾಂಕ್ ಮ್ಯಾನೇಜರ್ ಸಂಪರ್ಕಿಸಿ ದೂರನ್ನ ನೀಡಿದ್ದಾರೆ. ಆದ್ರೆ ಬ್ಯಾಂಕ್ನ ಮ್ಯಾನೇಜರ್ ಇದಕ್ಕೆ ತಲೆಯೇ ಕೆಡಿಸಿಕೊಳ್ಳದೆ ಇದೊಂದು ಸೈಬರ್ ಕ್ರೈಂ ಪ್ರಕರಣ ಎಂದು ಉಡಾಫೆ ಉತ್ತರ ಕೊಟ್ಟು ಕಳಿಸಿದ್ದಾರೆ ಎಂದು ಜನರರು ಮ್ಯಾನೇಜರ್ ಅನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಇದನ್ನೂ ಓದಿ: ಆಧಾರ್​​ ಫಿಂಗರ್​​ ಪ್ರಿಂಟ್​ಗೇ ಕನ್ನ, ಖಾತೆಯಿಂದ ಹಣ ವಿತ್​ಡ್ರಾ: ಮಂಗಳೂರಿನಲ್ಲಿ ಸೈಬರ್ ಚೋರರು ಹಣ ಎಗರಿಸುತ್ತಿದ್ದುದು ಹೀಗೆ

ಸಬ್ ರಿಜಿಸ್ಟರ್ ಆಪೀಸ್, ರೇಷನ್ ಕಾರ್ಡ್ ತಾಲೂಕು ಕಛೇರಿ ಸೇರಿದಂತೆ ಸರ್ಕಾರಿ ಕೆಲಸಗಳ ಸಾಕಷ್ಟು ಕಡೆ ಸರ್ಕಾರಿ ಸೌಕರ್ಯಗಳಿಗೆ ಆಧಾರ್ ಮತ್ತು ಥಂಬ್ ನೀಡುವುದು ಸಹಜ. ಆದ್ರೆ ಇದೇ ರೀತಿ ನಾರಾಯಣಪ್ಪ ಸಹ ಇದೀಗ ಥಂಬ್ ನೀಡಿ ಬಂದು ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಜೊತೆಗೆ ರೈಲ್ವೆ ಇಲಾಖೆಯ ನಿವೃತ್ತ ನೌಕರ ಅಶ್ವಥಪ್ಪ ಎನ್ನುವವರು ಪೆನ್ಷನ್ ತೆಗೆದುಕೊಳ್ತಿದ್ದು ಬ್ಯಾಂಕ್ ಖಾತೆಗೆ ಬರುವ ಹಣದಲ್ಲಿ ಏಕಾಏಕಿ 36 ಸಾವಿರ ಹಣ ಕಟ್ ಆಗಿದೆ.

ಹಣ ಕಳೆದುಕೊಂಡ ಬ್ಯಾಂಕ್ ಖಾತೆದಾರರು ಈಗಾಗಲೇ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ನಮ್ಮ ಹಣ ನಮಗೆ ವಾಪಸ್ ಬರಲು ಬ್ಯಾಂಕ್​​ನವರೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸುತ್ತಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಕಾಂಬೋಡಿಯಾದಲ್ಲಿ ಬುಲ್ಡೋಜರ್​​​ನಿಂದ ವಿಷ್ಣು ಪ್ರತಿಮೆ ಧ್ವಂಸ
ಕಾಂಬೋಡಿಯಾದಲ್ಲಿ ಬುಲ್ಡೋಜರ್​​​ನಿಂದ ವಿಷ್ಣು ಪ್ರತಿಮೆ ಧ್ವಂಸ
ಬಿಗ್ ಬಾಸ್ ಕನ್ನಡ 12: ಸ್ಪಂದನಾ ಬಾಲ್ಯದ ಶಾಕಿಂಗ್ ಘಟನೆ ವಿವರಿಸಿದ ತಂದೆ
ಬಿಗ್ ಬಾಸ್ ಕನ್ನಡ 12: ಸ್ಪಂದನಾ ಬಾಲ್ಯದ ಶಾಕಿಂಗ್ ಘಟನೆ ವಿವರಿಸಿದ ತಂದೆ
ಹೈವೇಯಲ್ಲಿ ಅಕೌಂಟೆಂಟ್​​ನನ್ನು ಅಡ್ಡ ಹಾಕಿ 85 ಲಕ್ಷ ದೋಚಿದ ಬೈಕ್ ಸವಾರರು
ಹೈವೇಯಲ್ಲಿ ಅಕೌಂಟೆಂಟ್​​ನನ್ನು ಅಡ್ಡ ಹಾಕಿ 85 ಲಕ್ಷ ದೋಚಿದ ಬೈಕ್ ಸವಾರರು
‘45’ ಸಿನಿಮಾ ಕಲೆಕ್ಷನ್ ಸೂಪರ್: ಸ್ವತಃ ನಿರ್ಮಾಪಕರೇ ಹೇಳಿದ ಮಾತು ಕೇಳಿ..
‘45’ ಸಿನಿಮಾ ಕಲೆಕ್ಷನ್ ಸೂಪರ್: ಸ್ವತಃ ನಿರ್ಮಾಪಕರೇ ಹೇಳಿದ ಮಾತು ಕೇಳಿ..
ಸಿರಿಯಾದ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಬಾಂಬ್ ಸ್ಫೋಟ; 8 ಜನ ಸಾವು
ಸಿರಿಯಾದ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಬಾಂಬ್ ಸ್ಫೋಟ; 8 ಜನ ಸಾವು
ಗಡಿಯಲ್ಲಿ ಸೈನಿಕರಿಗೆ ಸಹಾಯ ಮಾಡಿದ್ದ ಬಾಲಕನಿಗೆ ವಿಶೇಷ ಪುರಸ್ಕಾರ
ಗಡಿಯಲ್ಲಿ ಸೈನಿಕರಿಗೆ ಸಹಾಯ ಮಾಡಿದ್ದ ಬಾಲಕನಿಗೆ ವಿಶೇಷ ಪುರಸ್ಕಾರ
ದೇಶದ ಅತ್ಯುನ್ನತ ಪ್ರಶಸ್ತಿ ಸ್ವೀಕರಿಸಿದ ವೈಭವ್ ಸೂರ್ಯವಂಶಿ
ದೇಶದ ಅತ್ಯುನ್ನತ ಪ್ರಶಸ್ತಿ ಸ್ವೀಕರಿಸಿದ ವೈಭವ್ ಸೂರ್ಯವಂಶಿ
ಫ್ಯಾಮಿಲಿ ನೋಡಿ ಕಣ್ಣೀರಾದ ಬಿಗ್​​ಬಾಸ್ ಮನೆಯ ಟಫ್​ ಮ್ಯಾನ್ ರಘು
ಫ್ಯಾಮಿಲಿ ನೋಡಿ ಕಣ್ಣೀರಾದ ಬಿಗ್​​ಬಾಸ್ ಮನೆಯ ಟಫ್​ ಮ್ಯಾನ್ ರಘು
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?