ತುಳಸಿಕಟ್ಟೆ ವಿಚಾರವಾಗಿ ಬೆಂಗಳೂರಿನ ಅಪಾರ್ಟ್ಮೆಂಟ್ನಲ್ಲಿ ಧರ್ಮ ದಂಗಲ್
ಜಾತ್ರೆ, ಶಾಲಾ-ಕಾಲೇಜು ಆಯ್ತು ಇದೀಗ ಬೆಂಗಳೂರಿನ ಎರಡನೇ ಅತೀದೊಡ್ಡ ಅಪಾರ್ಟ್ಮೆಂಟ್ನಲ್ಲಿ ಧರ್ಮ ದಂಗಲ್ ಕೇಳಿಬಂದಿದೆ. ಯಲಹಂಕ(Yalahanka) ತಾಲೂಕಿನ ಮಾರಸಂದ್ರದ ಪ್ರಾವಿಡೆಂಟ್ ವೆಲ್ವರ್ಥ್ ಅಪಾರ್ಟ್ಮೆಂಟ್ನಲ್ಲಿ ತುಳಸಿಕಟ್ಟೆ ವಿಚಾರವಾಗಿ ಎರಡು ಧರ್ಮಗಳ ನಡುವೆ ಗದ್ದಲ ಉಂಟಾಗಿದೆ.
ಬೆಂಗಳೂರು, ಜೂ.27: ಬೆಂಗಳೂರಿನ ಯಲಹಂಕ(Yalahanka) ತಾಲೂಕಿನ ಮಾರಸಂದ್ರದ ಪ್ರಾವಿಡೆಂಟ್ ವೆಲ್ವರ್ಥ್ ಅಪಾರ್ಟ್ಮೆಂಟ್ನಲ್ಲಿ ತುಳಸಿಕಟ್ಟೆ ವಿಚಾರವಾಗಿ ಎರಡು ಧರ್ಮಗಳ ನಡುವೆ ಗದ್ದಲ ಉಂಟಾಗಿದೆ. ಹೌದು, ಇಲ್ಲಿ ತುಳಸಿಕಟ್ಟೆ ಇದೆ. ನಮಗೂ ಸಾಮೂಹಿಕ ಪ್ರಾರ್ಥನೆಗೆ ಮಸೀದಿ ಕಟ್ಟಲು ಸ್ಥಳ ನೀಡಿ ಎಂದು ಮನವಿ ಮಾಡಿದ್ದಾರೆ. ಇತ್ತ ಕ್ರಿಶ್ಚಿಯನ್ ಸೇರಿ ವಿವಿಧ ಧರ್ಮದ ವಾಸಿಗಳು ತಮ್ಮ ಮಂದಿರಗಳನ್ನೂ ಕಟ್ಟಲು ಅವಕಾಶ ನೀಡುವಂತೆ ಕೋರಿದ್ದಾರೆ. ಇದಕ್ಕೆ ಅವಕಾಶ ನೀಡದಿದ್ರೆ ತುಳಸಿ ಕಟ್ಟೆಯನ್ನೂ ತೆರವು ಮಾಡಬೇಕು ಎಂದು ಪಟ್ಟು ಹಿಡಿದಿದ್ದಾರೆ.
ತುಳಸಿ ಕಟ್ಟೆ ತೆರವಿಗೆ ಪಟ್ಟು
ಮೊದಲಿನಿಂದಲೂ ಅಪಾರ್ಟ್ಮಂಟ್ನಲ್ಲಿ ಅರಳಿಮರ, ಬೇವು, ಬಿಲ್ವಪತ್ರೆ ಮರ ಇದೆ. ಸ್ವಚ್ಚತೆ ಇಲ್ಲ ಎಂದು ತುಳಸಿ ಕಟ್ಟೆ ಇಟ್ಟಿರುವುದಾಗಿ ಅಪಾರ್ಟ್ಮೆಂಟ್ ವಾಸಿಗಳು ವಾದಿಸಿದ್ದಾರೆ. ಇನ್ನು ಶುಕ್ರವಾರ, ಮಂಗಳವಾರ ಸಂಜೆ ವೇಳೆಯಲ್ಲಿ ಹೆಚ್ಚಾಗಿ ಮಹಿಳೆಯರು ತುಳಸಿ ಕಟ್ಟೆ ಪೂಜೆ ಮಾಡುತ್ತಾರೆ. ಈ ವೇಳೆ ಓಡಾಡಲೂ ಕಷ್ಟವಾಗುತ್ತಿದೆ ಎಂದು ಅನ್ಯ ಧರ್ಮದವರು ದೂರು ನೀಡಿದ್ದಾರೆ. ಜೊತೆಗೆ ಎಲ್ಲಾ ಧರ್ಮದವರೂ ತಮ್ಮ ತಮ್ಮ ಮಂದಿರ ಕಟ್ಟಬೇಕು ಎಂದು ಮನವಿ ಸಲ್ಲಿಸಿದ್ದಾರೆ. ತುಳಸಿ ಕಟ್ಟೆಯನ್ನು ತೆರವು ಮಾಡಿ. ಇಲ್ಲ, ಎಲ್ಲಾ ಧರ್ಮಕ್ಕೂ ಅವಕಾಶ ನೀಡಿ ಎಂದು ಒತ್ತಾಯಿಸಿದ್ದಾರೆ. ತುಳಸಿಕಟ್ಟೆಯಿಂದ ಯಾವುದೇ ತೊಂದರೆ ಇಲ್ಲ, ನಾವು ತೆರವುಗೊಳಿಸಲ್ಲ ಎಂದು ಮತ್ತೊಂದು ಗುಂಪು ಪಟ್ಟು ಹಿಡಿದಿದೆ. ಈ ಘಟನೆ ರಾಜಾನುಕುಂಟೆ ಪೋಲೀಸ್ ಠಾಣಾ ವ್ಯಾಪ್ತಿಯ ಪ್ರಾವಿಡೆಂಟ್ ಅಪಾರ್ಟ್ಮೆಂಟ್ನಲ್ಲಿ ನಡೆದಿದೆ.
ಇದನ್ನೂ ಓದಿ:ಕೋಲಾರ: ಮಸೀದಿ ಎದುರು ಡಿಜೆ ಸೌಂಡ್ ಹಾಕಿದ್ದಕ್ಕೆ ಕೆಂಪೇಗೌಡರ ಪಲ್ಲಕ್ಕಿ ತಡೆದು ಗಲಾಟೆ
ಇನ್ನು ತುಳಸಿ ಕಟ್ಟೆ, ಮಸೀದಿ, ಗುರುದ್ವಾರದ ಸಮಸ್ಯೆ ಬಗೆಹರಿಸಲು ಜಿಲ್ಲಾಡಳಿತ ಮುಂದಾಗಿದ್ದು, ಈ ಕುರಿತು ಪರಿಶೀಲಿಸಲು ಇಂದು ಜಿಲ್ಲಾಧಿಕಾರಿ ಕಚೇರಿಯಿಂದ ಒಂದು ತಂಡ ಅಪಾರ್ಟ್‌ಮೆಂಟ್‌ಗೆ ಭೇಟಿ ನೀಡಲಿದೆ. ಬಹುಸಂಖ್ಯಾತ ಹಿಂದೂ ನಿವಾಸಿಗಳು ಶಾಂತಿಯುತವಾಗಿ ನಡೆಸಿಕೊಂಡು ಹೋಗುತ್ತಿದ್ದ ತುಳಸಿ ಪೂಜೆಗೆ ಈ ಧರ್ಮ ದಂಗಲ್‌ನಿಂದಾಗಿ ಅಡ್ಡಿಯಾಗಿದೆ ಎಂದು ಇಲ್ಲಿನ ನಿವಾಸಿಗಳು ಆಕ್ಷೇಪಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:22 pm, Thu, 27 June 24