ಬೆಂಗಳೂರು ಗ್ರಾಮಾಂತರ: ಸಾಲಗಾರರ ಕಿರುಕುಳಕ್ಕೆ ಬೇಸತ್ತು ವ್ಯಕ್ತಿ ಆತ್ಮಹತ್ಯೆ

ದೊಡ್ಡಬಳ್ಳಾಪುರ(Doddaballapura) ನಗರದ ರೋಜಿಪುರದಲ್ಲಿ ಸಾಲಗಾರರ ಕಿರುಕುಳಕ್ಕೆ ಬೇಸತ್ತು ವಿಷಸೇವಿಸಿ ಪರ್ವೀಜ್ ಪಾಷಾ(38) ಎಂಬಾತ ಆತ್ಮಹತ್ಯೆಗೆ ಶರಣಾಗಿದ್ದಾನೆ. ವೃತ್ತಿಯಲ್ಲಿ ಮೆಕ್ಯಾನಿಕ್ ಕೆಲಸ ಮಾಡಿಕೊಂಡಿದ್ದ ಮೃತ ಪರ್ವೀಜ್, ಹಲವರಿಂದ ಬಡ್ಡಿಗೆ ಸಾಲವಾಗಿ ಹಣ ಪಡೆದಿದ್ದ ಎನ್ನಲಾಗಿದೆ.

ಬೆಂಗಳೂರು ಗ್ರಾಮಾಂತರ: ಸಾಲಗಾರರ ಕಿರುಕುಳಕ್ಕೆ ಬೇಸತ್ತು ವ್ಯಕ್ತಿ ಆತ್ಮಹತ್ಯೆ
ಮೃತ ವ್ಯಕ್ತಿ
Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on: Jun 28, 2024 | 4:10 PM

ಬೆಂಗಳೂರು ಗ್ರಾಮಾಂತರ, ಜೂ.28: ಬಡ್ಡಿ ವ್ಯವಹಾರದ ಕಾಟದಿಂದ ಮನನೊಂದು ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ದೊಡ್ಡಬಳ್ಳಾಪುರ(Doddaballapura) ನಗರದ ರೋಜಿಪುರದಲ್ಲಿ ನಡೆದಿದೆ. ಸಾಲಗಾರರ ಕಿರುಕುಳಕ್ಕೆ ಬೇಸತ್ತು ವಿಷಸೇವಿಸಿ ಪರ್ವೀಜ್ ಪಾಷಾ(38) ಎಂಬಾತ ಆತ್ಮಹತ್ಯೆಗೆ ಶರಣಾಗಿದ್ದಾನೆ. ವೃತ್ತಿಯಲ್ಲಿ ಮೆಕ್ಯಾನಿಕ್ ಕೆಲಸ ಮಾಡಿಕೊಂಡಿದ್ದ ಮೃತ ಪರ್ವೀಜ್, ಹಲವರಿಂದ ಬಡ್ಡಿಗೆ ಸಾಲವಾಗಿ ಹಣ ಪಡೆದಿದ್ದ. ಇದೀಗ ಸಾಲಗಾರರ ನಿರಂತರ ಕಿರುಕುಳದಿಂದ ಬೇಸತ್ತು ಮನೆಯಲ್ಲಿ ವಿಷಸೇವಿಸಿ ಕೊನೆಯುಸಿರೆಳೆದಿದ್ದಾರೆ. ಈ ಘಟನೆ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮಿಸ್ ಫೈರ್​ ನಿಂದ ಬಾಲಕ ಸಾವು

ಚಿತ್ರದುರ್ಗ: ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ನುಂಕಿಮಲೆ ಬೆಟ್ಟದಲ್ಲಿ ಮಿಸ್ ಫೈರ್​ನಿಂದ ಬಾಲಕ ಸಾವನ್ನಪ್ಪಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮೊಳಕಾಲ್ಮೂರಿನ ಕೋಣೆ ಬಡಾವಣೆಯ ಮಹೇಶ್(14) ಮೃತ ಬಾಲಕ. ನುಂಕಿಮಲೆ ಬೆಟ್ಟದಲ್ಲಿ 3 ತಿಂಗಳ ಹಿಂದೆ ಬೇಟೆಗೆ ತೆರಳಿದ್ದ ವೇಳೆ ಮಿಸ್ ಫೈರ್​ನಿಂದ ಬಾಲಕ ಸ್ಥಳದಲ್ಲೆ ಸಾವನ್ನಪ್ಪಿದ್ದ. ಬಾಲಕ ಸಾವಿನ ಬಳಿಕ ಶವವನ್ನ ಆರೋಪಿಗಳು ಸುಟ್ಟು ಹಾಕಿದ್ದರು.

ಇದನ್ನೂ ಓದಿ:ಚಿಕ್ಕ ವಯಸ್ಸಿನಲ್ಲೇ ಮಂಗಳಮುಖಿಯರ ಸ್ನೇಹ ಬೆಳೆಸಿದ್ದ ಯುವಕ ಏಕಾಏಕಿ ಆತ್ಮಹತ್ಯೆಗೆ ಶರಣು!

ಮಾರ್ಚ್ 3, 2024ರಂದು ನಡೆದಿದ್ದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಬಂದೂಕಿನೊಂದಿಗೆ ಬೇಟೆಗೆ ತೆರಳಿದ್ದ ಬಾಲಕ ಮಹೇಶ್​ಗೆ ಆಕಸ್ಮಿಕವಾಗಿ ಗುಂಡು ಹೊಕ್ಕಿತ್ತು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶವ ಸುಟ್ಟು ಹಾಕಿದ್ದ ಹೊನ್ನೂರಸ್ವಾಮಿ, ನಾಗರಾಜ್ ಎಂಬುವವರನ್ನು ಪೊಲೀಸರು ವಶಕ್ಕೆ ಪಡೆದು, ಈ ಕುರಿತು ಮೊಳಕಾಲ್ಮೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
‘ನಿಜ ಜೀವನದಲ್ಲಿ ಆ ರೀತಿ ಪಾತ್ರ ಆಗಬಾರದು’: ದರ್ಶನ್​ ಬಗ್ಗೆ ಹಂಸಲೇಖ ಮಾತು
‘ನಿಜ ಜೀವನದಲ್ಲಿ ಆ ರೀತಿ ಪಾತ್ರ ಆಗಬಾರದು’: ದರ್ಶನ್​ ಬಗ್ಗೆ ಹಂಸಲೇಖ ಮಾತು
‘ದರ್ಶನ್ ನೋಡಿದ್ರೆ ಧರ್ಮಸ್ಥಳ ಮಂಜುನಾಥ ಸ್ವಾಮಿ ನೋಡಿದಂತೆ’: ಅಭಿಮಾನಿ
‘ದರ್ಶನ್ ನೋಡಿದ್ರೆ ಧರ್ಮಸ್ಥಳ ಮಂಜುನಾಥ ಸ್ವಾಮಿ ನೋಡಿದಂತೆ’: ಅಭಿಮಾನಿ
ಬಿಜೆಪಿಯವರು ಇದನ್ನ ಪ್ರೂವ್​ ಮಾಡಿದ್ರೆ ರಾಜಕೀಯ ನಿವೃತ್ತಿ: ಜಮೀರ್ ಅಹ್ಮದ್‌
ಬಿಜೆಪಿಯವರು ಇದನ್ನ ಪ್ರೂವ್​ ಮಾಡಿದ್ರೆ ರಾಜಕೀಯ ನಿವೃತ್ತಿ: ಜಮೀರ್ ಅಹ್ಮದ್‌
‘6 ತಿಂಗಳಲ್ಲಿ ಕನ್ನಡಕ್ಕೆ ಹೊಸ ಒಟಿಟಿ’: ಸಿಹಿ ಸುದ್ದಿ ನೀಡಿದ ಸಾಧು ಕೋಕಿಲ
‘6 ತಿಂಗಳಲ್ಲಿ ಕನ್ನಡಕ್ಕೆ ಹೊಸ ಒಟಿಟಿ’: ಸಿಹಿ ಸುದ್ದಿ ನೀಡಿದ ಸಾಧು ಕೋಕಿಲ
ಲೋಕಲ್​ನವರನ್ನ ಹಿಡಿದ್ರೆ ಮನೆಗೆ ಕಳಿಸ್ತೇನೆ: ಪೊಲೀಸ್​ ಮೇಲೆ ಮಂಜು ದರ್ಪ
ಲೋಕಲ್​ನವರನ್ನ ಹಿಡಿದ್ರೆ ಮನೆಗೆ ಕಳಿಸ್ತೇನೆ: ಪೊಲೀಸ್​ ಮೇಲೆ ಮಂಜು ದರ್ಪ
ಆಗಾಗ ಸಿಎಂ ಸಿದ್ದರಾಮಯ್ಯರ ತಲೆ ತಿನ್ನುತ್ತಿರಬೇಕು: ಜಗ್ಗೇಶ್
ಆಗಾಗ ಸಿಎಂ ಸಿದ್ದರಾಮಯ್ಯರ ತಲೆ ತಿನ್ನುತ್ತಿರಬೇಕು: ಜಗ್ಗೇಶ್
ಸಿದ್ದರಾಮಯ್ಯ-ಡಿಕೆಶಿ ವಿರಾಟ್ ಕೊಹ್ಲಿ-ರೋಹಿತ್ ಇದ್ದಂತೆ: ವಚನಾನಂದ ಶ್ರೀ
ಸಿದ್ದರಾಮಯ್ಯ-ಡಿಕೆಶಿ ವಿರಾಟ್ ಕೊಹ್ಲಿ-ರೋಹಿತ್ ಇದ್ದಂತೆ: ವಚನಾನಂದ ಶ್ರೀ
ಅಶೋಕ್​ ನಮ್ಮ ಪಕ್ಷದ ಆಂತರಿಕದ ಬಗ್ಗೆ ನಿಮಗ್ಯಾಕೆ ತೆವಲು?: ಪ್ರದೀಪ್​ ಈಶ್ವರ್
ಅಶೋಕ್​ ನಮ್ಮ ಪಕ್ಷದ ಆಂತರಿಕದ ಬಗ್ಗೆ ನಿಮಗ್ಯಾಕೆ ತೆವಲು?: ಪ್ರದೀಪ್​ ಈಶ್ವರ್
ಬಸ್​ ಪಲ್ಟಿ.. 20ಕ್ಕೂ ಹೆಚ್ಚು ಜನರಿಗೆ ಗಾಯ: ಆಕ್ಸಿಡೆಂಟ್ ಆಗಿದ್ದೇಗೆ?
ಬಸ್​ ಪಲ್ಟಿ.. 20ಕ್ಕೂ ಹೆಚ್ಚು ಜನರಿಗೆ ಗಾಯ: ಆಕ್ಸಿಡೆಂಟ್ ಆಗಿದ್ದೇಗೆ?
ಭೋರ್ಗರೆಯುತ್ತಿದೆ ಚುಂಚನಕಟ್ಟೆ ಜಲಪಾತ, ವೈಭವ ನೋಡಲು ಪ್ರವಾಸಿಗರ ದಂಡು
ಭೋರ್ಗರೆಯುತ್ತಿದೆ ಚುಂಚನಕಟ್ಟೆ ಜಲಪಾತ, ವೈಭವ ನೋಡಲು ಪ್ರವಾಸಿಗರ ದಂಡು